Connect with us

DAKSHINA KANNADA

ಮಂಗಳೂರು: ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್‌ಗೆ “ಸೌತ್ ಇಂಡಿಯಾ ಯಂಗ್ ಚೆಫ್ ಆಫ್ ದಿ ಇಯರ್” ಪ್ರಶಸ್ತಿ

Published

on

ಮಂಗಳೂರು: ಭಾರತದ ಅತ್ಯುತ್ತಮ ಆಹಾರ ಮತ್ತು ಪಾನೀಯಗಳನ್ನು ಗುರುತಿಸುವ *ಫುಡ್ “ಕನೋಸರ್ಸ್ ಇಂಡಿಯಾ ಅವಾರ್ಡ್ಸ್ (FCIA)* ನ ಏಳನೇ ಆವೃತ್ತಿಯಲ್ಲಿ ಮಂಗಳೂರಿನ ಮಾಸ್ಟರ್ ಚೆಫ್ *ಮಹಮ್ಮದ್ ಆಶಿಕ್* ಅವರಿಗೆ *’ಸೌತ್ ಇಂಡಿಯಾ ಯಂಗ್ ಚೆಫ್ ಆಫ್ ದಿ ಇಯರ್’* ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಬೆಂಗಳೂರಿನ *ತಾಜ್ ಯಶವಂತಪುರ ಹೋಟೆಲ್* ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದ ಅತ್ಯುತ್ತಮ ಶೆಫ್ಗಳು, ರೆಸ್ಟೋರೆಂಟ್ಗಳು ಮತ್ತು ಫುಡ್ ಬ್ರಾಂಡ್ಗಳು ಪಾಲ್ಗೊಂಡಿದ್ದರು. ಮಂಗಳೂರಿನ ಪ್ರತಿಭೆ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಈ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಹೆಗ್ಗಳಿಸಿದ್ದಾರೆ.

ಪ್ರಶಸ್ತಿ ಪಡೆದ ನಂತರ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಅವರು ಮಾತನಾಡುತ್ತಾ, “ಈ ಪ್ರಶಸ್ತಿಯನ್ನು ಪ್ರಮುಖವಾಗಿ ಆಹಾರದ ಗುಣಮಟ್ಟ, ಸೃಜನಾತ್ಮಕತೆ ಮತ್ತು ಅನುಭವಗಳನ್ನು ಆಧರಿಸಿ ನೀಡಲಾಗುತ್ತದೆ. ಈ ಬಾರಿ ಕನ್ನಡನಾಡಿನ ಹಲವಾರು ರೆಸ್ಟೋರೆಂಟ್ಗಳು ಮತ್ತು ಶೆಫ್ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನನಗೆ ಈ ಪ್ರಶಸ್ತಿ ಲಭಿಸಿದ್ದು ಗೌರವದ ಸಂಗತಿ. ಇದು ನನ್ನ ಕುಟುಂಬ, ಸ್ನೇಹಿತರು ಮತ್ತು ಜಿಲ್ಲೆಯ ಜನರ ಸಹಕಾರದ ಫಲವಾಗಿದೆ. ಈ ಪ್ರಶಸ್ತಿ ನನಗೆ ಇನ್ನಷ್ಟು ಸಾಧನೆ ಮಾಡಲು ಸ್ಪೂರ್ತಿ ನೀಡಿದೆ” ಎಂದರು.

ಈ ಕಾರ್ಯಕ್ರಮದ ಮೂಲಕ ಭಾರತದ ವೈವಿಧ್ಯಮಯ ಆಹಾರ ಸಂಸ್ಕೃತಿ ಮತ್ತು ಪ್ರತಿಭಾವಂತ ಶೆಫ್ಗಳ ಸಾಧನೆಗಳನ್ನು ಗುರುತಿಸಲಾಯಿತು. ಮಂಗಳೂರಿನ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಅವರ ಈ ಸಾಧನೆ ಜಿಲ್ಲೆಯ ಆಹಾರ ಕ್ಷೇತ್ರದ ಹೆಮ್ಮೆಯಾಗಿದೆ.

DAKSHINA KANNADA

ಬಡವರ ಬ್ಯಾಂಕ್ ಖಾತೆ ಬಳಸಿ ಸೈಬರ್ ವಂಚನೆ ; ಇಬ್ಬರು ಅರೆಸ್ಟ್

Published

on

ಮಂಗಳೂರು : ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸಿದರು ಕೂಡ ಸೈಬರ್ ವಂಚನೆ ಜಾಲ ದಿನದಿಂದ ದಿನಕ್ಕೆ ದೊಡ್ಡದಾಗಿ ಕಡಿವಾಣವೇ ಇಲ್ಲವೋ ಏನೋ ಎಂಬ ಆತಂಕ ಎದುರಾಗುತ್ತಿದೆ. ಇದರ ನಡುವೆಯೇ ಮಂಗಳೂರಿನಲ್ಲಿ ನಡೆದ ಘಟನೆಯೊಂದು ಭಾರೀ ಸದ್ದು ಮಾಡುತ್ತಿದೆ. ಮಂಗಳೂರಿನ ಸೈಬರ್‌ ಕ್ರೈಂ ಪ್ರಕರಣದ ತನಿಖೆ ವೇಳೆ ಆರೋಪಿಗಳ ಖತರ್ನಾಕ್ ಪ್ಲ್ಯಾನ್​ ಬೆಳಕಿಗೆ ಬಂದಿದೆ. ಸೈಬರ್ ವಂಚನೆಗಾಗಿ ಬಡವರ ಬ್ಯಾಂಕ್ ಖಾತೆಯನ್ನು ಬಳಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಏನದು ಘಟನೆ ? ಇಲ್ಲಿದೆ ಸಂಪೂರ್ಣ ಮಾಹಿತಿ.

ಆಲೈನ್‌ ವಂಚನೆಗಾಗಿ ಬಡ ಜನರ ಬ್ಯಾಂಕ್‌ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳಾದ ಅವಿನಾಶ್‌ ಸುತಾರ್ (‌28), ಅನೂಪ್‌ ಕಾರೇಕರ್‌ (42) ಎಂಬುವವರನ್ನು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ.

ಅವಿನಾಶ್ ಹಾಗೂ ಅನೂಪ್ ಅಮಾಯಕರಿಗೆ ಚಿಲ್ಲರೆ ಹಣ ನೀಡಿ ಬ್ಯಾಂಕ್‌ ಖಾತೆ ತೆರೆಯಲು ಹೇಳುತ್ತಾರೆ. ಬಳಿಕ, ಆರೋಪಿಗಳು ಆ ಬ್ಯಾಂಕ್‌ ಖಾತೆಗಳ ಮಾಹಿತಿಯನ್ನು ಪಡೆದುಕೊಂಡು, ಆನ್‌ ಲೈನ್‌ ಬ್ಯುಸಿನೆಸ್‌ ಮಾಡುವುದಾಗಿ ಹೇಳುತ್ತಿದ್ದರು. ಬಳಿಕ ಅವರ ಬ್ಯಾಂಕ್‌ ಖಾತೆ ಮಾಹಿತಿಯನ್ನು ಸೈಬರ್‌ ವಂಚಕರ ಕೈಗಿಡುತ್ತಿದ್ದರು. ನಂತರ, ಸೈಬರ್​ ವಂಚಕರು ಈ ಬ್ಯಾಂಕ್​ ಖಾತೆಗಳನ್ನು ಇಟ್ಟುಕೊಂಡು, ಶ್ರೀಮಂತ ಜನರಿಗೆ ವಿಡಿಯೊ ಕಾಲ್‌, ಡಿಜಿಟೆಲ್‌ ಅರೆಸ್ಟ್‌ ಸೇರಿದಂತೆ ಹಲವು ವಿಧಾನಗಳಲ್ಲಿ ಬ್ಲ್ಯಾಕ್‌ ಮೇಲ್‌ ಮಾಡುತ್ತಾರೆ. ಬಳಿಕ, ವಂಚಕರ ಜಾಲಕ್ಕೆ ಸಿಲುಕಿದವರ ಕಡೆಯಿಂದ ಮುಗ್ದ ಜನರ ಬ್ಯಾಂಕ್​ ಖಾತೆಗೆ ಹಣ ವರ್ಗಾವಣೆ ಮಾಡಿಸುತ್ತಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ..?

ಮಂಗಳೂರಿನ ರಾಧಾಕೃಷ್ಣ ನಾಯಕ್ ಎಂಬುವರಿಗೆ ವಿಡಿಯೋ ಕಾಲ್ ಮಾಡಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗುತ್ತಿದೆ ಎಂದು ಬರೋಬ್ಬರಿ 40 ಲಕ್ಷವನ್ನು ಪಡೆದಿದ್ದರು. ಕೊನೆಗೆ ಅನುಮಾನ ಗೊಂಡ ರಾಧಾಕೃಷ್ಣ ಅವರು ಪೊಲೀಸರಿಗೆ ದೂರ ನೀಡಿ ವಿಚಾರಣೆ ನಡೆಸಿದಾಗ ಬೆಳಗಾವಿಯ ಯಾರದು ಅಕೌಂಟ್‌ಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದಿದೆ. ಇದರ ಜಾಡು ಹಿಡಿದ ಪೊಲೀಸರು ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading

DAKSHINA KANNADA

ಅಮಾನತಾದ ಶಾಸಕರಿಗೆ ಸ್ಪೀಕರ್ ಎಚ್ಚರಿಕೆ; ಪುನರಾವರ್ತಿಸಿದ್ರೆ ಡಿಸ್ಮಿಸ್ ಎಂದ ಖಾದರ್

Published

on

ಮಂಗಳೂರು : ವಿಧಾನಸಭೆಯ ಕೊನೆಯ ದಿನದ ಕಲಾಪಕ್ಕೆ ಅಡ್ಡಿಪಡಿಸಿ ಸ್ಪೀಕರ್ ಪೀಠ ಏರಿದ್ದ ಹದಿನೆಂಟು ಶಾಸಕರು ಆರು ತಿಂಗಳ ಕಾಲ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ಅಮಾನತಾಗಿರುವ ಶಾಸಕರು ಮುಂದಿನ ಅಧಿವೇಶನದಲ್ಲಿ ಇದೇ  ರೀತಿಯ ವರ್ತನೆ ಪುನರಾವರ್ತಿಸಿದ್ರೆ ಅವರನ್ನು ಡಿಸ್ಮಿಸ್ ಮಾಡುವುದಾಗಿ ಸ್ಪೀಕರ್ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸ್ಪೀಕರ್ ಖಾದರ್, ಸದನದಲ್ಲಿ ಕೊನೆಯ ದಿನ ಧನವಿನಿಯೋಗ ಬಿಲ್ ಪಾಸ್ ಮಾಡಲೇ ಬೇಕಿದ್ದು, ಅದು ಪಾಸ್ ಆಗಿಲ್ಲಾ ಅಂದ್ರೆ ಇಡೀ ರಾಜ್ಯಕ್ಕೆ ತೊಂದರೆ ಇದೆ. ಆದ್ರೆ, ಧನವಿನಿಯೋಗ ಬಿಲ್ ಪಾಸ್ ಮಾಡಲು ಶಾಸಕರು ಅಡ್ಡಿ ಪಡಿಸಿದ್ದಾರೆ. ಅವರ ಎಲ್ಲಾ ತೊಂದರೆ ಸಹಿಸಿ ನಾನು ಬಿಲ್ ಪಾಸ್ ಮಾಡಿದ್ದು, ಬಳಿಕ ಚರ್ಚಿಸಿ ಅವರ ದುರ್ನಡತೆಗೆ ಅಮಾನತು ಶಿಕ್ಷೆ ನೀಡಿದ್ದೇನೆ. ಕೊನೆಯ ದಿನ ಅಮಾನತು ಆದ್ರೆ ಏನು ಆಗೋದಿಲ್ಲ ಅನ್ನೋದು ಶಾಸಕರ ಮನಸಿನಲ್ಲಿ ಇದೆ.  ಹೀಗಾಗಿ ಆರು ತಿಂಗಳು ಅಮಾನತು ಮಾಡಿದ್ದೇನೆ.

ಇದನ್ನೂ ಓದಿ : ಅಂದು ನಾಗವಲ್ಲಿಯಾಗಿ ಗುರುತಿಸಿಕೊಂಡಿದ್ದ ಚೈತ್ರಕ್ಕ… ಇಂದು ನ್ಯಾಷನಲ್ ಕ್ರಶ್ ಆಗ್ಬಿಟ್ರಾ ??

ಹಿಂದೆಯೂ ಇಂತಹ ಘಟನೆ ನಡೆದಾಗ ಇದೇ ರೀತಿಯ ಕಠಿಣ ಕ್ರಮ ಕೈಗೊಂಡಿದ್ದರೆ ಈ ರೀತಿ ಆಗ್ತಾ ಇರಲಿಲ್ಲ. ಆದ್ರೆ, ಹಿಂದಿನವರು ಇಂತಹ ಧೈರ್ಯ ತೋರಿಸಿಲ್ಲ. ನಾನು ಸ್ಪೀಕರ್ ಪೀಠಕ್ಕೆ ಇರುವ ಅಧಿಕಾರವನ್ನು ಅದರ ಘನತೆ ಕಾಪಾಡುವ ಸಲುವಾಗಿ ಚಲಾಯಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಕಲಾಪದಲ್ಲಿ ನಡೆದ ಚರ್ಚೆಗಳು ಹಾಗೂ ಇತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದು, ಸದನ ಸುಸೂತ್ರವಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

Continue Reading

DAKSHINA KANNADA

ಉಪ್ಪಿನಂಗಡಿ : ವಿಜಯ-ವಿಕ್ರಮ ಜೋಡುಕರೆ ಕಂಬಳದ ಫಲಿತಾಂಶ ಪ್ರಕಟ

Published

on

ಉಪ್ಪಿನಂಗಡಿ: ಕರಾವಳಿಯ ಬಹು ಜನಪ್ರಿಯ ಕ್ರೀಡೆಯಾಗಿ ಕಂಬಳ ಗುರುತಿಸಿಕೊಂಡಿದೆ. ಇದೀಗ ಎಲ್ಲೆಡೆಯೂ ಬಹಳ ಅದ್ದೂರಿಯಾಗಿ ಕಂಬಳ ನಡೆದುಕೊಂಡು ಬರುತ್ತಿದ್ದು ನಿನ್ನೆ ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ಜರುಗಿದೆ. ಕಂಬಳದ ಅಂತಿಮ ಫಲಿತಾಂಶ ಏನಾಗಿದೆ ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿನ್ನೆ (ಮಾ.23) ಜರುಗಿದ ವಿಜಯ-ವಿಕ್ರಮ ಜೋಡುಕರೆ ಕಂಬಳದ ಕನೆ ಹಲಗೆ ವಿಭಾಗದಲ್ಲಿ 7, ಅಡ್ಡಹಲಗೆ ವಿಭಾಗದಲ್ಲಿ 4, ಹಗ್ಗ ಹಿರಿಯ ವಿಭಾಗದಲ್ಲಿ 10, ನೇಗಿಲು ಹಿರಿಯ ವಿಭಾಗದಲ್ಲಿ 23, ಹಗ್ಗ ಕಿರಿಯ ವಿಭಾಗದಲ್ಲಿ 15, ನೇಗಿಲು ಕಿರಿಯ ವಿಭಾಗದಲ್ಲಿ 72 ಸಹಿತ ಒಟ್ಟು 131 ಜತೆ ಕೋಣಗಳು ಭಾಗವಹಿಸಿದ್ದವು.

ಫಲಿತಾಂಶ :

ಕನೆ ಹಲಗೆ: ಪ್ರಥಮ ಬೋಳಾರ ತ್ರಿಶಾಲ್ ಕೆ. ಪೂಜಾರಿ (7.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ). ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್‌ದೇವಾಡಿಗ. ದ್ವಿ.: ನಿಡೋಡಿ ಕಾನ ರಾಮ ಸುವರ್ಣ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ). ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಅಡ್ಡ ಹಲಗೆ: ಪ್ರಥಮ ನಾರಾವಿ ಯುವರಾಜ್ ಜೈನ್, ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್. ದ್ವಿ.: ಬೋಳಾರ ತ್ರಿಶಾಲ್ ಕೆ. ಪೂಜಾರಿ, ಹಲಗೆ ಮೆಟ್ಟಿದವರು: ಮಂದಾರ್ತಿ ಭರತ್‌ ನಾಯ್ಕ. ಹಗ್ಗ ಹಿರಿಯ: ಪ್ರ.: ನಂದಳಿಕೆ ಶ್ರೀಕಾಂತ್ ಭಟ್ “ಸಿ, ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ. ದ್ವಿ.: ನಂದಳಿಕೆ ಶ್ರೀಕಾಂತ್ ಭಟ್ “ಎ. ಓಡಿಸಿದವರು: ರೆಂಜಾಳ ಪಂಜಾಳ ಸಂದೇಶ್ ಶೆಟ್ಟಿ.

ಹಗ್ಗ ಕಿರಿಯ: ಪ್ರಥಮ ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ “ಬಿ’, ಓಡಿಸಿದವರು: ಬಾರಾಡಿ ಸತೀಶ್. ದ್ವಿತೀಯ: 80 ಬಡಗುಬೆಟ್ಟು ಕಲ್ಲಪಾಪು, ಶ್ರೀಕ ಸಂದೀಪ್ ಶೆಟ್ಟಿ “ಬಿ’, ಓಡಿಸಿದ ವರು: ಬೈಂದೂರು ವಿಶ್ವನಾಥ ದೇವಾಡಿಗ.

ನೇಗಿಲು ಹಿರಿಯ: ಪ್ರಥಮ ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ. ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ. ದ್ವಿ.: ಬೋಳದ ಗುತ್ತು ಸತೀಶ್ ಶೆಟ್ಟಿ “ಬಿ’. ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ.

ನೇಗಿಲು ಕಿರಿಯ: ಪ್ರಥಮ ಮಿಜಾರ್ ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ “ಎ’. ಓಡಿಸಿದವರು: ಪಟ್ಟೆ ಗುರುಚರಣ್. ದ್ವಿತೀಯ: ಮಿಜಾರ್‌ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ “ಬಿ’. ಓಡಿಸಿದವರು: ಪಟ್ಟೆ ಗುರುಚರಣ್.

Continue Reading
Advertisement

Trending

Copyright © 2025 Namma Kudla News

You cannot copy content of this page