Connect with us

DAKSHINA KANNADA

ಮಂಗಳೂರು: ಜಪ್ಪಿನಮೊಗರು ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಕಾಮತ್

Published

on

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಜಪ್ಪಿನಮೊಗರು ವಾರ್ಡ್‌ ವ್ಯಾಪ್ತಿಯ ವಾಸುಕಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.


ಈ ವೇಳೆ ಮಾತನಾಡಿದ ಶಾಸಕ ಕಾಮತ್, ವಾಸುಕಿ ನಗರದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ವೇದಿಕೆ ನಿರ್ಮಿಸುವ ಕುರಿತು ಸಾರ್ವಜನಿಕರ ಬೇಡಿಕೆ ಬಂದಿತ್ತು. ಆ ಪ್ರಕಾರವಾಗಿ ಪಾಲಿಕೆ ಸಂಬಂಧಪಟ್ಟ ಜಾಗದಲ್ಲಿ ವೇದಿಕೆ ಹಾಗೂ ಗ್ರೀನ್ ರೂಮ್ ನಿರ್ಮಾಣಕ್ಕೆ 20 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.

ಜಪ್ಪಿನಮೊಗರು ವಾರ್ಡಿನಲ್ಲಿ ಕಳೆದ 4 ವರ್ಷಗಳಿಂದ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.

ಮಳೆಗಾಲದ ಸಂದರ್ಭದಲ್ಲಿ ಕೃತಕ ನೆರೆ ಉಂಟಾಗುವ‌ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಿದ ಕಾರಣ ಬಹು ವರ್ಷಗಳ ನಂತರ ಈ ವಾರ್ಡಿನಲ್ಲಿ ನೆರೆ ಹಾವಳಿಯ ಸಮಸ್ಯೆ ಅಷ್ಟಾಗಿ ಬಾಧಿಸಿಲ್ಲ‌.

ರಸ್ತೆ ನಿರ್ಮಾಣ, ಚರಂಡಿ, ತಡೆಗೋಡೆ ನಿರ್ಮಾಣ, ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ‌ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ನಯನ ಆರ್. ಕೋಟ್ಯಾನ್, ಸ್ಥಳೀಯ ಕಾರ್ಪೋರೇಟರ್ ವೀಣಾ ಮಂಗಳ, ಪಾಲಿಕೆ ಸದಸ್ಯರಾದ ಪ್ರವಿಣ್ ಚಂದ್ರ ಆಳ್ವ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ‌ ಶೆಟ್ಟಿ, ಮುಖಂಡರಾದ ಕಿರಣ್ ರೈ ಬಜಾಲ್,

ಸುರೇಂದ್ರ ಜಪ್ಪಿನಮೊಗರು, ಭರತ್ ರಾಜ್ ಶೆಟ್ಟಿ, ಸುಕೇಶ್ ಬಜಾಲ್, ಎಂ.ಪಿ ಗಣೇಶ್, ರವೀಂದ್ರ ರಾವ್, ಎಸ್ ಕುಮಾರ್, ಪಿ.ಎ ಶ್ರೀನಿವಾಸ್, ರಮೇಶ್ ಸಹ್ಯಾದ್ರಿ, ರಾಮು, ಸಂದೇಶ್ ಶೆಟ್ಟಿ, ರಾಮ್ ಪ್ರಸಾದ್ ಶೆಟ್ಟಿ, ಉದಯ್, ವಿನ್ಸೆಂಟ್ ಡಿಸೋಜ, ಸುನಿತಾ, ಸುಜಾತ, ಪ್ರೀತಿ, ವಿದ್ಯಾ, ವಿನೋದ್ ರಾವ್, ವಿದ್ಯಾ ರಾವ್, ವಿಜಯ್, ಪ್ರವೀಣ್ ಕುಮಾರ್, ರಾಘವೇಂದ್ರ, ಸ್ನೇಹ, ಜಯಶ್ರೀ, ಸುಮತಿ, ಈಶ್ವರ್, ನಾಗೇಂದ್ರ, ಸುಪ್ರಿಯಾ, ರಾಮಚಂದ್ರ ಆಳ್ವ, ಜಯಪ್ರಕಾಶ್, ಪ್ರವೀಣ್ ನಿಡ್ಡೇಲ್, ಭಾರ್ಗವ‌ ಬಲ್ಯಾಯ, ಚಂದ್ರಶೇಖರಯ್ಯ, ರಾಘವೇಂದ್ರ ‌ಶೆಟ್ಟಿ, ಸ್ಥಳೀಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

DAKSHINA KANNADA

WATCH : ವೇದಿಕೆಗೆ ನುಗ್ಗಿ ವೇಷಧಾರಿಯ ಮೈಮೇಲೆ ಎರಗಿದ ವ್ಯಕ್ತಿ, ವೀಡಿಯೋ ವೈರಲ್

Published

on

ಕಡಬ : ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಏಕಾಏಕಿ ಸಭೆಯಲ್ಲಿದ್ದ  ವ್ಯಕ್ತಿಯೊಬ್ಬರು ವೇದಿಕೆಗೆ ನುಗ್ಗಿ ವೇಷಧಾರಿಯ ಮೈಮೇಲೆ ಎರಗಿದ ಘಟನೆ ನಡೆದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

ಕಡಬದ ನಂದುಗುರಿ ಎಂಬಲ್ಲಿ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಎಂಬವರ ಮನೆಯಲ್ಲಿ  ಸೇವಾರ್ಥವಾಗಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ವಿದ್ಯುನ್ಮಾಲಿ ಹಾಗೂ ಅದಿತಿ ಸಂಭಾಷಣೆ ನಡೆಯುತ್ತಿದ್ದ ವೇಳೆ  ಸಭೆಯಿಂದ ಏಕಾಏಕಿ ಓಡೋಡಿ ಬಂದ ವ್ಯಕ್ತಿಯೊಬ್ಬರು ವೇಷಧಾರಿಯ ಮೇಲೆ ಎರಗಿದ್ದಾರೆ.

ಇದನ್ನೂ ಓದಿ : ಕಾಡು ಹಂದಿ ಮಾಂಸದ ಆಮಿಷವೊಡ್ಡಿ ವಂಚನೆ; ಖದೀಮನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

ಏಕಾಏಕಿ ವೇದಿಕೆ ಮೇಲೆ ಹಾರಿ ಬಂದ ವ್ಯಕ್ತಿಯ ವರ್ತನೆಯಿಂದ   ಕಲಾವಿದರು, ಪ್ರೇಕ್ಷಕರು ದಿಗ್ಬ್ರಮೆಗೊಳಗಾಗಿ ಗಲಿಬಿಲಿಗೊಂಡಿದ್ದಾರೆ.  ಕೂಡಲೇ ಆತನನ್ನು ತಡೆದು ಇತರರ ಸಹಕಾರದಿಂದ ಎಳೆದುಕೊಂಡು ದೂರ ಹೋಗಿರುವುದು ವೀಡಿಯೋದಲ್ಲಿದೆ. ವೇದಿಕೆಗೆ ನುಗ್ಗಿದ ವ್ಯಕ್ತಿ ಸ್ಥಳೀಯ ನಿವಾಸಿ ರಾಧಾಕೃಷ್ಣ ಎಂದು ಗುರುತಿಸಲಾಗಿದ್ದು,  ಮೈಮೇಲೆ ಆವೇಶ ಬಂದ ರೀತಿಯಲ್ಲಿ ವರ್ತಿಸಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.

Continue Reading

DAKSHINA KANNADA

ಕಾಡು ಹಂದಿ ಮಾಂಸದ ಆಮಿಷವೊಡ್ಡಿ ವಂಚನೆ; ಖದೀಮನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

Published

on

ಕಡಬ : ಕಾಡು ಹಂದಿಯ ಮಾಂಸ ನೀಡುವುದಾಗಿ ಹಲವಾರು ಸಮಯಗಳಿಂದ ಹಲವರಿಂದ ಹಣ ಪಡೆದು  ವಂಚಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು  ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ  ಒಪ್ಪಿಸಿದ ಘಟನೆ ಮಂಗಳವಾರ(ಎ.15) ಕುಲ್ಕುಂದದಲ್ಲಿ  ನಡೆದಿದೆ.

ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ  ಕಾಡು ಹಂದಿ ಉರುಳಿಗೆ ಬಿದ್ದಿದ್ದು ಮಾಂಸ ಬೇಕಾದರೆ ಹೇಳಿ ಎಂದು ಈತ  ಹೇಳಿದ್ದ. ಮಹಿಳೆಯು ನಿರಾಕರಿಸಿ ಅಲ್ಲಿನ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಈ ಸಂದರ್ಭ ಈ ಹಿಂದೆ ಹಣ ನೀಡಿ ಈತನಿಂದಲೇ ಮೋಸ ಹೋದ ವ್ಯಕ್ತಿಯೊಬ್ಬರು ಎದುರುಕೊಂಡಿದ್ದು ಈತನನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಡಬ ತಾಲೂಕಿನ ಮರ್ದಾಳದ ಮಹೇಶ ಬಂಧಿತ ಆರೋಪಿ. ಈತ ಹಲವರಿಗೆ ವಿವಿಧ ರೀತಿಯಲ್ಲಿ  ವಂಚಿಸಿರುವುದು ತಿಳಿದು ಬಂದಿದೆ. ದೂರು ನೀಡಲು ಯಾರು ಮುಂದೆ ಬಾರದ ಕಾರಣ ಆತನನ್ನು ವಿಚಾರಿಸಿ ಪೊಲೀಸರು ಬಿಟ್ಟಿರುವುದಾಗಿ ತಿಳಿದುಬಂದಿದೆ.

ಈತ ಫೆಬ್ರವರಿ ತಿಂಗಳಲ್ಲಿ ಕೆಡ್ಡಸದ ಸಂದರ್ಭ  ಎಡಮಂಗಲದಲ್ಲಿ  ವ್ಯಕ್ತಿಯೊಬ್ಬರು  ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದು , ಹಂದಿ ಮಾಂಸ ಇದೆ. ಬೇಕಾದರೆ ಕೊಡುತ್ತೇನೆ ಎಂದು ಹೇಳಿ ಹಲವರಿಂದ  ಹಣ ಪಡೆದಿದ್ದ. ತನ್ನ ಜೊತೆ  ಹಿರಿಯ ವ್ಯಕ್ತಿಯನ್ನು ಕರೆದೊಯ್ದಿದ್ದ. ಅವರನ್ನು ಪಾಲೋಲಿ ಸೇತುವೆ ಬಳಿ  ಬೈಕ್ ನಿಂದ ಇಳಿಸಿ ಕ್ಷಣ ಮಾತ್ರದಲ್ಲಿ ಹಂದಿ ಮಾಂಸ ತರುವುದಾಗಿ ಹೇಳಿ  ಎಸ್ಕೇಪ್ ಆಗಿದ್ದ.

ಇದನ್ನೂ ಓದಿ : ಗರ್ಭಿಣಿ ಎಂದು ಸುಳ್ಳು ಹೇಳಿದ್ಲು…ಮಗುವಿಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿ ಜೈಲು ಸೇರಿದ್ಲು!

ವಂಚಿಸಿದ ವ್ಯಕ್ತಿ ತನ್ನ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು. ಆ ಸಂದರ್ಭದಲ್ಲಿ ಯಾರೂ ಠಾಣೆಗೆ ದೂರು ನೀಡದ ಕಾರಣ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿದುಬಂದಿದೆ.

 

 

Continue Reading

DAKSHINA KANNADA

ಮಂಗಳೂರಿನಲ್ಲಿ ನಡೆಯಿತಾ ಸಾಮೂಹಿಕ ಅತ್ಯಾಚಾರ? ಅರೆ ಪ್ರಜ್ಞಾವಸ್ಥೆಯಲ್ಲಿ ಬಿಹಾರದ ಯುವತಿ ಪತ್ತೆ!

Published

on

ಮಂಗಳೂರು : ಬಿಹಾರ ಮೂಲದ ಯುವತಿಯೊಬ್ಬಳು ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಇದೊಂದು ಸಾಮೂಹಿಕ ಅತ್ಯಾ*ಚಾರ ಅಗಿರಬಹುದೆಂದು ಸಾರ್ವಜನಿಕರು ಅನುಮಾನಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಯುವತಿಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ(ಮಾ.16) ತಡರಾತ್ರಿ ಸ್ಥಳೀಯ ಮನೆಬಾಗಿಲಿಗೆ ಬಂದು ಯುವತಿ ನೀರು ಕೇಳಿ ಅಲ್ಲೇ ಪ್ರಜ್ಷೆ ತಪ್ಪಿ ಬಿದ್ದಿದ್ದಾಳೆ. ತಕ್ಷಣ ಮನೆಯವರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವತಿ ನಶೆಯಲ್ಲಿದ್ದು, ಆಕೆಯ  ಮೈ ಮೇಲೆ ಗಾ*ಯದ ಗುರುತುಗಳು ಕಾಣಿಸಿದ್ದು ಇದೊಂದು ಅತ್ಯಾ*ಚಾರ ಆಗಿರುವ ಅನುಮಾನ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶವೊಂದರಲ್ಲಿ ಇರುವ ಮನೆಗೆ ನಿತ್ಯ ಗಾಂ*ಜಾ ವ್ಯಸನಿಗಳು ಬರುತ್ತಿದ್ದು ನಿನ್ನೆಯೂ ನಾಲ್ವರು ಅಲ್ಲಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಯುವತಿ ಮನೆಯೊಂದರ ಬಾಗಿಲು ತಟ್ಟುತ್ತಿದ್ದಂತೆ ಯುವಕರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಸಚಿವೆ ಕಾರಿನ ಅಪಘಾ*ತದ ರಹಸ್ಯ ಬಯಲು ಮಾಡಿದ ಲಾರಿ ಬಣ್ಣ; ಆರೋಪಿ ಅಂದರ್

ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಚಿಕಿತ್ಸೆಯಲ್ಲಿ ಪಡೆಯುತ್ತಿರುವ ಯುವತಿಯನ್ನು ವಿಚಾರಣೆ ನಡೆಸಬೇಕಾಗಿದೆ. ಆದರೆ, ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿರುವಾಕೆ ಈವರೆಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಭೇಟಿ ನೀಡಿದ್ದಾರೆ ಎಂಬ ಮಾಹಿತಇ ಲಭ್ಯವಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page