Connect with us

LATEST NEWS

ಬಳ್ಳಾರಿಯಲ್ಲಿ ಭೀಕರ ಸಿಲಿಂಡರ್ ಸ್ಫೋಟ: ಮನೆಯೇ ಸರ್ವನಾಶ!

Published

on

ಬಳ್ಳಾರಿ: ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣವಾಗಿ ನೆಲಸಮವಾಗಿರುವ ಘಟನೆ ಇಂದು(ಮಾ.02) ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾಳೂರು ಗ್ರಾಮದಲ್ಲಿ ನಡೆದಿದೆ.


ಸಂಡೂರು ತಾಲೂಕಿನ ತಾಳೂರು ಗ್ರಾಮದ ಸುಬಾನಿ ಸಾಬ್ ಎಂಬುವವರ ಮನೆಯಲ್ಲಿ ಹೊಸದಾಗಿ ತಂದಿದ್ದ ಗ್ಯಾಸ್ ಸಿಲಿಂಡರ್ ಅನ್ನು ಅಡುಗೆಗೆ ಜೋಡಿಸುವ ಸಂದರ್ಭದಲ್ಲಿ ಅನಿಲ ಸೋರಿಕೆಯಾಗಿ ಈ ಭೀಕರ ಸ್ಫೋಟ ಸಂಭವಿಸಿದೆ. ಗ್ಯಾಸ್ ಲೀಕ್​ ಆಗುತ್ತಿದ್ದಂತೆ ಮನೆಯಲ್ಲಿದ್ದ ಕುಟುಂಬಸ್ಥರು ಎಚ್ಚೆತ್ತು ಹೊರಬಂದ ಕಾರಣ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣವಾಗಿ ಛಿದ್ರಗೊಂಡಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲವೂ ನಾಶವಾಗಿವೆ. ಸ್ಫೋಟದ ರಭಸಕ್ಕೆ ಪಕ್ಕದ ಮನೆಯ ಗೋಡೆಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬೆಂಗಳೂರು ವಿಲ್ಲಾ ಗ್ಯಾಂಗ್ ರೇಪ್ ಕೇಸ್: ರಾಜಕಾರಣಿ ಪುತ್ರ ಸೇರಿ ಐವರು ಕಿರಾತಕರು ಅರೆಸ್ಟ್!

ಮನೆ ಮಾಲೀಕ ಸುಬಾನಿ ಸಾಬ್ ಸೇರಿದಂತೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ತೋರಣಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

LATEST NEWS

ಮದುವೆ ಹಾಲ್​​ನಲ್ಲಿ ಬುರ್ಖಾಧಾರಿ ಕಳ್ಳಿಯ ಕರಾಮತ್ತು..! ವಿಚಾರಣೆ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ..!?

Published

on

ಶಿವಮೊಗ್ಗ: ಮದುವೆ ಸಮಾರಂಭಗಳಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.


ಬುರ್ಖಾ ಧರಿಸಿ, ವ್ಯಾನಿಟಿ ಬ್ಯಾಗ್ ಹಿಡಿದು ಗಪ್‌ಚುಪ್ ಆಗಿ ಚಿನ್ನಾಭರಣ ಎಗರಿಸುತ್ತಿದ್ದ ರುಕ್ಸಾರ್ ಫಿರ್ದೋಸ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಪ್ರಸಿದ್ಧ ‘ಶಾದಿ ಮಹಲ್’ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಕಳ್ಳತನ ವರದಿಯಾಗುತ್ತಿದ್ದು, ಮದುವೆಗೆ ಬಂದವರು ತಮ್ಮ ಆಭರಣಗಳನ್ನು ಬ್ಯಾಗ್‌ನಲ್ಲಿ ಇಡುವುದನ್ನೇ ಸಂಚು ಹೂಡಿ ಕಾಯುತ್ತಿದ್ದ ಈ ಮಹಿಳೆ, ಕ್ಷಣಾರ್ಧದಲ್ಲಿ ಅವುಗಳನ್ನು ಎಗರಿಸಿ ಪರಾರಿಯಾಗುತ್ತಿದ್ದಳು.

ಕಳೆದ ಒಂದು ತಿಂಗಳ ಹಿಂದೆ ನಡೆದ ಮದುವೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಹಗಲಿರುಳು ಪರಿಶೀಲಿಸಿದಾಗ, ಆಕೆಯ ಕೈಯಲ್ಲಿದ್ದ ವಿಶಿಷ್ಟವಾದ ವ್ಯಾನಿಟಿ ಬ್ಯಾಗ್ ಕಳ್ಳಿಯನ್ನು ಪತ್ತೆಹಚ್ಚಲು ಪ್ರಮುಖ ಸುಳಿವು ನೀಡಿತು.

ಇದನ್ನೂ ಓದಿ: ಗ್ಯಾಸ್ ಟ್ರಬಲ್: ಚನ್ನಪಟ್ಟಣದ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಕಳವು!

ಇನ್ನು ಬಂಧಿತವಾಗಿರುವ ಕಳ್ಳಿ ರುಕ್ಸಾರ್ 18 ಲಕ್ಷ ರೂ ಮೌಲ್ಯದ ಒಟ್ಟು 120 ಗ್ರಾಂ ಚಿನ್ನಾಭರಣ ಕದ್ದಿದ್ದಾಳೆ. ಈಕೆಯ ಬಂಧನದಿಂದ 4 ಪ್ರಮುಖ ಕಳ್ಳತನ ಪ್ರಕರಣ ಪತ್ತೆಯಾಗಿವೆ. ವಿಚಾರಣೆ ವೇಳೆ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ.

ಈ ಹಿಂದೆ ಕೆಲವು ಮದುವೆ ಮನೆಗಳಲ್ಲಿ ಕಳ್ಳತನ ಮಾಡುವಾಗ ಈಕೆ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದಳು. ಆದರೆ, ಮಹಿಳೆಯೆಂದು ಅನುಕಂಪ ತೋರಿಸಿದ ಜನರು ವಾರ್ನಿಂಗ್ ಮಾಡಿ ಬಿಟ್ಟು ಕಳಿಸಿದ್ದರು. ಇದನ್ನೇ ಲಾಭವನ್ನಾಗಿ ಮಾಡಿಕೊಂಡ ಈ ಕಿಲಾಡಿ ಕಳ್ಳಿ, ತನ್ನ ಕಳ್ಳತನದ ಕಾಯಕವನ್ನು ಮುಂದುವರಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಳು.

Continue Reading

DAKSHINA KANNADA

ರಾಜ್ಯದಲ್ಲಿ ಎಲ್ ಪಿಜಿ ಪೂರೈಕೆಯಲ್ಲಿ ವ್ಯತ್ಯಯ; ಕುಕ್ಕೆ ಕ್ಷೇತ್ರಕ್ಕೂ ತಟ್ಟಿದ ಬಿಸಿ.. ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ

Published

on

ಸುಬ್ರಹ್ಮಣ್ಯ: ಇರಾನ್-ಇಸ್ರೇಲ್ ಸಂಘರ್ಷದ ಕಾರಣದಿಂದಾಗಿ ರಾಜ್ಯದಲ್ಲಿ ಎಲ್‌ಪಿಜಿ (LPG) ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಇದೀಗ ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೂ ಇದರ ಬಿಸಿ ತಟ್ಟಿದೆ.


ಸುಬ್ರಹ್ಮಣ್ಯ ದೇಗುಲದಲ್ಲಿ ಪ್ರತಿದಿನ ಬೆಳಿಗ್ಗೆ ವಿವಿಧ ಬಗೆಯ ಉಪಹಾರ ನೀಡಲಾಗುತ್ತಿತ್ತು. ಇದೀಗ ಗ್ಯಾಸ್ ಪೊರೈಕೆ ವ್ಯತ್ಯಯದಿಂದ ಇಂದಿನಿಂದ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಬೇಯಿಸುವ ತಿನಿಸು ಬದಲಾಗಿ ಅವಲಕ್ಕಿ, ಮೊಸರು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಗ್ಯಾಸ್ ಪೊರೈಕೆ ಸಂಸ್ಥೆಯವರಿಗೆ ದಿನಕ್ಕೆ 20 ಸಿಲಿಂಡರ್ ಗ್ಯಾಸ್ ಪೊರೈಕೆ ಮಾಡಲು ದೇವಸ್ಥಾನದ ವತಿಯಿಂದ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್-ಇಸ್ರೇಲ್ ಸಂಘರ್ಷ: ಮಾ.12ರಂದು ಮಂಗಳೂರು- ಮಧ್ಯ ಪ್ರಾಚ್ಯ ಮಾರ್ಗದ 14 ವಿಮಾನಗಳು ರದ್ದು

ಇದರ ನಡುವೆ ಪೊರೈಕೆ ಆಗದೇ ಇದ್ದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಯಲ್ಲೂ ಕೆಲ ಬದಲಾವಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಬದಲಾವಣೆ ಮಾಡುವುದಿದ್ದಲ್ಲಿ ಈ ಬಗ್ಗೆ ದೇವಸ್ಥಾನದ ವತಿಯಿಂದ ಅಧಿಕೃತ ಮಾಹಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

Continue Reading

LATEST NEWS

ಗ್ಯಾಸ್ ಟ್ರಬಲ್: ಚನ್ನಪಟ್ಟಣದ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಕಳವು!

Published

on

ರಾಮನಗರ: ಒಂದೆಡೆ ಇಸ್ರೇಲ್-ಇರಾನ್ ಯುದ್ಧದ ಭೀತಿಯಿಂದ ಗ್ಯಾಸ್ ಸಿಲಿಂಡರ್ ಅಭಾವ ತಲೆದೂರಿದ್ದರೆ, ಮತ್ತೊಂದೆಡೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರ ಹಾವಳಿ ಮಿತಿಮೀರಿದೆ. ಅಡುಗೆ ಅನಿಲ ಸಿಲಿಂಡರ್ ಕಳ್ಳತನವಾಗಿರುವ ಪ್ರಕರಣ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.


ಚನ್ನಪಟ್ಟಣದ ಕನಕನಗರದ ಕೃಷ್ಣಪ್ಪ ಎಂಬುವವರ ಮನೆಯಲ್ಲಿ ಸಿಲಿಂಡರ್ ಕಳ್ಳತನ ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದ ಕಳ್ಳ ಕಂಪೌಂಡ್‌ ಒಳಗೆ ಇದ್ದಂತಹ ಸಿಲಿಂಡರ್‌ ಕದ್ದು ಪರಾರಿಯಾಗಿದ್ದಾನೆ. ಫುಲ್‌ ಗ್ಯಾಸ್‌ ಇದ್ದ ಸಿಲಿಂಡರ್‌ನನ್ನು ಕಳ್ಳ ಹೊತ್ತೊಯ್ದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಡಕೆ ತೋಟಕ್ಕೆ ಬೆಂಕಿ; ಲಕ್ಷಾಂತರ ರೂಪಾಯಿ ಹಾನಿ

ಮೊದಲೇ ಸಿಲಿಂಡ್‌ ಪೂರೈಕೆ ವ್ಯತ್ಯಯದಿಂದ ಆತಂಕಗೊಂಡಿದ್ದ ನಿವಾಸಿಗಳಿಗೆ ಸಿಲಿಂಡರ್‌ ಕಳ್ಳರ ಕಾಟ ಹೊಸ ತಲೆನೋವಾಗಿದೆ ಎನ್ನಲಾಗಿದೆ. ಈ ಕುರಿತು ಚನ್ನಪಟ್ಟಣ ಟೌನ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page