Connect with us

LATEST NEWS

ಗಮನಿಸಿ: ನಾಗುರಿ ಸಂಚಾರಿ ಪೊಲೀಸ್‌ ಠಾಣೆ ಜಪ್ಪಿನಮೊಗರುವಿಗೆ ಸ್ಥಳಾಂತರ

Published

on

ಮಂಗಳೂರು: ಮಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯ ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆ(ನಾಗುರಿ) ಜು.8 ರಿಂದ ಜಪ್ಪಿನಮೊಗರುವಿಗೆ ಸ್ಥಳಾಂತರಗೊಂಡಿದೆ.


ಕಂಕನಾಡಿ ನಗರ, ಮಂಗಳೂರು ಗ್ರಾಮಾಂತರ, ಉಳ್ಳಾಲ, ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ರಸ್ತೆ ಅಪಘಾತ ಪ್ರಕರಣಗಳು ಈ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ.

ಹಾಲಿ ಈ ಠಾಣೆಯು ಜಪ್ಪಿನಮೊಗರು ಬಳಿ ಇರುವ ಕಡೆಮೊಗರುವಿನಲ್ಲಿ ತಾತ್ಕಾಲಿಕವಾಗಿ ಖಾಸಗೀ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ.

ಈ ಹಿಂದೆ ಈ ಠಾಣೆಯು ನಾಗುರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಸ್ಥಳಾಂತರಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬ್ರ:-9480805371 ಅಥವಾ 0824-2220850ಗೆ ಸಂಪರ್ಕಿಸುವಂತೆ ಕೋರಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಬೆಂಗಳೂರಿನಲ್ಲಿ ಓಲಾದಲ್ಲಿ ಹೋಗುವ ಮಹಿಳೆಯರೇ ಎಚ್ಚರ; ಕಹಿ ಅನುಭವವನ್ನು ಹಂಚಿಕೊಂಡ ಯುವತಿ

Published

on

ಸಾಮಾನ್ಯವಾಗಿ ಬಸ್ಸಿನಲ್ಲಿ ಅನುಚಿತವಾಗಿ ವರ್ತಿಸುವ ಮೂಲಕ ಮಹಿಳೆಯರಿಗೆ ಅಹಿತಕರ ಅನುಭವವಾಗಿರುತ್ತದೆ. ಆದರೆ ಇದೀಗ ಶ್ರಾವಿಕಾ ಜೈನ್ ಬೆಂಗಳೂರಿನಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ವೇಳೆಯಲ್ಲಿ ಕ್ಯಾಬ್ ಡ್ರೈವರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿರುವುದನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಬಳಕೆದಾರರು ಈ ಪೋಸ್ಟ್ ಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೌದು ತಮ್ಮ ಈ ಪೋಸ್ಟ್ ನಲ್ಲಿ ‘ಈ ಬೆಂಗಳೂರು ಸುರಕ್ಷಿತ ಎಂದು ಜನರು ಹೇಳುತ್ತಾರೆ? ನಿನ್ನೆ ರಾತ್ರಿ ವಿಮಾನ ನಿಲ್ದಾಣದಿಂದ ಕ್ಯಾಬ್‌ನಲ್ಲಿ ಬಂದದ್ದು ನನ್ನ ಜೀವನದ ಅತ್ಯಂತ ಭಯಾನಕ ಅನುಭವಗಳಲ್ಲಿ ಒಂದು.

ಬೆಂಗಳೂರಿನ ವಿಮಾನ ನಿಲ್ದಾಣದಿಂದ ರಾತ್ರಿ 11 ಗಂಟೆಗೆ ಪುಯಾಣಿಸುತ್ತಿದ್ದ ವೇಳೆಯಲ್ಲಿ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ನಿನ್ನೆ ರಾತ್ರಿ ವಿಮಾನ ನಿಲ್ದಾಣದಿಂದ ಕ್ಯಾಬ್‌ನಲ್ಲಿ ಚಾಲಕ ನನ್ನನ್ನು ಕಟ್ಟ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದ್ದಾನ.

ಕ್ಯಾಬ್ ಡ್ರೈವರ್ ಯೂಟ್ಯೂಬ್‌ನಲ್ಲಿ ಜೋರಾಗಿ ಸಂಗೀತ ಹಾಕಿ ಜೋರಾಗಿ ಹಾಡುತ್ತಾ, ತನ್ನ ತೊಡೆಗಳನ್ನು ತಟ್ಟಲು ಪ್ರಾರಂಭಿಸಿದ್ದಾನೆ. ನಾನು ಹಾಡಿನ ಧ್ವನಿ ಕಡಿಮೆ ಮಾಡಲು ಪದೇ ಪದೇ ಹೇಳಿದರೂ ಕೂಡ ಈ ಚಾಲಕನು ಕೆಟ್ಟ ನೋಟದಿಂದ ಪ್ರತಿಕ್ರಿಯಿಸಿದ್ದಾನೆ. ಅಲ್ಲದೇ ಕಾರಿನಲ್ಲಿ ಸಿಗರೇಟ್ ಸೇದಿದ್ದಾನೆ. ಆ ಸಮಯದಲ್ಲಿ ನಾನು ಒಂಟಿಯಾಗಿದ್ದೆ. ರಾತ್ರಿ ಬೇರೆಯಾಗಿತ್ತು.ಈ ವೇಳೆಯಲ್ಲಿ ನನ್ನ ಮೂವರು ಸ್ನೇಹಿತರು ನನಗೆ ಕರೆ ಮಾಡಿ ನನ್ನ ಸ್ಥಳವನ್ನು ಟ್ರ್ಯಾಕ್ ಮಾಡುತ್ತಿದ್ದರು. ಅದಲ್ಲದೇ ಈ ಚಾಲಕನು ರಸ್ತೆಯ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ತಾನು ಟೀ ಕುಡಿಯಲು ಬಯಸುವುದಾಗಿ ಹೇಳಿದ.

ಆದರೆ ನಾನು, ನನ್ನನ್ನು ಮೊದಲು ಮನೆಗೆ ಕರದೊಯ್ಯುವಂತೆ ವಿನಂತಿಸಿದರೂ, ಚಾಲಕ ಹೊರಗೆ ಹೋಗಿದ್ದು ಹತ್ತು ನಿಮಿಷಗಳ ನಂತರ ಹಿಂತಿರುಗಿದ ಈ ಪ್ರಯಾಣದ ಉಳಿದ ಭಾಗದಲ್ಲಿ ಅವನು ತನ್ನನ್ನು ಅನುಚಿತವಾಗಿ ನೋಡುತ್ತಲೇ ಇದ್ದದ್ದು ನನಗೆ ಆ ಕ್ಷಣ ಭಯಾನಕವಾಗಿತ್ತು. ಆದರೆ ಯಾವುದೇ ಅಹಿತಕರ ಘಟನೆ ನಡೆಯದೇ ಮನೆಗೆ ತಲುಪಿದೆ ಎಂದು ಬರೆದುಕೊಂಡಿದ್ದಾರೆ.

Continue Reading

LATEST NEWS

ಪಾನಿಪುರಿ ತಿಂದು 31 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Published

on

ಮಂಗಳೂರು/ನಾಂದೇಡ್: ಪಾನಿಪುರಿ ತಿಂದು 31 ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ಮಹಾರಾಷ್ಟ್ರದ ನಾಂದೇಡ್‌ ನಗರದಲ್ಲಿ ನಡೆದಿದೆ.

ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಪಾನಿಪುರಿಯನ್ನು ತಿಂದ ಮಕ್ಕಳಿಗೆ ಕೆಲ ಹೊತ್ತಿನಲ್ಲೇ ವಾಂತಿಯಾಗಿದೆ. ಬಳಿಕ ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದರು.

ತಕ್ಷಣವೇ ಪೋಷಕರು ಮಕ್ಕಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಸ್ವಸ್ಥಗೊಂಡ 31 ವಿದ್ಯಾರ್ಥಿಗಳು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸೇರಿದವರು ಎನ್ನಲಾಗಿದೆ.

ಇದನ್ನೂ ಓದಿ: ಟ್ರೇಡ್‌ಮಾರ್ಕ್‌ ಅವಮಾನಿಸಿದ ಆರೋಪ; ಹೈಕೋರ್ಟ್‌ ಮೆಟ್ಟಿಲೇರಿದ ಆರ್‌ಸಿಬಿ

ಸದ್ಯ ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳು ವರದಿ ಮಾಡಿವೆ.

Continue Reading

LATEST NEWS

ವಿಮಾನ ಹೈಜಾಕ್ ಮಾಡಲು ಹೋಗಿ ಪ್ರಯಾಣಿಕನ ಗುಂಡೇಟಿಗೆ ಬ*ಲಿಯಾದ ಆಗಂತುಕ!

Published

on

ಮಂಗಳೂರು/ಬೆಲ್ಮೋಪನ್ : ಆಗಸದಲ್ಲಿ ಸಂಚರಿಸುತ್ತಿದ್ದ ವಿಮಾನವನ್ನು ಹೈಜಾಕ್ ಮಾಡುವ ಯತ್ನ ನಡೆದಿದೆ. ಆದರೆ, ಈ ವೇಳೆ ಪ್ರಯಾಣಿಕನೊಬ್ಬನ ಗುಂ*ಡಿಗೆ ಆ ಆಗಂತುಕ ಬ*ಲಿಯಾಗಿದ್ದಾನೆ. ಸ್ಯಾನ್ ಪೆಡ್ರೋಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

49 ವರ್ಷದ ಅಕಿನ್ಯೆಲಾ ಸಾವಾ ಟೇಲರ್ ಮೃ*ತ ಆಗಂತುಕ. ಚಾಕು ಹಿಡಿದಿದ್ದ ಅಮೆರಿಕದ ಪ್ರಜೆಯಾದ ಅಕಿನ್ಯೆಲಾ ಸಣ್ಣ ಟ್ರಾಫಿಕ್ ಏರ್ ವಿಮಾನವನ್ನು ಅಪಹರಿಸಲು ಯತ್ನಿಸಿದ್ದಾನೆ. ಚಾಕು ಹಿಡಿದು ವಿಮಾನದಲ್ಲಿದ್ದವರ ಮೇಲೆ ಹ*ಲ್ಲೆ ನಡೆಸಿದ್ದಾನೆ. ಈ ವೇಳೆ ಹಲವರು ಗಾ*ಯಗೊಂಡಿದ್ದು, ಆಗಂತುಕನ ದಾ*ಳಿಯಿಂದ ತಪ್ಪಿಸಿಕೊಳ್ಳಲು ವಿಮಾನದಲ್ಲಿದ್ದ ಮತ್ತೋರ್ವ ಪ್ರಯಾಣಿಕ ಆತನ ಮೇಲೆ ಗುಂ*ಡು ಹಾರಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.

ಆಗಿದ್ದೇನು?

ಅಕಿನ್ಯೆಲಾ ಸಾವಾ ಟೇಲರ್ ಆರಂಭದಲ್ಲಿ ಸಹ ಪ್ರಯಾಣಿಕರ ಜೊತೆ ಜಗಳವಾಡಿದ್ದಾನೆ. ನೋಡ ನೋಡುತ್ತಲೇ ಚಾಕು ಹೊರತೆಗೆದು ಇತರೆ ಪ್ರಯಾಣಿಕರ ಮೇಲೆ ದಾ*ಳಿ ಮಾಡಲು ಪ್ರಾರಂಭಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ದಾ*ಳಿ ತಡೆಯಲು ಅದೇ ವಿಮಾನದಲ್ಲಿದ್ದ ಮತ್ತೋರ್ವ ಪ್ರಯಾಣಿಕ ಟೇಲರ್ ಮೇಲೆ ಗುಂ*ಡು ಹಾರಿಸಿದ್ದಾನೆ. ಈ ಸಂದರ್ಭ ಟೇಲರ್ ನೆ*ಲಕ್ಕುರುಳಿದ್ದಾನೆ. ಬಳಿಕ ವಿಮಾನದ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಇದನ್ನೂ ಓದಿ :  ಭಾರೀ ಸದ್ದು ಮಾಡುತ್ತಿದೆ ‘ಜನಿವಾರ’ ಪ್ರಕರಣ ..! ಅಷ್ಟಕ್ಕೂ ಎಕ್ಸಾಂ ಹಾಲ್‌ನಲ್ಲಿ ನಡೆದಿದ್ದೇನು ..?

ಸಮೀಪದ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿದ್ದು, ವಿಮಾನವನ್ನು ಭದ್ರತಾ ಸಿಬ್ಬಂದಿ ನಿಯಂತ್ರಣಕ್ಕೆ ಪಡೆದಿದ್ದಾರೆ. ಟೇಲರ್‌ನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತಾದರೂ ಅಷ್ಟರಲ್ಲಾಗಲೇ ಆತ ಮೃ*ತಪಟ್ಟಿದ್ದ ಎಂದು ತಿಳಿದುಬಂದಿದೆ.

ಆತ ವಿಮಾನದೊಳಗೆ ಚಾ*ಕುವನ್ನು ಹೇಗೆ ತಂದ ಎಂಬ ಪ್ರಶ್ನೆ ಉದ್ಭವಿಸಿದೆ. ಸದ್ಯ, ಟೇಲರ್ ಮೇಲೆ ಗುಂ*ಡು ಹಾರಿಸಿದ ಪ್ರಯಾಣಿಕನನ್ನು ಹೀರೋ ಎಂದು ಹಲವರು ಹೊಗಳುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page