Connect with us

DAKSHINA KANNADA

ಮಂಗಳೂರು ನಗರದಲ್ಲಿ ಮಕ್ಕಳ ರಕ್ಷಣಾ ಸಮಿತಿಯ ಕಾರ್ಯಾಚರಣೆ: ಭಿಕ್ಷಾಟನೆ ಮಾಡುತ್ತಿದ್ದ  ಎರಡು ಪುಟಾಣಿಗಳು, ಇಬ್ಭರು ಮಹಿಳೆಯರ ರಕ್ಷಣೆ..!

Published

on

ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿಗಳು ಇಂದು ಮಂಗಳೂರು ನಗರದ ಪ್ರಮುಖ ಜಂಕ್ಷನ್‌ ಗಳಲ್ಲಿ ಕಾರ್ಯಾಚರಣೆ ನಡೆಸಿ ಪುಟಾಣಿ ಮಕ್ಕಳನ್ನು ಹಿಡಿದುಕೊಂಡು ವಾಹನ ಚಾಲಕರ ಬಳಿ ಭಿಕ್ಷೆ ಬೇಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು : ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿಗಳು ಇಂದು ಮಂಗಳೂರು ನಗರದ ಪ್ರಮುಖ ಜಂಕ್ಷನ್‌ ಗಳಲ್ಲಿ ಕಾರ್ಯಾಚರಣೆ ನಡೆಸಿ ಪುಟಾಣಿ ಮಕ್ಕಳನ್ನು ಹಿಡಿದುಕೊಂಡು ವಾಹನ ಚಾಲಕರ ಬಳಿ ಭಿಕ್ಷೆ ಬೇಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಪಂಪ್‌ ವೆಲ್‌, ಪಿವಿಎಸ್‌,  ಲಾಲ್‌ಬಾಗ್‌ ಜಂಕ್ಷನ್‌ ಗಳಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಪೆನ್ನು, ಬಾಚಣಿಗೆ, ಕಾರ್‌ ಶೇಡ್‌ ಇತ್ಯಾದಿಗಳನ್ನು ಮಾರಾಟ ಮಾಡುತ್ತಿದ್ದ ಎರಡು ಮಕ್ಕಳು ಮತ್ತು ಇಬ್ಭರು ಮಹಿಳೆಯರನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.

ಮಂಗಳೂರು ನಗರದಲ್ಲಿ ಕೆಲವೊಂದು ಪ್ರಮುಖ ರಸ್ತೆಗಳ ಜಂಕ್ಷನ್‌ ಗಳಲ್ಲಿ ಸಣ್ಣ ಸಣ್ಣ ಮಕ್ಕಳನ್ನು ಹಿಡಿದುಕೊಂಡು ಕೆಲವು ಮಹಿಳೆಯರು ಭಿಕ್ಷಾಟನೆ ನಡೆಸುತ್ತಾ ವಾಹನ ಚಾಲಕ, ಮಾಲಕರಿಗೆ ಕಿರಿ ಕಿರಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ರಕ್ಷಣೆ ಮಾಡಲಾದ ಮಕ್ಕಳು ಮತ್ತು ಮಹಿಳೆಯರನ್ನು ಚಿಣ್ಣರ ತಂಗುದಾಣಕ್ಕೆ ಕೊಂಡೊಯ್ದು  ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ಎದುರು ಹಾಜರು ಪಡಿಸಲಾಗುವುದು ಎಂದು ಮಕ್ಕಳ ರಕ್ಷಣಾಧಿಕಾರಿ ಕುಮಾರ್‌ ಅವರು ಮಾಹಿತಿ ನೀಡಿದ್ದಾರೆ.

DAKSHINA KANNADA

ಕಾರ್ಕಳ: ಗೋಶಾಲೆಯಿಂದ 10,000 ರೂ. ಬೆಲೆಯ 3 ದನ ಕಳವು

Published

on

ಕಾರ್ಕಳ: ಗೋಶಾಲೆಯಿಂದ ಮೂರು ದನಗಳನ್ನು ಕಳವು ಮಾಡಿರುವ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿಯಲ್ಲಿ ನಡೆದಿದೆ.

 

ಬಜಗೋಳಿಯಲ್ಲಿ ಅಹಿಂಸಾ ಅನಿಮಲ್‌ ಕೇರ್‌ ಟ್ರಸ್ಟ್‌ ನಡೆಸುತ್ತಿರುವ ಗೋಶಾಲೆಯಿಂದ ಜೂನ್‌ 16ರಂದು ಮುಂಜಾನೆ 4 ಗಂಟೆ ಸುಮಾರಿಗೆ ಮೂರು ದನಗಳು ಕಳವಾಗಿವೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

READ IN ENGLISH : https://www.nammakudlaenglish.com/karkala-three-cows-worth-%e2%82%b910000-stolen-from-goshala/

ಇದನ್ನೂ ಓದಿ: ಮಂಗಳೂರು: ಭೀಕರ ಕಾರು ಅಪಘಾತದಲ್ಲಿ NSUI ಮುಖಂಡ ಸಹಿತ ಇಬ್ಬರು ಸಾವು

ಕಳವಾದ ದನಗಳ ಮೌಲ್ಯ ಸುಮಾರು 10 ಸಾವಿರ ರೂಪಾಯಿ ಆಗ ಬಹುದೆಂದು ಟ್ರಸ್ಟ್ ಸಂಚಾಲಕ ಎಂ.ಕೆ. ವಿರಂಜಯ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ. ಬಜಗೋಳಿಯಲ್ಲಿ ಅಹಿಂಸಾ ಅನಿಮಲ್‌ ಕೇರ್‌ ಟ್ರಸ್ಟ್‌ ಗೋಶಾಲೆಯನ್ನು ನಡೆಸುತ್ತಿದ್ದು, ಇಲ್ಲಿ ಗಾಯಗೊಂಡ, ಕಾಯಿಲೆಗೊಳಗಾದ, ಬೀದಿ ಪಾಲಾದ ಬೆಕ್ಕು, ನಾಯಿ ಮತ್ತು ದನಗಳನ್ನು ತಂದು ಆರೈಕೆ ಮಾಡಲಾಗುತ್ತಿದೆ ಎಂದು ಎಂ.ಕೆ. ವಿರಂಜಯ್‌ ವಿವರಿಸಿದ್ದಾರೆ.

Continue Reading

DAKSHINA KANNADA

ಮಂಗಳೂರು: ಭೀಕರ ಕಾರು ಅಪಘಾತದಲ್ಲಿ NSUI ಮುಖಂಡ ಸಹಿತ ಇಬ್ಬರು ಸಾವು

Published

on

ಮಂಗಳೂರು: ಕಾರೊಂದು ಡಿವೈಡರ್‌ ಗೆ ಢಿಕ್ಕಿ ಹೊಡೆದು ಇಬ್ಬರು ಯುವಕರು ಮೃತ ಪಟ್ಟ ದಾರುಣ ಘಟನೆ ಮಂಗಳೂರಿನ ಜಪ್ಪಿನಮೊಗರು ನಡು ಮೊಗೇರ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿನ್ನೆ (ಜೂ.17) ರಾತ್ರಿ ಸಂಭವಿಸಿದೆ.

ಕದ್ರಿ ಮಲ್ಲಿಕಟ್ಟೆಯ ನಿವಾಸಿ ಅಮನ್ ರಾವ್‌ (23) ಮತ್ತು ಕೊಂಚಾಡಿಯ ಓಂ ಶ್ರೀ ಪೂಜಾರಿ (24) ಮೃತ ಯುವಕರು ಎಂದು ಗುರುತಿಸಲಾಗಿದೆ. ಕಾರು ಡಿವೈಡರಿಗೆ ಢಿಕ್ಕಿಯಾಗಿ ಬಳಿಕ ಮೋರಿಗೆ ಬಡಿದು ಅವಘಡ ಸಂಭವಿಸಿದೆ.

ಓಂ ಶ್ರೀ ಪೂಜಾರಿ ಅವರು ಎನ್.ಎಸ್.ಯು.ಐ. ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿದ್ದರು. ಕಾರಿನಲ್ಲಿ 4- 5 ಮಂದಿ ಪ್ರಯಾಣಿಸುತ್ತಿದ್ದು, ಅಮನ್ ರಾವ್‌ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ತಲಪಾಡಿ ಕಡೆಯಿಂದ ಪಂಪ್‌ವೆಲ್‌ ಕಡೆಗೆ ಬರುತ್ತಿದ್ದ ಕಾರು ಜಪ್ಪಿನಮೊಗರು ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಮುಂದೆ ಧರೆಗುರುಳಿದ ಬೃಹತ್ ಮರ

ವಂಶಿ ಮತ್ತು ಅಶಿಕ್‌ಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಐಸಿಯುವಿನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೊಬ್ಬ ಗೆಳೆಯ ಇಟಲಿ ಮೂಲದ ಜೆರ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಟ್ರಾಫಿಕ್‌ ದಕ್ಷಿಣ ಠಾಣೆಯ ಪೊಲೀಸರು ಕೇಸ್ ದಾಖಲಿಸಿದ್ದಾರೆ.

Continue Reading

DAKSHINA KANNADA

ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ದಶಮಾನೋತ್ಸವ

Published

on

ಮಂಗಳೂರು/ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಜೂನ್ 29 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ದುಬೈ ಘಟಕದ ಸಹಯೋಗದೊಂದಿಗೆ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ತಿಳಿಸಿದ್ದಾರೆ.


ದಶಮ ಸಂಭ್ರಮದ ಪ್ರಯುಕ್ತ ಯುಎಇಯ ಏಳು ಮಂದಿ ಸಾಧಕರಿಗೆ ಮತ್ತು ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಸಂಘಟನೆ ಕ್ಷೇತ್ರದಲ್ಲಿ ಸರ್ವೋತ್ತಮ ಶೆಟ್ಟಿ, ಕಲಾ ಪೋಷಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮ ಕ್ಷೇತ್ರದಲ್ಲಿ ಪುತ್ತಿಗೆ ವಾಸುದೇವ ಭಟ್, ಸಮಾಜ ಸೇವಾ ಕ್ಷೇತ್ರದಲ್ಲಿ ಬಾಲಕೃಷ್ಣ ಸಾಲಿಯಾನ್, ಮಾಧ್ಯಮ ಕ್ಷೇತ್ರದ ಬಿ. ಕೆ. ಗಣೇಶ ರೈ, ನಾಟಕ ಕ್ಷೇತ್ರದಲ್ಲಿ ಡೋನಿ ಕೊರೆಯಾ, ಭರತನಾಟ್ಯ ಕ್ಷೇತ್ರದಲ್ಲಿ ರೂಪ ಕಿರಣ್ ಹಾಗೂ ಶ್ರೀ ರಾಜರಾಜೇಶ್ವರಿ ಭಜನಾ ತಂಡ, ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯನ್ನು ಗೌರವಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page