Connect with us

LATEST NEWS

ಮೂಲ್ಕಿ ತಹಶೀಲ್ದಾರ್ ಬೆಂಡೆತ್ತಿದ ಶಾಸಕ ಉಮನಾಥ್‌: ಟೇಬಲ್‌ನಲ್ಲಿ ಕೊಳೆಯುತ್ತಿದ್ದ ಫೈಲ್‌ಗಳು ಕಂಡು ಗರಂ

Published

on

ಮುಲ್ಕಿ: ಇಲ್ಲಿನ ತಾಲೂಕು ತಹಶೀಲ್ದಾರ್ ಕಛೇರಿಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.


ಶಾಸಕರು ಸುಮಾರು 10.45ಕ್ಕೆ ತಹಶೀಲ್ದಾರ್ ಅಫೀಸಿಗೆ ಭೇಟಿ ನೀಡಿದ್ದರೂ ಬೆಳಗಿನ ಅವಧಿಯಲ್ಲಿ ತಹಶೀಲ್ದಾರ್ ಕಮಲಮ್ಮ ಕಛೇರಿಯಲ್ಲಿ ಇರಲಿಲ್ಲ.

ಈ ಸಂದರ್ಭ ಶಾಸಕರು ಕೆಂಡಾಮಂಡಲರಾಗಿ ಕಛೇರಿಯ ಸಿಬ್ಬಂದಿಯನ್ನು ಹಾಗೂ ಕಂದಾಯ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡು ತಹಶೀಲ್ದಾರ್ ಸಿಬ್ಬಂದಿ ಮೂಲಕ ಟೇಬಲ್ ಮೇಲಿಟ್ಟಿದ್ದ ಕಡತಗಳನ್ನು ಪರಿಶೀಲಿಸಿದಾಗ

ಕಳೆದ ಡಿಸೆಂಬರ್ 13ನೇ ತಾರೀಖಿನ ನಂತರ ವಿಲೇವಾರಿಯಾಗದ ಕಡತಗಳು ಕೊಳೆಯುತ್ತಾ ಬಿದ್ದಿದ್ದನ್ನು ಕಂಡ ಶಾಸಕರು ಮತ್ತೆ ಆಕ್ರೋಶಗೊಂಡು ಕೂಡಲೇ ಜಿಲ್ಲಾಧಿಕಾರಿಗಳಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಕೂಡಲೇ ತಹಶಿಲ್ದಾರ್ ಕಮಲಮ್ಮ ನವರ ಕರ್ತವ್ಯಲೋಪದ ಬಗ್ಗೆ ತಿಳಿಸಿ ವರ್ಗಾವಣೆ ಇಲ್ಲದಿದ್ದರೆ ಅಮಾನತು ಮಾಡಲು ಸೂಚನೆ ನೀಡಿದರು.

ಸುಮಾರು 11 ಗಂಟೆ ಬಳಿಕ ನಂತರ ಕಛೇರಿಗೆ ತಹಶಿಲ್ದಾರ್ ಕಮಲಮ್ಮ ಬಂದಾಗ ಶಾಸಕರು ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹೇಳಿದಾಗ ಕಕ್ಕಾಬಿಕ್ಕಿಯಾದ ತಹಶಿಲ್ದಾರ್ ಅನಾರೋಗ್ಯದ ನಿಮಿತ್ತ ಕಡತಗಳು ಬಾಕಿಯಾಗಿದೆ ಎಂದು ಕುಂಟುನೆಪ ಹೇಳಿದರು.

ಇದರಿಂದ ಮತ್ತೆ ಆಕ್ರೋಶಗೊಂಡ ಶಾಸಕರು ಮಧ್ಯಾಹ್ನದ ಒಳಗೆ ಕಡತ ವಿಲೇವಾರಿ ಯಾಗಬೇಕು ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕರ್ತವ್ಯಕ್ಕಾಗಿ ತಹಶಿಲ್ದಾರ್ ಕಚೇರಿಗೆ ಹಾಜರಾಗಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭ ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಮಂಡಲಾಧ್ಯಕ್ಷ ಸುನಿಲ್ ಆಳ್ವ, ಶೈಲೇಶ್ ಕುಮಾರ್, ವಿಠ್ಠಲ್ ಎನ್.ಎಂ, ರಮಾನಾಥ ಪೈ ಮತ್ತಿತರರಿದ್ದರು.

BIG BOSS

BBK12: ಟಾಪ್‌ 6ನಲ್ಲಿ ಕಾವ್ಯಾ ಇರಬಾರದಿತ್ತು: ಹೀಗ್ಯಾಕಂದ್ರು ರಕ್ಷಿತಾ..?

Published

on

BBK12: ಟಾಪ್‌-06ನಲ್ಲಿ ಕಾವ್ಯಾ ಅವರು ಇರೋದಕ್ಕೆ ಅರ್ಹರಲ್ಲ ಎಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ ಹೇಳಿದ್ದಾರೆ.


ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ಆಗಿ ರಕ್ಷಿತಾ ಶೆಟ್ಟಿ ಹೊರ ಹೊಮ್ಮಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಇದ್ದಾಗ ಕಾವ್ಯಾ ಶೈವ ಅವರ ಜೊತೆ ರಕ್ಷಿತಾ ಶೆಟ್ಟಿ ಅವರಿಗೆ ಅಷ್ಟೊಂದು ಒಡನಾಟವಿರಲಿಲ್ಲ.

ನಾಮಿನೇಶನ್‌ ವಿಚಾರದಲ್ಲೂ ಕಾವ್ಯಾ ಮತ್ತು ರಕ್ಷಿತಾ ಅವರಿಗೆ ಆಗ್ಗಾಗೇ ಜಗಳವಾಗುತ್ತಿತ್ತು. ಅಲ್ಲದೆ ಗಿಲ್ಲಿ ಕಾವ್ಯಾ ಫ್ರೆಂಡ್‌ಶಿಪ್ ಕುರಿತು ರಕ್ಷಿತಾ ಅವರಿಗೆ ಅಸಮಾಧಾನವಿದೆ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದರು. ಕಾವ್ಯಾ ಅವರ ಜೊತೆ ಇರುವ ಮುನಿಸು ರಕ್ಷಿತಾ ಅವರಿಗೆ ಕಡಿಮೆಯಾಗಿಲ್ಲ ಎನ್ನಬಹುದು.

ಇದನ್ನೂ ಓದಿ: ರಕ್ಷಿತಾ ಕ್ಷಮಾಪಣೆ ಪತ್ರದ ಬಗ್ಗೆ ಧ್ರುವಂತ್ ಪೋಸ್ಟ್: ನಮ್ಮಿಬ್ಬರದ್ದು ಒಂದೇ ರಾಶಿ-ನಕ್ಷತ್ರ!

ಇದೀಗ ಸಂದರ್ಶನವೊಂದರಲ್ಲಿ ಕಾವ್ಯಾ ಅವರು ಟಾಪ್‌ 6ನಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ, ಅವರ ಬದಲಿಗೆ ಜಾನ್ವಿ ಅವರು ಇರಬೇಕಿತ್ತು. ಮಾಲು ಅಣ್ಣ ಇರಬಹುದಿತ್ತು. ಮಾಲು ಅವರು ಮಾತನಾಡುವುದು ಕಡಿಮೆ. ಆದರೆ ಅವರದ್ದು ಒಳ್ಳೆಯ ವ್ಯಕ್ತಿತ್ವ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

Continue Reading

DAKSHINA KANNADA

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ರಿಗೆ ‘ಕನ್ನಡ ಪಯಸ್ವಿನಿ ಅವಾರ್ಡ್- 2026’ ಪ್ರದಾನ 

Published

on

ಮಂಗಳೂರು : ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ನೀಡಿದ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026’ ಅಂತಾರಾಜ್ಯ ಪ್ರಶಸ್ತಿಯನ್ನು  ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆರಿಗೆ ಪ್ರದಾನ ಮಾಡಲಾಯಿತು.

ಕಾಸರಗೋಡು ನುಳ್ಳಿಪಾಡಿಯಲ್ಲಿ ನಡೆದ ಕನ್ನಡ ಭವನ ರಜತ ಸಂಭ್ರಮ – ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನುಅವರು  ಸ್ವೀಕರಿಸಿದರು.

ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 32 ವರ್ಷ ಕ್ರೀಡಾ  ಅಂಕಣಕಾರರಾಗಿ ಹಾಗೂ ಕ್ರೀಡಾ  ವಿಮರ್ಶಾತ್ಮಕ ಲೇಖನಗಳ  ಮೂಲಕ ಎಸ್. ಜಗದೀಶ್ಚಂದ್ರ ಅಂಚನ್ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕಳೆದು ಹೋದ ಹಣ, ವಿವಿಧ ಡಾಕ್ಯುಮೆಂಟ್ಸ್ ಗಳಿದ್ದ ಪರ್ಸ್; ಸಿಕ್ಕಿದ್ದಲ್ಲಿ ಮರಳಿಸುವಂತೆ ಮನವಿ

ಕಾರ್ಯಕ್ರಮದಲ್ಲಿ ಕನ್ನಡ ಭವನ ಸ್ಥಾಪಕಾಧ್ಯಕ್ಷ ಡಾ.ಕೆ.ವಾಮನ್ ರಾವ್, ನಿರ್ದೇಶಕ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ , ಕರ್ನಾಟಕ ಬ್ಯಾರಿ‌ ಅಕಾಡೆಮಿಯ ಮಾಜಿ ಅಧ್ಯಕ್ಷೆ ಆಯಿಷಾ ಪೆರ್ಲ , ಶಿಕ್ಷಣ ತಜ್ಞ ವಿ.ಬಿ.ಕುಳವರ್ಮ , ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟ್ಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ , ಸಾಹಿತಿ ಜಯಾನಂದ ಪೆರಾಜೆ, ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು  ಮೊದಲಾದವರು ಉಪಸ್ಥಿತರಿದ್ದರು.

Continue Reading

DAKSHINA KANNADA

ಕಳೆದು ಹೋದ ಹಣ, ವಿವಿಧ ಡಾಕ್ಯುಮೆಂಟ್ಸ್ ಗಳಿದ್ದ ಪರ್ಸ್; ಸಿಕ್ಕಿದ್ದಲ್ಲಿ ಮರಳಿಸುವಂತೆ ಮನವಿ

Published

on

 

ಸಾಂದರ್ಭಿಕ ಚಿತ್ರ

ಮಂಗಳೂರು : ವಿವಿಧ ಡಾಕ್ಯುಮೆಂಟ್ಸ್‌ ಗಳಿದ್ದ ಪರ್ಸೊಂದು ಕಳೆದುಹೋಗಿದೆ. ಚೇತನ್ ಎಂಬವರು ಬಂಟ್ವಾಳದಿಂದ ಕುಂಟಲ್ ಪಲ್ಕೆಯವರೆಗೆ ಆಟೋದಲ್ಲಿ ಪ್ರಯಾಣಿಸಿದ್ದು, ಈ ವೇಳೆ ಅವರ ಪರ್ಸ್  ಜೇಬಿನಿಂದ ಕೆಳಗೆ ಬಿದ್ದಿದೆ. ಅದರಲ್ಲಿ ಆಧಾರ್ ಕಾರ್ಡ್, ಹಣ ಹಾಗೂ ಇತರೆ ಡಾಕ್ಯುಮೆಂಟ್ಸ್‌ ಗಳಿದ್ದವು. ಯಾರಿಗಾದರೂ ಪರ್ಸ್ ಸಿಕ್ಕಿದ್ದಲ್ಲಿ 9036015784 ನಂಬರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page