Connect with us

LATEST NEWS

mangaluru : ಕಾನೂನು ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ಪ್ರಕರಣ: ವಕೀಲ KSN ರಾಜೇಶ್‌ ರಿಟ್ ಅರ್ಜಿ ಹೈಕೋರ್ಟ್ ವಜಾ..!

Published

on

ಕಾನೂನು ವಿದ್ಯಾರ್ಥಿನಿಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ವಕೀಲ ಕೆ ಎಸ್‌ ಎನ್ ರಾಜೇಶ್ ವಿರುದ್ಧ ದಾಖಲಾಗಿರುವ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಮಂಗಳೂರು: ಕಾನೂನು ವಿದ್ಯಾರ್ಥಿನಿಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ವಕೀಲ ಕೆ ಎಸ್‌ ಎನ್ ರಾಜೇಶ್ ವಿರುದ್ಧ ದಾಖಲಾಗಿರುವ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಮಂಗಳೂರು ಮಹಿಳಾ ಠಾಣೆಯ ಪೊಲೀಸರು ದಾಖಲಿಸಿದ ಎಫ್‌ಐಆರ್ ಮತ್ತು 3ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ವಕೀಲ ಕೆ.ಎಸ್‌.ಎನ್ ರಾಜೇಶ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

ಅತ್ಯಾಚಾರ,  ಅತ್ಯಾಚಾರ ಯತ್ನ ಮತ್ತು ಅತ್ಯಾಚಾರಕ್ಕೆ ತಯಾರಿ ಬಗ್ಗೆ ನ್ಯಾಯಾಲಯದಲ್ಲಿ  ವಿಚಾರಣಾ ವೇಳೆಯಲ್ಲಿ ಕಂಡು ಬಂದಿದೆ.

ತನಿಖಾಧಿಕಾರಿಗಳು ವಶಪಡಿಸಿಕೊಂಡ ಸಿಸಿಟಿವಿ ದೃಶ್ಯಾವಳಿಗಳು, ಆರೋಪಿ ಮತ್ತು ದೂರುದಾರರ ನಡುವೆ ನಡೆದ ಮಾತುಕತೆಯ ವೈಜ್ಞಾನಿಕ ವರದಿಗಳು ಮತ್ತು ಘಟನಾ ಸಂದರ್ಭ  ಆರೋಪಿಯ ಉದ್ದೇಶ, ಅತ್ಯಾಚಾರಕ್ಕೆ ಯತ್ನ ಮತ್ತಯ ಅತ್ಯಾಚಾರ ನಡೆದಿದೆಯೋ ಇಲ್ಲಾವೋ ಎಂಬ ವಿಷಯಕ್ಕೆ  ಸಾಕ್ಷ್ಯ ವಿಚಾರಣೆ ವೇಳೆ ತಿಳಿಯುವುದೆಂದು ಮತ್ತು ನ್ಯಾಯಾಲ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದರೆ ಕಾನೂನು ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲಾದಂತಾಗುತ್ತೆ.

ಜೊತೆಗೆವಿದ್ಯಾರ್ಥಿನಿಯ ಮೇಲೆ ನಡೆಸಿದರೆ ಅದು ಆಕೆಯ ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದ ಸಂಪೂರ್ಣ ವಿಚಾರಣೆ ಎದುರಿಸಿ, ಆರೋಪಿಯು ದೋಷಮುಕ್ತರಾಗಿ ಬರಬೇಕು” ಎಂದು ಅಭೀಪ್ರಾಯಪಟ್ಟಯ ರಿಟ್ ಅರ್ಜಿಯನ್ನು ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ

ನಗರದ ಕಾನೂನು ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ವಕೀಲ ಕೆ ಎಸ್ ಎನ್. ರಾಜೇಶ್ ಅವರ ಕಚೇರಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದರು.

ಈ ಸಂದರ್ಭ ತನ್ನ ಮೇಲೆ ವಕೀಲ ರಾಜೇಶ್ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ದೂರು ನೀಡಿದ್ದರು. ಈ ಸಂಬಂಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಪೊಲೀಸರು ತನಿಖೆ ಪೂರ್ಣಗೊಳಿಸಿ ಅತ್ಯಾಚಾರ, ಲೈಂಗಿಕ ಕಿರುಕುಳ, ಮಹಿಳೆಯ ಘನತೆಗೆ ಧಕ್ಕೆ ತಂದಿರುವುದು ಸೇರಿದಂತೆ ಹಲವು ಆರೋಪಗಳ ಸಂಬಂಧ ಆರೋಪ ಪಟ್ಟಿ ಸಲ್ಲಿಸಿದ್ದರು.

ಈ ಮಧ್ಯೆ ಆರೋಪಿ ತಲೆಮರೆಸಿಕೊಂಡಿದ್ದರು. ಕೊನೆಗೆ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. ಆರೋಪಿಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿತ್ತು.

 

LATEST NEWS

ಮಮ್ಮುಟ್ಟಿ ಹೆಸರಿನಲ್ಲಿ ಮೋಹನ್‌ಲಾಲ್ ವಿಶೇಷ ಪೂಜೆ: ಏನಿದು ವಿವಾದ ?

Published

on

ಮಂಗಳೂರು/ತಿರುವನಂತಪುರ: ಮಲಯಾಳಂ ನಟ ಮೋಹನ್ ಲಾಲ್ ಅವರು ಮಾ.18ರಂದು ಮಮ್ಮುಟ್ಟಿ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.


ನಟ ಮಮ್ಮುಟಿ ಆರೋಗ್ಯ ಸಮಸ್ಯೆಯಲ್ಲಿದ್ದಾರೆಂದು ವರದಿ ಬಂದ ಬೆನ್ನಲ್ಲೇ ನಟ ಮೋಹನ್ ಲಾಲ್ ಶಬರಿಮಲೆಗೆ ತೆರಳಿ ವಿಶೇಷ ಉಷಃ ಪೂಜೆಯೆಂಬ ಸೇವೆಯನ್ನು ಮಮ್ಮುಟ್ಟಿಗಾಗಿ ನಡೆಸಿದ್ದರು.

ಅಷ್ಟಕ್ಕೂ ವಿವಾದಕ್ಕೆ ಕಾರಣವಾಗಿದ್ದು, ದೇಗುಲವು ನೀಡಿದ್ದ ರಸೀದಿಯಲ್ಲಿ ಮಮ್ಮುಟ್ಟಿ ಅವರ ಹೆಸರನ್ನು ಮಹಮ್ಮದ್ ಕುಟ್ಟಿ ಎಂದು ನಮೂದಿಸಲಾಗಿತ್ತು. ಪೂಜೆ ಸೇವಾ ರಶೀದಿ ಸಹಿತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕೆಲವರು ಮಮ್ಮುಟ್ಟಿ ಅವರು ಇಸ್ಲಾಂ ಸಮುದಾಯಕ್ಕೆ ಸೇರಿದವರು. ಅವರ ಹೆಸರಿನಲ್ಲಿ ಹಿಂದೂ ದೇಗುಲದಲ್ಲಿ ಪೂಜೆ ಮಾಡಿಸಲಾಗಿದೆ ಎಂದು ತಕರಾರು ಎತ್ತಿದ್ದಾರೆ.

ಈ ಬಗ್ಗೆ ಕೇರಳದ ಪ್ರಮುಖ ರಾಜಕೀಯ ವಿಶ್ಲೇಷಕ, ಮಾಧ್ಯಮ ಪ್ರತಿನಿಧಿಯಾದ ಹಿರಿಯ ಪತ್ರಕರ್ತ ಓ. ಅಬ್ದುಲ್ಲಾ ಅವರು, ಮಮ್ಮುಟ್ಟಿಯ ಅನುಮತಿ ಇಲ್ಲದೇ ಮೋಹನ್ ಲಾಲ್ ತನ್ನಿಚ್ಛೆಯಂತೆ ಪೂಜೆ ನಡೆಸಿರಲಾರರು. ಮುಮ್ಮುಟ್ಟಿಯ ಅರಿವಿನಿಂದಲೇ ಪೂಜೆ ನಡೆಸಿದ್ದಾದರೆ ಮಮ್ಮುಟ್ಟಿ ಕ್ಷಮೆಯಾಚಿಸಬೇಕು. ಅದು ನಟನ ಕಡೆಯಿಂದ ಆದ ಗಂಭೀರ ಲೋಪ. ಮಮ್ಮುಟ್ಟಿ ಅವರ ಅರಿವಿಗೆ ಬಾರದೆ ಮೋಹನ್ ಲಾಲ್ ಪೂಜೆ ಮಾಡಿದ್ದರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಇದು ಮೋಹನ್ ಲಾಲ್ ಅವರ ಅಯ್ಯಪ್ಪನ ಮೇಲಿನ ನಂಬಿಕೆಯನ್ನು ಸೂಚಿಸುತ್ತದೆ. ಆ ನಂಬಿಕೆ ಆಧಾರದ ಮೇಲೆ ಅವರು ಪೂಜೆ ಮಾಡಿರಬಹುದು.

ಆದಾಗ್ಯೂ, ಮಮ್ಮುಟ್ಟಿ ಅವರ ಸೂಚನೆಯಂತೆ ಪೂಜೆಯನ್ನು ಸಲ್ಲಿಸಿದ್ದರೆ, ಅದು ದೊಡ್ಡ ಅಪರಾಧ. ಏಕೆಂದರೆ ಇಸ್ಲಾಂ ನಂಬಿಕೆಗಳ ಪ್ರಕಾರ, ಮುಸಲ್ಮಾನನಿಗೆ ಅಲ್ಲಾಹುವಲ್ಲದೇ ಅನ್ಯ ದೇವರಿಲ್ಲ. ಈ ಕುರಿತು ಮಮ್ಮುಟ್ಟಿ ತನ್ನ ಸಮುದಾಯಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಹೊಸ ಟೋಲ್ ರೇಟ್ ..! ಎಷ್ಟು ಹೆಚ್ಚಾಗಲಿದೆ ಗೊತ್ತಾ ?

ಅಸಮಾಧಾನ ವ್ಯಕ್ತಪಡಿಸಿದ ಮೋಹನ್‌ಲಾಲ್
ವಿಶೇಷ ಪೂಜೆ ಕುರಿತ ರಸೀದಿಯನ್ನು ದೇಗುಲದ ಕೆಲವು ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ ಎಂದು ಮೋಹಾನ್‌ಲಾಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ತಿರುವಾಂಕೂರು ದೇವಸ್ವಂ ಮಂಡಳಿಯು,”ನಮ್ಮ ಕಡೆಯಿಂದ ರಸೀದಿಯು ಬಹಿರಂಗಗೊಂಡಿಲ್ಲ” ಎಂದು ಸ್ಪಷ್ಟನೆ ನೀಡಿದೆ.

Continue Reading

LATEST NEWS

SSLC ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

Published

on

ಬೆಳಗಾವಿ: SSLC ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂಬ ಭಯದಿಂದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ದೀಪಿಕಾ ಬಡಿಗೇರ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಫಾರೆಸ್ಟ್ ಕಾಲೋನಿಯಲ್ಲಿ SSLC ವಿದ್ಯಾಭ್ಯಾಸ ಮಾಡುತ್ತಿದ್ದಳು.

ಮಾ.25ರಂದು ಎಸ್ಎಸ್ ಎಲ್ ಸಿ ಪರೀಕ್ಷೆ ಬರೆದು ಬಂದಿದ್ದ ದೀಪಿಕಾ ಕಡಿಮೆ ಅಂಕ ಬರಬಹುದು ಎಂಬ ಭಯದಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೃತ ದೀಪಿಕಾಳ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Continue Reading

LATEST NEWS

ಬದಲಾಗಲಿದೆ ಬ್ಯಾಂಕ್ ಸೇವೆಗಳು; RBI ಹೊಸ ರೂಲ್ಸ್

Published

on

ಮಂಗಳೂರು/ನವದೆಹಲಿ : ಬ್ಯಾಂಕಿಂಗ್ ಸೇವೆಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ತರ ಬದಲಾವಣೆ ತರಲಿದೆ. ಮೇ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಎಟಿಎಂ ಕ್ಯಾಶ್ ವಿತ್‌ಡ್ರಾಶುಲ್ಕ ಹೆಚ್ಚಳ ಸೇರಿದಂತೆ ಹಲವು ನಿಯಮಗಳನ್ನು ಪರಿಷ್ಕರಿಸಲಾಗಿದೆ. ಎಟಿಎಂಗಳಿಂದ ಹಣ ವಿತ್‌ಡ್ರಾ ಮಾಡುವ ಸೇವಾ ಶುಲ್ಕವನ್ನು 2 ರೂ.ಗೆ ಹೆಚ್ಚಿಸಲಾಗಿದೆ.

ರಾಷ್ಟ್ರೀಯ ಪಾವತಿ ನಿಗಮ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸಿದೆ. ಈ ಹಿಂದೆ ಪ್ರತಿ ವಹಿವಾಟಿಗೆ 17 ರೂ. ವಿಧಿಸಲಾಗಿತ್ತು. ಇನ್ನು ಮುಂದಕ್ಕೆ 19 ರೂಪಾಯಿ ಪಾವತಿಸಬೇಕಾಗುತ್ತದೆ.ಎಟಿಎಂ ಇಂಟರ್‌ಚೇಂಜ್ ಶುಲ್ಕ ಅಂದರೆ ಎಟಿಎಂ ಸೇವೆ ಒದಗಿಸುವುದಕ್ಕಾಗಿ ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ವಿಧಿಸುವ ಶುಲ್ಕವಾಗಿದೆ.

ನಿಗದಿತ ಮಿತಿಯನ್ನು ಮೀರಿ ಹೆಚ್ಚು ಬಾರಿ ವಿತ್‌ ಡ್ರಾ ಮಾಡಿದರೆ ಆಗ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿದ್ದು, ಇದನ್ನು 1 ರಿಂದ 2 ರೂ.ವರೆಗೆ ಹೆಚ್ಚಳ ಮಾಡಲಾಗುತ್ತಿದೆ. ಅಕೌಂಟ್ಸ್ ಬ್ಯಾಲೆನ್ಸ್ ಪರಿಶೀಲನೆ ಸೇರಿದಂತೆ ನಾನ್ ಟ್ರಾನ್ಸಾಕ್ಷನ್ ಶುಲ್ಕ 6 ರೂ. ಇದ್ದುದು 7 ರೂ. ವರೆಗೆ ಆಗಲಿದೆ ಎಂದು ತಿಳಿದುಬಂದಿದೆ.

ಮಿನಿಮಮ್ ಬ್ಯಾಲೆನ್ಸ್ ಶುಲ್ಕವನ್ನೂ ಪರಿಷ್ಕರಿಸಲಾಗುತ್ತಿದ್ದು, ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೇರೆ ಬೇರೆ ಮಿನಿಮಮ್ ಬ್ಯಾಲನ್ಸ್ ನಿಯಮ ಜಾರಿಗೆ ಬರುವ ಸಾಧ್ಯತೆಗಳಿವೆ.

ಸೇವಿಂಗ್ಸ್ ಬ್ಯಾಂಕ್ ಅಕೌಂಟ್ಸ್‌ನಲ್ಲಿ 100 ರೂ ಇದ್ದವರಿಗೂ ಶೇ.4, 1 ಲಕ್ಷ ಇಟ್ಟವರಿಗೂ ಅಷ್ಟೇ  ಬಡ್ಡಿದರ ಸಿಗುತ್ತದೆ. ಈ ನಿಯಮದಲ್ಲೂ ಬದಲಾವಣೆ ಮಾಡುವ ಯೋಜನೆ ಇದ್ದು, ಹೆಚ್ಚು ಹಣಕ್ಕೆ ಹೆಚ್ಚು, ಕಡಿಮೆ ಹಣಕ್ಕೆ ಕಡಿಮೆ ಬಡ್ಡಿದರ ನಿಗದಿ ಮಾಡಲಾಗುತ್ತಿದೆ.

ಇದನ್ನೂ ಓದಿ : ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಹೊಸ ಟೋಲ್ ರೇಟ್ ..! ಎಷ್ಟು ಹೆಚ್ಚಾಗಲಿದೆ ಗೊತ್ತಾ ?

ಎಸ್‌ಬಿಐ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮೊದಲಾದ ಪ್ರಮುಖ ಬ್ಯಾಂಕ್‌ಗಳು ತಮ್ಮ ವಿಸ್ತಾರ ಕ್ರೆಡಿಟ್ ಕಾರ್ಡ್‌ಗಳ ನಿಯಮದಲ್ಲಿ ಬದಲಾವಣೆ ಮಾಡುತ್ತಿವೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page