ಮುಂಬೈ : ರಿಷಬ್ ಶೆಟ್ಟಿ ( Rishab Shetty ) ನಿರ್ದೇಶನ ಮಾಡಿ ಅಭಿನಯಿಸಿರುವ ‘ಕಾಂತಾರ ಚಾಪ್ಟರ್ 1’ ( Kanthara Chapter 1 ) ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಆದ್ರೆ ಈ ಸಿನೆಮಾ ಚಿತ್ರೀಕರಣ ಆರಂಭಕ್ಕೂ ಮೊದಲೇ ಭಾರಿ ಸದ್ದು ಮಾಡಿದೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದ್ದು ಭಾರೀ ನಿರೀಕ್ಷೆ ಹೊಂದಿದೆ. ವಿಶೇಷ ಅಂದ್ರೆ ಈ ಚಿತ್ರದ ಒಟಿಟಿ ಹಕ್ಕು ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟವಾಗಿದೆ.

2022 ರಲ್ಲಿ ಕನ್ನಡ ಫಿಲ್ಮ ಇಂಡಸ್ಟ್ರೀ ಮಾತ್ರವಲ್ಲದೆ ಇಡೀ ದೇಶದಲ್ಲಿ ‘ಕಾಂತಾರ’ (Kanthara ) ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ದಾಖಲೆಯನ್ನು ಚಿಂದಿ ಉಡಾಯಿಸಿ ‘ಕಾಂತಾರ’ ಯಶಸ್ಸು ಗಳಿಸಿತ್ತು. ಈ ಯಶಸ್ಸಿನ ಬಳಿಕ ಪಾರ್ಟ್ 2 ತೆರೆಗೆ ಬರಲಿದೆ ಅನ್ನೋ ಸುದ್ದಿ ಅಭಿಮಾನಿಗಳು ಹಾಗೂ ಸಿನಿರಂಗದಲ್ಲೂ ಹರಿದಾಡಿತ್ತು. ನಿರೀಕ್ಷೆ ಹುಸಿಯಾಗದಂತೆ ರಿಶಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಪೋಸ್ಟರ್ ಬಿಡುಗಡೆ ಮಾಡಿದ್ದರು. ಕರಾವಳಿಯ ಪೌರಾಣಿಕ ಹಿನ್ನಲೆಯನ್ನು ಇಟ್ಟುಕೊಂಡು ‘ಕಾಂತಾರ ಚಾಪ್ಟರ್ 1’ ತೆರೆಗೆ ಬರಲಿದೆ ಅನ್ನೋದು ಪೋಸ್ಟರ್ ( poster )ನೋಡಿದ ಹಲವು ಫ್ಯಾನ್ಸ್ ಚರ್ಚೆ ಮಾಡಿದ್ದರು. ‘ಕಾಂತಾರ’ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ‘ಕಾಂತಾರ’ ಸಿನೆಮಾದ ಒಟಿಟಿ ಹಕ್ಕನ್ನು ಅಮೇಜಾನ್ ಪ್ರೈಮ್ ಪಡೆದುಕೊಂಡಿತ್ತು. ಇದೀಗ ‘ಕಾಂತಾರ ಚಾಪ್ಟರ್ 1’ ಶೂಟಿಂಗ್ ಆರಂಭಕ್ಕೂ ಮೊದಲೇ ಅಮೇಜಾನ್ ಪ್ರೈಮ್ ಕೋಟ್ಯಾಂತರ ರೂಪಾಯಿಗಳಿಗೆ ಒಟಿಟಿ ಹಕ್ಕು ಪಡೆದುಕೊಂಡಿದೆ.
ಮುಂಬೈಯಲ್ಲಿ ಮಂಗಳವಾರ (ಮಾರ್ಚ್ 19) ನಡೆದ ಅಮೇಜಾನ್ ಪ್ರೈಂನ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಬಹಿರಂಗವಾಗಿದೆ. ಐಷಾರಾಮಿ ಆಸೆಗಳಿಗಿಂತ ದೊಡ್ಡ ವಿಪತ್ತು ಇನ್ನೊಂದಿಲ್ಲ. ಒಬ್ಬ ಕ್ಷುಲ್ಲಕ ರಾಜನಿಂದ ಉಂಟಾಗುವ ಇಂತಹ ವಿಪತ್ತು, ದೇವರು ಆಯ್ಕೆ ಮಾಡಿದ ಬುಡಕಟ್ಟು ನಾಯಕನ ಹೃದಯದಲ್ಲಿ ಕ್ರೋಧವನ್ನು ಪ್ರಚೋದಿಸುತ್ತದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಇಲ್ಲಿ ಪ್ರಸಾರವಾಗಲಿದೆʼʼ ಎಂದು ಪ್ರೈಂ ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ.
‘ಕಾಂತಾರ ಚಾಪ್ಟರ್ 1’ ಸಿನಿಮಾ ತೆರೆಕಂಡು ಒಂದೂವರೆ ತಿಂಗಳ ಬಳಿಕ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪ್ಯಾನ್ ಇಂಡಿಯಾ ಸಿನೆಮಾ ಅಲ್ಲದೇ ಇದ್ರೂ ‘ಕಾಂತಾರʼ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ‘ಕಾಂತಾರ ಚಾಪ್ಟರ್ 1’ ಕನ್ನಡ ಜೊತೆಗೆ ವಿವಿಧ ಭಾಷೆಯಲ್ಲಿ ತೆರೆಗೆ ಬರಲಿದ್ದು, ಅಂದಾಜು 125 ಕೋಟಿ ಬಜೆಟ್‌ನಲ್ಲಿ ಸಿನೆಮಾ ತಯಾರಾಗುತ್ತಿದೆ.
‘ಕಾಂತಾರ ಚಾಪ್ಟರ್ 1’ ರಿಷಬ್ ಶೆಟ್ಟಿ ಹೇಳಿದ್ದೇನು?
ಅಮೇಜಾನ್ ಪ್ರೈಂನ (amazon prime ) ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಂತಹ ಒಂದು ಸಿನೆಮಾ ನೀಡಬೇಕು ಅನ್ನೋದು ನನ್ನ ಕಾಲೇಜು ದಿನಗಳ ಕನಸಾಗಿತ್ತು. ‘ಕಾಂತಾರ’ ಸಿನೆಮಾಗೆ ಜನರು ಅಭೂತಪೂರ್ವ ಬೆಂಬಲ ನೀಡಿದ ಕಾರಣ ಈಗ ‘ಕಾಂತಾರ ಚಾಪ್ಟರ್ 1’ ಮಾಡಲು ಹೊರಟಿದ್ದೇವೆ. ನಮ್ಮ ಊರಿನಲ್ಲಿ ( ಕುಂದಾಪುರ ) ದೊಡ್ಡ ಸೆಟ್ಟ ಹಾಕುತ್ತಿದ್ದು, ಅಲ್ಲಿ ಶೀಘೃ ಚಿತ್ರೀಕರಣ ( shooting ) ಆರಂಭವಾಗಲಿದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ. ‘ಕಾಂತಾರ’ದಲ್ಲಿ ನಟಿ ಸಪ್ತಮಿ ಗೌಡ (Sapthami Gowda ) ನಟಿಸಿದ್ದು ಇದರಲ್ಲೂ ಇರ್ತಾರಾ ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.