Connect with us

LATEST NEWS

ಕಚ್ಚತೀವು ದ್ವೀಪ ಶ್ರೀಲಂಕಾಕ್ಕೆ ಹಸ್ತಾಂತರಿಸಿದ್ದು ಕೆಟ್ಟ ನಿರ್ಧಾರ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಟೀಕೆ

Published

on

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ನ್ನು ಟೀಕಿಸಿದ್ದಾರೆ. ಭಾನುವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, 1974ರಲ್ಲಿ ವಿವಾದಿತ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದ್ದಾರೆ.

ಕಚ್ಚತೀವುವನ್ನು ಶ್ರೀಲಂಕಾಗೆ ಅಂದಿನ ಇಂದಿರಾ ಗಾಂಧಿ ಸರ್ಕಾರ ಹಸ್ತಾಂತರಿಸಿತ್ತು ಎಂದು ಇತ್ತೀಚೆಗೆ ಆರ್ ಟಿಐ ಬಹಿರಂಗ ಪಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ…ಕಾಟೇರ ಸಕ್ಸಸ್ ಪಾರ್ಟಿ ಪ್ರಕರಣ; ನಟ ದರ್ಶನ್ ಸೇರಿ 8 ಮಂದಿಗೆ ರಿಲೀಫ್

ಕಾಂಗ್ರೆಸ್ ಪಕ್ಷವನ್ನು ನಂಬಲು ಸಾಧ್ಯವಿಲ್ಲ :
ಶ್ರೀಲಂಕಾ ದ್ವೀಪ ಬಿಟ್ಟುಕೊಟ್ಟ ಇಂದಿರಾ ಗಾಂಧಿ ಸರ್ಕಾರದ ನಿರ್ಧಾರದ ಬಗ್ಗೆ ವಿವರವಾದ ವಿವರಣೆಯನ್ನು ನೀಡಿದ್ದ ಖಾಸಗಿ ಸುದ್ದಿ ಪತ್ರಿಕೆಯ ಲೇಖನವನ್ನು ಹಂಚಿಕೊಂಡಿದ್ದಾರೆ. “ಕಣ್ಣು ತೆರೆಸುವ ಮತ್ತು ಅಚ್ಚರಿಯ ವಿಷಯ”(Eye-opening and startling) ಎಂದು ಬರೆದು ಕಾಂಗ್ರೆಸ್ ಪಕ್ಷವನ್ನು ನಂಬಲು ಸಾಧ್ಯವಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ದ್ವೀಪವನ್ನು ಹಸ್ತಾಂತರ ಮಾಡಿದ್ದು “ಕೆಟ್ಟ” ನಿರ್ಧಾರ. 1974 ರಲ್ಲಿ ಕಾಂಗ್ರೆಸ್ ಸರ್ಕಾರವು ಕಚ್ಚತೀವು ಹಸ್ತಾಂತರಿಸಿದ್ದು ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ. ನಾವು ಕಾಂಗ್ರೆಸ್ ನ್ನು ಎಂದಿಗೂ ನಂಬಲು ಸಾಧ್ಯವಿಲ್ಲ. ಭಾರತದ ಏಕತೆ, ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುವುದು ಕಾಂಗ್ರೆಸ್‌ 75 ವರ್ಷಗಳಿಂದ ಮಾಡಿಕೊಂಡು ಬಂದಿರುವ ಕೆಲಸ ಎಂದು ಬರೆದುಕೊಂಡಿದ್ದಾರೆ.

DAKSHINA KANNADA

ನಿಲ್ಲಿಸಿದ್ದ ಕಾರು ಹಿಮ್ಮುಖ ಚಾಲನೆ; ನಿವೃತ್ತ ರೇಂಜರ್ ಸಾವು

Published

on

ಸುಳ್ಯ: ಮನೆ ಎದುರು ನಿಲ್ಲಿಸಿದ್ದ ಕಾರು ಹಿಂದಕ್ಕೆ ಚಲಿಸಿದ್ದ ವೇಳೆ ಅಂಗಳದಲ್ಲಿ ನಿಂತಿದ್ದ ನಿವೃತ್ತ ರೇಂಜರ್‌ಗೆ ಡಿಕ್ಕಿಯಾಗಿದ್ದು, ಸ್ಥಲದಲ್ಲೇ ಅವರು ಮೃತಪಟ್ಟ ಘಟನೆ ಶನಿವಾರ (ಮಾ.15) ನಡೆದಿದೆ.

ಜೋಸೆಫ್ (74) ಮೃತ ವ್ಯಕ್ತಿಯಾಗಿದ್ದು, ಸುಳ್ಯ ಕರಿಕ್ಕಳದ ಮುಚ್ಚಿಲದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದಾಗ ಕಾರು ಹಿಮ್ಮುಖ ಚಲಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮನೆಯಲ್ಲಿ ಮೃತರ ಪತ್ನಿ ಮಾತ್ರ ಇದ್ದು ಕೂಡಲೇ ಜೋಸೆಫ್‌ರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಈ ವೇಳೆ ದಾರಿ ಮಧ್ಯೆಯೇ ಮೃತಪಟ್ಟಟ್ಟಿದ್ದಾರೆ. ಅರಣ್ಯ ಇಲಾಖೆಯಲ್ಲಿ ಪಂಜ, ಮಂಗಳೂರು ಹಾಗೂ ಸಂಪಾಜೆ ಕಡೆಗಳಲ್ಲಿ ಸೇವೆ ಸಲ್ಲಿಸಿ ಸಂಪಾಜೆಯಲ್ಲಿ ರೇಂಜರ್ ಆಗಿ ನಿವೃತ್ತರಾಗಿದ್ದರು. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Continue Reading

LATEST NEWS

IPL 2025: ಅಭಿಮಾನಿಗಳಿಗೆ ಉಚಿತ ಪ್ರಯಾಣ ಭಾಗ್ಯ ಕಲ್ಪಿಸಿದ ಸಿಎಸ್‌ಕೆ

Published

on

ಮಂಗಳೂರು/ಚೆನ್ನೈ: ಇದೇ ಮಾರ್ಚ್‌ 22ರಂದು ಐಪಿಎಲ್‌ ಉದ್ಘಾಟನಾ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ.


ವಿಶ್ವದ ಶ್ರೀಮಂತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ ಜ್ವರ ಶುರುವಾಗಿದೆ. ಮಾರ್ಚ್ 22ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಮುಖಾಮುಖಿಯಾಗಲಿವೆ.

ಆ ಬಳಿಕ ಟೂರ್ನಿಯ ಎರಡನೇ ದಿನದಂದು ಎರಡನೇ ಪಂದ್ಯದಲ್ಲಿ ಮತ್ತೆರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಚೆನ್ನೈನ ತವರು ಮೈದಾನವಾದ ಎಂಎ ಚಿದಂಬರಂ ಮೈದಾನದಲ್ಲಿ ತಮ್ಮ ತಮ್ಮ ಮೊದಲ ಪಂದ್ಯವನ್ನು ಆಡಲಿವೆ.

ಆದರೆ ಈ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ಫ್ರಾಂಚೈಸಿ ತನ್ನ ತವರು ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನು ನೀಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತವರು ಪಂದ್ಯಗಳಿಗೆ ಪ್ರಯಾಣಿಸುವ ಅಭಿಮಾನಿಗಳಿಗೆ ಉಚಿತ ಬಸ್ ಟಿಕೆಟ್‌ಗಳನ್ನು ಒದಗಿಸಲು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಲಿಮಿಟೆಡ್ (MTC) ನೊಂದಿಗೆ ಕೈ ಜೋಡಿಸಿದೆ. ಇದರ ಅಡಿಯಲ್ಲಿ ಸಿಎಸ್​ಕೆ ಅಭಿಮಾನಿಗಳು ಮೆಟ್ರೋ ಮತ್ತು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡುವ ಅವಕಾಶ ಹೊಂದಿದ್ದಾರೆ.

ಇದನ್ನೂ ಓದಿ: 2028ರ ಆ ಒಂದು ಪಂದ್ಯಕ್ಕಾಗಿ ಟಿ20 ನಿವೃತ್ತಿಯನ್ನು ಹಿಂಪಡೆಯುತ್ತೇನೆ ಎಂದ ಕಿಂಗ್ ಕೊಹ್ಲಿ!

ಉಚಿತ ಬಸ್ ಪ್ರಯಾಣ
ಇದು ಮೊದಲ ಬಾರಿಗೆ ಅಲ್ಲ. ಸತತ ಎರಡನೇ ವರ್ಷ ಸಹ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಪಂದ್ಯಗಳಿಗೆ ಟಿಕೆಟ್ ಹೊಂದಿರುವ ಅಭಿಮಾನಿಗಳು ಪಂದ್ಯ ಪ್ರಾರಂಭವಾಗುವ ಮೊದಲು ಅಂದರೆ ಮೂರು ಗಂಟೆಗಳ ಮೊದಲು ಎಂಟಿಸಿ ಬಸ್‌ಗಳಲ್ಲಿ (NON-AC) ಉಚಿತವಾಗಿ ಪ್ರಯಾಣಿಸಬಹುದು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಮೈದಾನವಾದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ 7 ಪಂದ್ಯಗಳನ್ನು ಆಡಲಿದೆ. ಈ 7 ಪಂದ್ಯಗಳಿಗೂ ಅಭಿಮಾನಿಗಳನ್ನು ಸೆಳೆಯಲು ವಿಶೇಷ ಯೋಜನೆಯನ್ನು ಹಾಕಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ, ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ಮತ್ತು ಮೆಟ್ರೋಪಾಲಿಟನ್ ಸಾರಿಗೆ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಸಿಎಸ್​ಕೆ ಅಭಿಮಾನಿಗಳು ಮೆಟ್ರೋ ಮತ್ತು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡುವ ಅವಕಾಶ ಹೊಂದಿದ್ದಾರೆ.

ಇನ್ನು, ಅಭಿಮಾನಿಗಳನ್ನು ಸಾರ್ವಜನಿಕ ಸಾರಿಗೆಯನ್ನು ಬಳಸಲು ಇದು ಉತ್ತೇಜಿಸುವಂತಾಗಿದೆ. ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಗಳನ್ನು ಅಭಿಮಾನಿಗಳು ಇದರಿಂದಾಗಿ ಸಂಪೂರ್ಣವಾಗಿ ಆನಂದಿಸಬಹುದು. 2024ರಲ್ಲಿ ಪ್ರತಿ ಪಂದ್ಯಕ್ಕೂ ನಗರದ ವಿವಿಧ ಭಾಗಗಳಿಂದ ಸುಮಾರು 8000 ಅಭಿಮಾನಿಗಳು ಬಸ್ ಸೇವೆ ಬಳಿಸಿದ್ದರು.

ಉಚಿತ ಪ್ರಯಾಣ ಭಾಗ್ಯ ಪಡೆಯುವುದು ಹೇಗೆ ?
ಇನ್ನು ಸಿಎಸ್‌ಕೆ ಅಭಿಮಾನಿಗಳು ಉಚಿತ ಬಸ್ ಹಾಗೂ ಮೆಟ್ರೋ ಪ್ರಯಾಣ ಸೌಲಭ್ಯ ಪಡೆಯುವುದು ಹೇಗೆಂದರೆ.. ಈ ಸೌಲಭ್ಯವನ್ನು ಬಳಸಿಕೊಳ್ಳಲು ಇಚ್ಚಿಸುವ ಅಭಿಮಾನಿಗಳು ಆ ದಿನದಂದು ನಡೆಯುವ ಪಂದ್ಯದ ಟಿಕೆಟ್ ಅನ್ನು ಖರೀದಿಸಿರಬೇಕು. ಯಾರ ಕೈಯಲ್ಲಿ ಅಂದಿನ ಪಂದ್ಯದ ಟಿಕೆಟ್ ಇರುತ್ತದೆಯೋ, ಅವರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮೆಟ್ರೋದಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಬಾರ್‌ಕೋಡ್ ಹೊಂದಿರುವ ಟಿಕೆಟ್‌ಗಳು ಮೆಟ್ರೋ ಟಿಕೆಟ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿ ಯಾವುದೇ ಅಭಿಮಾನಿಗಳು ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.

Continue Reading

LATEST NEWS

ನದಿಯಲ್ಲಿ ಮುಳುಗಿ ಇಬ್ಬರು ಪ್ರವಾಸಿಗರು ಸಾವು

Published

on

ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ರಾಜಸ್ಥಾನದ ಇಬ್ಬರು ಪ್ರವಾಸಿಗರು ಮುಳುಗಿ ಸಾವನ್ನಪ್ಪಿದ ಘಟನೆ ಕಳಸದ ಸಂಜೆ ಮೆಟ್ಟಿಲು ತೂಗು ಸೇತುವೆ ಬಳಿ ನಡೆದಿದೆ.

ಮೃತರನ್ನು ಜಗದೀಶ್ (33) ಹಾಗೂ ಚೋಟಾಸಿಂಗ್ (28) ಎಂದು ಗುರುತಿಸಲಾಗಿದೆ. 12 ಜನ ಗೆಳೆಯರೊಂದಿಗೆ 2 ಕಾರಿನಲ್ಲಿ ರಾಜಸ್ಥಾನದಿಂದ ಕಳಸಕ್ಕೆ ಪ್ರವಾಸ ಬಂದಿದ್ದರು. ಅಲ್ಲಿ ಭದ್ರಾ ನದಿಗೆ ನಿರ್ಮಿಸಿರುವ ತೂಗು ಸೇತುವೆ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಬಳಿಕ ಈಜಲು ತೆರಳಿದ್ದಾರೆ.

ಭಾರೀ ಆಳ ಇರುವ ಜಾಗವಾಗಿದ್ದು, ಈ ಸ್ಥಳದಲ್ಲಿ ಮಾಹಿತಿ ಇಲ್ಲದವರು ಈಜುವುದು ಕಷ್ಟ. ಆದರೆ, ರಾಜಸ್ಥಾನದಿಂದ ಬಂದವರಿಗೆ ಸ್ಥಳದ ಪರಿಚಯ ಇಲ್ಲದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮಲ್ಪೆಯ ಮುಳುಗು ತಜ್ಞ ಭಾಸ್ಕರ್, ಇಬ್ಬರ ಮೃತದೇಹಗಳನ್ನು ಮೇಲಕ್ಕೆ ಎತ್ತಿದ್ದಾರೆ. ಅವರು ನೀರಿನಲ್ಲಿ ಮುಳುಗುವಾಗ ಜೊತೆಗಿದ್ದ ಸ್ನೇಹಿತರು ಎಳೆಯುವ ಪ್ರಯತ್ನ ಮಾಡಿದರು. ಆದರೂ ನದಿ ಆಳವಿದ್ದ ಕಾರಣ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page