Connect with us

DAKSHINA KANNADA

ಮಂಗಳೂರು ನಗರದ ಮೇರಿಹಿಲ್‌ನಲ್ಲಿ ಲಘು ಭೂಕಂಪನದ ಅನುಭವ..!?

Published

on

ಮಂಗಳೂರು: ಮಂಗಳೂರು ನಗರದಲ್ಲಿರುವ ಮೇರಿಹಿಲ್‌ ಪ್ರದೇಶದಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನವಾದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಇದನ್ನು ಭೂಕಂಪ ಮಾಪನಶಾಸ್ತ್ರ ಅಧಿಕಾರಿಗಳು ಧೃಡಪಡಿಸಿಲ್ಲ.


ಇಂದು ಬೆಳಗ್ಗೆ 10.30ರ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಮೇರಿಹಿಲ್‌ನ ಸ್ಥಳೀಯರಿಗೆ ಕಂಪನವಾದ ಅನುಭವವಾಗಿದೆ.

ಸ್ಥಳಕ್ಕೆ ಪೊಲೀಸ್‌ ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆದರೆ ಭೂಕಂಪನ ಬಗ್ಗೆ ಭೂಕಂಪನ ಮಾಪನಶಾಸ್ತ್ರ ಅಧಿಕಾರಿಗಳು ಧೃಡಪಡಿಸಿಲ್ಲ. ಸ್ಥಳೀಯರು ಆತಂಕಪಡಬೇಕಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಮಂಗಳೂರಿನ ಲೈಟ್‌ಹೌಸ್‌ ಹಿಲ್‌ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿತ್ತು. ಇದೇ ರೀತಿಯ ಅನುಭವ ಇಂದು ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಭೂಕಂಪನ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ ಅಪರ ಜಿಲ್ಲಾಧಿಕಾರಿ

ಭೂಕಂಪನ ನಡೆದ ಬಗ್ಗೆ ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರು ಸ್ಪಷ್ಟನೆ ನೀಡಿದ್ದು, ಭೂಕಂಪನ ನಡೆದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

 

 

ಕರಾವಳಿ ಪ್ರದೇಶದಲ್ಲಿ ಲಘು ಭೂಕಂಪನಗಳ ಪ್ರಮಾಣ ಹೆಚ್ಚಳ 

ರಾಜ್ಯದ ಕರಾವಳಿ ಪ್ರದೇಶದಲ್ಲಿ 50 ವರ್ಷಗಳಿಂದ ಈಚೆಗೆ ಲಘು ಭೂಕಂಪನಗಳ ಪ್ರಮಾಣ ಶೇ 10ರಷ್ಟು ಹೆಚ್ಚಳ ಆಗಿರುವುದು ವೈಜ್ಞಾನಿಕ ಅಧ್ಯಯನದಿಂದ ಕಂಡು ಬಂದಿದೆ.

‘ಮಂಗಳೂರು ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಭೂಕಂಪನ ಸಾಧ್ಯತೆ’ ಕುರಿತು ಭೂಕಂಪನ ವಿಜ್ಞಾನಿ ಡಾ. ಶ್ರೇಯಸ್ವಿ ಚಂದ್ರಶೇಖರ್‌ ಅಧ್ಯಯನ ನಡೆಸಿದ್ದರು.

ಅದರ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  200 ವರ್ಷಗಳಲ್ಲಿ ರಿಕ್ಟರ್‌ ಮಾಪನದಲ್ಲಿ 2ರಿಂದ 4ರಷ್ಟು ಪ್ರಮಾಣದ 150ಕ್ಕೂ ಅಧಿಕ ಭೂಕಂಪಗಳು ಸಂಭವಿಸಿವೆ.

ನೆಲದಡಿಯಲ್ಲಿ ಹಾದುಹೋಗುವ ಕಲ್ಲುಹಾಸಿನ ಮಟ್ಟದಿಂದ ನೆಲದ ಮೇಲ್ಮೈ ನಡುವಿನ ವಿವಿಧ ಹಂತಗಳಲ್ಲಿ ಕಂಪನ ವರ್ಧನೆಯನ್ನು (ಪಿಜಿಎ) ಆಧರಿಸಿ ಭೂಕಂಪನದ ಅಪಾಯದ ಅಂದಾಜು ಮಾಡಲಾಗಿದೆ.

ಈಚಿನ 50 ವರ್ಷಗಳಲ್ಲಿ ಲಘು ಭೂಕಂಪನಗಳ ಪ್ರಮಾಣ ಗಣನೀಯವಾಗಿ ಹೆಚ್ಚಿರುವುದನ್ನು ನಕ್ಷೆಗಳು ತೊರಿಸುತ್ತಿವೆ.

ಕಂಪನಗಳು ಸಂಭವಿಸಿದ ಸ್ಥಳಗಳಲ್ಲಿ ಹೆಚ್ಚಿನವು ಕರಾವಳಿ ತೀರ ಪ್ರದೇಶದಲ್ಲಿವೆ. ಇಂತಹ ಲಘು ಭೂಕಂಪನಗಳು ಆಗಾಗ್ಗೆ ಸಂಭವಿಸುವುದಕ್ಕೆ ಮುಖ್ಯ ಕಾರಣ ಭೂಖಂಡಗಳ ಚಲನೆಯಿಂದ ಸಮುದ್ರದ ವ್ಯಾಪ್ತಿ ನಿರಂತರವಾಗಿ ಹೆಚ್ಚುತ್ತಿರುವುದು.

ಇದರಿಂದಾಗಿ ತೀರ ಪ್ರದೇಶದ ಭೂಮಿ ಸಂಕ್ಷೇಪನಕ್ಕೊಳಗಾಗಿ ಒತ್ತಡ ಸೃಷ್ಟಿಯಾಗುತ್ತ‌ದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪ್ರದೇಶದಿಂದ ಪೂರ್ವ ಕರಾವಳಿಯ ಪುಲಿಕಟ್‌ ಸರೋವರದವರೆಗೆ ಅಲ್ಲಲ್ಲಿ ಚಾಚಿಕೊಂಡಿರುವ ಪರ್ವತ ಶ್ರೇಣಿಯುದಕ್ಕೂ ಲಘು ಭೂಕಂಪನಗಳು ಪದೇ ಪದೇ ಸಂಭವಿಸುತ್ತಿರುವುದೂ ಈ ಕಾರಣದಿಂದಾಗಿಯೇ ಎಂದು ವಿಶ್ಲೇಷಿಸಲಾಗಿದೆ.

DAKSHINA KANNADA

ಪುತ್ತೂರು: ರೈಲಿನಿಂದ ಜಾರಿ 25 ಅಡಿ ಆಳಕ್ಕೆ ಬಿದ್ದ ಯುವಕ

Published

on

ಪುತ್ತೂರು: ರೈಲಿನಿಂದ ಜಾರಿ ಯುವಕನೊಬ್ಬ 25 ಅಡಿ ಆಳಕ್ಕೆ ಬಿದ್ದು ಬಳಿಕ ಪವಾಡ ಸದೃಶವಾಗಿ ಬದುಕುಳಿದ ಘಟನೆ ಕಡಬದ ಸವಣೂರು ಎಂಬಲ್ಲಿ ನಡೆದಿದೆ.

ಉದಯ್ ಕುಮಾರ್ ರೈಲಿನಿಂದ ಬಿದ್ದ ಯುವಕ. ಈತ ಮಂಗಳೂರಿನಿಂದ ಬೆಂಗಳೂರು ಕಡೆಗೆ ರೈಲಿನಲ್ಲಿ ಹೊರಟಿದ್ದನು. ಆದರೆ ಬಾಗಿಲ ಬಳಿ ನಿಂತಿದ್ದರಿಂದ ಆಕಸ್ಮತ್‌ ಆಗಿ ರೈಲಿನಿಂದ 25 ಅಡಿ ಆಳಕ್ಕೆ ಜಾರಿ ಮೋರಿ ಬಳಿ ಬಿದ್ದಿದ್ದ. ರಾತ್ರಿ ವೇಳೆ ಈತ ಬಿದ್ದಿದ್ದರಿಂದ ಸಹ ಪ್ರಯಾಣಿಕರಿಗೆ ಮಾತ್ರ ತಿಳಿದಿತ್ತು.

ನಂತರ ರೈಲು ಮುಂದಿನ ನಿಲ್ದಾಣ ತಲುಪಿದಾಗ ರೈಲ್ವೇ ಮಾಸ್ಟರ್ಗೆ ವಿಷಯವನ್ನು ತಿಳಿಸಿದರು. ಆದರೆ ಯುವಕ ಎಲ್ಲಿ ಬಿದ್ದ ಎಂಬುದಾಗಿ ಯಾರಿಗೂ ತಿಳಿದಿರಲಿಲ್ಲ. ರಾತ್ರಿಯಾದ್ದರಿಂದ ಹುಡುಕಲು ಸಹ ಸಾಧ್ಯವಾಗಲಿಲ್ಲ.

ಆದರೆ ಮರುದಿನ ಬೆಳಗ್ಗೆ ಯುವಕ ಮೋರಿಯ ಬಳಿ ನರಳಾಡುವುದನ್ನು ಸ್ಥಳೀಯರು ಗಮನಿಸಿ ಕೂಡಲೇ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಮುಖ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಹೀಗೆ 15 ಗಂಟೆಯ ಬಳಿಕ ಈತ ಪತ್ತೆಯಾಗಿರುವುದು ವಿಶೇಷವೇ ಸರಿ.

Continue Reading

DAKSHINA KANNADA

ಮಾವಿನ ಮಿಡಿ ಕೊಯ್ಯಲು ಹೋಗಿ ದುರಂ*ತ; ಮರದಿಂದ ಬಿ*ದ್ದು ವ್ಯಕ್ತಿ ಸಾ*ವು

Published

on

ಸುಳ್ಯ : ಮಾವಿನ ಮರ ಏರಿ ಮಾವಿನ ಮಿಡಿಗಳನ್ನು ಕೊಯ್ಯುತ್ತಿದ್ದ ವೇಳೆ ಮರದ ಕೊಂಬೆ ತುಂಡಾಗಿ ಬಿದ್ದು ವ್ಯಕ್ತಿಯೊಬ್ಬರು ಮೃ*ತ ಪಟ್ಟಿದ್ದಾರೆ. ಸುಳ್ಯ ತಾಲೂಕಿನ ಉಬರಡ್ಕ ಎಂಬಲ್ಲಿ ಈ ಘಟನೆ ನಡೆದಿದ್ದು, ಜನಾರ್ದನ ಪೂಜಾರಿ ಮೃ*ತ ದುರ್ದೈವಿ.

ಉಬರಡ್ಕದ ನೆಯ್ಯೋಣಿ ನಿವಾಸಿಯಾಗಿದ್ದ ಇವರು ಮಾರ್ಚ್ 22 ರಂದು ಮಾವಿನ ಮರದಿಂದ ಮಾವಿನ ಮಿಡಿ ಕೊಯ್ಯುತ್ತಿದ್ದರು. ಈ ವೇಳೆ ಕೊಂಬೆ ತುಂಡಾಗಿದೆ. ಪರಿಣಾಮ ಕೊಂಬೆಯ ಸಹಿತ ಮರದಿಂದ ಕೆಳಗೆ ಬಿ*ದ್ದ ಅವರಿಗೆ ಗಂಭೀ*ರ ಸ್ವರೂಪದ ಗಾ*ಯಗಳಾಗಿತ್ತು.

ಇದನ್ನೂ ಓದಿ : ಬೆಳ್ತಂಗಡಿ : ಟಿಸಿ ಬಳಿಯಲ್ಲಿ ಮೆಸ್ಕಾಂ ಸಿಬ್ಬಂದಿಯ ಮೃ*ತದೇಹ ಪತ್ತೆ

ಸೊಂಟ ಹಾಗೂ ತಲೆಗೆ ಏಟಾಗಿದ್ದ ಅವರನ್ನು ತಕ್ಷಣ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಜನಾರ್ದನ ಪೂಜಾರಿ ಮೃ*ತಪಟ್ಟಿದ್ದಾರೆ.

Continue Reading

DAKSHINA KANNADA

ಬೆಳ್ತಂಗಡಿ : ಟಿಸಿ ಬಳಿಯಲ್ಲಿ ಮೆಸ್ಕಾಂ ಸಿಬ್ಬಂದಿಯ ಮೃ*ತದೇಹ ಪತ್ತೆ

Published

on

ಬೆಳ್ತಂಗಡಿ : ಮೆಸ್ಕಾಂ ಇಲಾಖೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಲೈನ್ ಮ್ಯಾನ್ ಆಗಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರ ಮೃ*ತದೇಹ ಟ್ರಾನ್ಸ್ ಫಾರ್ಮರ್ ಒಂದರ ಬಳಿ ಪತ್ತೆಯಾಗಿದೆ.  ಬುಧವಾರ(ಮಾ.26) ಸಂಜೆ ವೇಳೆಯಲ್ಲಿ ಮೃ*ತದೇಹ ಪತ್ತೆಯಾಗಿದ್ದು, ಸಾ*ವು ಆಕಸ್ಮಿಕವೋ ಅಥವಾ ದು*ರ್ಘಟನೆಯೋ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಬೆಳ್ತಂಗಡಿ ತಾಲೂಕಿನ ನಾರವಿಯ ಅಡಿಂಜೆ ಎಂಬಲ್ಲಿ ಈ ಘಟನೆ ನಡೆದಿದ್ದು, ಮೃ*ತ ವ್ಯಕ್ತಿ ಕಿಟ್ಟಿ ಎಂದೇ ಫೇಮಸ್ ಆಗಿದ್ದ  ಸುಧಾಕರ್(50) ಎಂಬವರದ್ದಾಗಿದೆ. ನಾರಾವಿಯ ತುಂಬೆ ಗುಡ್ಡೆ ಎಂಬಲ್ಲಿಯ ನಿವಾಸಿಯಾಗಿದ್ದ ಸುಧಾಕರ್ ಕಳೆದ 27 ವರ್ಷಗಳಿಂದ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬುಧವಾರ ಸಂಜೆ ಟ್ರಾನ್ಸ್ ಫಾರ್ಮರ್ ಬಳಿ ಹೋಗಿದ್ದ ಇವರು ಅಲ್ಲೇ ಮೃ*ತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ : ಕೋಟ : ಅಜ್ಜಿಯ ಚಿನ್ನದ ಸರ ಕದ್ದಿದ್ದ ಆರೋಪಿ ಅರೆಸ್ಟ್

ಕೈನಲ್ಲಿ ಸಣ್ಣದೊಂದು ಗಾ*ಯ ಹೊರತು ಪಡಿಸಿದರೆ ಬೇರೆ ಯಾವುದೇ ಅನುಮಾನಾಸ್ಪದವಾದ ಕುರುಹು ಇಲ್ಲವಾಗಿದೆ. ಹಾಗಂತ ನಿನ್ನೆ ಸಂಜೆಯ ವೇಳೆ ಪರಿಸರದಲ್ಲಿ ಗುಡುಗು ಹಾಗು ಸಿಡಿಲು ಕೂಡ ಇತ್ತು. ಹಾಗಾಗಿ ಟ್ರಾನ್ಸ್ ಫಾರ್ಮರ್ ಬಳಿ ಹೋಗಿದ್ದಾಗ ಸಿಡಿಲು ಬಡಿಯಿತಾ ಅಥವಾ ವಿದ್ಯುತ್ ಪ್ರವಹಿಸಿತಾ ಅನ್ನೋ ಅನುಮಾನವೂ ಇದೆ.

ಸದ್ಯ ಮೃ*ತದೇಹವನ್ನು ಮ*ರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾ*ವಿಗೆ ನಿಖರ ಕಾರಣ ಗೊತ್ತಾಗಲಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page