Connect with us

LATEST NEWS

ಬೈಂದೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತ

Published

on

ಬೈಂದೂರು: ಅಪ್ರಾಪ್ತೆಯನ್ನು ಅಪಹರಿಸಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತ ಆರೋಪಿಯನ್ನು ಬೈಂದೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಬೈಂದೂರಿನ ಉಪ್ಪುಂದ ಮೂಲದ ಯುವಕ ಸಚಿನ್ ಖಾರ್ವಿ ಕೋಣನ ಮನೆ (17) ಬಂಧಿತ ಆರೋಪಿ.


ಯುವತಿಯೊಂದಿಗೆ ಪ್ರೀತಿಸುವ ನಾಟಕವಾಡಿದ ಸಚಿನ್ ಆಕೆಯೊಂದಿಗೆ ಸಲುಗೆ ಬೆಳೆಸಿ ಆಗಾಗ ಪರಸ್ಪರ ಭೇಟಿಯಾಗುತ್ತಿದ್ದರು ಎನ್ನಲಾಗಿದೆ.

ಆಗಸ್ಟ್ 18 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಅಪ್ರಾಪ್ತೆಯ ತಾಯಿ ಅಡುಗೆ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಮನೆಗೆ ಬಂದಂತಹ ಆರೋಪಿ ಸಚಿನ್ ಖಾರ್ವಿ ಸಂತ್ರಸ್ತೆಯನ್ನು ಅಪಹರಿಸಿಕೊಂಡು ಹೋಗಿದ್ದು, ಬಳಿಕ ಜಿರಲೆಗೆ ಹಾಕುವ ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

ನಂತರ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲು ಮಾಡಿ ಬಿಡುಗಡೆ ಆದ ಬಳಿಕ ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS

ಈ ಗ್ರಾಮದಲ್ಲಿ ಎಲ್ಲರೂ ಇಬ್ಬರ ಹೆಂಡಿರ ಮುದ್ದಿನ ಗಂಡದಿರೇ ಇರೋದು..! ಕಾರಣವೇ ವಿಚಿತ್ರ..!

Published

on

ಮಂಗಳೂರು/ರಾಜಸ್ತಾನ: ಅದೊಂದು ಗ್ರಾಮದಲ್ಲಿ ಪುರುಷರಿಗೆ ಎರಡು ಮದುವೆಯಾಗುವುದು ಕಡ್ಡಾಯ ಎಂಬ ಅಲಿಖಿತ ಕಾನೂನು ಜಾರಿಯಲ್ಲಿದೆ. ಸಂಪ್ರದಾಯ ಪರಂಪರೆ ಹೆಸರಿನಲ್ಲಿ ನಡೆಯುವ ಕೆಲವೊಂದು ಅನಿಷ್ಟ ಪದ್ಧತಿಗಳು ಇಂದಿಗೂ ಜೀವಂತ ಆಗಿದೆ ಎಂಬುದಕ್ಕೆ ಆ ಗ್ರಾಮ ಸಾಕ್ಷಿಯಾಗಿದೆ. ನಮ್ಮ ದೇಶದಲ್ಲಿ ಇಂತಹ ಹಲವು ಸಂಪ್ರದಾಯಗಳ ಆಚರಣೆ ಇನ್ನೂ ಕೂಡಾ ನಡೆಯುತ್ತಿದ್ದು, ಇದೀಗ ಈ ಎರಡು ಮದುವೆಯ ವಿಚಾರ ರಾಜಸ್ಥಾನದ ರಾಮ್‌ ದೆಯೋ-ಕಿ-ಬಸ್ತಿ ಎಂಬಲ್ಲಿ ಬೆಳಕಿಗೆ ಬಂದಿದೆ.

ಇದೊಂದು ಪುಟ್ಟ ಹಳ್ಳಿಯಾದರೂ ಸಂಪ್ರದಾಯವನ್ನು ಮಾತ್ರ ಚಾಚು ತಪ್ಪದೇ ಪಾಲಿಸಿಕೊಂಡು ಬರುತ್ತಾರೆ. ಒಂದು ಹೆಂಡತಿಯನ್ನೇ ನೋಡುವುದು ಕಷ್ಟವಾಗುವ ಈ ಕಾಲದಲ್ಲಿ, ಈ ಗ್ರಾಮದ ಪ್ರತಿಯೊಬ್ಬ ಪುರುಷನೂ ಇಬ್ಬರನ್ನು ಮದುವೆಯಾಗಲೇಬೇಕು. ಈ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿ ಇರುವುದು ಗಂಡು ಮಗುವನ್ನು ಪಡೆಯುವ ಉದ್ದೇಶಕ್ಕಾಗಿ ಎಂಬುವುದೇ ವಿಶೇಷ.

ಈ ಗ್ರಾಮದ ಪುರುಷರು ಮೊದಲ ಹೆಂಡತಿಯಲ್ಲಿ ಮಗುವನ್ನು ಪಡೆಯುವುದಿಲ್ಲ ಎಂಬ ನಂಬಿಕೆ ಇದೆ. ಹಾಗೊಂದು ವೇಳೆ ಮಗುವನ್ನು ಪಡೆದರೂ ಅದು ಹೆಣ್ಣಾಗುತ್ತದೆ ಎಂಬ ಕಾರಣಕ್ಕೆ ಇಲ್ಲಿ ಪುರುಷರಿಗೆ ಎರಡು ಮದುವೆ ಕಡ್ಡಾಯ ಮಾಡಲಾಗಿದೆ. ಎರಡನೇ ಮದುವೆಯಾಗಿ ಬರುವ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ ಎಂಬ ಕಾರಣಕ್ಕೆ ಈ ಕಟ್ಟುಪಾಡು ಈಗಲೂ ಜೀವಂತವಾಗಿದೆ.

ಒಬ್ಬ ಪುರುಷನಿಗೆ ಇಬ್ಬರು ಹೆಂಡತಿಯರು ಇದ್ದರೂ ಕುಟುಂಬದಲ್ಲಿ ಎಂದೂ ಜಗಳವಾಗುವುದಿಲ್ಲ. ತಮಗೆ ಜನಿಸಿದ ಮಗುವನ್ನು ಇಬ್ಬರೂ ಹೆಂಡತಿಯರೂ ಸಮಾನವಾಗಿ ನೋಡಿಕೊಳ್ಳುತ್ತಾರೆಯಂತೆ. ಈ ಗ್ರಾಮದಲ್ಲಿ ಈಗಲೂ ಈ ನಂಬಿಕೆಯನ್ನು ಆಚರಿಸಿಕೊಂಡು ಬರುವುದು ವಿಶೇಷವೇ ಸರಿ.

Continue Reading

LATEST NEWS

ಶಾಲೆಯಿಂದ ತಡವಾಗಿ ಬಂದ ತಪ್ಪಿಗೆ ಬಾರದ ಲೋಕಕ್ಕೆ ಮಗನನ್ನು ಕಳುಹಿಸಿದ ಪಾಪಿ ತಂದೆ

Published

on

ಮಂಗಳೂರು/ತೆಲಂಗಾಣ : 14 ವರ್ಷದ ಮಗ ಶಾಲೆಯಿಂದ ತಡವಾಗಿ ಬಂದಿದ್ದಕ್ಕೆ ಕುಡುಕ ತಂದೆಯೊಬ್ಬ ಅವನನ್ನು ಹೊಡೆದು ಕೊಂದಿರುವ ದಾರುಣ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದು, ಶಾಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಾರಣ ಶನಿವಾರ (ಫೆ.8) ಮನೆಗೆ ತಲುಪಿದಾಗ ರಾತ್ರಿಯಾಗಿತ್ತು. ತಡವಾಗಿ ಮನೆಗೆ ಬಂದ ಕಾರಣ ತಂದೆ ಪ್ರಶ್ನಿಸಿದ್ದಾನೆ. ಈ ವೇಳೆ ಕುಡಿದ ಮತ್ತಿನಲ್ಲಿ ಮಗನ ಸ್ಪಷ್ಟನೆಯನ್ನು ಕೇಳುವ ತಾಳ್ಮೆಯಿಲ್ಲದ ತಂದೆ ಮಗನ ಎದೆಗೆ ಒದೆದಿದ್ದಾನೆ.

ಆರೋಪಿ ಬಾಲಕನ ಎದೆಗೆ ಒದೆದ ರಭಸಕ್ಕೆ ಆತ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಸ್ಥಳೀಯರಿಂದ ಈ ಮಾಹಿತಿ ಪೊಲೀಸ್ ಠಾಣೆಯವರೆಗೆ ತಲುಪಿತ್ತು. ಘಟನೆಯ ತೀವ್ರತೆಯನ್ನು ಅರಿತ ಪೊಲೀಸರು ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ ಚೌಟುಪ್ಪಲ್ ಪೊಲೀಸರು ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ದಾರಿ ಮಧ್ಯೆಯೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ವಲಸೆ ಕಾರ್ಮಿಕನ ಕೊಲೆ ಪ್ರಕರಣ; ಮೂವರ ಬಂಧನ

ಬಾಲಕನ ತಾಯಿ ನೀಡಿದ ದೂರಿನ ಆಧಾರದ ಮೇಲೆ, ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆತ ಪ್ರಸ್ತುತ ಪರಾರಿಯಾಗಿದ್ದಾನೆ. ಓಡಿ ಹೋಗಿರುವ ಆರೋಪಿಯ ವಿರುದ್ಧ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

Continue Reading

LATEST NEWS

ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಮಹಿಳೆಯರ ಸಂಖ್ಯೆ ಎಷ್ಟು ಗೊತ್ತಾ!?

Published

on

ಮಂಗಳೂರು/ಉತ್ತರಪ್ರದೇಶ : ಮಹಾಕುಂಭಮೇಳ ಅಂದ ಮೇಲೆ ಅಲ್ಲಿ ಸಾಧು ಸಂತರೇ ಹೈಲೇಟ್.  ಅವರ ವೇಷ ಭೂಷಣಗಳು ಗಮನ ಸೆಳೆಯುತ್ತವೆ. ಇಲ್ಲಿ ಅನೇಕರು ಸನ್ಯಾಸ ದೀಕ್ಷೆ ಪಡೆಯುವುದೂ ಇದೆ. ಇತ್ತೀಚೆಗೆ ಬಹುಭಾಷಾ ನಟಿ ಮಮತಾ ಕುಲಕರ್ಣಿ ಪ್ರಯಾಗ್ ರಾಜ್‌ಗೆ ತೆರಳಿ ಸನ್ಯಾಸ ದೀಕ್ಷೆ ಪಡೆದು ಭಾರೀ ಸುದ್ದಿಯಾಗಿದ್ದರು. ಮಮತಾ ಕುಲಕರ್ಣಿ ಅಲ್ಲದೇ ಬೇರೆ ಮಹಿಳೆಯರೂ ಮಹಾಕುಂಭಮೇಳದಲ್ಲಿ ಸನ್ಯಾಸ ಸ್ವೀಕರಿಸಿದ್ದಾರೆ.  ಹೌದು, 7,000 ಕ್ಕೂ ಅಧಿಕ ಮಹಿಳೆಯರು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಈ ಪೈಕಿ ವಿದ್ಯಾವಂತ ಮಹಿಳೆಯರೇ ಹೆಚ್ಚು ಎಂಬುದು ವಿಶೇಷ.

ಜುನಾ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ, ಶ್ರೀ ಪಂಚದಶನಮ್ ಆವಾಹನ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅರುಣ್ ಗಿರಿ ಮತ್ತು ವೈಷ್ಣವ ಸಂತರ ಧರ್ಮಾಚಾರ್ಯರ ನೇತೃತ್ವದಲ್ಲಿ ಮಹಿಳೆಯರು ದೀಕ್ಷೆ ಸ್ವೀಕರಿಸಿದ್ದಾರೆ ಎಂದು ಉತ್ತರ ಭಾರತ ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಎಲ್ಲಾ ಪ್ರಮುಖ ಅಖಾಡಗಳಲ್ಲಿ 7,000ಕ್ಕೂ ಹೆಚ್ಚು ಮಹಿಳೆಯರು ಗುರು ದೀಕ್ಷೆ ಪಡೆದು ಸನಾತನ ಧರ್ಮಕ್ಕೆ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ವರದಿ ಹೇಳಿದೆ. ಈ ಬಾರಿಯ ಮಹಾಕುಂಭದಲ್ಲಿ 246 ಮಹಿಳೆಯರು ನಾಗ ಸನ್ಯಾಸಿನಿಯಾಗಿ ದೀಕ್ಷೆ ಪಡೆದುಕೊಂಡಿದ್ದಾರೆ ಎಂದು ಶ್ರೀ ಪಂಚದಶನಂ ಜುನಾ ಅಖಾಡದ ಅಧ್ಯಕ್ಷೆ ಡಾ.ದೇವಯಾ ಗಿರಿ ಹೇಳಿದ್ದಾರೆ. ಇದಕ್ಕೂ ಮುನ್ನ ಅಂದರೆ, 2019ರ ಕುಂಭಮೇಳದಲ್ಲಿ 210 ಮಹಿಳೆಯರಿಗೆ ನಾಗ ಸನ್ಯಾಸಿನಿ ದೀಕ್ಷೆ ನೀಡಲಾಗಿದೆ ಎಂದು ದೇವಯಾ ತಿಳಿಸಿದ್ದಾರೆ.

ಇದನ್ನೂ ಓದಿ : ತಿರುಪತಿ ಲಡ್ಡುಗೆ ಪ್ರಾಣಿ ಕೊಬ್ಬು ಮಿಶ್ರ ಪ್ರಕರಣ; ಡೈರಿ ನಿರ್ದೇಶಕ ಸೇರಿದಂತೆ ನಾಲ್ವರ ಬಂಧನ
ಮಹಾಕುಂಭಮೇಳಕ್ಕೆ ಬರುವ ಭಕ್ತರಲ್ಲಿ ಈ ಬಾರಿ ಹೊಸಪೀಳಿಗೆಯ ಮಹಿಳೆಯರೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಬರುವ ಪ್ರತಿ 10 ಭಕ್ತರಲ್ಲಿ 4 ಮಹಿಳೆಯರಿದ್ದಾರೆ. ಇದರಲ್ಲಿ ಹೊಸ ಪೀಳಿಗೆ ಶೇ.40ರಷ್ಟು ಇದೆ ಎಂದು ಸಮೀಕ್ಷೆ ತಿಳಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page