Connect with us

DAKSHINA KANNADA

Mangaluru: ಎಂಡಿಎಂಎ ಮಾರಾಟ ಮಾಡುತ್ತಿದ್ದ ಯುವಕ ಬಂಧನ..!

Published

on

ಮಂಗಳೂರು: ಮಂಗಳೂರು ನಗರದ ಬೆಂದೂರ್‌ವೆಲ್ ಪರಿಸರದಲ್ಲಿ  ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ನಿಷೇಧಿತ ಡ್ರಗ್ಸ್ ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ  ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸುಳ್ಯ ಅಜ್ಜಾವರದ ನಿವಾಸಿ, ನಗರದ ಕಾಲೇಜೊಂದರ ವಿದ್ಯಾರ್ಥಿ ಲುಕುಮಾನುಲ್ ಹಕೀಂ (22) ಬಂಧಿತ ಆರೋಪಿ.

ಆರೋಪಿಯ ವಶದಿಂದ 1.25 ಲಕ್ಷ ರೂ. ಮೌಲ್ಯದ 25 ಗ್ರಾಂ ಎಂಡಿಎಂಎ, ಮೊಬೈಲ್ ಪೋನ್, ಡಿಜಿಟಲ್ ತೂಕ ಮಾಪನ ಸಹಿತ ಒಟ್ಟು 1.60 ಲ.ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

ಈ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರು ಅನುಪಮ್ ಅಗರ್ ವಾಲ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯವರು ನಡೆಸಿದ್ದಾರೆ.

BANTWAL

ಬಸ್ ಡ್ರೈವರ್ ಹಾಗೂ ಕಂಡಕ್ಟರ್‌ಗೆ ಬೆದರಿಕೆ; ಪ್ರಕರಣ ದಾಖಲು

Published

on

ಬಂಟ್ವಾಳ : ಬಸ್‌ ತಿರುಗಿಸುವ ವಿಚಾರದಲ್ಲಿ ಖಾಸಗಿ ಬಸ್‌ನ್ನು ತಡೆದ ತಂಡವೊಂದು ಡ್ರೈವರ್ ಹಾಗೂ ಕಂಡಕ್ಟರ್‌ನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ಕರಿಯಂಗಳ ಗ್ರಾಮದ ಪಲ್ಲಿಪಾಡಿಯಲ್ಲಿ ನಡೆದಿತ್ತು.

ಎ.21 ರಂದು ರಾತ್ರಿ 7.40 ರ ಸುಮಾರಿಗೆ ಬಸ್‌ ಪೊಳಲಿ-ಕೊಳತ್ತಮಜಲು ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ ಬಸ್‌ ತಿರುಗಿಸುವ ವಿಚಾರದಲ್ಲಿ ಆರೋಪಿಗಳಾದ ಉಮೇಶ ಶೆಟ್ಟಿ, ವಿಜಯ, ಕಿಶೋರ, ಪ್ರಶಾಂತ್‌ ಹಾಗೂ ಇತರರು ತಕರಾರು ತೆಗೆದಿದ್ದಾರೆ.

ಗಲಾಟೆ ಮಾಡಿ ಬಳಿಕ ಆರೋಪಿಗಳು ಪಲಾಯನಗೈದಿದ್ದಾರೆ. ಬಳಿಕ ಬಸ್‌ ಕಂಟಕ್ಟರ್ ಅಭಿಜಿತ್‌ ಶೆಟ್ಟಿ ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಮಂಗಳೂರಿನಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಮೂವರು ಅರೆಸ್ಟ್

Published

on

ಮಂಗಳೂರು : ಕಾವೂರು ನಗರ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಮಂಗಳವಾರ (ಏ.23) ರಾತ್ರಿ ಸುಮಾರು 12:30ಕ್ಕೆಕಾವೂರು ಪೊಲೀಸರು ಬಂಧಿಸಿದ್ದಾರೆ.

ಫರಂಗಿಪೇಟೆಯ ಫಾಝ್ (24), ಕೇರಳ ತ್ರಿಶ್ಶೂರಿನ ಅರಟ್ಟುಪರಂಬಿಲ್‌ನ ಶರೀಫ್ ಎ.ಎಸ್. (25), ಸುಳ್ಯ ಗಾಂಧಿನಗರದ ಅಶ್ರಫ್ (24) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಕಾವೂರು ನಗರ ಇನ್‌ಸ್ಪೆಕ್ಟರ್ ರಾಘವೇಂದ್ರ ಎಂ.ಬೈಂದೂರು ನೇತೃತ್ವಲ್ಲಿ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಓಡಿ ತಪ್ಪಿಸಲು ಯತ್ನಿಸಿದ್ದರು. ತಕ್ಷಣ ಪೊಲೀಸರು ಹಿಡಿದು ವಿಚಾರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಫಾಝ್ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿದ್ದ ಎನ್ನಲಾಗಿದೆ.

ಬಂಧಿತ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ‌ ಫಾಝ್ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Continue Reading

DAKSHINA KANNADA

ಉಳ್ಳಾಲ ದರ್ಗಾ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮ; ರಸ್ತೆ ಸಂಚಾರದಲ್ಲಿ ಬದಲಾವಣೆ

Published

on

ಮಂಗಳೂರು: ದಿನಾಂಕ 24-04-2025 ರಿಂದ 18-05-2025ರವರೆಗೆ ಉಳ್ಳಾಲ ದರ್ಗಾದ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮವು ನಡೆಯಲಿದ್ದು, ನೇತ್ರವಾತಿ ಹಳೆಯ ಸೇತುವೆಯ ದುರಸ್ಥಿ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.

ಹೀಗಾಗಿ ಸದರಿ ದಿನಾಂಕಗಳಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ವಾಹನಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ವಾಹನಗಳ ಸಂಚಾರಕ್ಕೆ ನಿಗದಿಪಡಿಸಲಾದ ಮಾರ್ಗಗಳ ವಿವರ ಹೀಗಿದೆ:

  • ಮೆಲ್ಕಾರು ಜಂಕ್ಷನ್ (ರಾಷ್ಟ್ರೀಯ ಹೆದ್ದಾರಿ-75): ಪುತ್ತೂರು/ ಬಂಟ್ವಾಳ/ ಬೆಳ್ತಂಗಡಿ/ ಬಿ.ಸಿ.ರೋಡ್ ಕಡೆಯಿಂದ ಕೇರಳಕ್ಕೆ ಹೋಗುವ ಮತ್ತು ತೊಕ್ಕೊಟ್ಟು, ಉಳ್ಳಾಲ ಹಾಗೂ ಉರೂಸ್ ಕಾರ್ಯಕ್ರಮಕ್ಕೆ ಬರುವ/ಹೋಗುವ ಸಾರ್ವಜನಿಕರ ವಾಹನಗಳಿಗೆ ಮೆಲ್ಕಾರು ಜಂಕ್ಷನ್‌ನಲ್ಲಿ ತಿರುವು ಪಡೆದು- ಬೊಳ್ಯಾರ್ – ಮುಡಿಪು – ಕೊಣಾಜೆ – ತೊಕ್ಕೊಟ್ಟು ಮೂಲಕ ಸಂಚರಿಸಬಹುದಾಗಿದೆ.
  • ಅಡ್ಯಾರು ಕಟ್ಟೆ (ರಾಷ್ಟ್ರೀಯ ಹೆದ್ದಾರಿ-73); ಫರಂಗಿಪೇಟೆ, ತುಂಬೆ, ಅಡ್ಯಾರು ಕಡೆಯಿಂದ ಕೇರಳಕ್ಕೆ ಹೋಗುವ ಮತ್ತು ತೊಕ್ಕೊಟ್ಟು, ಉಳ್ಳಾಲ ಹಾಗೂ ಉರೂಸ್ ಕಾರ್ಯಕ್ರಮಕ್ಕೆ ಬರುವ/ಹೋಗುವ ಕಾರು/ದ್ವಿ-ಚಕ್ರ ವಾಹನಗಳು ಅಡ್ಯಾರು ಕಟ್ಟೆ (ಬೊಂಡಾ ಫ್ಯಾಕ್ಟರಿ) ರಸ್ತೆಯಾಗಿ- ಹರೇಕಳ ಸೇತುವೆ – ಗ್ರಾಮಚಾವಡಿ ನ್ಯೂಪಡ್ಪು – ತೊಕ್ಕೊಟ್ಟು ಮೂಲಕ ಸಂಚರಿಸಬಹುದಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page