Connect with us

DAKSHINA KANNADA

ಸುಪ್ರೀಂ ಆದೇಶ ಬೆನ್ನಲ್ಲೇ ಶ್ವಾನಗಳಿಗೆ ಪ್ರತ್ಯೇಕ ಆಹಾರ ಕೇಂದ್ರ ತೆರೆದ ಎನ್ಎಂಪಿಎ..!

Published

on

ಮಂಗಳೂರು: ಇತ್ತೀಚೆಗೆ ಬೀದಿ ನಾಯಿಗಳ ಹಾವಳಿಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆ ದೇಶದ ಎಲ್ಲೆಡೆ ಬೀದಿ ಶ್ವಾನಗಳಿಗೆ ಪ್ರತ್ಯೇಕ ಆಹಾರ ನೀಡುವ ವ್ಯವಸ್ಥೆ ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ  ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರಿನ ನವಮಂಗಳೂರು ಬಂದರು ಪ್ರಾಧಿಕಾರ ಶ್ವಾನಗಳ ಆಹಾರಕ್ಕಾಗಿಯೇ ಪ್ರತ್ಯೇಕ ಸ್ಥಳವನ್ನು ಗುರುತಿಸಿ ಆದೇಶವನ್ನು ಅನುಷ್ಠಾನಗೊಳಿಸಿದೆ. ಈ ಮೂಲಕ ಸರ್ಕಾರಿ ಆಡಳಿತದ ಕಂಪನಿಯೊಂದು ಮಾನವೀಯತೆ ಮೆರೆದು ಸಾರ್ವಜನಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಇತರರಿಗೆ ಪ್ರೇರಣೆ ಎನಿಸಿಕೊಂಡಿದೆ. ಎನ್‌ಎಂಪಿಎ ಒಳಗೆ ಶ್ವಾನಗಳಿಗೆ ಆಹಾರ ವಲಯ ಸ್ಥಾಪಿಸಲಾಗಿದೆ. ಒಳ ಆವರಣದ ಆರೇಳು ಕಡೆ ಹಾಗೂ ಟೌನ್‌ಶಿಪ್‌ನ 20 ಕಡೆಗಳಲ್ಲಿ ಶ್ವಾನಗಳಿಗೆ ಆಹಾರ ವಲಯ ಗುರುತಿಸಲಾಗಿದೆ. ಈ ಎಲ್ಲ ಕಡೆಗಳಲ್ಲೂ ಪ್ರತ್ಯೇಕವಾಗಿಯೇ ಶ್ವಾನಗಳಿಗೆ ಆಹಾರ ನೀಡಲಾಗುತ್ತಿದೆ.

ಎನ್‌ಎಂಪಿಎಯ ಆವರಣದಲ್ಲಿ ಶ್ವಾನಪ್ರಿಯರು ಮಾತ್ರವಲ್ಲ ಭದ್ರತೆ ಹೊಣೆ ಹೊತ್ತಿರುವ ಕೇಂದ್ರ ಕೈಗಾರಿಕಾ ಭದ್ರತಾಪಡೆ ಸಿಬ್ಬಂದಿ ಕೂಡ ಆಹಾರ ಪೂರೈಸುತ್ತಿದ್ದಾರೆ. ನಿತ್ಯವೂ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆ ಶ್ವಾನಗಳಿಗೆ ಆಹಾರ ನೀಡಲಾಗುತ್ತಿದೆ. ಅದಕ್ಕೆಂದೇ ಪ್ರತ್ಯೇಕ ಶೆಡ್‌ ನಿರ್ಮಿಸಲಾಗಿದ್ದು, ನೀರಿಗೆ ಹಾಗೂ ಆಹಾರಕ್ಕೆ ಪಾತ್ರೆ ಇರಿಸಲಾಗಿದೆ. ಹೀಗಾಗಿ ಇಲ್ಲಿ ಆಹಾರ ಪೋಲಾಗುವುದು, ಎಲ್ಲೆಂದರಲ್ಲಿ ಎಸೆಯುವುದು, ಆಹಾರಕ್ಕಾಗಿ ಶ್ವಾನಗಳ ಕಿತ್ತಾಟ, ಓಡಾಟ, ಕಲಹಗಳು ಏರ್ಪಡದೆ ತಮ್ಮ ಪಾಡಿಗೆ ಶ್ವಾನಗಳು ಇರುವಂತಾಗಿದೆ.

ಸುಪ್ರೀಂ ಕೋರ್ಟ್‌ ಆದೇಶವನ್ನು ತಕ್ಷಣದಲ್ಲಿ ಅನುಷ್ಠಾನಿಸುವಲ್ಲಿ ಎನ್‌ಎಂಪಿಎ ನಿರ್ಗಮನ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ವಿಶೇಷ ಮುತುವರ್ಜಿ ವಹಿಸಿದ್ದು ಸಾರ್ವಜನಿಕರು ಕೂಡಾ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  ಮುಂದಿನ ದಿನಗಳಲ್ಲಿ ಶ್ವಾನಗಳಿಗೆ ಕಾಯಂ ಆಗಿ ಆಹಾರ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಶ್ವಾನಗಳ ಆರೈಕೆ ಜವಾಬ್ದಾರಿಯನ್ನು ಮಂಗಳೂರಿನ ಶಕ್ತಿನಗರದಲ್ಲಿರುವ ಅನಿಮಲ್‌ ಕೇರ್‌ ಟ್ರಸ್ಟ್‌ ನೋಡಿಕೊಳ್ಳುತ್ತಿದೆ. ಈ ಟ್ರಸ್ಟ್‌ ಜೊತೆ ಎನ್‌ಎಂಪಿಎ ಒಪ್ಪಂದ ಕೂಡ ಮಾಡಿಕೊಂಡಿದೆ.

ಶ್ವಾನ ಸೇರಿದಂತೆ ಯಾವುದೇ ಪ್ರಾಣಿಗಳಿಗೆ ಅಪಘಾತವಾದರೆ, ಅದನ್ನು ರಕ್ಷಿಸಲು ಎನ್‌ಎಂಪಿಎ ಬೊಲೆರೋ ವಾಹನವನ್ನು ಉಚಿತವಾಗಿ ನೀಡಿದೆ. ಇದಲ್ಲದೆ ಬೀದಿಯಲ್ಲಿ ಅಲೆಯುವ ಗೋವುಗಳಿಗೂ ಎನ್‌ಎಂಪಿಎ ಗೋಶಾಲೆ ತೆರೆದಿದ್ದು, ಕಳೆದ 8 ತಿಂಗಳಿಂದ ಕಾರ್ಯನಿರ್ವಹಿಸುತ್ತಿದೆ. ಸುಮಾರು 60 ಗೋವುಗಳು ಇಲ್ಲಿವೆ. ಹಾಸನದಿಂದ ಗೋಶಾಲೆಗೆ ಪಶು ಆಹಾರ ಪೂರೈಕೆಯಾಗುತ್ತಿದೆ. ಇಂತಹ ಸಾಮಾಜಿಕ ಸೇವೆಗಳಿಂದ ಈ ಕಂಪೆನಿ ಕರಾವಳಿಯಲ್ಲಿ ಮತ್ತಷ್ಟು ಖ್ಯಾತಿಯನ್ನು ಗಳಿಸುತ್ತಿದೆ.

 

 

DAKSHINA KANNADA

ಡಿ. 13, 14 ರಂದು ಮಂಗಳೂರಿನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ

Published

on

ಮಂಗಳೂರು: ಮಂಗಳೂರಿನ ಮದರ್ ತೆರೆಸಾ ವಿಚಾರ ವೇದಿಕೆ ಮತ್ತು ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್‌ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 13 ಮತ್ತು 14 ರಂದು ಕದ್ರಿ ಪಾರ್ಕ್‌ ನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವವನ್ನು ಆಯೋಜಿಸಲಾಗಿದೆ.

ಎರಡು ದಿನಗಳ ಈ ಉತ್ಸವದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ಮಧ್ಯಾಹ್ನ 2.30 ರಿಂದ ರಾತ್ರಿ 9.30 ರ ತನಕ ನಡೆಯಲಿವೆ ಎಂದು ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ರಿಸ್ಮಸ್‌ ಖೇಲ್‌ ಸ್ಪರ್ಧೆಗಳು, ಕ್ರಿಸ್ಮಸ್ ಕ್ಯಾರಲ್‌ಗಳ ಗಾಯನ ಸ್ಪರ್ಧೆ, ಕೇಕ್ ಸ್ಪರ್ಧೆ, ಸ್ಟಾರ್ ಸ್ಪರ್ಧೆ, ವೈನ್‌ ಮೇಳ, ಆಹಾರ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇದನ್ನೂ ಓದಿ: ‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಕ್ಯಾಥೊಲಿಕದ ಸಭಾ ಅಧ್ಯಕ್ಷ ಸಂತೋಷ್ ಡಿ’ಸೋಜಾ, ಕಾರ್ಯಕ್ರಮದ ಸಂಚಾಲಕ ಸ್ಟ್ಯಾನಿ ಲೋಬೊ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Continue Reading

DAKSHINA KANNADA

‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

Published

on

ಮಂಗಳೂರು: ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್‌ ಪ್ರಯುಕ್ತ “ನಶೆ ಮುಕ್ತ ಮಂಗಳೂರು’  ಅಭಿಯಾನವನ್ನು 102 ಕಾರ್ಯಕ್ರಮಗಳ ಸಹಿತ ಬ್ರಹತ್ ಮಟ್ಟದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಪೌಂಡೇಶನ್‌ನ ಸುಹೈಲ್ ಕಂದಕ್ ತಿಳಿಸಿದ್ದಾರೆ.

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅಭಿಯಾನದ ಉದ್ಘಾಟನೆಯನ್ನು ಸ್ಪೀಕರ್ ಯು ಟಿ ಖಾದರ್ ನೆರವೇರಿಸುವರು. ಸಂಸದ ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಚ್ ವಿ ದರ್ಶನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿರುತ್ತಾರೆ ಎಂದರು.

ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅಭಿಯಾನವನ್ನು ಆಯೋಜಿಸುತ್ತಿದ್ದು ಇದರ ಅಂಗವಾಗಿ ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಹಲವು ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ಎಸಿಪಿ ರವೀಶ್ ನಾಯಕ್, ಕಾಂಗ್ರೆಸ್ ನಾಯಕ ವಿಕಾಸ್ ಶೆಟ್ಟಿ, ಬಾರ್ನ್ ಅಗೇನ್ ರಿಕವರಿ ಸೆಂಟರ್, ಬೀನಾ ಸಲ್ದಾನ ಮೊದಲಾದವರಿದ್ದರು.

 

Continue Reading

DAKSHINA KANNADA

ಬಂಟ್ವಾಳ : ವೆಲಂಕಣಿ ಮಾತೆ ದೇವಾಲಯ ಫರ್ಲ: ವಾರ್ಷಿಕ ಮಹೋತ್ಸವ

Published

on

ಬಂಟ್ವಾಳ : ವೆಲಂಕಣಿ ಮಾತೆ ದೇವಾಲಯ ಫರ್ಲ ಇದರ ವಾರ್ಷಿಕ ಮಹೋತ್ಸವ ನಡೆಯಿತು. ದಿವ್ಯ ಬಲಿ ಪೂಜೆಯ ಪ್ರಧಾನ ಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜ, ವ್ಯಕ್ತಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಪ್ರೀತಿ, ತ್ಯಾಗ ಮತ್ತು ಏಕತೆಯೊಂದಿಗೆ ದೇವರ ಅನುಗ್ರಹವು ಬೇಕು. ಇದಕ್ಕಾಗಿ ಪ್ರತಿದಿನ ಮಾತೆ ಮರಿಯಮ್ಮನ ಜಪಮಾಲೆಯನ್ನು ಪಠಿಸುವುದರಿಂದ  ಇದನ್ನು ಗಳಿಸಬಹುದು ಎಂದರು.

ಬಂಟ್ವಾಳ ವಲಯದ ಹಾಗೂ ಪಾಲಟಾಯ್ನ್ ಸಭೆಯ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ : ಕಾವ್ಯಾ ನಾಮಿನೇಟ್ ಮಾಡಿದ್ಯಾರನ್ನ ಗೊತ್ತಾ!? ರಣರಂಗವಾಯ್ತು ‘ಬಿಗ್’ ಮನೆ

ಫರ್ಲಾ ಧರ್ಮಕೇಂದ್ರದ ಧರ್ಮಗುರು ವಂದನೀಯ  ಮಾರ್ಕ್ ಅರುಣ್ ಡಿಸೋಜ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಹಾಗೂ ಹಾಗೂ ಗೌರವಾರ್ಥವಾಗಿ ಆಶೀರ್ವದಿಸಿದ ಮೇಣದ ಬತ್ತಿಯನ್ನು ವಿತರಿಸಲಾಯಿತು. ಊರ, ಪರವೂರ  ಅನೇಕ ಭಕ್ತರು ಭಾಗವಹಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page