Connect with us

NATIONAL

ಮಾಡಲ್ ಕ್ರಿಸ್ಟಿನಾ ಬರ್ಬರ ಕೊಲೆ ಪ್ರಕರಣ; ಆಕೆಯ ದೇಹದಿಂದ ಗರ್ಭಕೋಶವನ್ನೇ ಹೊರ ತೆಗೆದಿದ್ದ ಪತಿ

Published

on

ಸ್ವಿಟ್ಜರ್‌ಲ್ಯಾಂಡ್ : ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 2024ರಲ್ಲಿ ನಡೆದ ಮಾಡೆಲ್‌ ಕ್ರಿಸ್ಟಿನಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಬಹಿರಂಗಗೊಂಡಿವೆ. ಮಾಡೆಲ್‌ ಕ್ರಿಸ್ಟಿನಾ ಕೊಲೆ ಪ್ರಕರಣದಲ್ಲಿ ಆಕೆಯ ಪತಿಯ ಮೇಲೆ ಹತ್ಯೆ ಆರೋಪ ಹೊರಿಸಲಾಗಿದೆ.


ಪತಿ ಥಾಮಸ್‌ 2024ರಲ್ಲಿ ಕ್ರಿಸ್ಟಿನಾರನ್ನು ಕತ್ತು ಹಿಸುಕಿ ಕೊಂದು, ದೇಹವನ್ನು ಕತ್ತರಿಸಿ ವಿಲೇವಾರಿ ಮಾಡಲು ಮುಂದಾಗಿದ್ದ. ಕ್ರಿಸ್ಟಿನಾ ಅವರ ದೇಹವನ್ನು ಜಿಗ್ಸಾ ಚಾಕು ಮತ್ತು ತೋಟಕ್ಕೆ ಬಳಕೆ ಮಾಡುವ ಗರಗಸದ ಮಾದರಿಯ ಆಯುಧಗಳನ್ನು ಬಳಸಿ ಆಕೆಯ ದೇಹವನ್ನು ಕತ್ತರಿಸಿದ್ದ ಎಂಬ ಮಾಹಿತಿ ಸಿಕ್ಕಿದೆ.

ಅಷ್ಟೇ ಅಲ್ಲದೇ, ಪತ್ನಿಯನ್ನು ಕೊಲ್ಲುವ ಮುಂಚೆ ಆತ ಯೂಟ್ಯೂಬ್‌ನಲ್ಲಿ ವಿಡಿಯೋವನ್ನು ನೋಡಿದ್ದ. ಆಕೆಯ ದೇಹದಿಂದ ಗರ್ಭಕೋಶವನ್ನು ಸಹ ಆತ ಹೊರತೆಗೆದಿದ್ದ, ಬಳಿಕ ದೇಹದ ಇತರೆ ಭಾಗಗಳನ್ನು ರಾಸಾಯನಿಕ ದ್ರಾವಣದಲ್ಲಿ ಕರಗಿಸಿದ್ದ.

ಇದನ್ನೂ ಓದಿ: ಗೋವಾ ನೈಟ್ ಕ್ಲಬ್‌ ಅ*ಗ್ನಿ ದುರಂ*ತ : ಥೈಲ್ಯಾಂಡ್‌ಗೆ ಪರಾರಿಯಾಗಿದ್ದ ಮಾಲಕರು ಅರೆಸ್ಟ್

ಶವ ಪರೀಕ್ಷೆ ಸಮಯದಲ್ಲಿ ಥಾಮಸ್ ಆಕೆಯ ಸೊಂಟದ ಕೀಲುಗಳನ್ನು ಮುರಿದು, ದೇಹದೊಳಗಿನ ಇತರೆ ಅಂಗಾಂಶಗಳನ್ನು ಹೊರ ತೆಗೆದಿದ್ದಾನೆ. ಬಳಿಕ ಬೆನ್ನುಮೂಳೆಯನ್ನು ಕತ್ತರಿಸಿ, ಅಂತಿಮವಾಗಿ ಶಿರಚ್ಛೇದ ಮಾಡಿದ್ದಾನೆ ಎಂದು ತಿಳಿದುಬಂದಿದೆ.

LATEST NEWS

ಒಂಟಿ ಮಹಿಳೆಯ ಕೊ*ಲೆ ಪ್ರಕರಣ: ಆರೋಪಿಯ ಬಂಧನ; ಹ*ತ್ಯೆಗೆ ಕಾರಣವೇನು?

Published

on

ಮಂಗಳೂರು/ಕಾಸರಗೋಡು : ಕಾಸರಗೋಡಿನ ಕುಂಬಡಾಜೆ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಪುಷ್ಪಲತಾ ವಿ ಶೆಟ್ಟಿ ಕೊ*ಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಬದಿಯಡ್ಕ ಪಂಚಾಯತ್‌ ನ ಪೆರ್ಡಾಲ ಮೂಲದ 47 ವರ್ಷದ ಪರಮೇಶ್ವರ ಅಲಿಯಾಸ್ ರಮೇಶ್ ನಾಯಕ್ ಬಂಧಿತ.

ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ?

ಮೊವ್ವಾರ್ ಗ್ರಾಮದ ಅಜಿಲದಲ್ಲಿರುವ ತಮ್ಮ ಮನೆಯಲ್ಲಿ ಪುಷ್ಪಲತಾ ಶೆಟ್ಟಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಪುಷ್ಪಲತಾ ಶ*ವವಾಗಿ ಪತ್ತೆಯಾಗಿದ್ದು,  ಮ*ರಣೋತ್ತರ ಪರೀಕ್ಷೆಯಲ್ಲಿ, ಕೈಯಿಂದ ಉಸಿರುಗಟ್ಟಿಸಿ ಆಕೆಯನ್ನು ಕೊ*ಲ್ಲಲಾಗಿದೆ ಎಂಬುದು ತಿಳಿದುಬಂದಿತ್ತು. ತನಿಖೆ ಆರಂಭಿಸಿದ ಪೊಲೀಸರು, ಆ ಪರಿಸರದಲ್ಲಿ ಹಾದುಹೋದ ಜನರನ್ನು ವಿಚಾರಣೆ ನಡೆಸಿದ್ದಾರೆ.

ಆರೋಪಿ ರಮೇಶ್ ನಾಯಕ್ ಆ ಪ್ರದೇಶದಲ್ಲಿ ಹುಲ್ಲು ಕಟ್ಟಿಂಗ್ ಮಾಡುತ್ತಿದ್ದದ್ದನ್ನು ಹಲವರು ನೋಡಿದ್ದರು. ಈ ಆಧಾರದಲ್ಲಿ ರಮೇಶ್ ನಾಯಕ್ ನನ್ನು ವಿಚಾರಣೆಗೊಳಪಡಿಸಲಾಯಿತು.  ಆತನ ಮೈಮೇಲೆ ಹಲವು ಕಡೆಗಳಲ್ಲಿ ಗಾ*ಯಗಳಿರುವ ಬಗ್ಗೆ ಕೇಳಿದಾಗ ಅದು ಕಾಳುಮೆಣಸು ಕೀಳುವ ವೇಳೆ ಆಗಿದ್ದು ಎಂದು ಸುಳ್ಳು ಹೇಳಿದ್ದ. ವಿಚಾರಣೆ ತೀವ್ರಗೊಳಿಸಿದಾಗ ಕೊ*ಲೆ ಮಾಡಿರುವ ವಿಚಾರ ರಮೇಶ್ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ : ಅನೈತಿಕ ಸಂಬಂಧದಿಂದ ಕೊಲೆಯಾದ ಮಹಿಳೆ; ಅಷ್ಟಕ್ಕೂ ಆಗಿದ್ದೇನು?

ಹ*ತ್ಯೆಗೆ ಕಾರಣವೇನು?

ರಮೇಶ್ ನಾಯಕ್ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ, ಮನೆ ಕಟ್ಟಲು ಭೂಮಿ ಖರೀದಿಸಲು ಸಾಲ ಮಾಡಿಕೊಂಡಿದ್ದ. ಸುಮಾರು 8 ಲಕ್ಷ ಸಾಲ ಮಾಡಿದ್ದ.   ಈ ಹಿನ್ನಲೆ ಹಣಕ್ಕಾಗಿ ಪುಷ್ಪಲತಾ ಧರಿಸಿದ್ದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಆಕೆ ವಿರೋಧಿಸಿದಾಗ, ಆಕೆಯ ಕತ್ತು ಹಿಸುಕಿ ಕೊಂ*ದಿದ್ದಾನೆ. ಬಳಿಕ ಸುಮಾರು 28 ಗ್ರಾಂನ  ಕರಿಮಣಿ ಸರ ಕ*ದ್ದಿದ್ದ ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.

Continue Reading

LATEST NEWS

ಎಚ್‌ಐವಿಯಿಂದ ಮೃ*ತಪಟ್ಟ ತಾಯಿ; ಶವದ ಬಳಿ ಕುಳಿತು ದುಃಖ ತೋಡಿಕೊಂಡ ಬಾಲಕ

Published

on

ಮಂಗಳೂರು/ಉ.ಪ್ರ : ಆ ಬಾಲಕನಿಗೆ 10 ವರ್ಷ. ತಂದೆ ಅದಾಗಲೇ ಏಡ್ಸ್‌ ನಿಂದ ಮೃ*ತಪಟ್ಟಿದ್ದರು. ಈಗ ತಾಯಿ ಎಚ್ ಐ ವಿಗೆ ಬ*ಲಿಯಾಗಿದ್ದು, ಬಾಲಕ ಅಕ್ಷರಶಃ ಒಬ್ಬಂಟಿಯಾಗಿದ್ದಾನೆ. ತಂದೆ ಸಾವನ್ನಪ್ಪಿದಾಗ ಕೂಡ ನಮ್ಮ ಜತೆ ಯಾರೂ ಇರಲಿಲ್ಲ, ಈಗ ತಾಯಿಯನ್ನೂ ಕಳೆದುಕೊಂಡು ಒಂಟಿಯಾಗಿದ್ದೇನೆ ಎಂದು ಆ ಬಾಲಕ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಈ ದೃಶ್ಯ ಕಂಡುಬಂದಿದ್ದು, ಉತ್ತರ ಪ್ರದೇಶದ ಎಟಾದಲ್ಲಿ.

ಎಟಾ ವೈದ್ಯಕೀಯ ಕಾಲೇಜಿನಲ್ಲಿ ಎಚ್‌ಐವಿ ಮತ್ತು ಏಡ್ಸ್ ಚಿಕಿತ್ಸೆ ಪಡೆಯುತ್ತಿದ್ದ ಆತನ ತಾಯಿ ಕೊನೆಯು*ಸಿರೆಳೆದಿದ್ದಾರೆ. ಕಳೆದ ವರ್ಷ ಇದೇ ಕಾಯಿಲೆಯಿಂದ ತನ್ನ ತಂದೆಯನ್ನು ಬಾಲಕ ಕಳೆದುಕೊಂಡಿದ್ದ.

ಇದನ್ನೂ ಓದಿ : ಆಕಸ್ಮಿಕವಾಗಿ ಬಾವಿಗೆ ಬಿ*ದ್ದು ಸುರಂಗದೊಳಗೆ ಸಿ*ಲುಕಿದ್ದ ವ್ಯಕ್ತಿ; ರಕ್ಷಿಸಿದ್ದು ಹೇಗೆ?

ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ತಾಯಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಮರಣೋತ್ತರ ಪರೀಕ್ಷೆ ನಡೆಸಿರುವ ಕೋಣೆಯಲ್ಲಿ ತಾಯಿಯ ಶ*ವದ ಪಕ್ಕ ಕುಳಿತ ಬಾಲಕ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Continue Reading

LATEST NEWS

ಮಂಜೇಶ್ವರ: ಗ್ರೈಂಡರ್‌ಗೆ ಶಾಲು ಸಿಲುಕಿ ಮಹಿಳೆ ಸಾವು

Published

on

ಮಂಜೇಶ್ವರ: ಗೃಹಿಣಿಯ ಕೊರಳಿನಲ್ಲಿದ್ದ ಶಾಲು ಗ್ರೈಂಡರ್ ಗೆ ಸಿಲುಕಿ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಮಂಜೇಶ್ವರ‌ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.


ವರ್ಕಾಡಿ ಪಂಚಾಯತಿನ ಕಲ್ಮಿಂಜ ಗ್ರಾಮದ ಅಬ್ದುಲ್ಲ ಖಾದರ್ ಅವರ ಪತ್ನಿ ಮೈಮೂನ ( 40) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಮೈಮೂನ ಅವರು ಗ್ರೈಂಡರ್ ನಲ್ಲಿ ಮೆಣಸು ಕಡೆಯುವಾಗ ಈ ಅನಾಹುತ ಸಂಭವಿಸಿದೆ. ಅಪಾಯಕ್ಕೆ ಸಿಲುಕಿದ್ದ ಅವರನ್ನು ಕೂಡಲೇ ಕೋಣಾಜೆ ಬಳಿಯ ಕಣಚೂರು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಮೃತಪಟ್ಟಿದ್ದರು.

ಇದನ್ನೂ ಓದಿ: ಶಿವಮೊಗ್ಗ: ಭೀ*ಕರ ಅಪ*ಘಾತ; ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾ*ವು

ಈ ಸಂಬಂಧ ಮಂಜೇಶ್ವರ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page