Connect with us

ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಶಾಸಕ ಕಾಮತ್ ಭೇಟಿ-ಚರ್ಚೆ 

Published

on

ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಶಾಸಕ ಕಾಮತ್ ಭೇಟಿ-ಚರ್ಚೆ 

ಮಂಗಳೂರು : ನಗರದ ಹೃದಯಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಯ ಕುರಿತು ಶಾಸಕ ಕಾಮತ್ ಅವರು ವ್ಯಾಪಾರಿಗಳೊಂದಿಗೆ ಚರ್ಚಿಸಿದರು.

ಮಂಗಳೂರಿನ ಮೀನು ಮಾರುಕಟ್ಟೆಯ ಮೂಲಭೂತ ಸೌಕರ್ಯಗಳ ಕುಂದು ಕೊರತೆಯ ಕುರಿತು ಶಾಸಕರಲ್ಲಿ ಸ್ಥಳೀಯರು ಮನವಿ ಮಾಡಿದ್ದರು.

ಮಾರುಕಟ್ಟೆಯಲ್ಲಿ ನಿರಂತರವಾಗಿ ನಡೆಯುವ ಕಳ್ಳತನದ ಬಗ್ಗೆ ಈ ಹಿಂದೆಯೇ ವ್ಯಾಪಾರಿಗಳು ಮನವಿ ಮಾಡಿದ್ದರು. ಹಾಗೂ ಮನವಿಯ ಎರಡು ದಿನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕೊಟ್ಟ ಶಾಸಕರನ್ನು ವ್ಯಾಪಾರಿಗಳು ಅಭಿನಂದಿಸಿದರು.

ಮಾರುಕಟ್ಟೆಯ ಮೇಲ್ಛಾವಣಿಯು ಜೀರ್ಣಾವಸ್ಥೆಯಲ್ಲಿದ್ದು ಅದನ್ನು ರಿಪೇರಿ ಮಾಡಿಸಿಕೊಡುವ ಬಗ್ಗೆ ಶಾಸಕರಲ್ಲಿ ಮನವಿ ಮಾಡಿದರು.

ಈ ಕುರಿತು ಪ್ರತಿಕ್ರಯಿಸಿರುವ ಶಾಸಕ ಕಾಮತ್, ನಗರದ ಹೃದಯ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೂ ಇಲ್ಲಿನ ವ್ಯಾಪಾರಿಗಳಿಗೂ ಅವಿನಾಭಾವ ಸಂಬಂಧವಿದೆ.

ಅದೆಷ್ಟೋ ವರ್ಷಗಳಿಂದ ಜೀವನೋಪಾಯಕ್ಕಾಗಿ ಮಾರುಕಟ್ಟೆಯನ್ನೇ ಅವಲಂಭಿಸಿರುವ ಅನೇಕ ವ್ಯಾಪಾರಿಗಳಿದ್ದಾರೆ.

ಅವರೆಲ್ಲರ ಹಿತ ದೃಷ್ಠಿಯಿಂದ ಮೀನು ಮಾರುಕಟ್ಟೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.

ಮೀನು ಮಾರಾಟಗಾರರ ಮೀನುಗಳು ಹಾಗೂ ಸಲಕರಣೆಗಳ ಕಳ್ಳತನದ ಬಗ್ಗೆ ಇಲ್ಲಿನ ವ್ಯಾಪಾರಿಗಳು ಕ್ರಮ ಕೈಗೊಳ್ಳುವಂತೆ ಹಾಗೂ ಸಿಸಿ ಟಿವಿ ಅಳವಡಿಸಲು ಮನವಿ ಮಾಡಿದ್ದರು.

ಸದ್ಯ ಸಿಸಿ ಟಿವಿ ಅಳವಡಿಸಲಾಗಿದೆ. ಹಾಗೂ ಮತ್ತೆ ಕಳ್ಳತನ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಮಾರುಕಟ್ಟೆಯ ಮೇಲ್ಛಾವಣಿ ದುರಸ್ತಿ, ತ್ಯಾಜ್ಯ ನಿರ್ವಹಣೆಗೆ ತೊಟ್ಟಿ ನಿರ್ಮಾಣ, ನೀರಿನ ಪೈಪ್ ಅಳವಡಿಕೆ, ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ನೀರು ಹರಿದುಹೋಗಲು ವ್ಯವಸ್ಥೆ ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಹಂತ ಹಂತವಾಗಿ ಈ ಎಲ್ಲಾ ಕೆಲಸಗಳನ್ನು ಮಾಡಿಕೊಡಲಾಗುವುದು. ಹಾಗೂ ದಾಸ್ತಾನು ಕೊಠಡಿ ನಿರ್ಮಾಣದ ಬಗ್ಗೆಯೂ ಯೋಜನೆಯಿದ್ದು ಅನುದಾನಗಳನ್ನು ಜೋಡಿಸಿ ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡಿಕೊಡಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಮನಪಾ ಸದಸ್ಯರಾದ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಬಿಜೆಪಿ ಮುಖಂಡರಾದ ವಸಂತ್ ಜೆ ಪೂಜಾರಿ, ಸ್ಥಳೀಯ ವ್ಯಾಪಾರಿಗಳ ಸಂಘದ ಸದಸ್ಯರು ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.

Advertisement
Click to comment

Leave a Reply

Your email address will not be published. Required fields are marked *

LATEST NEWS

ಕೃಷ್ಣ ಮಠಕ್ಕಿಲ್ಲ ಗ್ಯಾಸ್ ಸಿಲಿಂಡರ್ ಟೆನ್ಶನ್; ದಿವಾನರು ಹೇಳಿದ್ದೇನು?

Published

on

ಉಡುಪಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣದಿಂದ ರಾಜ್ಯದಲ್ಲಿ ಎಲ್ ಪಿಜಿ ಸಿಲಿಂಡರ್ ಕೊರತೆ ಕಾಡುತ್ತಿದೆ ಎನ್ನಲಾಗ್ತಿದೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪ್ರತಿದಿನ ಸಾವಿರಾರು ಜನ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಅಡುಗೆ ಅನಿಲ ಬಳಸಿಕೊಂಡು ಇಲ್ಲಿ ಊಟಕ್ಕೆ ತಯಾರಿ ಮಾಡಲಾಗುತ್ತೆ. ಆದರೆ ಕಟ್ಟಿಗೆ ಬಳಸಿ ಅಡುಗೆ ಮಾಡುವುದು ಇಲ್ಲಿನ ಸಂಪ್ರದಾಯ.

ಸದ್ಯಕ್ಕೆ ಯಾವುದೇ ಅಡ್ಡಿ ಆಗಿಲ್ಲ ಆದರೂ, ಎಷ್ಟೇ ಸಾವಿರ ಜನ ಬಂದರೂ ಕಟ್ಟಿಗೆ ಬಳಕೆ ಮಾಡಿ ಅಡುಗೆ ತಯಾರಿಸಲಾಗುವುದು. ಉಡುಪಿ ಮಠದಲ್ಲಿ ಅಡುಗೆಗೆ ಕಟ್ಟಿಗೆ ಬಳಕೆಗೆಂದೇ ಕಾಡು ಬೆಳೆಸಲಾಗುತ್ತಿದೆ. 36 ವರ್ಷಕ್ಕೊಮ್ಮೆ ಕಾಡಿನಿಂದ ಕಟ್ಟಿಗೆ ಲಭ್ಯವಾಗುತ್ತದೆ. ಭಕ್ತರು ನಿರಾತಂಕವಾಗಿ ಕೃಷ್ಣ ದರ್ಶನ ಮಾಡಿ ಊಟಕ್ಕೆ ಬರಬಹುದು ಎಂದು ದಿವಾನರಾದ ಡಾ.ಉದಯ್ ಕುಮಾರ್ ಸರಳತ್ತಾಯ ತಿಳಿಸಿದ್ದಾರೆ.

Continue Reading

DAKSHINA KANNADA

ಪಡೀಲ್ : ಬೈಕ್‌ಗೆ ಗೂಡ್ಸ್ ಟೆಂಪೋ ಡಿ*ಕ್ಕಿ; ಸವಾರ ಸಾ*ವು

Published

on

ಮಂಗಳೂರು : ಗೂಡ್ಸ್‌ ಟೆಂಪೋವೊಂದು ಬೈಕ್‌ಗೆ ಡಿ*ಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ ಪಡೀಲ್ ಸಮೀಪ ಸಂಭವಿಸಿದೆ. ಸಚ್ಚೇರಿಪೇಟೆಯ ಕುದ್ರೋಟ್ ನಿವಾಸಿ, ಸಜೇಶ್ ಪೂಜಾರಿ ಮೃ*ತ ದುರ್ದೈವಿ.

ಐದು ತಿಂಗಳ ಹಿಂದೆಯಷ್ಟೇ ಹೊಸ ಮನೆ ಕಟ್ಟಿದ್ದ ಸಜೇಶ್ :

ಸಜೇಶ್, ಮಂಗಳೂರಿನ  ಶೋರೂಮ್‌ ಒಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ತನ್ನ ಬೈಕ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪಡೀಲ್ ಸಮೀಪ ತಿರುವಿನಲ್ಲಿ ಟೆಂಪೋ ಡಿ*ಕ್ಕಿ ಹೊಡೆದಿದ್ದು, ಬೈಕ್ ಸಮೇತ ರಸ್ತೆಗೆ ಬಿದ್ದ ಸಜೇಶ್  ಗಂ*ಭೀರವಾಗಿ ಗಾ*ಯಗೊಂಡಿದ್ದ ಸಜೇಶ್ ಕೊನೆಯು*ಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಬಾಲನಟನಾಗಿ ಖ್ಯಾತಿ ಗಳಿಸಿದ್ದ ಹರಿಮುರಳಿ ಶ*ವವಾಗಿ ಪತ್ತೆ

ಸಜೇಶ್‌  ಸಣ್ಣ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಐದು ತಿಂಗಳ ಹಿಂದೆಯಷ್ಟೇ ಹೊಸ ಮನೆಯೊಂದನ್ನು ಕಟ್ಟಿ ಒಬ್ಬರೇ ವಾಸಿಸುತ್ತಿದ್ದ ಎನ್ನಲಾಗಿದೆ.

Continue Reading

FILM

ಬಾಲನಟನಾಗಿ ಖ್ಯಾತಿ ಗಳಿಸಿದ್ದ ಹರಿಮುರಳಿ ಶ*ವವಾಗಿ ಪತ್ತೆ

Published

on

ಮಂಗಳೂರು/ಕೇರಳ : ಮಲಯಾಳಂ ಚಿತ್ರರಂಗದಲ್ಲಿ ಬಾಲನಟನಾಗಿ ಖ್ಯಾತಿ ಗಳಿಸಿದ್ದ ಹರಿಮುರಳಿ ತನ್ನ ಮನೆಯಲ್ಲಿ ಶ*ವವಾಗಿ ಪತ್ತೆಯಾಗಿದ್ದಾರೆ. ಅವರಿಗೆ 27 ವರ್ಷ ವಯಸ್ಸಾಗಿತ್ತು. ಕೇರಳದ ಪಯ್ಯನ್ನೂರಿನ ನಿವಾಸದಲ್ಲಿ ಹರಿಮುರಳಿ ಶ*ವ ಪತ್ತೆಯಾಗಿದೆ.

ಸಾ*ವಿಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಲನಟನಾಗಿ ಖ್ಯಾತಿ : 

ಹರಿಮುರಳಿ, 2004 ರಲ್ಲಿ  ಲಾಲ್ ಜೋಸ್ ನಿರ್ದೇಶನದ ಹಾಗೂ ದಿಲೀಪ್ ಅಭಿನಯದ ಮಲಯಾಳಂ ಚಿತ್ರ ರಸಿಕನ್’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ  ಅಣ್ಣನ್ ತಂಬಿ, ಮದಂಪಿ, ಡಾನ್ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲ ನಟನಾಗಿ ಅಭಿನಯಿಸಿ ಖ್ಯಾತರಾಗಿದ್ದರು.

ಇದನ್ನೂ ಓದಿ : ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿದ ‘ಬಿಂದಾಸ್‌’ ನಟಿ

ಬಳಿಕ  ಶಿಕ್ಷಣವನ್ನು ಮುಂದುವರಿಸುವ ಸಲುವಾಗಿ ಕೆಲವು ವರ್ಷ ನಟನೆಯಿಂದ ದೂರ ಉಳಿದಿದ್ದರು. ನಂತರ ಪೃಥ್ವಿರಾಜ್, ಸುಕುಮಾರನ್ ಅಭಿನಯದ ಅಮರ್ ಅಕ್ಬರ್ ಆ್ಯಂಟನಿ ಚಿತ್ರದಲ್ಲಿ ಕಿರಿಯ ಸಹೋದರನ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದರು. ಅಲ್ಲದೇ, ಹರಿಮುರಳಿ ವಿಎಫ್ ಎಕ್ಸ್ ಆರ್ಟಿಸ್ಟ್ ಆಗಿಯೂ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page