Connect with us

LATEST NEWS

“ಪಠ್ಯಪುಸ್ತಕದ ಬಗ್ಗೆ ಸುಳ್ಳು ಹೇಳಿದ ಸಚಿವ ಕೋಟ, ಸುನೀಲ್‌ ಕ್ಷಮೆಯಾಚಿಸಲಿ”

Published

on

ಮಂಗಳೂರು: ಪಠ್ಯಪುಸ್ತಕದ ಬಗ್ಗೆ ಸುಳ್ಳು ಹೇಳಿಕೆ ನೀಡಿದ ಬಿಜೆಪಿಯವರು ವಿಶೇಷವಾಗಿ ಸಚಿವ ಕೋಟಾ ಹಾಗೂ ಸುನೀಲ್‌ ಕುಮಾರ್‌ ದ.ಕ ಜಿಲ್ಲೆಯರ ಬಳಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್‌ ಯುವ ನಾಯಕ ಮಿಥುನ್‌ ರೈ ಆಗ್ರಹಿಸಿದ್ದಾರೆ.


ಈ ಬಗ್ಗೆ ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಠ್ಯಪುಸ್ತಕದಲ್ಲಿ ಬ್ರಹ್ಮರ್ಷಿ ನಾರಾಯಣ ಗುರು ಪಠ್ಯ ತೆಗೆದ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಾದವೆದ್ದಾಗ ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್‌ ಕುಮಾರ್ ಪಠ್ಯವನ್ನು ತೆಗೆದಿಲ್ಲ.

ಕಾಂಗ್ರೆಸ್‌ನವರು ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದರು. ಇದೀಗ ಶಿಕ್ಷಣ ಸಚಿವರು ಸಮಾಜ ವಿಜ್ಞಾನದ ನಾರಾಯಣ ಗುರು ಪಠ್ಯದಲ್ಲಿ ಸೇರಿಸುವಂತೆ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಸಚಿವ ಕೋಟಾ, ಸುನೀಲ್‌ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ಜನರ ಭಾವನೆ ಜೊತೆಗೆ ಚೆಲ್ಲಾಟವಾಡಿದ್ದಾರೆ.

ಆದ್ದರಿಂದ ಅವರು ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕು ಎಂದರು. ಅಂದು ನಾವು ಮಾಡಿದ ಹೋರಾಟದ ಪ್ರತಿಫಲದಿಂದ ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಹ್ಮರ್ಷಿ ನಾರಾಯಣಗುರು ಪಾಠ ಸೇರಿದೆ.

ಇನ್ನೂ ಕೂಡ ಪಠ್ಯಪುಸ್ತಕದಲ್ಲಿ ಹಲವಾರು ತಪ್ಪುಗಳಿವೆ. ಆ ತಪ್ಪುಗಳನ್ನು ಸದ್ಯದಲ್ಲೇ ಬಯಲು ಮಾಡುತ್ತೇವೆ. ನಿನ್ನೆ ಮಳೆ ಹಾನಿ ಪರಿಶೀಲಿಸಲು ಜಿಲ್ಲೆಗೆ ಭೇಟಿ ನೀಡಿದ ಸಿಎಂ ಮೂಲ್ಕಿ-ಮೂಡಬಿದ್ರೆ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಇದೇ ವೇಳೆ ಆರೋಪಿಸಿದರು.

LATEST NEWS

ಶುಗರ್‌ಕೇನ್‌ ಮಿಷನ್‌ಗೆ ಸಿಲುಕಿದ ಜಡೆ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಮಹಿಳೆ

Published

on

ಕೆಲವು ಸಂದರ್ಭ ಜಾಗರೂಕತೆ ಎನ್ನುವುದು ಎಷ್ಟಿದ್ದರೂ ಕಮ್ಮಿಯೇ. ಅದರಲ್ಲೂ ಫ್ಯಾಕ್ಟರಿ ಕೆಲಸ ಮಾಡುವಾಗ ಅಥವಾ ಕೃಷಿ ಕಾರ್ಯಗಳನ್ನು ಯಂತ್ರಗಳ ಸಹಾಯದಿಂದ ಮಾಡುವ ಸಂದರ್ಭ ಬಹಳ ಜಾಗರೂಕತೆಯಿಂದ ಇರುವುದು ಉತ್ತಮ. ಕೆಲವೊಂದು ಬಾರಿ ಈ ಯಂತ್ರಗಳಿಗೆ ಆಕಸ್ಮಿಕವಾಗಿ ಕೈ, ಕಾಲು ಸಿಲುಕಿ ಅವಘಡಗಳು ಸಂಭವಿಸುವ ಅದೆಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ.

ತೆಲಂಗಾಣ : ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕಬ್ಬಿನ ಹಾಲು ತಯಾರಿಸುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರ ಜಡೆ ಕಬ್ಬಿನ ಜ್ಯೂಸ್ ಮಿಷನ್‌ಗೆ ಸಿಕ್ಕಿ ಹಾಕಿಕೊಂಡಿದೆ. ಅದೃಷ್ಟವಶಾತ್‌ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತದಿಂದ ಮಹಿಳೆ ಪಾರಾಗಿದ್ದು, ಈ ಸುದ್ಧಿ ಫುಲ್ ವೈರಲ್‌ ಆಗುತ್ತಿದೆ. ತೆಲಂಗಾಣದ ಮಹಬೂಬಾಬಾದ್‌ ಜಿಲ್ಲೆಯ ಡೋರ್ನಕಲ್‌ ಪಟ್ಟಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಅಲ್ಲಿನ ಅಂಚೆ ಕಚೇರಿಯ ಬಳಿ ಕಬ್ಬಿನ ಜ್ಯೂಸ್‌ ಮಾರಿ ಜೀವನ ಸಾಗಿಸುತ್ತಿದ್ದ ಮಹಿಳೆಯೊಬ್ಬರ ಕೂದಲು ಕಬ್ಬಿನ ಜ್ಯೂಸ್‌ ಮಷಿನ್‌ಗೆ ಸಿಲುಕಿದೆ. ಕಬ್ಬಿನ ಹಾಲು ತಯಾರಿಸುತ್ತಿದ್ದ ವೇಳೆ ಯಂತ್ರದ ಚಕ್ರಕ್ಕೆ ಮಹಿಳೆಯ ಜಡೆ ಸಿಕ್ಕಿ ಹಾಕಿಕೊಂಡಿದ್ದು, ತಕ್ಷಣ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಅಲ್ಲಿದ್ದವರು ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಮಾರ್ಚ್‌ 25 ರಂದು ಹಂಚಿಕೊಳ್ಳಲಾದ ಈ ಸುದ್ಧಿ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಮಹಿಳೆ ತುಂಬಾ ಅದೃಷ್ಟವಂತೆ. ಇಂತಹ ಅವಘಡದಿಂದ ಮೃತಪಟ್ಟ ಘಟನೆಗಳೂ ನಡೆದಿವೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜಕ್ಕೂ ಇದು ತುಂಬಾನೇ ಅಪಾಯಕಾರಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

Continue Reading

LATEST NEWS

ಬೆಳ್ತಂಗಡಿ, ಸುಳ್ಯದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆ; ಅಪಾರ ಹಾನಿ

Published

on

ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನಲ್ಲಿ ಭಾರಿ ಗಾಳಿ ಮಳೆ ಸುರಿದಿದ್ದು ಅಪಾರ ಹಾನಿ ಸಂಭವಿಸಿದ ಬಗ್ಗೆ ವರದಿ ಆಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಸಂಜೆಯಿಂದಲೇ ಮಳೆ ಸುರಿಯಲು ಆರಂಭವಾಗಿದ್ದು, ವೇಗವಾದ ಗಾಳಿಯ ಸಹಿತ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಗಾಳಿಯಿಂದ ಹಲವಾರು ಕಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆಲವೆಡೆ ಸಂಚಾರ ವೈತ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕೈಕೊಟ್ಟಿದ್ದ ಕಾರಣ ತಡ ರಾತ್ರಿಯ ವರೆಗೂ ಜನರು ಕತ್ತಲೆಯಲ್ಲಿ ಕಳೆಯುವಂತಾಗಿದೆ.

ಇದರೊಂದಿಗೆ ಸಿಡಿಲಿನಿಂದಾಗಿ ಬೆಳ್ತಂಗಡಿಯ ತಾಲೂಕು ಪಂಚಾಯತ್ ಕಚೇರಿಯ ಹಿಂಭಾಗದಲ್ಲಿನ ಮರಕ್ಕೆ ಬೆಂಕಿ ಬಿದ್ದಿದೆ. ಸಂಜೆಯ ವೇಳೆ ಸಿಡಿಲು ಬಡಿದಿದ್ದರೂ ರಾತ್ರಿಯ ತನಕ ಅಗ್ನಿ ಶಾಮಕ ತಂಡ ಸ್ಥಳಕ್ಕೆ ಆಗಮಿಸದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದರು. ಬೆಳ್ತಂಗಡಿಯಲ್ಲಿ ಎರಡು ಅಗ್ನಿಶಾಮಕ ವಾಹನ ಇದ್ದರೂ ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದ ಕಾರಣ ಕಾರ್ಯಾಚರಿಸುವ ಸ್ಥಿತಿಯಲ್ಲಿ ಇಲ್ಲ ಎನ್ನಲಾಗಿದೆ. ಹೀಗಾಗಿ ತಡವಾಗಿ ಆಗಮಿಸಿದ ಅಗ್ನಿಶಾಮಕ ದಳ ರಾತ್ರಿ ವೇಳೆಯಲ್ಲಿ ಬೆಂಕಿ ನಂದಿಸುವ ಕಾರ್ಯ ಮಾಡಿದೆ.

ಅಲ್ಲದೇ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡ ಘಟನೆ ಮಾ.26 ರಂದು ಸಂಜೆ ನಡೆದಿದೆ. ಕಲ್ಲುಗುಂಡಿ ಪೂರ್ಣಿಮಾ ಟೆಕ್ಸ್‌ಟೈಲ್ಸ್ ಮಾಲೀಕ ಬಿ.ಆರ್ ಪದ್ಮಯ್ಯ ಅವರು ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು. ಸಂಜೆ ವೇಳೆ ಸುರಿದ ಭಾರೀ ಗಾಳಿ ಮಳೆಗೆ ಮರವೊಂದು ದಿಢೀರ್ ಕಾರಿನ ಮೇಲೆ ಬಿದ್ದಿದ್ದು, ಕಾರು ಜಖಂಗೊಂಡಿದೆ.

Continue Reading

LATEST NEWS

ಮಂಗಳೂರಿಗೆ ಆಗಮಿಸಿದ ಸಿಐಎಸ್‌ಎಫ್‌ ಕೋಸ್ಟಲ್‌ ಸೈಕ್ಲೋಥಾನ್ 2025

Published

on

ಮಂಗಳೂರು: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಿಂದ ದೇಶದ ಕರಾವಳಿ ತೀರದುದ್ದಕ್ಕೂ ನಡೆಯುತ್ತಿರುವ ಸಿಐಎಸ್‌ಎಫ್‌ ಕೋಸ್ಟಲ್‌ ಸೈಕ್ಲೋಥಾನ್‌ 2025 ಬುಧವಾರ ಸಂಜೆ ಮಂಗಳೂರಿಗೆ ಆಗಮಿಸಿತು.


ಪಣಂಬೂರು ಬೀಚಿನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಜಿ.ಪಂ. ಸಿಇಓ ಡಾ. ಕೆ. ಆನಂದ್, ಎಸ್ಪಿ ಯತೀಶ್ ಮತ್ತಿತರರು ಸೈಕಲ್ ರ್ಯಾಲಿಯನ್ನು ಸ್ವಾಗತಿಸಿದರು.

ಇದನ್ನೂ ಓದಿ: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿಯ ವರದಿ ತಿರಸ್ಕರಿಸಿದ ಭಾರತ..!

ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಂದರೆ ಸಿಐಎಸ್‌ಎಫ್ ಭಾರತದ ಭದ್ರತಾ ಮೂಲಸೌಕರ್ಯದ ಆಧಾರಸ್ತಂಭವಾಗಿದೆ. ಪ್ರಮುಖ ಕೈಗಾರಿಕಾ ಕೇಂದ್ರಗಳು, ವಿಮಾನ ನಿಲ್ದಾಣಗಳು, ಮೆಟ್ರೋ ಜಾಲಗಳು, ಪರಮಾಣು ಸ್ಥಾಪನೆ ಮತ್ತು ಪ್ರಮುಖ ಕರಾವಳಿ ಪ್ರದೇಶಗಳನ್ನು ಸಿಐಎಸ್‌ಎಫ್‌ ರಕ್ಷಿಸುತ್ತಿದೆ.

 

ಭಾರತದ ಆರ್ಥಿಕ ಜೀವನಾಡಿಗಳನ್ನು ರಕ್ಷಿಸುವುದರಿಂದ ಹಿಡಿದು ಲಕ್ಷಾಂತರ ಜನರ ಸುರಕ್ಷತೆಯನ್ನು ಮಾಡುತ್ತಿದೆ. ಭಾರತದ 7,500 ಕಿಲೋ ಮೀಟರ್ ಕರಾವಳಿಯು ವ್ಯಾಪಾರ, ಆರ್ಥಿಕತೆ ಮತ್ತು ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರೊಂದಿಗೆ, ಸಿಐಎಸ್‌ಎಫ್ ಕರಾವಳಿ ಭದ್ರತೆ, ಪ್ರಮುಖ ಬಂದರುಗಳು, ಕಡಲ ಮೂಲಸೌಕರ್ಯಗಳನ್ನು ರಕ್ಷಿಸುವುದು ಮತ್ತು ಕರಾವಳಿ ಸಮುದಾಯಗಳಲ್ಲಿ ವಿಶ್ವಾಸವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಾರ್ಚ್‌ 7ರಂದು ಈ ಕೋಸ್ಟಲ್‌ ಸೈಕ್ಲೋಥಾನ್‌ 2025ಕ್ಕೆ ಚಾಲನೆ ನೀಡಲಾಗಿತ್ತು.

Continue Reading
Advertisement

Trending

Copyright © 2025 Namma Kudla News

You cannot copy content of this page