Connect with us

DAKSHINA KANNADA

Mangaluru: ಅಂಗಡಿ ಮಾಲಿಕನಿಂದಲೇ ಹತ್ಯೆಯಾದ ಕಾರ್ಮಿಕನ ದಫನ ಮಾಡಿದ ಪೊಲೀಸರು..!

Published

on

ಮಂಗಳೂರಿನ ಮುಳಿಹಿತ್ಲುವಿನಲ್ಲಿ ಕಿರಾಣಿ ಅಂಗಡಿ ಮಾಲಕನಿಂದಲೇ ಹತ್ಯೆಗೆ ಒಳಗಾಗಿದ್ದ ಉತ್ತರ ಭಾರತ ಮೂಲದ ಗಜ್ಞಾನ್‌ ಎಂಬಾತನ ಶವವನ್ನು ನಂದಿಗುಡ್ಡೆಯಲ್ಲಿ ಜು.17ರಂದು ದಫನ ಮಾಡಲಾಯಿತು.  

ಮಂಗಳೂರು: ಮಂಗಳೂರಿನ ಮುಳಿಹಿತ್ಲುವಿನಲ್ಲಿ ಕಿರಾಣಿ ಅಂಗಡಿ ಮಾಲಕನಿಂದಲೇ ಹತ್ಯೆಗೆ ಒಳಗಾಗಿದ್ದ ಉತ್ತರ ಭಾರತ ಮೂಲದ ಗಜ್ಞಾನ್‌ ಎಂಬಾತನ ಶವವನ್ನು ನಗರದ ನಂದಿಗುಡ್ಡೆ ರುದ್ರಭೂಮಿಯಲ್ಲಿ ಇಂದು  (ಜು.17ರಂದು)  ದಫನ ಮಾಡಲಾಯಿತು.

 

ಕ್ಲುಲ್ಲಕ ವಿಚಾರಕ್ಕೆ ಗಜ್ಞಾನ ಆಲಿಯಾಸ್‌ ಜಗ್ಗುವನ್ನು ಆತನ ಮಾಲಿಕ ತೌಸಿಫ್‌ ಎಂಬಾತನೇ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ.

ಬಳಿಕ ಆತ ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಪ್ರಯತ್ನಿಸಿದ್ದ.

ಆದರೆ ಈತನೇ ಆತನನ್ನು ಕೊಲೆ ಮಾಡಿರುವುದು ಎನ್ನುವುದನ್ನು ಸ್ಥಳೀಯರು ಆರೋಪಿಸಿದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು.

ಬಳಿಕ ಗಜ್ಞಾನ್‌ ಆಲಿಯಾಸ್‌ ಜಗ್ಗುವಿನ ಗುರುತು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದು, ಈ ಬಗ್ಗೆ ಗುರುತು ಪರಿಚಯ ಇದ್ದವರು ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದರು.

ಆದರೆ ಯಾರೂ ಕೂಡಾ ಈತನ ಗುರುತು ವಿಳಾಸ ಪತ್ತೆ ಹಚ್ಚಿರಲಿಲ್ಲ.

ಮನೆ ಮಂದಿಯೂ ಮುಂದೆ ಬಂದಿರಲಿಲ್ಲ. ಹೀಗಾಗಿ ಪೊಲೀಸರು ಇಂದು ಆತನ ಶವವನ್ನು ನಂದಿಗುಡ್ಡೆ ರುದ್ರಭೂಮಿಯಲ್ಲಿ ದಫನ ಮಾಡಿದ್ದಾರೆ.

DAKSHINA KANNADA

ಕಾರ್ಕಳ: ಗೋಶಾಲೆಯಿಂದ 10,000 ರೂ. ಬೆಲೆಯ 3 ದನ ಕಳವು

Published

on

ಕಾರ್ಕಳ: ಗೋಶಾಲೆಯಿಂದ ಮೂರು ದನಗಳನ್ನು ಕಳವು ಮಾಡಿರುವ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿಯಲ್ಲಿ ನಡೆದಿದೆ.

 

ಬಜಗೋಳಿಯಲ್ಲಿ ಅಹಿಂಸಾ ಅನಿಮಲ್‌ ಕೇರ್‌ ಟ್ರಸ್ಟ್‌ ನಡೆಸುತ್ತಿರುವ ಗೋಶಾಲೆಯಿಂದ ಜೂನ್‌ 16ರಂದು ಮುಂಜಾನೆ 4 ಗಂಟೆ ಸುಮಾರಿಗೆ ಮೂರು ದನಗಳು ಕಳವಾಗಿವೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

READ IN ENGLISH : https://www.nammakudlaenglish.com/karkala-three-cows-worth-%e2%82%b910000-stolen-from-goshala/

ಇದನ್ನೂ ಓದಿ: ಮಂಗಳೂರು: ಭೀಕರ ಕಾರು ಅಪಘಾತದಲ್ಲಿ NSUI ಮುಖಂಡ ಸಹಿತ ಇಬ್ಬರು ಸಾವು

ಕಳವಾದ ದನಗಳ ಮೌಲ್ಯ ಸುಮಾರು 10 ಸಾವಿರ ರೂಪಾಯಿ ಆಗ ಬಹುದೆಂದು ಟ್ರಸ್ಟ್ ಸಂಚಾಲಕ ಎಂ.ಕೆ. ವಿರಂಜಯ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ. ಬಜಗೋಳಿಯಲ್ಲಿ ಅಹಿಂಸಾ ಅನಿಮಲ್‌ ಕೇರ್‌ ಟ್ರಸ್ಟ್‌ ಗೋಶಾಲೆಯನ್ನು ನಡೆಸುತ್ತಿದ್ದು, ಇಲ್ಲಿ ಗಾಯಗೊಂಡ, ಕಾಯಿಲೆಗೊಳಗಾದ, ಬೀದಿ ಪಾಲಾದ ಬೆಕ್ಕು, ನಾಯಿ ಮತ್ತು ದನಗಳನ್ನು ತಂದು ಆರೈಕೆ ಮಾಡಲಾಗುತ್ತಿದೆ ಎಂದು ಎಂ.ಕೆ. ವಿರಂಜಯ್‌ ವಿವರಿಸಿದ್ದಾರೆ.

Continue Reading

DAKSHINA KANNADA

ಮಂಗಳೂರು: ಭೀಕರ ಕಾರು ಅಪಘಾತದಲ್ಲಿ NSUI ಮುಖಂಡ ಸಹಿತ ಇಬ್ಬರು ಸಾವು

Published

on

ಮಂಗಳೂರು: ಕಾರೊಂದು ಡಿವೈಡರ್‌ ಗೆ ಢಿಕ್ಕಿ ಹೊಡೆದು ಇಬ್ಬರು ಯುವಕರು ಮೃತ ಪಟ್ಟ ದಾರುಣ ಘಟನೆ ಮಂಗಳೂರಿನ ಜಪ್ಪಿನಮೊಗರು ನಡು ಮೊಗೇರ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿನ್ನೆ (ಜೂ.17) ರಾತ್ರಿ ಸಂಭವಿಸಿದೆ.

ಕದ್ರಿ ಮಲ್ಲಿಕಟ್ಟೆಯ ನಿವಾಸಿ ಅಮನ್ ರಾವ್‌ (23) ಮತ್ತು ಕೊಂಚಾಡಿಯ ಓಂ ಶ್ರೀ ಪೂಜಾರಿ (24) ಮೃತ ಯುವಕರು ಎಂದು ಗುರುತಿಸಲಾಗಿದೆ. ಕಾರು ಡಿವೈಡರಿಗೆ ಢಿಕ್ಕಿಯಾಗಿ ಬಳಿಕ ಮೋರಿಗೆ ಬಡಿದು ಅವಘಡ ಸಂಭವಿಸಿದೆ.

ಓಂ ಶ್ರೀ ಪೂಜಾರಿ ಅವರು ಎನ್.ಎಸ್.ಯು.ಐ. ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿದ್ದರು. ಕಾರಿನಲ್ಲಿ 4- 5 ಮಂದಿ ಪ್ರಯಾಣಿಸುತ್ತಿದ್ದು, ಅಮನ್ ರಾವ್‌ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ತಲಪಾಡಿ ಕಡೆಯಿಂದ ಪಂಪ್‌ವೆಲ್‌ ಕಡೆಗೆ ಬರುತ್ತಿದ್ದ ಕಾರು ಜಪ್ಪಿನಮೊಗರು ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಮುಂದೆ ಧರೆಗುರುಳಿದ ಬೃಹತ್ ಮರ

ವಂಶಿ ಮತ್ತು ಅಶಿಕ್‌ಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಐಸಿಯುವಿನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೊಬ್ಬ ಗೆಳೆಯ ಇಟಲಿ ಮೂಲದ ಜೆರ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಟ್ರಾಫಿಕ್‌ ದಕ್ಷಿಣ ಠಾಣೆಯ ಪೊಲೀಸರು ಕೇಸ್ ದಾಖಲಿಸಿದ್ದಾರೆ.

Continue Reading

DAKSHINA KANNADA

ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ದಶಮಾನೋತ್ಸವ

Published

on

ಮಂಗಳೂರು/ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಜೂನ್ 29 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ದುಬೈ ಘಟಕದ ಸಹಯೋಗದೊಂದಿಗೆ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ತಿಳಿಸಿದ್ದಾರೆ.


ದಶಮ ಸಂಭ್ರಮದ ಪ್ರಯುಕ್ತ ಯುಎಇಯ ಏಳು ಮಂದಿ ಸಾಧಕರಿಗೆ ಮತ್ತು ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಸಂಘಟನೆ ಕ್ಷೇತ್ರದಲ್ಲಿ ಸರ್ವೋತ್ತಮ ಶೆಟ್ಟಿ, ಕಲಾ ಪೋಷಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮ ಕ್ಷೇತ್ರದಲ್ಲಿ ಪುತ್ತಿಗೆ ವಾಸುದೇವ ಭಟ್, ಸಮಾಜ ಸೇವಾ ಕ್ಷೇತ್ರದಲ್ಲಿ ಬಾಲಕೃಷ್ಣ ಸಾಲಿಯಾನ್, ಮಾಧ್ಯಮ ಕ್ಷೇತ್ರದ ಬಿ. ಕೆ. ಗಣೇಶ ರೈ, ನಾಟಕ ಕ್ಷೇತ್ರದಲ್ಲಿ ಡೋನಿ ಕೊರೆಯಾ, ಭರತನಾಟ್ಯ ಕ್ಷೇತ್ರದಲ್ಲಿ ರೂಪ ಕಿರಣ್ ಹಾಗೂ ಶ್ರೀ ರಾಜರಾಜೇಶ್ವರಿ ಭಜನಾ ತಂಡ, ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯನ್ನು ಗೌರವಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page