Connect with us

DAKSHINA KANNADA

ಸರಕಾರದಿಂದ ಯಾವುದೇ ಅನುದಾನ ಮೆಸ್ಕಾಂಗೆ ಬರೋದಿಲ್ಲ- ಹರೀಶ್ ಕುಮಾರ್

Published

on

ಮಂಗಳೂರು: ಸರಕಾರದಿಂದ ಯಾವುದೇ ಅನುದಾನ ಮೆಸ್ಕಾಂಗೆ ಸಿಗುವುದಿಲ್ಲ.  ನಮ್ಮದೇ ಮೂಲದಿಂದ ಆದಾಯ ಕ್ರೋಢೀಕರಣ ಮಾಡಬೇಕು. ಮೆಸ್ಕಾಂ ಇಲಾಖೆಯಲ್ಲಿ ನಡೆಯುವ ಸೋರಿಕೆ ನಿಲ್ಲಿಸಬೇಕು. ಏರಿಯಾ ಕಲೆಕ್ಷನ್‌ ಮಾಡಬೇಕು.  ಪಂಚಾಯತ್‌ನಿಂದ ಬರುವ ಹಣದ ಕ್ರೋಢೀಕರಣ ಕೆಲಸ ಮಾಡಬೇಕಾಗಿದೆ ಎಂದು ಮೆಸ್ಕಾಂನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಹರೀಶ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಬೆಸ್ಕಾಂ ಬಿಟ್ಟರೆ ಉಳಿದಂತೆ ಮೆಸ್ಕಾಂ ಕಂಪೆನಿ ಲಾಭದಲ್ಲಿ ಇದೆ. ಹೀಗಿದ್ದರೂ ಮೆಸ್ಕಾಂ ಮೇಲೆ ಹೆಚ್ಚಿನ ಹೊರೆ ಇದ್ದು, ಇಲಾಖೆಯಲ್ಲಿ ಇರುವ ಅನಧಿಕೃತ ಕನೆಕ್ಷನ್‌ ಕಿತ್ತುಹಾಕಲು ಕ್ರಮ ವಹಿಸಬೇಕಾಗಿದೆ.  ಜನರಿಗೆ ಹತ್ತಿರ ಆಗುವ ಕೆಲಸ ಮಾಡಬೇಕಾಗಿದ್ದು, ಸೂಕ್ತ ರೀತಿಯಲ್ಲಿ ವಿದ್ಯುತ್‌ ನಿರ್ವಹಣೆ ಮಾಡಬೇಕಾಗಿದೆ. ಮೆಸ್ಕಾಂನಲ್ಲಿ ಸೋರಿಕೆಯನ್ನು ತಡೆಗಟ್ಟಲು ಕ್ರಮ ವಹಿಸಬೇಕಾಗಿದೆ ಎಂದರು.

ಕರಾವಳಿ ಜಿಲ್ಲೆಯಿಂದ ಪವರ್‌ಮನ್‌ ಕೆಲಸಕ್ಕೆ ಅರ್ಜಿ ಹಾಕುವವರ ಸಂಖ್ಯೆ ಕಡಿಮೆ ಆಗಿದ್ದು, ಇದಕ್ಕೆ ಅದರದ್ದೇ ಆದ ಕಾರಣಗಳಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ  ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ. ಜೊತೆಗೆ ಸರಕಾರಿ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸೇರಿದಂತೆ ಇತರ ನಾಯಕರು ಪಾಲ್ಗೊಂಡಿದ್ದರು.

DAKSHINA KANNADA

ಆಲ್ ನ್ಯೂ ಹ್ಯೂಂಡೈ ವೆನ್ಯೂ ಬೆಳ್ತಂಗಡಿ ಮಾರುಕಟ್ಟೆಗೆ ಬಿಡುಗಡೆ

Published

on

ಬೆಳ್ತಂಗಡಿ: ಅದ್ವೈತ್ ಹುಂಡೈ ಕಂಪೆನಿ ತನ್ನ ವಿಶಿಷ್ಟ ಗುಣಮಟ್ಟ ಮತ್ತು ಸೇವೆಯಿಂದ ವಿಶ್ವಾಸಾರ್ಹ ಗ್ರಾಹಕರನ್ನು ಹೊಂದಿದೆ. ಇದು ಕರ್ನಾಟಕದಾದ್ಯಂತ 23 ಶೋ ರೂಂಗಳು, 37 ಸೇವಾ ಕೇಂದ್ರಗಳು, 4 ಪ್ರಿ-ಒನ್ಡ್ ಕಾರು ಶೋರೂಮ್‌ಗಳ ಬೃಹತ್ ಜಾಲ ಬಲದಿಂದ ದೇಶದ ಅಗ್ರಗಣ್ಯ ಡೀಲರ್ ಆಗಿರುವ ಅದ್ವೈತ್ ಹ್ಯೂಂಡೈ ದಕ್ಷಿಣ ಮಂಗಳೂರಿನ ಬೈಕಂಪಾಡಿ ಕುಂಟಿಕಾನ, ಸುಳ್ಯ, ಬೆಳ್ತಂಗಡಿಯಲ್ಲಿ ಸೇವಾ ಕೇಂದ್ರವನ್ನು ಹೊಂದಿದೆ. ಹುಂಡೈ ವೆನ್ಯೂ ಅನ್ನು ಮೊದಲು 2019 ರಲ್ಲಿ ಬಿಡುಗಡೆ ಮಾಡಲಾಯಿತು.


ಇದೀಗ ನೂತನ ಆಲ್ ನ್ಯೂ ಹ್ಯೂಂಡೈ ವೆನ್ಯೂ ಕಾರು ಬೆಳ್ತಂಗಡಿ ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ಬೆಳ್ತಂಗಡಿಯ ಅದ್ವೈತ್ ಹೂಂಡೈ ಶೋರೂಂನಲ್ಲಿ ನೆರೆವೇರಿತು.
ನೂತನ ಕಾರನ್ನು ರೈಡಿಂಗ್ ಜೋಡಿ ಯೂಟ್ಯೂಬ್ ಚಾನೆಲ್‌ನ ಶ್ಯಾಮ್ ಪ್ರಸಾದ್ ಕಾಮತ್ ಮತ್ತು ಶೈನಿ ಕಾಮತ್ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

2019ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡ ಹ್ಯೂಂಡೈ ವೆನ್ಯೂ ಇದೀಗ 6 ವರ್ಷಗಳ ಬಳಿಕ ಹೊಸ ರೂಪದಲ್ಲಿ 2ನೇ ಪೀಳಿಗೆಯ ಆಲ್ ನ್ಯೂ ವೆನ್ಯೂ ಭಾರತೀಯ ಗ್ರಾಹಕರಿಗೆ ಪರಿಚಯವಾಗಿದ್ದು, ಹೊಸ ತಂತ್ರಜ್ಞಾನ, ಭದ್ರತೆ ಮತ್ತು ಶೈಲಿಯ ಪರಿಪೂರ್ಣ ಮಿಶ್ರಣವಾದ ಹೊಸ ಹ್ಯೂಂಡೈ ವೆನ್ಯೂ ತನ್ನ ವಿನೂತನ ಶೈಲಿ ನಮತ್ತು ಆಧುನಿಕ ತಂತ್ರಜ್ಞಾನದಿಂದ ವಾಹನ ಪ್ರಿಯರ ಗಮನ ಸೆಳೆದಿದೆ.

ಹ್ಯೂಂಡೈಯ ಹೊಸ ತಲೆಮಾರಿನ ವೆನ್ಯೂ ವಾಹನ ಪ್ರಿಯರ ಹೊಸ ಆಕರ್ಷಣೆ ಆಗಿ ಮೂಡಿ ಬಂದಿದೆ. ಬಿಡುಗಡೆ ಸಮಾರಂಭದಲ್ಲಿ ಬೆಳ್ತಂಗಡಿ ಅದ್ವೈತ್ ಹುಂಡೈ ಇದರ ಮಾರಾಟ ವ್ಯವಸ್ಥಾಪಕ ಭರತ್ ಶೆಟ್ಟಿ, ಸೇವಾ ವ್ಯವಸ್ಥಾಪಕ ವಿಷ್ಣು ಕುಮಾರ್, ಬಾಡಿ ಶಾಪ್ ಮ್ಯಾನೇಜರ್ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.

ಇದನ್ನು ಓದಿ: ‘ಆಲ್ ನ್ಯೂ ಹ್ಯೂಂಡೈ ವೆನ್ಯೂ’ ಕಾರು ಮಂಗಳೂರು ಮಾರುಕಟ್ಟೆಗೆ ಬಿಡುಗಡೆ

ಹ್ಯೂಂಡೈ ವೆನ್ಯೂ ಕಾರಿನ ವಿಶಿಷ್ಟ ಗುಣಲಕ್ಷಣಗಳ ಬಗ್ಗೆ ನೋಡೋದಾದ್ರೆ 65 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ವಿಶಿಷ್ಟ ವಿನ್ಯಾಸ, ಕಾರ್ಯಕ್ಷಮತೆಯುಳ್ಳ ಚಾಲಿತ ಚಕ್ರಗಳು, ಬ್ರಾಂಡೆಡ್ ಡ್ಯುಯಲ್-ಟೋನ್ ಲೆದರೆಟ್ ಸೀಟು, 6 ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾಗಳು, ಹೊಸ ಮಾದರಿಯು ಉತ್ತಮ ನಿಲುಗಡೆ ಶಕ್ತಿಯನ್ನು ನೀಡಲು ನಾಲ್ಕು ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇದು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಒಳಗೊಂಡಿದೆ.

 

Continue Reading

DAKSHINA KANNADA

ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪರಿಸರದಲ್ಲಿ ಕಣ್ಮನ ಸೆಳೆದ ಲೋಹದ ಹಕ್ಕಿಗಳು

Published

on

ಮಂಗಳೂರಿನಲ್ಲಿ ಇಂದು ಲೋಹದ ಹಕ್ಕಿಗಳ ಕಲರವ ಕೇಳಿ ಬಂತು. ನಗರ ಹೊರವಲಯದಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪರಿಸರದಲ್ಲಿ ಈ ಮನಮೋಹನ ದೃಶ್ಯಗಳನ್ನು ಕಂಡ ವಿದ್ಯಾರ್ಥಿಗಳು, ಸಾರ್ವಜನಿಕರು ನೂತನ ಆವಿಷ್ಕಾರಗಳಿಗೆ ಮನಸೋತರು.

ಸಹ್ಯಾದ್ರಿ ಕಾಲೇಜ್ ಆಫ್‌ ಇಂಜಿನಿಯರಿಂಗ್‌ ಅಂಡ್ ಮ್ಯಾನೇಜ್‌ಮೆಂಟ್‌ ವತಿಯಿಂದ ರಾಷ್ಟ್ರೀಯ ಮಟ್ಟದ ತಾಂತ್ರಿಕ ಕಾರ್ಯಾಗಾರದ ಅಂತಿಮ ದಿನವಾದ ಶನಿವಾರ ಬೆಳಿಗ್ಗೆ ವಿದ್ಯಾರ್ಥಿಗಳು ತಾವು ನೂತನವಾಗಿ ಆವಿಷ್ಕಾರ ಮಾಡಿದ ಏರೋಪ್ಲೇನ್ ಏರ್ ಶೋ ಪ್ರಸ್ತುತ ಪಡಿಸಿದರು. ಸಹ್ಯಾದ್ರಿ ಸಾಯನ್ಸ್‌ ಟ್ಯಾಲೆಂಟ್‌ ಹಂಟ್ ಪ್ರೊಜೆಕ್ಟ್‌ ಇವಾಲ್ಯೂವೇಶನ್‌, ಸಮಾರೋಪ ಸಮಾರಂಭವೂ ಇಂದು ಕಾಲೇಜಿನಲ್ಲಿ ನಡೆಯಿತು.

ಬೆಂಗಳೂರಿನ ಅಭಯ್‌ ಪವಾರ್‌ ಮತ್ತು ಅವರ ತಂಡ ಆಯೋಜನೆ ಮಾಡಿದ ಏರೋಫಿಲಿಯಾ ಏರ್ ಶೋ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿತ್ತು. ಆಕಾಶದೆತ್ತರದಲ್ಲಿ ಪುಟ್ಟದಾದ ಏರೋಪ್ಲೇನ್‌ಗಳು ಹಾರಾಡುತ್ತಿದ್ದರೆ ಎಲ್ಲರೂ ರೋಮಾಂಚನಕಾರಿಯಾಗಿ ವೀಕ್ಷಿಸುತ್ತಿದ್ದರು.

ಇದನ್ನೂ ಓದಿ: ಮಂಗಳೂರು: ಸಹ್ಯಾದ್ರಿ ಕಾಲೇಜಿನಲ್ಲಿ ನ.6ರಿಂದ 8ರವರೆಗೆ ನಡೆಯಲಿದೆ ‘ಸೀನರ್ಜಿಯಾ 2025’

ಇನ್ನು ಏರ್‌ ಶೋದ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಏರ್‌ ಶೋ ಹಾರಾಟದ ಬಗ್ಗೆ ಅಭಯ್‌ಕುಮಾರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ತಮ್ಮ ವಿನೂತನ ಆವಿಷ್ಕಾರ, ಯೋಜನೆಗಳನ್ನು ಪ್ರಸ್ತುತಪಡಿಸಲು ಇಂತಹ ಏರ್‌ಶೋಗಳು ಹೆಚ್ಚು ಪೂರಕವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

Continue Reading

DAKSHINA KANNADA

ಬಹುಕೋಟಿ ವಂಚನೆ ಪ್ರಕರಣ; ರೋಷನ್ ಸಲ್ಡಾನ ಆಸ್ತಿ ಮುಟ್ಟುಗೋಲು ಹಾಕಿದ ED

Published

on

ಮಂಗಳೂರು: ಉದ್ಯಮಿಗಳಿಗೆ ಸಾಲ ಕೊಡಿಸೋದಾಗಿ ಕೋಟಿ ಕೋಟಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕ ರೋಷನ್ ಸಲ್ಡಾನ 2.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ತಾತ್ಕಾಲಿಕ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಮಂಗಳೂರು ಉಪವಲಯ ಕಚೇರಿ ಅಧಿಕಾರಿಗಳು ರೋಷನ್ ಸಲ್ಡಾನ ಮನೆ ಮತ್ತು ಬ್ಯಾಂಕ್ ಖಾತೆ ಸೇರಿ 2.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತತ್ಕಾಲಿಕ ಮುಟ್ಟುಗೋಲು ಹಾಕಿದ್ದಾರೆ.

ರೋಷನ್ ಸಲ್ಡಾನ ಕೋಟಿಗಟ್ಟಲೆ ಸಾಲ ಕೊಡಿಸುವ ಆಮಿಷವೊಡ್ಡಿ ದೇಶದ ಐಷಾರಾಮಿ ವ್ಯಕ್ತಿಗಳು ಹಾಗೂ ಉದ್ಯಮಿಗಳಿಗೆ 200 ಕೋಟಿ ರೂ.ಗೂ ಅಧಿಕ ಹಣ ವಂಚನೆ ಮಾಡಿದ್ದ. ಈ ಸಂಬಂಧ ರೋಷನ್ ಸಲ್ಡಾನ, ಆತನ ಪತ್ನಿ ಢಫ್ನಿನೀತು ಹಾಗೂ ಇತರರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದರು.

ಇದನ್ನೂ ಓದಿ: ರೋಶನ್‌ ಸಲ್ಡಾನ್ಹಾ 10 ಕೋ.ರೂ. ವಂಚನೆ ಪ್ರಕರಣ ಸಿಐಡಿಗೆ ವರ್ಗಾವಣೆ

ಈ ಹಿಂದೆ ಸುಮಾರು 9.5 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇನ್ನೂ ಆತನ ಐಷಾರಾಮಿ ಬಂಗಲೆಯನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದರು. ನೂರಾರು ಕೋಟಿ ಸಾಲ ಕೊಡಿಸುವುದಾಗಿ ಐದರಿಂದ ಹತ್ತು ಕೋಟಿ ರೂ. ಮುಂಗಡ ಹಣ ಪಡೆದು ರೋಷನ್ ಸಲ್ಡಾನ ಮೋಸ ಮಾಡುತ್ತಿದ್ದ.

ಈ ಸಂಬಂಧ ಇಬ್ಬರು ಉದ್ಯಮಿಗಳು ನೀಡಿದ್ದ ದೂರಿನ ಆಧಾರದಲ್ಲಿ ಕಳೆದ ಜು.17 ರಂದು ರೋಷನ್ ಸಲ್ಡಾನನನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page