Connect with us

LATEST NEWS

ಸೆಪ್ಟೆಂಬರ್ 2ನೇ ವಾರದಲ್ಲಿ ಆಫ್‌ಲೈನ್ ತರಗತಿ ಶುರುಮಾಡಲು ಮಣಿಪಾಲ‌ ವಿಶ್ವವಿದ್ಯಾಲಯ ನಿರ್ಧಾರ

Published

on

ಉಡುಪಿ :  ಸೆಪ್ಟೆಂಬರ್ ಎರಡನೇ ವಾರದಿಂದ ಆಫ್‌ಲೈನ್ ತರಗತಿ ಶುರುಮಾಡಲು ಮಣಿಪಾಲ‌ ವಿಶ್ವವಿದ್ಯಾಲಯ ಮಹತ್ವದ ‌ನಿರ್ಧಾರ ತೆಗೆದುಕೊಂಡಿದೆ.


ವಿದೇಶದಿಂದ ಬರಲಾಗದ ವಿದ್ಯಾರ್ಥಿಗಳಿಗೆ ಆಫ್ ಲೈನ್ ನಲ್ಲಿ ತರಗತಿ ‌ನಡೆಯಲಿದೆ. ಇನ್ನುಳಿದ ವಿದ್ಯಾರ್ಥಿಗಳಿಗೆ ಆಫ್ ಲೈನ್ ತರಗತಿ ಸೆಪ್ಟೆಂಬರ್ ಎರಡನೇ ವಾರದಲ್ಲಿ ಶುರುವಾಗಲಿದೆ.

ಈಗಾಗಲೇ ಕೋವಿಡ್ ಆತಂಕದಿಂದ ಹೊರಬಂದಿರುವ ಮಣಿಪಾಲ‌ ವಿಶ್ವವಿದ್ಯಾಲಯ ಇದೀಗ ಕೋವಿಡ್ ನಿಯಮದಡಿ ತರಗತಿ ಆರಂಭಿಸುತ್ತಿದೆ.‌

ಕೇರಳ ಮಹಾರಾಷ್ಟ್ರ ಸೇರಿದಂತೆ ಎಲ್ಲಾ ರಾಜ್ಯ ಹಾಗೂ ಅಂತರಾಜ್ಯ ವಿದ್ಯಾರ್ಥಿಗಳಿಗೆ 72 ಗಂಟೆಗಳ ಆರ್ ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ನೊಂದಿಗೆ ಕಾಲೇಜಿಗೆ ಆಗಮಿಸಬೇಕು. ವ್ಯಾಕ್ಸಿನ್ ಪಡೆಯದಿದ್ದಲ್ಲಿ ಕಾಲೇಜಿನಲ್ಲಿ ವ್ಯಾಕ್ಸಿನ್ ಪಡೆಯಬೇಕು.

ಒಂದು ವಾರ ಕ್ವಾರಂಟೈನ್ ಆದ ಬಳಿಕವೇ ತರಗತಿಗೆ ಎಂಟ್ರಿ. ಈ‌ ಕಡ್ಡಾಯ ನಿಯಮ ಜಾರಿ ಮಾಡಿದೆ ಎಂದು ಮಣಿಪಾಲ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ನಾರಾಯಣ ಸಭಾಹಿತ್ ಮಾಹಿತಿ ನೀಡಿದ್ದಾರೆ.‌

ಇನ್ನು ಸುಮಾರು 50ರಾಷ್ಟ್ರಗಳ 20ಸಾವಿರ ವಿದ್ಯಾರ್ಥಿಗಳಿರುವ ಮಣಿಪಾಲ‌‌ ವಿಶ್ವವಿದ್ಯಾಲಯದಲ್ಲಿ ಕೋವಿಡ್ ಎರಡನೆ‌ ಅಲೆ ಆರಂಭ ಅಂದ್ರೆ ಫೆಬ್ರವರಿ‌ ಮಾರ್ಚ್ ತಿಂಗಳಲ್ಲಿ ಸಾವಿರಕ್ಕೂ ಅಧಿಕ ಪ್ರಕರಣ ಬೆಳಕಿಗೆ ಬಂದಿತ್ತು. ಇದು ಎರಡನೇ ಅಲೆ ಆತಂಕ ಅಂತಲೂ‌ ಹೇಳಲಾಗಿತ್ತು.‌ ಎಂಐಟಿ ಕ್ಯಾಂಪಸ್ ನಲ್ಲಿ ಕಂಡುಬಂದಿರುವ ಪ್ರಕರಣ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಕರಣವಾಗಿತ್ತು.

ಆ ಬಳಿಕ ಎಂಐಟಿ ‌ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ‌ಕೋವಿಡ್ ಟೆಸ್ಟ್ ಮಾಡಿಸಿ ಕ್ವಾರಂಟೈನ್ ಮಾಡಲಾಗಿತ್ತು ಅಷ್ಟೇ ಅಲ್ಲದೆ ಕ್ಯಾಂಪಸ್ ಹಾಗೂ 23ಹಾಸ್ಟೆಲ್ ಗಳನ್ನ ಕಂಟೈನ್ ಮೆಂಟ್ ಝೋನ್ ಅಡಿಯಲ್ಲಿ‌ ಸೀಲ್ ಡೌನ್ ಮಾಡಲಾಗಿತ್ತು ಈ ಮೂಲಕ ಎರಡನೇ ವಾರದಲ್ಲಿ ಸಾವಿರಕ್ಕೂ ಅಧಿಕ ಪ್ರಕರಣ ಝೀರೋ ತಲುಪಿತ್ತು.

ಇದೀಗ ಐದು ತಿಂಗಳ ಬಳಿಕ ಮತ್ತೆ ತರಗತಿಗಳು ಶುರುವಾಗುತ್ತಿವೆ.
ಪ್ರಮುಖವಾಗಿ ಖಾಸಗಿ ವಲಯದ ವಿಶ್ವವಿದ್ಯಾಲಯಗಳಲ್ಲಿ, ಎರಡನೇ ರಾಂಕ್ ಪಡೆದಿರುವ ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಕೋವಿಡ್ ಗೆ ತುತ್ತಾಗಿ ಆಘಾತ ಅನುಭವಿಸಿರುವ ವಿದ್ಯಾರ್ಥಿಗಳ, ಶಿಕ್ಷಣದ ಜವಾಬ್ದಾರಿ ಹೊತ್ತಿದೆ. ಮಾಹೆ ವಿವಿಯ ಈ ನಡೆ ದೇಶಕ್ಕೆ ಮಾದರಿ ಎನಿಸಿದೆ.
ಹೌದು, ಪ್ರಪಂಚದ 50ಕ್ಕೂ ಅಧಿಕ ರಾಷ್ಟ್ರಗಳ ವಿದ್ಯಾರ್ಥಿಗಳು ಕಲಿಯುತ್ತಿರುವ ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ಕೋವಿಡ್ ವಿರುದ್ಧದ ಸಮರದಲ್ಲಿ ಕೈಜೋಡಿಸಿದೆ. ಜಿಲ್ಲೆಯಲ್ಲಿ ಕೋವಿಡ್ ಮಿತಿಮೀರಿದಾಗ, ತನ್ನ ಸ್ವಾಮ್ಯದ ಒಂದು ಸಂಪೂರ್ಣ ಆಸ್ಪತ್ರೆಯನ್ನು ಉಚಿತ ಚಿಕಿತ್ಸೆಗಾಗಿ ಬಿಟ್ಟುಕೊಟ್ಟು, ಮಾದರಿಯಾಗಿದ್ದ ಮಣಿಪಾಲ ಸಂಸ್ಥೆಯವರು ಈಗ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.

ಖಾಸಗಿ ವಲಯದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮಾಹೆ ವಿಶ್ವವಿದ್ಯಾಲಯಕ್ಕೆ ಎರಡನೇ ರ್ಯಾಂಕ್ ಇದೆ. ಸಹಜವಾಗಿಯೇ ಈ ವಿಶ್ವವಿದ್ಯಾಲಯದ ಕಲಿಕೆಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ದುಬಾರಿ ಶಿಕ್ಷಣ ವ್ಯವಸ್ಥೆಯಲ್ಲಿ, ಒಂದಿಷ್ಟು ಸುಧಾರಣೆ ಮಾಡಲು ಮುಂದಾಗಿರುವ ಮಾಹೆ ಯು, ಕೋವಿಡ್ ಸಂಕಷ್ಟದಲ್ಲಿ ತನ್ನ ವಿದ್ಯಾರ್ಥಿಗಳ ನೆರವಿಗೆ ಮುಂದಾಗಿದೆ.

ಕೊರೋನಾಗೆ ತುತ್ತಾಗಿ ಅನೇಕ ಸಾವು ನೋವು ಸಂಭವಿಸಿದೆ. ತಮ್ಮ ವಿವಿಯಲ್ಲಿ ಕರೆಯುತ್ತಿರುವ ವಿದ್ಯಾರ್ಥಿಗಳ ಪೋಷಕರು ಕರೋನಾ ದಿಂದ ಮೃತರಾಗಿದ್ದಾರೆ, ಅಂತಹಾ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವುದಾಗಿ ಮಾಹೆಯ ಸಹಕುಲಾಧಿಪತಿ ಎಚ್ ಎಸ್ ಬಲ್ಲಾಳ್ ಘೋಷಿಸಿದ್ದಾರೆ.

ಇನ್ನು ಈ ನೆರವಿಗೆ ಮಣಿಪಾಲ, ಮಂಗಳೂರು, ಬೆಂಗಳೂರು ಮತ್ತು ಜಮ್ಶೆಡ್ಪುರ ದ ವಿದ್ಯಾರ್ಥಿಗಳನ್ನು ಪರಿಗಣಿಸಲಾಗುತ್ತಿದೆ. ಸುಮಾರು 40 ಮಂದಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಇದರಿಂದ ಅನುಕೂಲವಾಗಲಿದೆ.

ಮಾಹೆ ವಿಶ್ವವಿದ್ಯಾಲಯದ ಈ ನಡೆ, ಖಾಸಗಿ ಶೈಕ್ಷಣಿಕ ವಲಯಕ್ಕೆ ಮಾದರಿ ಎನಿಸಿದೆ. ಈ ನಡುವೆ ಸೆಪ್ಟಂಬರ್ 2ನೇ ವಾರದಲ್ಲಿ ವಿಶ್ವವಿದ್ಯಾಲಯದ ತರಗತಿಗಳು ಆರಂಭವಾಗಲಿದೆ. ಸುಮಾರು 20 ಸಾವಿರ ವಿದ್ಯಾರ್ಥಿಗಳು ಮಾಹೆ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದು, ವಿದ್ಯಾರ್ಥಿಗಳ ಉಚಿತ ವ್ಯಾಕ್ಸಿನೇಷನ್ ಗೂ ವ್ಯವಸ್ಥೆ ಮಾಡಲಾಗಿದೆ.

DAKSHINA KANNADA

ಪ್ರೋಸ್ಟೇಟ್ ಆರೋಗ್ಯಕ್ಕೆ ಆದ್ಯತೆ : ಕೆಎಂಸಿ ಆಸ್ಪತ್ರೆಯಿಂದ ಪುರುಷರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

Published

on

ಮಂಗಳೂರು : ನಗರದ ಕೆಎಂಸಿ ಆಸ್ಪತ್ರೆಯು ಪುರುಷರ ದಿನಾಚರಣೆಯ ಅಂಗವಾಗಿ, “ಜೆಂಟಲ್ ರಿಮೈಂಡರ್: ಪ್ರೊಟೆಕ್ಟ್ ಯುವರ್ ಪ್ರಾಸ್ಟೇಟ್” ಎಂಬ ವಿಶೇಷ ಜಾಗೃತಿ ಉಪಕ್ರಮ ಪ್ರಾರಂಭಿಸಿದೆ. ಈ ಉಪಕ್ರಮದ ಭಾಗವಾಗಿ, ನ.17 ರಿಂದ 28 ರವರೆಗೆ, ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ, ಆಸ್ಪತ್ರೆಯು ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮೂತ್ರಶಾಸ್ತ್ರಜ್ಞರೊಂದಿಗೆ(ಯೂರೊಲಾಜಿಸ್ಟ್‌)  ಉಚಿತ ಸಮಾಲೋಚನೆಗಳನ್ನು ಆಯೋಜಿಸಿದೆ.

ಕಾರ್ಯಕ್ರಮವು ಪ್ರಾಸ್ಟೇಟ್ ಸಂಬಂಧಿತ ಪರಿಸ್ಥಿತಿಗಳ ಸಕಾಲಿಕ ಮೌಲ್ಯಮಾಪನ ಮತ್ತು ಆರಂಭಿಕ ಪತ್ತೆಯ ಮೂಲಕ ಪುರುಷರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಉತ್ತಮ ಪ್ರಾಸ್ಟೇಟ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ.

ವಯಸ್ಸಾದ ಪುರುಷರಲ್ಲಿ ಪ್ರಾಸ್ಟೇಟ್ ಸಂಬಂಧಿತ ಕಾಯಿಲೆಗಳು ಸಾಮಾನ್ಯವಾಗಿವೆ. ಆದರೆ, ಅರಿವಿನ ಕೊರತೆ ಅಥವಾ ಸಾಮಾಜಿಕ ಕಳಂಕಕ್ಕೆ ಬೆದರಿ ಅನೇಕರು ಸೂಕ್ತ ಸಮಯದಲ್ಲಿ ಸಹಾಯ ಪಡೆಯಲು ಹಿಂಜರಿಯುತ್ತಾರೆ. ಮೂತ್ರ ವಿಸರ್ಜನೆ ಮಾಡುವಾಗ ತೊಂದರೆ ಅಥವಾ ಆಯಾಸ, ವಿಶೇಷವಾಗಿ ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಯ ಪ್ರಚೋದನೆ , ಮೂತ್ರದಲ್ಲಿ ರಕ್ತ, ಜ್ವರ ಅಥವಾ ಶೀತದೊಂದಿಗೆ ಸುಡುವ ಸಂವೇದನೆ ಮುಂತಾದ ಲಕ್ಷಣಗಳು ವೈದ್ಯಕೀಯ ಮೌಲ್ಯಮಾಪನದ ಅಗತ್ಯವಿರುವ ಆಧಾರವಾಗಿರುವ ಕಾಳಜಿಯನ್ನು ಸೂಚಿಸುತ್ತವೆ. ಈ ಚಿಹ್ನೆಗಳನ್ನು ಕಡೆಗಣಿಸಬಾರದು ಮತ್ತು ಪುರುಷರು ಆರಂಭಿಕ ರೋಗ ನಿರ್ಣಯ ಮತ್ತು ಸೂಕ್ತ ಆರೈಕೆಯನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿ ಕೊಳ್ಳುವುದು ಈ ಉಪಕ್ರಮದ ಗುರಿಯಾಗಿದೆ.

ಕೆಎಂಸಿ ಆಸ್ಪತ್ರೆಯ ಯೂರೋಲಾಜಿ ವಿಭಾಗದ ಮುಖ್ಯಸ್ಥ ಮತ್ತು ಕನ್ಸಲ್ಟೆಂಟ್‌ ಡಾ.ಸನ್ಮಾನ್ ಗೌಡ ಪುರುಷರ ದಿನಾಚರಣೆಯ ಮಹತ್ವ ಮತ್ತು ಉಪಕ್ರಮದ ಬಗ್ಗೆ ಮಾತನಾಡಿ, ವಯಸ್ಸಾದ ಪುರುಷರಲ್ಲಿ ಪ್ರಾಸ್ಟೇಟ್ ಸಮಸ್ಯೆಗಳು ಅತ್ಯಂತ ಸಾಮಾನ್ಯವಾಗಿದೆ. ಆದರೆ, ಅನೇಕರು ಹಿಂಜರಿಕೆ ಅಥವಾ ತಪ್ಪು ಕಲ್ಪನೆಗಳಿಂದಾಗಿ ವೈದ್ಯಕೀಯ ಸಹಾಯವನ್ನು ಪಡೆಯಲು ವಿಳಂಬ ಮಾಡು ತ್ತಾರೆ. ಆರಂಭಿಕ ಮೌಲ್ಯಮಾಪನವು ತೊಡಕುಗಳನ್ನು ತಡೆಯುತ್ತದೆ ಮತ್ತು ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಈ ಪುರುಷರ ದಿನಾಚರಣೆಯ ಉಪಕ್ರಮದ ಮೂಲಕ, ಪುರುಷರು ತಮ್ಮ ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮತ್ತು ಸಕಾಲಿಕ ತಪಾಸಣೆಗೆ ಒಳಗಾಗುವುದನ್ನು ಪ್ರೋತ್ಸಾಹಿಸ ಬಯಸುತ್ತೇವೆ. ಕಾಯಿಲೆ ಕುರಿತು ಆರಂಭದಲ್ಲೇ ತೆಗೆದುಕೊಳ್ಳುವ ಮುಂಜಾಗ್ರತಾ ತಪಾಸಣಾ ಕ್ರಮಗಳು ವ್ಯತ್ಯಾಸವನ್ನುಂಟುಮಾಡುವುದರಿಂದ ಸೌಮ್ಯ ಲಕ್ಷಣಗಳನ್ನು ಸಹ ನಿರ್ಲಕ್ಷಿಸಬಾರದು ಎಂದರು.

ಇದನ್ನೂ ಓದಿ : ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ಭವ್ಯ ಗೌಡ! ಯಾವ ಸಿನಿಮಾ ಗೊತ್ತಾ!?

50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಪುರುಷರು ಈ ಅವಕಾಶ ಬಳಸಿಕೊಳ್ಳಲು ಮತ್ತು ತಪಾಸಣೆಗೆ ಒಳಗಾಗಲು ಆಸ್ಪತ್ರೆ ಆಹ್ವಾನಿಸಿದೆ.

Continue Reading

DAKSHINA KANNADA

ಜಾಗತಿಕ ಬಂಟರ ಸಂಘಗಳ ಒಕ್ಕೂಟ : 29ನೇ ವಾರ್ಷಿಕ ಮಹಾಸಭೆ

Published

on

ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು  ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಿಗೆ ಮತ್ತು ಸಾಧಕರಿಗೆ ಗೌರವ ಸನ್ಮಾನ ನ.25 ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬಂಟ್ಸ್ ಹಾಸ್ಟೆಲ್ ಬಳಿ ಇರುವ  ಬಂಟರ ಯಾನೆ ನಾಡವರ ಮಾತೃ ಸಂಘದ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ ಗಂಟೆ 10 ರಿಂದ 11 ರ ವರೆಗೆ ಕಾರ್ಯಕಾರಿ ಸಮಿತಿ ಸಭೆ ಮತ್ತು 29ನೇ ವಾರ್ಷಿಕ ಮಹಾಸಭೆ  ಜರುಗಲಿದೆ. ಬೆಳಿಗ್ಗೆ  11 ರಿಂದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ  ಹಾಗೂ ಬಹಿರಂಗ ಅಧಿವೇಶನ ಕಾರ್ಯಕ್ರಮ ನಡೆಯಲಿದೆ.

ಬಹಿರಂಗ ಅಧಿವೇಶನದಲ್ಲಿ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಒಕ್ಕೂಟದ ದಾನಿ  ಉಮಾ ಕೃಷ್ಣ ಶೆಟ್ಟಿ ದಂಪತಿಗೆ  ಸನ್ಮಾನ ಕಾರ್ಯಕ್ರಮ ಮತ್ತು 2025ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಿಗೆ ಗೌರವ ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳು ಜರುಗಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ.

ಇದನ್ನೂ ಓದಿ : ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ಭವ್ಯ ಗೌಡ! ಯಾವ ಸಿನಿಮಾ ಗೊತ್ತಾ!?

ಸಮಾರಂಭದಲ್ಲಿ ಮಹಾದಾನಿ, ದಾನಿಗಳು, ಪದಾಧಿಕಾರಿಗಳು, ವಿವಿಧ ಬಂಟರ ಸಂಘಗಳ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ.

Continue Reading

LATEST NEWS

ಬಿ. ಸಿ. ರೋಡ್ ಟೂರಿಸ್ಟ್ ವ್ಯಾನ್ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

Published

on

ಬಂಟ್ವಾಳ: ಟೂರಿಸ್ಟ್ ವ್ಯಾನ್ ಚಾಲಕ ಮಾಲಕರ ಸಂಘ ( ರಿ ) ಬಿ. ಸಿ. ರೋಡ್, ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಬಿಸಿರೋಡಿನ ರಿಕ್ಷಾ ಭವನದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, 2025ನೇ ಸಾಲಿನ‌ ಅಧ್ಯಕ್ಷರಾಗಿ ಸದಾನಂದ ಗೌಡ ಹಳೆಗೇಟು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಇಕ್ಬಾಲ್ ಬಿಸಿ ರೋಡ್ ,ಕಾರ್ಯದರ್ಶಿಯಾಗಿ ಸುನಿಲ್ ಲೋಬೊ ,ಕೋಶಾಧಿಕಾರಿಯಾಗಿ ನಮೇಶ್ ಶೆಟ್ಟಿ ಕುರಿಯಾಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರವೀಣ್ ಕಾರ್ಲೋ, ರಿಯಾಜ್ ಜವಾನ್, ಗಣೇಶ್ ಕಲ್ಲಡ್ಕ, ರಿಯಾಜ್ ಬದ್ರಿಯಾ, ಚಂದ್ರಹಾಸ ಸಾಲೆತ್ತೂರು,ಸುಧಾಕರ್ ತುಂಬೆ, ಜಬ್ಬರ್ ಅಜಿಲಮೊಗರು, ನಿತಿನ್ ಅಜಿಬೆಟ್ಟು ಆಯ್ಕೆಯಾದರು.

ಇದನ್ನೂ ಓದಿ: ರಜೆ ಮಾಡದ ರಾಜ ಹಾಸ್ಯಗಾರ ವಳಕುಂಜರಿಗೆ ಕದ್ರಿ ವಿಷ್ಣು ಪ್ರಶಸ್ತಿ ಪ್ರದಾನ

ಈ ಸಂದರ್ಭದಲ್ಲಿ ಸಂಘದ 70 ಸದಸ್ಯರು ಉಪಸ್ಥಿತರಿದ್ದರು. ಇಕ್ಬಾಲ್ ರವರು ಸ್ವಾಗತಿಸಿ ಸುನಿಲ್ ಲೋಬೊ ರವರು ಧನ್ಯವಾದ ನೀಡಿದರು.

Continue Reading
Advertisement

Trending

Copyright © 2025 Namma Kudla News

You cannot copy content of this page