Connect with us

kerala

ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; ನಾಲ್ವರು ಸಜೀವ ದಹನ, ಹಲವರಿಗೆ ಗಾಯ

Published

on

ಕೇರಳ : ಸರಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಿನ್ನೆ (ಮೇ.2) ಸಂಜೆ ಕೋಯಿಕ್ಕೋಡ್‌ನಲ್ಲಿ ನಡೆದಿದೆ.

ವೈದ್ಯಕೀಯ ಕಾಲೇಜು ಆಸ್ಪತ್ರೆಯ ನೆಲಮಹಡಿಯ ಎಂಆರ್‌ಐ ವಿಭಾಗದ ಬಳಿ ರಾತ್ರಿ 8 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಯುಪಿಎಸ್‌ ಅಸಮರ್ಪಕ ವ್ಯವಸ್ಥೆಯಿಂದ ಬೆಂಕಿ ಕಾಣಿಸಿಕೊಂಡಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಕಿಯಿಂದ ದಟ್ಟವಾದ ಹೊಗೆ ವಾರ್ಡ್‌ನಾದ್ಯಂತ ಹರಡಿದ್ದು, ಇದರಿಂದ ಹಲವು ವ್ಯಕ್ತಿಗಳು ಉಸಿರಾಟದ ತೊಂದರೆಯನ್ನು ಅನುಭವಿಸಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ವೆಲ್ಲಿಮಡುಕ್ಕುನ್ನು ಮತ್ತು ಬೀಚ್‌ ನಿಲ್ದಾಣಗಳ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವೆಗಳ ಸಿಬ್ಬಂದಿ, ಪೊಲೀಸ್‌ ಅಧಿಕಾರಿಗಳು ಮತ್ತು ಸ್ವಯಂ ಸೇವಕರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

kerala

ಕಾಸರಗೋಡು : ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿ ಆತ್ಮಹತ್ಯೆಗೆ ಶರಣಾದ ಯುವಕ

Published

on

ಕಾಸರಗೋಡು : ಚಿತ್ತಾರಿಕ್ಕಲ್ ನ ಕಂಬಳ್ಳೂರಿನಲ್ಲಿ ಫ್ಯಾನ್ಸಿ ಅಂಗಡಿ ನಡೆಸುತ್ತಿರುವ ಸಿಂಧು ಮೋಲ್ (34) ಎಂಬ ಯುವತಿ ಮೇಲೆ ಕಂಬಳ್ಳೂರು ಮೂಲದ ರತೀಶ್ ಎಂಬಾತ ಆಸಿಡ್ ದಾಳಿ ನಡೆಸಿದ್ದು, ಬಳಿಕ ತಾನೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಯುವತಿ ಮೇಲೆ ದುಷ್ಕರ್ಮಿ ಆಸಿಡ್ ದಾಳಿ ನಡೆಸಿದ್ದರಿಂದ ಆಕೆಯ ಮುಖ, ಕಣ್ಣು, ಕುತ್ತಿಗೆ ಮತ್ತು ತೊಡೆಯ ಮೇಲೆ ತೀವ್ರ ಆಸಿಡ್ ಸುಟ್ಟ ಗಾಯಗಳಾಗಿವೆ. ಸಿಂಧು ಮೋಲ್ ಪ್ರಸ್ತುತ ಪರಿಯಾರಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರತೀಶ್ ಹತ್ತಿರದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಿಂಧು ತನ್ನ ಫ್ಯಾನ್ಸಿ ಅಂಗಡಿಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಸಂತ್ರಸ್ತೆಯ ಕುಟುಂಬವು ರತೀಶ್ ಸಿಂಧು ಅವರನ್ನು ಹಿಂಬಾಲಿಸುತ್ತಿದ್ದನೆಂದು ಮತ್ತು ಈ ಹಿಂದೆ ಆಸಿಡ್ ದಾಳಿಯ ಬೆದರಿಕೆ ಹಾಕಿದ್ದನೆಂದು ಬಹಿರಂಗಪಡಿಸಿದೆ. ಆಕೆ ಇತ್ತೀಚೆಗೆ ದೂರು ಕೂಡ ದಾಖಲಿಸಿದ್ದಳು ಎನ್ನಲಾಗಿದೆ.

ಇದನ್ನೂ ಓದಿ : ಆತ್ಮಹ*ತ್ಯಾ ದಾಳಿಗೆ ಸಂಬಂಧಿಸಿ ವೈರಲ್ ಆಗುತ್ತಿರುವ ಸುದ್ಧಿಗಳು ಸುಳ್ಳು : ಭಾರತೀಯ ಸೇನೆ ಸ್ಪಷ್ಟನೆ

ರತೀಶ್ ಮತ್ತು ಸಿಂಧು ನೆರೆಹೊರೆಯವರಾಗಿದ್ದು ಆಪ್ತ ಸ್ನೇಹಿತರಾಗಿದ್ದರು ಎಂದು ಹೇಳಲಾಗಿದೆ. ಯಾವುದೋ ಕಾರಣಕ್ಕೆ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಪೊಲೀಸ್ ವರದಿಗಳು ಹೇಳಿವೆ. ನಂತರ ಆತ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಇದರಿಂದಾಗಿ ಆಕೆ ಚಿತ್ತಾರಿಕ್ಕಲ್ ಪೊಲೀಸರಿಗೆ ದೂರು ನೀಡಿದ್ದಾಳೆ. ರತೀಶ್ ಬೋರ್‌ವೆಲ್ ನಿರ್ಮಾಣ ಕಂಪನಿಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

Continue Reading

kerala

ಮೊದಲ ಬಾರಿ ಶಬರಿಮಲೆಗೆ ರಾಷ್ಟ್ರಪತಿ ಭೇಟಿ; ದ್ರೌಪದಿ ಮುರ್ಮುರಿಂದ ಇತಿಹಾಸ ನಿರ್ಮಾಣ

Published

on

ಕೇರಳ : ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಇದೇ ತಿಂಗಳ 19ರಂದು ಭೇಟಿ ನೀಡಲಿದ್ದಾರೆ. ಈ ಮೂಲಕ ‘ಶಬರಿಮಲೆಗೆ ಭೇಟಿ ನೀಡುತ್ತಿರುವ ಮೊದಲ ಭಾರತೀಯ ರಾಷ್ಟ್ರಪತಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ರಾಷ್ಟ್ರಪತಿ ಭೇಟಿಗೆ ಈಗಾಗಲೇ ಭದ್ರತೆ ಮತ್ತು ವಿಧ್ಯುಕ್ತ ಸಿದ್ಧತೆಗಳು ನಡೆಯುತ್ತಿದ್ದು, ಅಂದು ಸಾರ್ವಜನಿಕ ದರ್ಶನವನ್ನು ನಿರ್ಬಂಧಿಸಲಾಗಿದೆ.

“ರಾಷ್ಟ್ರಪತಿಯೊಬ್ಬರು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ನಿರ್ಧರಿಸಿದ್ದು ಇದೇ ಮೊದಲು. ಅವರು ಬೆಟ್ಟದ ಮೇಲೆ ಪಾದಯಾತ್ರೆ ಮಾಡಬೇಕೆ ಅಥವಾ ಕರೆದೊಯ್ಯಬೇಕೆ ಎಂಬುದನ್ನು ಎಸ್‌ಪಿಜಿ ನಿರ್ಧರಿಸುತ್ತದೆ. ನಾವು ಅವರ ನಿರ್ದೇಶನವನ್ನು ಪಾಲಿಸುತ್ತೇವೆ” ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಹೇಳಿದ್ದಾರೆ.

ಈಗಾಗಲೇ ದ್ರೌಪದಿ ಮುರ್ಮುರಿಗೆ 66 ವರ್ಷ ಮೇಲ್ಪಟ್ಟಿದ್ದು, ಇದೀಗ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.  ದ್ರೌಪದಿ ಮುರ್ಮು ಅವರು ಮೇ 18 ರಂದು ಪಾಲಾದ ಸೇಂಟ್ ಥಾಮಸ್ ಕಾಲೇಜಿನ ಜಯಂತಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮೇ 19 ರಂದು ಪಂಪಾಗೆ ಪ್ರಯಾಣ ಬೆಳೆಸಲಿದ್ದಾರೆ. ಈ ವೇಳೆ ಮೇ.18 ರಂದು ಕುದೇವಾಲಯದ ಬಳಿಯಿರುವ ನೀಲಕ್ಕಲ್ ಹೆಲಿಪ್ಯಾಡ್‌ಗೆ ಪ್ರಯಾಣಿಸಿ ಪಂಪಾ ಬೇಸ್ ಕ್ಯಾಂಪ್‌ಗೆ ತೆರಳಿದ್ದಾರೆ. ಬಳಿಕ 4.25 ಕಿಮೀ ಎತ್ತರದ ಹಾದಿಯಲ್ಲಿ ಬರಿಗಾಲಲ್ಲಿ ಕಾನನದ ನಡುವೆ ನಡೆಯಲಿದ್ದಾರೆ.

ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ಭದ್ರತೆಯಲ್ಲಿ ರಾಷ್ಟ್ರಪತಿ ಈ ಯಾತ್ರೆ ಕೈಗೊಳ್ಳಲಿದ್ದಾರೆ. ಇನ್ನು ಪ್ರವಾಸ ಸಂದರ್ಭದಲ್ಲಿ ಮುರ್ಮು ಕೊಟ್ಟಾಯಂ ಮತ್ತು ಕುಮಾರಕೋಮ್ನಲ್ಲಿ ಉಳಿದುಕೊಳ್ಳುವ ನಿರೀಕ್ಷೆಯಿದೆ. ಈ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿಗೆ ರಾಷ್ಟ್ರಪತಿ ಭವನದಿಂದ ಅಧಿಸೂಚನೆ ನೀಡಿದ್ದು ಮಾತ್ರವಲ್ಲದೆ, ದ್ರೌಪದಿ ಮುರ್ಮುರವರ ಭದ್ರತೆ ಮತ್ತು ವಸತಿಗಾಗಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡುವಂತೆ ಕೇರಳ ಸರ್ಕಾರಕ್ಕೆ ಆದೇಶಿಸಲಾಗಿದೆ.

Continue Reading

kerala

ಕಾಸರಗೋಡು : ಆಕಸ್ಮಿಕವಾಗಿ ಕತ್ತಿ ಮೇಲೆ ಬಿದ್ದು ಬಾಲಕ ಸಾವು

Published

on

ಕಾಸರಗೋಡು : ಆಕಸ್ಮಿಕವಾಗಿ ಕತ್ತಿ ಮೇಲೆ ಬಿದ್ದು ಎಂಟು ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಾಸರಗೋಡು ಜಿಲ್ಲೆಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಡಿಯಲ್ಲಿ ನಿನ್ನೆ (ಏ.30) ಸಂಜೆ ನಡೆದಿದೆ.

ಹುಸೈನ್ ಶಹಬಾಝ್ ಮೃತ ಬಾಲಕ ಎಂದು ಗುರುತಿಸಲಾಗಿದೆ. ತಾಯಿ ಹಲಸಿನ ಹಣ್ಣು ತುಂಡರಿಸುತ್ತಿದ್ದಾಗ ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಕತ್ತಿಯ ಮೇಲೆ ಬಿದ್ದ ಪರಿಣಾಮದಿಂದಾಗಿ ಈ ದುರ್ಘಟನೆ ಸಂಭವಿಸಿದೆ.

ತಕ್ಷಣವೇ ಗಂಭೀರ ಗಾಯಗೊಂಡ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದಯ್ಯಲಾಗಿತ್ತು. ಆದರೆ, ಸುರಾದೃಷ್ಟವಶಾತ್ ಬಾಲಕನನ್ನು ಉಳಿಸಲಾಗಲಿಲ್ಲ. ಎದೆಗೆ ಉಂಟಾದ ಬಲವಾದ ಗಾಯ ಸಾವಿಗೆ ಕಾರಣ ಎನ್ನಲಾಗಿದೆ.

ಹಲಗೆಯಲ್ಲಿ‌ ಅಳವಡಿಸಿದ್ದ ಕತ್ತಿ( ಮಣೆಕತ್ತಿ) ಯಿಂದ ಹಲಸಿನ ಹಣ್ಣು ತುಂಡರಿಸುತ್ತಿದ್ದ ಸಂದರ್ಭದಲ್ಲಿ ಅಂಗಳದಲ್ಲಿ ಅಡವಾಡುತ್ತಿದ್ದ ಅವಳಿ ಮಕ್ಕಳಲ್ಲಿ ಒಬ್ಬನಾಗಿದ್ದ ಹುಸೈನ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ. ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page