Connect with us

ಉಡುಪಿ ಅನ್ನದಾತರ ಪರಿಶ್ರಮ ವಲಸೆ ಕಾರ್ಮಿಕ ಭೂಪರಿಗೆ ತಿಳಿಯದೆ ಹೋಗಿದ್ದು ದುರಂತ ಸಂಗತಿ..

Published

on

ಉಡುಪಿ ಅನ್ನದಾತರ ಪರಿಶ್ರಮ ವಲಸೆ ಕಾರ್ಮಿಕ ಭೂಪರಿಗೆ ತಿಳಿಯದೆ ಹೋಗಿದ್ದು ದುರಂತ ಸಂಗತಿ..

ಉಡುಪಿ: ಕೊರೊನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ಮಹಾಮಾರಿಯಿಂದಾಗಿ ಹಸಿವೆಯಿಂದ ಬಡಜನರು, ಕೂಲಿ ಕಾರ್ಮಿಕರು ಕಂಗೆಟ್ಟು ಹೋಗಿದ್ದಾರೆ.

ಎಲ್ಲಾ ಕಡೆಯಲ್ಲಿಯೂ ಕೊರೊನಾಸುರ ಅಟ್ಟಹಾಸದಿಂದ ಮರೆಯುತ್ತಿದ್ದಾನೆ. ಅಮೂಲ್ಯ ನರ ಜೀವಗಳನ್ನು ವಧಿಸುತ್ತಿದ್ದಾನೆ.

ಕೊರೊನಾಸುರನ ಸಂಹಾರ ನಡೆಸಲು ದೇಶದೆಲ್ಲೆಡೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ.

ಇತ್ತ ಸರಕಾರದ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ, ಕೃಷ್ಣನಗರಿ ಉಡುಪಿಯಲ್ಲಿ ಸಾವಿರಾರು ವಲಸೆ ಕಾರ್ಮಿಕರು ಅತಂತ್ರರಾಗಬೇಕಾಯಿತು.

ಅವರ ರಕ್ಷಣೆಗೆ ಉಡುಪಿಯ ಸಂಘ ಸಂಸ್ಥೆಗಳು, ದಾನಿಗಳು, ಸಮಾಜಸೇವಕರು ನೆರವಿಗೆ ಧಾವಿಸಿ ಬಂದರು.

‘ಅನ್ನಬ್ರಹ್ಮನ ನಾಡಿನಲ್ಲಿ ಅನ್ನಕ್ಕೆ ಕೊರತೆ ಇಲ್ಲ’ ಎನ್ನುವಷ್ಟರ ಮಟ್ಟಿಗೆ, ಹಸಿದವರಿಗೆ ಆಹಾರ ಪೊಟ್ಟಣಗಳನ್ನು ನಿತ್ಯವು ಎರಡು ಹೊತ್ತು ವಿತರಿಸುವ ಕಾರ್ಯವು ನಡೆಯುತ್ತಿದೆ.

ಇವರೆಲ್ಲರು ಯಾವೊಂದು ಫಲಾಪೇಕ್ಷೆ ಇಲ್ಲದೆ ಮಾಡಿರುವ ಸೇವಾಕಾರ್ಯವು ಪ್ರಶಂಸನೀಯ.

ದೇವರ ಕೃಪೆಗೆ ಒಳಪಟ್ಟಿರುವಂತದ್ದು. ಇವರೆಲ್ಲರ ಸೇವಾಕಾರ್ಯ ಕಂಡಾಗ “ತಾವು ಹಸಿದರು ಪರವಾಗಿಲ್ಲ..! ಬಡವರು ಹಾಗೂ ವಲಸೆ ಕಾರ್ಮಿಕರು ಹಸಿಯಬಾರದು” ಧ್ಯೇಯ ಇವರದಾಗಿದೆ ಎಂದು ಅಂತರಾತ್ಮವು ನುಡಿಯತ್ತದೆ.

ನಿಸ್ವಾರ್ಥತತೆ, ಹೃದಯ ಶ್ರೀಮಂತಿಕೆ, ದಯಾಗುಣವು ನಮ್ಮ ಉಡುಪಿಯ ಅನ್ನದಾತರದು. ಆದರೆ ಇವರ ಸೇವೆಯ ಹಿಂದಿರುವ ಅಹರ್ನಿಶಿ ಪರಿಶ್ರಮವು ಕೆಲವು ವಲಸೆ ಕಾರ್ಮಿಕ ಭೂಪರಿಗೆ ತಿಳಿಯದೆ ಹೋಗಿದೆ.

ಇದೊಂದು ದುರಂತದ ಸಂಗತಿ…!! ಎಂದು ನಿತ್ಯಾನಂದ ಒಳಕಾಡು ಅವರು ಹೇಳಿದ್ದಾರೆ.

“ಉಣ್ಣುವ ಹಕ್ಕು ನಮಗಿದೆ, ಆದರೆ ಬಿಸಾಡುವ ಹಕ್ಕು ನಮಗಿಲ್ಲ..!!” ಎಸೆದ ಅನ್ನದಲ್ಲಿ ನೇಗಿಲಯೋಗಿ ಬೆವರಿಳಿಸಿದ ಶ್ರಮವಿದೆ.

ಹಾಗಾಗಿ ಯಾವತ್ತೂ ಆಹಾರದ ಪೋಲು ಸಲ್ಲದು..! ಉಡುಪಿ ನಗರದ ಅಲ್ಲಲ್ಲಿ ಆಹಾರ ಇರುವ ಆಹಾರದ ಪೊಟ್ಟಣಗಳು ವಲಸೆ ಕಾರ್ಮಿಕರು ಹಾಗೆಯೇ ಎಸೆದಿರುವುದು..! ಅರ್ಧ ತಿಂದುಂಡು ಎಸೆದಿರುವುದು ಕಂಡು ಬಂದಿದೆ.

ಹೀಗೆ ಒಂದು ದಿನ ಅಲ್ಲ..! ಕಳೆದ ಒಂದು ತಿಂಗಳಿಂದ ಕಂಡು ಬರುತ್ತಿದೆ. ಚೆಲ್ಲಾಪಿಲ್ಲಿಯಾಗಿ ಅವುಗಳನ್ನು ನೋಡಿದಾಗ ಅನ್ನದ ಬೆಲೆ ತಿಳಿದವನಿಗೆ ಹೃದಯ ಕಿತ್ತು ಬರುತ್ತಿದೆ.

ವಲಸೆ ಕಾರ್ಮಿಕರೇ ಆ ಅನ್ನದ ಹಿಂದೆ ನಮ್ಮ ಉಡುಪಿಯ ಅನ್ನದಾತ ಬಂಧುಗಳ ಶ್ರಮ ಅಡಗಿದೆ, ಸ್ವಲ್ಪ ತಿಳಿದುಕೊಳ್ಳಿ.

ನಿಮಗೆ ನೀಡಲ್ಪಡುವ ಆಹಾರವು ಪರಿಶುದ್ಧ ಆಹಾರ, ನುರಿತ ಬಾಣಸಿಗರಿಂದ ತಯಾರಿಕೆ ಕಂಡಿರುವುದು. ಅಧಿಕಾರಿ ವರ್ಗಗಳಿಂದ ಆಹಾರದ ಗುಣಮಟ್ಟ ಪರಿಶೀಲನೆಗೆ ಒಳಪಟ್ಟಿರುವುದು.

ನಸುಕಿನ ಜಾವ ನಾಲ್ಕು ಗಂಟೆಗೆ ಬಾಣಸಿಗರು, ಅಡಿಗೆ ತಯಾರಿ ನಡೆಸುತ್ತಾರೆ. ಮಹಿಳೆಯರು, ಕಾರ್ಯಕರ್ತರು ಆಹಾರದ ಪೊಟ್ಟಣ ಕಟ್ಟುತ್ತಾರೆ.

ಅಷ್ಟೇ ಅಲ್ಲ ಸಾಮಾಜಿಕ ಅಂತರ ಕಾಯ್ದುಕೊಂಡು, ಆರೋಗ್ಯ ಸುರಕ್ಷಾ ವಿಧಾನ ಪಾಲನೆ ಮಾಡಿಕೊಂಡು, ನೀವು ಹಸಿದು ಕುಳಿತಿರುವ ಸ್ಥಳಕ್ಕೆ ಬಂದು, ನಿಮ್ಮ ಹಸಿದಿರುವ ಉದರಗಳ ತಣಿಸುತ್ತಿದ್ದಾರೆ.

ಆವಾಗಲೇ ಅವರಿಗೆ ಸಂತೃಪ್ತಿ. ಇವರೆಲ್ಲರು ಊಟ ಮಾಡುವುದು ನಿಮ್ಮೆಲ್ಲರ ಹೊಟ್ಟೆ ತುಂಬಿದ ಬಳಿಕವೇ. ಅದುವರೆಗೆ ಅನ್ನದಾತರು ಹಸಿದ ಹೊಟ್ಟೆಯಲ್ಲಿಯೇ ನಿಮಗಾಗಿ ಶ್ರಮಿಸುತ್ತಿರುತ್ತಾರೆ.

ಅವರು ಊಟ ಮಾಡುವಾಗ ಸಮಯ ಮಧ್ಯಾಹ್ನ 3 ಗಂಟೆ ಕಳೆಯಬಹುದು.

ಉಡುಪಿಯ ಸೇವಾಕರ್ತರು ಮಾಡುವ ಸೇವೆ ಯಾವ ಜಿಲ್ಲೆಯಲ್ಲಿಯೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಾಮಾಣಿಕವಾಗಿ ಕಾಣುತ್ತಿಲ್ಲ ಎಂದು ಹೊರ ಜಿಲ್ಲೆಯ ನಾಗರಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಹಾಗಾಗಿ ವಲಸೆ ಕಾರ್ಮಿಕ ಬಂಧುಗಳೇ.. ದಯವಿಟ್ಟು ಅನ್ನದ ಬೆಲೆ ಅರ್ಥ ಮಾಡಿಕೊಳ್ಳಿ..! ಆಹಾರ ಪೋಲು ಮಾಡಬೇಡಿ..! ಹೊಟ್ಟೆ ತಣಿವಷ್ಟು, ತೇಗುವಷ್ಟು ಸೇವಿಸಿರಿ.

ಆದರೆ ಆಹಾರ ಪೊಟ್ಟಣಗಳನ್ನು ಆಶಾಭಾವನೆಯಿಂದ ಅಧಿಕವಾಗಿ ಪಡೆದು ಎಸೆಯಬೇಡಿ.

ಇದೀಗ ಉಡುಪಿಯ ನಗರದ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಆಹಾರದ ಪೊಟ್ಟಣಗಳ ಕಂಡು, ಅನ್ನಬ್ರಹ್ಮನ ನಾಡಿನ ನಾಗರಿಕರು ಬೇಸರಿಸಿಕೊಂಡಿದ್ದಾರೆ.

ದಯವಿಟ್ಟು ಅರ್ಥಮಾಡಿಕೊಳ್ಳಿ ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಈ ಮೂಲಕ ವಿನಮ್ರವಾಗಿ ವಿನಂತಿಸಿಕೊಂಡಿದ್ದಾರೆ.

ಬರಹ: ಪ್ರಮೋದ್ ಸುವರ್ಣ ಕಟಪಾಡಿ, ಉಡುಪಿ

Advertisement
Click to comment

Leave a Reply

Your email address will not be published. Required fields are marked *

kerala

ಮದ್ವೆಗೆ ಬಲವಂತ ಆರೋಪ-ಠಾಣೆ ಮೆಟ್ಟಿಲೇರಿದ ನೀಲಿ ಕಂಗಳ ಚೆಲುವೆ ಮೊನಾಲಿಸಾ

Published

on

ತಿರುವನಂತಪುರ: 2024ರಲ್ಲಿ ನಡೆದಿದ್ದ ಮಹಾಕುಂಭಮೇಳದಲ್ಲಿ  ರುದ್ರಾಕ್ಷಿ ಮಾರುತ್ತ ತನ್ನ ಸುಂದರ ಕಣ್ಣುಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಹವಾ ಸೃಷ್ಟಿಸಿದ್ದ ಮೊನಾಲಿಸಾ ಬೋಂಸ್ಲೆ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ತನ್ನ ತಂದೆ ತೋರಿಸಿದ ಹುಡುಗನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮೊನಾಲಿಸಾ ತನ್ನ ಗೆಳೆಯನ ಜೊತೆ ಬಂದು ತಂದೆ ವಿಜಯ್ ಸಿಂಗ್ ಭೋಸ್ಲೆ ವಿರುದ್ಧ ದೂರು ನೀಡಿದ್ದಾರೆ. ಯಾವುದೇ ದೈಹಿಕ ಕಿರುಕುಳ ನಡೆದಿಲ್ಲ. ಪ್ರಾಥಮಿಕವಾಗಿ ಬಲವಂತದ ವಿವಾಹ ಪ್ರಸ್ತಾಪವಾಗಿದೆ. ಮೊನಾಲಿಸಾ ತಂದೆ ತನ್ನ ಮೇಲೆ ಒತ್ತಡ ಹೇರುತ್ತಲೇ ಇದ್ದುದರಿಂದ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ನಾವು ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವೈರಲ್ ಆದ ಬಳಿಕ ಮೊನಾಲಿಸಾ ಅವರ ಬದುಕೇ ಬದಲಾಗಿದೆ. ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿದೆ. ಪ್ರಸ್ತುತ ಶೂಟಿಂಗ್ ಗಾಗಿ ತಿರುವನಂತಪುರಕ್ಕೆ ಬಂದಿದ್ದ ಮೊನಾಲಿಸಾ ಇದೀಗ ಗೆಳೆಯನ ಜೊತೆ ಬಮದು ದೂರನ್ನು ನೀಡಿದ್ದಾರೆ.

Continue Reading

bangalore

6 ತಿಂಗಳಿನಿಂದ ಒಂದೇ ಮನೆಗೆ ಸ್ಕೆಚ್, 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಯುವಕ ಅರೆಸ್ಟ್

Published

on

ಬೆಂಗಳೂರು: ಮನೆಯವರು ಅಮೇರಿಕಾದಲ್ಲಿ ಇರುವುದನ್ನು ಖಚಿತಪಡಿಸಿಕೊಂಡ  ಕಳ್ಳನೋರ್ವ ಸುಮಾರು 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಿನಿಮೀಯ ಶೈಲಿಯಲ್ಲಿಕಳ್ಳತನಗೈದ ರಾಜಸ್ಥಾನ ಮೂಲದ ವೇಲಾರಾಮ್ (19) ಬಂಧಿತ ಆರೋಪಿ. ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಕಟ್ ಮಾಡುತ್ತಿದ್ದ ವೇಲಾರಾಮ್ ಪಕ್ಕದ ಮನೆಯಲ್ಲಿ ಯಾರೂ ಇಲ್ಲದನ್ನ ಗಮನಿಸಿದ್ದ. ದಂಪತಿ ಅಮೇರಿಕಾದಲ್ಲಿ ಸೆಟಲ್ ಆಗಿರೋದನ್ನು ಖಚಿತಪಡಿಸಿಕೊಂಡು  ಬರೋಬ್ಬರಿ ಆರು ತಿಂಗಳು ಸ್ಕೆಚ್ ಹಾಕಿ ಒಮ್ಮೆಗೆ 3 ಕೋಟಿ ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಿದ್ದ.

ಲಾಕರ್ ಓಪನ್ ಮಾಡಿ 1.8 ಕೆಜಿಯ ಚಿನ್ನಾಭರಣ, ಡೈಮಂಡ್ ಹಾಗೂ ನಗದು ಎಲ್ಲವನ್ನು ದೋಚಿಕೊಂಡು ಹೋಗಿದ್ದ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕ ಖುಷಿಗೆ ಯಾರಿಗೂ ಹೇಳದೆ ಕೇಳದೆ ನೇರವಾಗಿ ರಾಜಸ್ಥಾನಕ್ಕೆ ಚಿನ್ನಾಭರಣ ಕೊಂಡೊಯ್ದು, ಮನೆಯಲ್ಲಿ ಬಚ್ಚಿಟ್ಟಿದ್ದ.

ಮನೆಯ ಸಿಸಿಟಿವಿಯನ್ನ ಅಮೆರಿಕದಲ್ಲಿದ್ದ ದಂಪತಿ ಮೊಬೈಲ್ ನಲ್ಲಿ ಪರಿಶೀಲಿಸಿದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಸಿಸಿಟಿವಿ ಆಧರಿಸಿ ಆರೋಪಿ ವೇಲಾರಾಮ್‌ ನನ್ನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

Continue Reading

LATEST NEWS

ಸೆಕೆ ತಾಳಲಾರದೆ ತಂಪಾಗಲು ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

Published

on

ಹುಬ್ಬಳ್ಳಿ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಈಜಲು ಹೋಗಿ ನೀರಿನ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ.


ಮೃತಪಟ್ಟ ವಿದ್ಯಾರ್ಥಿಗಳನ್ನು ಸಮರ್ಥ್ ಮತ್ತು ಹರೀಶ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಗೋಪನಕೊಪ್ಪದ ಸರ್ಕಾರಿ ಪದವಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದಿರುವ ಕಾರಣ ಮನೆಯಲ್ಲಿದ್ದರು ಎನ್ನಲಾಗಿದೆ.

ಬೇಸಿಗೆಯ ಸೆಕೆ ತಾಳಲಾರದೆ ತಂಪಾಗಲು ಇಬ್ಬರು ಸ್ನೇಹಿತರು ಮನೆ ಸಮೀಪ ಇರುವ ನಿರ್ಮಾಣ ಹಂತದ RNS ಗಾಲ್ಫ್​​ ಮೈದಾನದಲ್ಲಿರೋ ಹೊಂಡಕ್ಕೆ ಈಜಲು ತೆರಳಿದ್ದರು. ಮಧ್ಯಾಹ್ನ ಮನೆಯಿಂದ ಹೋದವರು, ಸಂಜೆಯಾದರೂ ಮನೆಗೆ ಮರುಳಲಿಲ್ಲ. ಆ ವೇಳೆ ಇಬ್ಬರು ಹೊಂಡದಲ್ಲಿ ಬಿದ್ದಿರೋದನ್ನು ಗಮನಿಸಿದ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಹಾಲ್​​ನಲ್ಲಿ ಬುರ್ಖಾಧಾರಿ ಕಳ್ಳಿಯ ಕರಾಮತ್ತು..! ವಿಚಾರಣೆ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ..!?

ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎನ್ನಲಾಗಿದೆ. ಘಟನನಾ ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆಯಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page