Connect with us

DAKSHINA KANNADA

mangaluru: ಮುಳಿಹಿತ್ಲುವಿನಲ್ಲಿ ಕೊಲೆಯಾದ ಜಗ್ಗು ವಿಳಾಸ ಪತ್ತೆಗೆ ಪೊಲೀಸರ ಮನವಿ..!

Published

on

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ಲುವಿನಲ್ಲಿ  2 ದಿನಗಳ ಹಿಂದೆ ಕೊಲೆಯಾದ ಕಾರ್ಮಿಕ ಗಜ್ವಾನ್ ಯಾನೆ ಜಗ್ಗು ಎಂಬಾತನ ವಿಳಾಸ ಪತ್ತೆಗೆ ಪಾಂಡೇಶ್ವರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ಲುವಿನಲ್ಲಿ  2 ದಿನಗಳ ಹಿಂದೆ ಕೊಲೆಯಾದ ಕಾರ್ಮಿಕ ಗಜ್ವಾನ್ ಯಾನೆ ಜಗ್ಗು ಎಂಬಾತನ ವಿಳಾಸ ಪತ್ತೆಗೆ ಪಾಂಡೇಶ್ವರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಉತ್ತರ ಭಾರತ ಮೂಲದವನು ಎನ್ನಲಾದ ಈತನ ವಾರಸುದಾರರು ಯಾರು ಎಂಬುದು ಇದುವರೆಗೆ ಗೊತ್ತಾಗಿಲ್ಲ.

ಈತನನ್ನು ನಗರದಲ್ಲಿ ಗಜ್ವಾನ್ ಎಂದು ಕರೆಯಲಾಗುತ್ತಿತ್ತು. ಆದರೆ ಈತನ ನಿಜ ಹೆಸರೇನು ಎಂಬುದು ಕೂಡ ಯಾರಿಗೂ ತಿಳಿದಿಲ್ಲ.

ಸುಮಾರು 5.5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ದೃಢಕಾಯ ಶರೀರ, ಕಪ್ಪು ತಲೆ ಕೂದಲು, ಕುರುಚಲು ಗಡ್ಡ ಹೊಂದಿದ್ದ ಈತನ ಸಂಬಂಧಿಕರು ಅಥವಾ ಪರಿಚಯಸ್ಥರಿದ್ದರೆ ಪಾಂಡೇಶ್ವರ ಠಾಣೆಯನ್ನು (0824-2220518) ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕೊಲೆ ಆರೋಪಿ ಅಂಗಡಿ ಮಾಲಕ ತೌಸಿಫ್ ಹುಸೇನ್ ಮೂಲತಃ ಹಾಸನದ ಬೇಲೂರಿನವನಾಗಿದ್ದು, ನಗರದಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ತೌಸಿಫ್ ತನ್ನಲ್ಲಿ ಕೆಲಸಕ್ಕಿದ್ದ ಜಗ್ಗುರನ್ನು ಕರೆಂಟ್ ಶಾಕ್ ಕೊಟ್ಟು ಬರ್ಬರವಾಗಿ ಹತ್ಯೆ ಮಾಡಿದ್ದ.

ಆರೋಪಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

DAKSHINA KANNADA

ಅಕ್ರಮ ಪಿಸ್ತೂಲ್ ಸಹಿತ ಅಂತಾರಾಜ್ಯ ಕ್ರಿಮಿನಲ್ ಬಂಧನ

Published

on

ಮಂಗಳೂರು : ಎರಡು ದಿನಗಳ ಹಿಂದೆ ಎರಡು ದಿನಗಳ ಹಿಂದೆ ಕೊಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವರು ಡ್ರಗ್ ಮಾರಾಟಗಾರ ಬಂಧನವಾಗಿತ್ತು. ಅವರಿಂದ 3 ಪಿಸ್ತೂಲ್, 6 ಸಜೀವ ಮದ್ದುಗುಂ*ಡುಗಳನ್ನು, ಕಾರುಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳ ಬೆನ್ನು ಹತ್ತಿರುವ ಪೊಲೀಸರು, ಈ ಪೈಕಿ ಓರ್ವನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಬ್ದುಲ್ ಫೈಜಲ್.ಎಂ ಅಲಿಯಾಸ್ ಫೈಜು (26) ಬಂಧಿತ ಆರೋಪಿ. ಈತನನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಬಳಿಯ ಮೊರ್ತಾನಾ ಎಂಬಲ್ಲಿ ಮಾರ್ಚ್ 15 ರಂದು ಬಂಧಿಸಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲೇ ಅತೀ ದೊಡ್ಡ ಕಾರ್ಯಾಚರಣೆ; ಮಂಗಳೂರು ಸಿಸಿಬಿ ಪೊಲೀಸರಿಂದ ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನ

ಆತನಿಂದ 1 ಪಿಸ್ತೂಲ್, 1 ಸಜೀವ ಮದ್ದು ಗುಂಡು ಹಾಗೂ ಮೊಬೈಲ್ ಫೋನ್‌ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ 2,10,000 ರೂ. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿಯ ವಿರುದ್ಧ ಈ ಹಿಂದೆ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ಎರಡು ಹ*ಲ್ಲೆ ಪ್ರಕರಣಗಳು ದಾಖಲಾಗಿವೆ.

Continue Reading

DAKSHINA KANNADA

ರಾಜ್ಯದಲ್ಲೇ ಅತೀ ದೊಡ್ಡ ಕಾರ್ಯಾಚರಣೆ; ಮಂಗಳೂರು ಸಿಸಿಬಿ ಪೊಲೀಸರಿಂದ ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನ

Published

on

ಮಂಗಳೂರು :  ‘ಡ್ರಗ್ ಫ್ರೀ ಮಂಗಳೂರು’ ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಪಣ ತೊಟ್ಟಿದ್ದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದಲ್ಲೇ ಅತೀ ದೊಡ್ಡ ಡ್ರಗ್ಸ್ ಕಾರ್ಯಾಚರಣೆ ನಡೆಸಿದ್ದಾರೆ.  ಮಂಗಳೂರು ನಗರಕ್ಕೆ, ರಾಜ್ಯಕ್ಕೆ ಹಾಗೂ ಇತರ ರಾಜ್ಯಗಳಿಗೆ ಎಂಡಿಎಂಎ ಮಾ*ದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ದೇಶದ ವಿದೇಶಿ ಮಹಿಳಾ ಪ್ರಜೆಗಳಿಬ್ಬರನ್ನು ಬಂಧಿಸಿದ್ದಾರೆ.

ಬಾಂಬಾ ಫಾಂಟಾ ಅಲಿಯಾಸ್ ಅಡೋನಿಸ್ ಜಬುಲಿಲ್(31), ಅಬಿಗೈಲ್ ಅಡೋನಿಸ್(30) ಬಂಧಿತರು. ಇವರಿಂದ 75 ಕೋಟಿ ಮೌಲ್ಯದ 37.870 ಕೆಜಿ ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಿಂಗ್ ಪೆಡ್ಲರ್‌ಗಳ ಹಿಂದೆ ಬಿದ್ದ ಸಿಸಿಬಿ ಪೊಲೀಸ್ :

ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪಂಪ್ ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಉಳಿದುಕೊಂಡು ಮಾ*ದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿ ಹೈದರ್ ಅಲಿಯಾಸ್ ಹೈದರ್ ಅಲಿ ಎಂಬಾತನನ್ನು 2024 ರಲ್ಲಿ ದಸ್ತಗಿರಿ ಮಾಡಲಾಗಿತ್ತು. ಆತನಿಂದ 15 ಗ್ರಾಂ  ಎಂಡಿಎಂಎಯನ್ನು ಸ್ವಾಧೀನಪಡಿಸಿಕೊಂಡು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಡ್ರಗ್ ಪೆಡ್ಲರ್‌ಗಳನ್ನು ಪತ್ತೆ ಹಚ್ಚುವ ಸಲುವಾಗಿ ಪ್ರಕರಣದ ತನಿಖೆಯನ್ನು ಮಂಗಳೂರು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು.

ಮಂಗಳೂರು ಸಿಸಿಬಿ ಪೊಲೀಸರು ತನಿಖೆ ಕೈಗೊಂಡು ಪ್ರಕರಣದಲ್ಲಿ ಹೈದರ್ ಆಲಿ ಮತ್ತು ಇನ್ನಿತರ ವ್ಯಕ್ತಿಗಳಿಗೆ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿದ್ದ ಪ್ರಮುಖ ಡ್ರ*ಗ್ ಪೆಡ್ಲರ್ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ನೈಜೇರಿಯಾ ದೇಶದ ವಿದೇಶಿ ಪ್ರಜೆ ಪೀಟರ್ ಇಕೆಡಿ ಬೆಲೆನ್ವು ಎಂಬಾತನನ್ನು ದಸ್ತಗಿರಿ ಮಾಡಿ ಆತನಿಂದ 6.248 ಕೆಜಿ ಮಾದಕ ವಸ್ತುವಾದ ಎಂಡಿಎಂಎಯನ್ನು ಈ ಹಿಂದೆ ವಶಪಡಿಸಿಕೊಳ್ಳಲಾಗಿತ್ತು.

ಪೀಟರ್‌ಗೆ ಮಾದಕ ವಸ್ತುವನ್ನು ಪೂರೈಕೆ ಮಾಡುವ ಕಿಂಗ್ ಪಿನ್ ಡ್ರಗ್ಸ್ ಪೆಡ್ಲರ್‌ಗಳನ್ನು ಪತ್ತೆ ಹಚ್ಚುವ ಸಲುವಾಗಿ ಕಳೆದ 6 ತಿಂಗಳಿನಿಂದ ಮಂಗಳೂರು ಸಿಸಿಬಿ ಪೊಲೀಸರು ನಿರಂತರ ತನಿಖೆ ನಡೆಸಿದ್ದು, ಈ ಪ್ರಕರಣದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಹಾಗೂ ದೇಶದ ಇತರ ಕಡೆಗಳಿಗೆ ಮಾದಕ ವಸ್ತುವಾದ ಎಂಡಿಎಂಎಯನ್ನು ಬೃಹತ್ ಪ್ರಮಾಣದಲ್ಲಿ ವಿದೇಶಿ ಮಹಿಳಾ ಪ್ರಜೆಗಳು ವಿಮಾನದಲ್ಲಿ ಸಾಗಾಟ ಮಾಡುವ ಬಗ್ಗೆ  ಮಾಹಿತಿ ದೊರೆತಿದೆ.

ಬೆಂಗಳೂರಿನ ಡ್ರಗ್ ಪೆಡ್ಲರ್ ಪೀಟರ್‌ ಇಕೆಡಿ ಬೆಲೆನ್ವುಗೆ ಮಾದಕ ವಸ್ತುವನ್ನು ಸಾಗಾಟ ಮಾಡಿದ ಆರೋಪಿಗಳು ಮಾರ್ಚ್ 14 ರಂದು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಆರೋಪಿಗಳನ್ನು ದಸ್ತಗಿರಿ ಮಾಡಲು ಮಂಗಳೂರು ಸಿಸಿಬಿ ಪೊಲೀಸರ ತಂಡ ಬೆಂಗಳೂರಿಗೆ ತೆರಳಿದ್ದಾರೆ.

ಇದನ್ನೂ ಓದಿ : ಮಂಗಳೂರು: ಮಹಡಿಯಿಂದ ಬಿದ್ದು13 ವರ್ಷದ ಬಾಲಕ ಸಾ*ವು, ಪಬ್‌ಜಿ ಆಟದ ಬಗ್ಗೆ ಅನುಮಾನ..!

ದೆಹಲಿಯಿಂದ ವಿಮಾನದಲ್ಲಿ ಬಂದಿದ್ದ ದಕ್ಷಿಣ ಅಫ್ರಿಕಾ ದೇಶದ ಇಬ್ಬರು ಮಹಿಳಾ ಪ್ರಜೆಗಳನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರ ಎಂಬಲ್ಲಿ ವಶಕ್ಕೆ ಪಡೆದುಕೊಂಡರು. ಈ ವೇಳೆ ಅವರ ವಶದಲ್ಲಿದ್ದ ಎರಡು ಟ್ರಾಲಿ ಟ್ರಾವೆಲ್ ಬ್ಯಾಗ್ ನಲ್ಲಿ ಸಾಗಿಸುತ್ತಿದ್ದ 75 ಕೋಟಿ ಮೌಲ್ಯದ 37.878 ಕೆಜಿ ಮಾದಕ ವಸ್ತುವಾದ ಎಂಡಿಎಂಎ, 4 ಮೊಬೈಲ್ ಫೋನುಗಳು, ಟ್ರಾಲಿ ಬ್ಯಾಗ್ ಗಳು 2, ಪಾಸ್ ಪೋರ್ಟ್2, ನಗದು 18,460 ರೂ. ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ದೆಹಲಿಯಿಂದ ಮಾದಕ ವಸ್ತುವಾದ ಎಂಡಿಎಂಎಯನ್ನು ವಿಮಾನದಲ್ಲಿ ಬೆಂಗಳೂರು ಹಾಗೂ ಇತರ ಕಡೆಗಳಿಗೆ ಸಾಗಾಟ ಮಾಡಿಕೊಂಡು ನೈಜೇರಿಯನ್ ಪ್ರಜೆಗಳಿಗೆ ಹಾಗೂ ಇತರ ಜನರಿಗೆ ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಿಕೊಂಡು ಹಣವನ್ನು ಸಂಪಾದಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದರು  ಎಂಬುದು ತನಿಖೆ ವೇಳೆ ಬಯಲಾಗಿದೆ.

 

Continue Reading

DAKSHINA KANNADA

ಮಂಗಳೂರು: ಮಹಡಿಯಿಂದ ಬಿದ್ದು13 ವರ್ಷದ ಬಾಲಕ ಸಾ*ವು, ಪಬ್‌ಜಿ ಆಟದ ಬಗ್ಗೆ ಅನುಮಾನ..!

Published

on

ಮಂಗಳೂರು: ಐದನೇ ಮಹಡಿಯಿಂದು ಬಿದ್ದು 13 ವರ್ಷದ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಮಂಗಳೂರಿನ ಮೇರಿಹಿಲ್‌ನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

6ನೇ ತರಗತಿ ಓದುತ್ತಿದ್ದ ಸಮರ್ಜಿತ್(13) ಮೃತ ಬಾಲಕ. ಈ ಘಟನೆಯು ಶನಿವಾರ ಮುಂಜಾನೆ 5.30 ರಿಂದ 5.50 ರ ನಡುವೆ ನಡೆದಿದ್ದು, ಬಾಲಕನು ಮುಂಜಾನೆ ಯಾವೂದೋ ಕಾರಣಕ್ಕೆ ಅಪಾರ್ಟ್‌ಮೆಂಟ್‌ನ 5 ನೇ ಮಹಡಿಗೆ ಹೋಗಿದ್ದಾನೆ. ಅಲ್ಲಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಬಾಲಕನು ತನ್ನ ಪುಸ್ತಕದಲ್ಲಿ ಪಬ್‌ಜಿ ಆಟದ ಬಗ್ಗೆ ಬರೆದಿದ್ದು, ಈ ಸಾವಿನ ಕಾರಣವಾಗಿರಬಹುದೆಂದು ಅನುಮಾನ ವ್ಯಕ್ತವಾಗಿದೆ.

ಮೃತ ಬಾಲಕನ ತಂದೆ ಸುದೇಶ್ ಭಂಡಾರಿ ಉದ್ಯಮಿಯಾಗಿದ್ದು ಅಪಾರ್ಟ್‌ಮೆಂಟ್‌ನ 2ನೇ ಮಹಡಿಯಲ್ಲಿ ವಾಸವಾಗಿದ್ದರು. ಕಲಿಕೆಯಲ್ಲೂ ಮುಂದಿದ್ದ ಬಾಲಕನಿಗೆ ಈಜು ಹಾಗೂ ಕೀಬೋರ್ಡ್‌ ನುಡಿಸುವುದು ಸೇರಿದಂತೆ ಬೇರೆ ಬೇರೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿದ್ದನು. ಅಲ್ಲದೇ ಹಲವಾರು ಬಹುಮಾನಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದನು.

ಮಹಡಿಯಿಂದ ಬೀಳುವ ಒಂದು ಹಂತದ ವಿಡಿಯೋ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ಬಾಲಕನು ತಂದೆ-ತಾಯಿ ಹಾಗೂ ತಂಗಿಯನ್ನು ಅಗಲಿದ್ದಾನೆ. ಬಾಲಕನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page