Connect with us

DAKSHINA KANNADA

Mangaluru: ಖ್ಯಾತ ಮೂತ್ರಶಾಸ್ತ್ರಜ್ಞ ಡಾ.ಜಿ.ಜಿ. ಲಕ್ಷ್ಮಣ ಪ್ರಭು ನಿಧನ..!

Published

on

ಮಂಗಳೂರು: ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಖ್ಯಾತ ಮೂತ್ರಶಾಸ್ತ್ರಜ್ಞ ಡಾ.ಜಿ.ಜಿ.ಲಕ್ಷ್ಮಣ ಪ್ರಭು ಅವರು ನ.17ರ ಶುಕ್ರವಾರದಂದು  ನಿಧನ ಹೊಂದಿದರು.

ಡಾ. ಲಕ್ಷ್ಮಣ ಪ್ರಭು ಅವರಿಗೆ ಅವರಿಗೆ 61 ವರ್ಷ ವಯಸ್ಸಾಗಿತ್ತು.  ಅವರಿಗೆ ವಾರದ ಹಿಂದೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗ ಹೃದಯಾಘಾತ ಉಂಟಾಗಿತ್ತು. ಬಳಿಕ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಎಂಬಿಬಿಎಸ್‌ ಬಳಿಕ ಎಂಎಸ್‌,ಎಂಸಿಎಚ್‌, ಡಿಎನ್ ಬಿ ಪದವಿ ಪಡೆದಿದ್ದ ಅವರು ಮೂತ್ರಾಂಗ ರೋಗ ಶಾಸ್ತ್ರ ಕ್ಷೇತ್ರದಲ್ಲಿ 36 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದರು. 2022 ರಲ್ಲಿ ಭಾರತೀಯ ಮೂತ್ರಾಂಗ ರೋಗ ಚಿಕಿತ್ಸಾ ತಜ್ಞರ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದರು. ಭಾರತೀಯ ವೈದ್ಯಕೀಯ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

DAKSHINA KANNADA

ವೈರಲ್ ಫೋಟೋ…ಧಾರ್ಮಿಕ ವಿಚಾರ…ರಾಜಕೀಯ…ಪ್ರಕಾಶ್ ರಾಜ್ ಹೇಳಿದ್ದೇನು?

Published

on

ಮಂಗಳೂರು : ಧರ್ಮ ವಿರೋಧಿಯಿಂದ ಕುಂಭಸ್ನಾನ ಎಂಬ ಫೋಟೋ ವೈರಲ್‌ ಆದ ವಿಚಾರವಾಗಿ ನಟ ಪ್ರಕಾಶ್ ರಾಜ್‌ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆದ ಫೋಟೋ ಪ್ರಕಾಶ್ ರಾಜ್ ಅವರದ್ದಲ್ಲ ಎಂಬ ಸತ್ಯ ಕೂಡ ಬಹಿರಂಗವಾಗಿದೆ. ಇದೀಗ ಇದೇ ವಿಚಾರವಾಗಿ ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಪ್ರಕಾಶ್ ರಾಜ್ ಮಾತನಾಡಿದ್ದಾರೆ.

ಒಂದು ಪಕ್ಷವನ್ನು ಪ್ರಶ್ನೆ ಮಾಡಿದರೆ ಧರ್ಮವನ್ನು ಪ್ರಶ್ನೆ ಮಾಡಿದಂತೆ ನಮ್ಮ ಮೇಲೆ ದಾಳಿ ಮಾಡಲಾಗುತ್ತಿದೆ. ವ್ಯಾಟ್ಸಾಪ್ ಯೂನಿವರ್ಸಿಟಿಯಿಂದ ಈ ಕೆಲಸ ಆಗುತ್ತಿದೆ.  ಪ್ರಶಾಂತ್ ಸಂಬರ್ಗಿಯಂತವರು ಈ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಖ್ಯಾತರು, ಕುಖ್ಯಾತರೋ ಗೊತ್ತಿಲ್ಲ. ಈ ಬಗ್ಗೆ ದೂರು ನೀಡಿದ್ದೇನೆ. ಬಂದು ಉತ್ತರಿಸಲಿ. ವ್ಯಕ್ತಿಯ ಇಚ್ಛೆಯಿಲ್ಲದೆ ಫೋಟೋ ತಿರುಚುವುದು ಸರಿಯಲ್ಲ ಎಂದು ಕಿಡಿಕಾರಿದರು.

ನಾನು ಧರ್ಮ ವಿರೋಧಿಯಲ್ಲ. ಹಾಗಂತ ನನಗೆ ನಂಬಿಕೆ ಇಲ್ಲ. ನನ್ನದು ಸೌಹಾರ್ದತೆ. ಎಲ್ಲರಿಗೂ ಒಂದೊಂದು ಅನಿಸಿಕೆ ಎಂಬುದು ಇರುತ್ತದೆ.  ಧಾರ್ಮಿಕ ವಿಚಾರದಲ್ಲಿ ರಾಜಕಾರಣ ಮಾಡುವವರು ನಿಜವಾದ ಹಿಂದುಗಳಲ್ಲ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಇದನ್ನೂ ಓದಿ : ಬೀದರ್ ATM ದರೋಡೆ ಪ್ರಕರಣ; ದರೋಡೆಕೋರರ ಸುಳಿವು ಕೊಟ್ಟವರಿಗೆ ಬಂಪರ್ ಬಹುಮಾನ

ಸರ್ಕಾರ ಯಾವುದೇ ಇರಲಿ ಸರ್ಕಾರದ ಕೆಲಸವನ್ನು ಪ್ರಶ್ನೆ ಮಾಡುವುದು ಜನರಿಗೆ ಇರುವ ಹಕ್ಕು. ದೇವಸ್ಥಾನ ಅಭಿವೃದ್ದಿಯಲ್ಲಿ ಹೇಗೆ ಜನರ ಹಣ ಬಳಕೆಯಾಗುತ್ತದೆಯೋ ಅದೇ ರೀತಿ ಸರ್ಕಾರ ನಡೆಸಲು ಕೂಡಾ ಜನರ ಹಣವೇ ಬಳಕೆಯಾಗುತ್ತಿರುವುದು. ದೇವಸ್ಥಾನಕ್ಕೆ ಹಣ ಹೇಗೆ ವಿನಿಯೋಗ ಆಗಿದೆ ಅಂತ ಚಿಂತಿಸುವ ನಾವು ನಮ್ಮ ಹಣವನ್ನು ರಾಜಕಾರಣಿಗಳು ಹೇಗೆ ವಿನಿಯೋಗಿಸಿದ್ದಾರೆ ಅಂತ ಪ್ರಶ್ನೆ ಮಾಡಬೇಕು. ಚುನಾವಣೆಗಳಲ್ಲಿ ಜನರು ಸರ್ಕಾರಗಳನ್ನು ಅದಲು ಬದಲು ಮಾಡಬಹುದು ಆದರೆ ಯಾರೇ ಬಂದ್ರೂ ಪ್ರಶ್ನೆ ಮಾಡುವುದು ತಪ್ಪಲ್ಲ. ಹಾಗಂತ ಒಂದು ಪಕ್ಷದವರನ್ನು ಪ್ರಶ್ನೆ ಮಾಡಿದ್ರೆ ಧರ್ಮದ್ರೋಹಿ ಅನ್ನೋ ಪಟ್ಟ ನೀಡುವುದು ಸರಿಯಾದ ಕ್ರಮ ಅಲ್ಲ ಎಂದಿದ್ದಾರೆ.

Continue Reading

DAKSHINA KANNADA

ಕಾಸರಗೋಡು: ಮಂಗಳೂರು ಸೆಂಟ್ರಲ್ ರೈಲ್ವೆ ಪೊಲೀಸರ ದರ್ಪ, ಕಾಲು ಕಳೆದುಕೊಂಡ ಯೋಧ..!?

Published

on

ಕಾಸರಗೋಡು: ರೈಲು ನಿಲ್ದಾಣದಲ್ಲಿರುವ ಬೆಂಚಿನ ಮೇಲೆ ಮಲಗಿದ್ದ ಮಾಜಿ ಯೋಧರೊಬ್ಬರ ಮೇಲೆ ಪೊಲೀಸರು ನಡೆಸಿದ್ದಾರೆ ಎನ್ನಲಾದ ದೌರ್ಜನ್ಯದಿಂದಾಗಿ ಆ ವ್ಯಕ್ತಿ ಎಡ ಕಾಲು ಕಳೆದುಕೊಳ್ಳುವಂತಾದ ದಾರುಣ ಘಟನೆಯೊಂದು ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಕಾಸರಗೋಡು ಜಿಲ್ಲೆಯ ನಿಲೇಶ್ವರ ನಿವಾಸಿ ಭಾರತೀಯ ವಾಯು ಪಡೆಯ ನಿವೃತ್ತ ಗ್ರೌಂಡ್ ಟ್ರೈನಿಂಗ್ ಇನ್‌ಸ್ಟ್ರಕ್ಟರ್ ಸಾರ್ಜೆಂಟ್ ಪಿ ವಿ ಸುರೇಶನ್ (49) ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯಾಗಿದ್ದಾರೆ.

ಸುರೇಶನ್‌ ಅವರು ಪ್ರತಿ ತಿಂಗಳ ಮೊದಲ ದಿನದಂದು ಮಂಗಳೂರಿನ ಮಿಲಿಟರಿ ಕ್ಯಾಂಟೀನಿಗೆ ಭೇಟಿ ನೀಡುತ್ತಿದ್ದು, ಅದರಂತೆ ಫೆಬ್ರವರಿ 1 ರಂದು ನೀಲೇಶ್ವರದಿಂದ ಮಲಬಾರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದು ಬೆಳಗ್ಗೆ 10.15 ಕ್ಕೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಕಿಕ್ಕಿರಿದ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸಿದ್ದರಿಂದ ಬಳಲಿಕೆಯಿಂದ ಅಸ್ವಸ್ಥಗೊಂಡ ಕಾರಣ ವಿಶ್ರಾಂತಿಗಾಗಿ ನಿಲ್ದಾಣದ ಬೆಂಚಿನ ಮೇಲೆ ಮಲಗಿದ್ದರು.

ಕೆಲ ಹೊತ್ತಿನಲ್ಲಿ ಓರ್ವ ಪೊಲೀಸ್ ಅಧಿಕಾರಿ ಬಂದು ಅವರನ್ನು ಎಬ್ಬಿಸಿ ಅಲ್ಲಿ ಮಲಗಲು ಅನುಮತಿ ಇಲ್ಲ ಎಂದಿದ್ದರು. ಅದಕ್ಕೆ ಸುರೇಶನ್‌, ತಾನು ಮಾಜಿ ಸೈನಿಕನಾಗಿದ್ದು, ತೀವ್ರ ಅಸ್ವಸ್ಥಗೊಂಡಿದ್ದೇನೆ. ಹಾಗಾಗಿ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಹೇಳಿ ಮತ್ತೆ ಮಲಗಿದ್ದರು. ಅವರಿಗೆ ಮಲಗಿದಲ್ಲಿಯೇ ನಿದ್ದೆ ಬಂದಿತ್ತು. ಕೆಲ ಹೊತ್ತಿನ ಬಳಿಕ ಪೊಲೀಸ್‌ ಅಧಿಕಾರಿ ಬಂದು ಇಲ್ಲಿ ಯಾರೂ ನಿದ್ರಿಸುವಂತಿಲ್ಲ ಎಂದು ಹೇಳಿ ಮಲಗಿದ್ದ ಸುರೇಶನ್ ಅವರ ಕಾಲಿಗೆ ಲಾಟಿಯಿಂದ ಹೊಡೆದಿದ್ದಾರೆ. ಇದರಿಂದ ತೀವ್ರ ನೋವಿನಿಂದ ಎದ್ದು ನಡೆಯಲಾರದ ಸ್ಥಿತಿಗೆ ತಲುಪಿದ್ದರು.

ರಾತ್ರಿ ವೇಳೆ ಮನೆ ಮಂದಿಗೆ ಸುರೇಶನ್‌ ವಿಷಯ ತಿಳಿಸಿದ್ದು, ಬಳಿಕ ಮನೆಯವರ ಕೋರಿಕೆಯ ಮೇರೆಗೆ ರೈಲು ನಿಲ್ದಾಣದ ಅಧಿಕಾರಿಯೊಬ್ಬರು ಸುರೇಶನ್‌ ಅವರನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮರುದಿನ ಮನೆಯವರು ಬಂದು ಸುರೇಶನ್‌ ಅವರನ್ನು ನಿಲೇಶ್ವರಕ್ಕೆ ಕರೆದೊಯ್ದು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಕಾಲಿನಲ್ಲಿ ಊತ ಬಂದಿದ್ದು, ಕಿಡ್ನಿಗೂ ಅಪಾಯ ಸಾಧ್ಯತೆ ಇದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದರಿಂದ ಪುನ: ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎಡಕಾಲು ಸಂವೇದನೆ ಕಳೆದುಕೊಂಡಿರುವುದರಿಂದ ಫೆಬ್ರವರಿ 11 ರಂದು ಶಸ್ತ್ರ ಚಿಕಿತ್ಸೆಯ ಮೂಲಕ ಕಾಲನ್ನು ಕತ್ತರಿಸಲಾಗಿದೆ. ಇದೀಗ ಒಂದು ಕಾಲನ್ನು ಕಳೆದುಕೊಂಡಿರುವ ಅವರನ್ನು ವಾರ್ಡಿಗೆ ಸ್ಥಳಾಂತರಿಸಿದ್ದು, ಘಟನೆಯ ಬಗ್ಗೆ ಕೆಲವು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸುರೇಶನ್‌ ಮೇಲೆ ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಹೊಡೆದು ಗಾಯಗೊಳಿಸಲಾಗಿದೆ ಎಂಬುದಾಗಿ ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಘಟನೆಯ ಬಗ್ಗೆ ಇದೀಗ ಕೇರಳದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಪಿ ವಿ ಸುರೇಶನ್ ಅವರು ಬೆಳಗಾವಿಯ ಸಾಂಬ್ರಾದಲ್ಲಿರುವ ಏರ್‌ಮೆನ್ ಟ್ರೈನಿಂಗ್ ಸ್ಕೂಲ್‌ನಲ್ಲಿ ಗ್ರೌಂಡ್ ಟ್ರೈನಿಂಗ್ ಇನ್‌ಸ್ಟ್ರಕ್ಟರ್‌ ಆಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ 2014 ರಲ್ಲಿ ನಿವೃತ್ತರಾಗಿದ್ದರು.

Continue Reading

DAKSHINA KANNADA

ಸಂಕುಪೂಂಜ – ದೇವುಪೂಂಜ ಜೋಡುಕರೆ ಕಂಬಳ ‘ತಿರುವೈಲೋತ್ಸವ’ಕ್ಕೆ ಅದ್ದೂರಿ ಚಾಲನೆ

Published

on

ಮಂಗಳೂರು : ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ – ದೇವುಪೂಂಜ ಜೋಡುಕರೆ ಕಂಬಳ ಟ್ರಸ್ಟ್‌ನಿಂದ ತುಳುನಾಡಿನ ಕಂಬಳ ತಿರುವೈಲೋತ್ಸವಕ್ಕೆ ಇಂದು ಮುಂಜಾನೆ ಚಾಲನೆ ನೀಡಲಾಯಿತು.

ಬೆಳಿಗ್ಗೆ ಅಮೃತೇಶ್ವರ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆಯನ್ನು ನೆರವೇರಿಸಿದ ಬಳಿಕ ಧಾರ್ಮಿಕ ವಿಧಿವಿಧಾನಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಚೆಂಡೆ ಕೊಂಬು ಕಹಳೆಗಳ ಮೂಲಕ ಕ್ಷೇತ್ರದಲ್ಲಿ ಪೂಜೆ ಮಾಡಿದ ಬಳಿಕ ಮೆರವಣಿಗೆ ಮೂಲಕ ಕಂಬಳದ ಕರೆಗೆ ಆಗಮಿಸಿ ಅಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಯಿತು.

13ನೇ ವರ್ಷದ ತಿರುವೈಲೋತ್ಸವ ಜೋಡುಕರೆ ಉತ್ಸವವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು  ಜಿ ಆರ್ ಮೇಡಿಕಲ್‌ ಕಾಲೇಜು ಸ್ಥಾಪಕಾಧ್ಯಕ್ಷ ಗಣೇಶ್ ರಾವ್‌ ಉದ್ಘಾಟಿಸಿದರು.

ಇದನ್ನೂ ಓದಿ: ಈ ನಿಂಬೆ ಹಣ್ಣಿಗೆ 6 ಲಕ್ಷ ರೂಪಾಯಿ… ಅಂತಹದ್ದೇನಿದೆ ಇದರಲ್ಲಿ ಗೊತ್ತಾ..?

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮರಾಜ್‌ ಆರ್‌, ಪನಾಮಾ ಗ್ರೂಪ್‌ ಅಧ್ಯಕ್ಷ ವಿವೇಕ್‌, ತಿರುವೈಲು ಕಂಬಳೋತ್ಸವದ ಅಧ್ಯಕ್ಷ ನವೀನ್‌ಚಂದ್ರ ಆಳ್ವ, ಗೌರವಾಧ್ಯಕ್ಷ ಮಿಥುನ್‌ ರೈ, ಕಾರ್ಯಾಧ್ಯಕ್ಷ ಪ್ರವೀಣ್‌ ಚಂಧ್ರ ಆಳ್ವ , ಸ್ಥಾಪಕಾಧ್ಯಕ್ಷ ನವೀನ್ ಆಳ್ವ ಮೊದಲಾದವರಿದ್ದರು. ಕಂಬಳೋತ್ಸವ ವೀಕ್ಷಣೆಗೆ ಸಾಹಸ್ರಾದೋಪಾದಿಯಲ್ಲಿ ಆಸಕ್ತರು ಆಗಮಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page