Connect with us

BELTHANGADY

ಮಂಗಳೂರು: ಬಸ್ಸುಗಳ ಅತೀ ವೇಗಕ್ಕೆ ಕಡಿವಾಣ ಹಾಕಿಸಿ – ಶಾಸಕ ಭರತ್ ಶೆಟ್ಟಿಗೆ ಸ್ಥಳೀಯರ ಮನವಿ

Published

on

ಮಂಗಳೂರು – ಮೂಡುಬಿದಿರೆಯ ರಾಷ್ಟ್ರೀಯ ಹೆದ್ದಾರಿ 169 ಮರಣದ ರಸ್ತೆಯಾಗಿ ಮಾರ್ಪಟ್ಟಿದೆ. ಇಲ್ಲಿನ ಹೆದ್ದಾರಿ ಕಾಮಗಾರಿ ಆರಂಭಗೊಂಡಿದ್ದು, ಟಿಪ್ಪರ್ ಹಾಗೂ ಬಸ್ಸು ಚಾಲಕರು ಧಾವಂತದಿಂದ ವಾಹನಗಳನ್ನು ಓಡಿಸುವುದರಿಂದ ರಸ್ತೆ ದುರಂತಗಳು ಹೆಚ್ಚಾಗಿದೆ.

ಮಂಗಳೂರು: ಮಂಗಳೂರು – ಮೂಡುಬಿದಿರೆಯ ರಾಷ್ಟ್ರೀಯ ಹೆದ್ದಾರಿ 169 ಮರಣದ ರಸ್ತೆಯಾಗಿ ಮಾರ್ಪಟ್ಟಿದೆ. ಇಲ್ಲಿನ ಹೆದ್ದಾರಿ ಕಾಮಗಾರಿ ಆರಂಭಗೊಂಡಿದ್ದು, ಟಿಪ್ಪರ್ ಹಾಗೂ ಬಸ್ಸು ಚಾಲಕರು ಧಾವಂತದಿಂದ ವಾಹನಗಳನ್ನು ಓಡಿಸುವುದರಿಂದ ರಸ್ತೆ ದುರಂತಗಳು ಹೆಚ್ಚಾಗಿದೆ.

ಜೂನ್‌ 5ರಂದು ಎಡಪದವಿನಲ್ಲಿ ಬೈಕ್‌ ಸವಾರನೊಬ್ಬ ಬಸ್ಸು ಚಾಲಕನ ಧಾವಂತಕ್ಕೆ ಬಲಿಯಾಗಿದ್ದರೆ, ಕೆಲವು ದಿನಗಳ ಹಿಂದೆ ಕೂಡಾ ರಸ್ತೆ ಅಪಘಾತ ನಡೆದು ವ್ಯಕ್ತಿಯೊಬ್ಬರು ಬಲಿಯಾಗಿದ್ದರು.

ಇದಕ್ಕೆ ಬಸ್ಸು ಚಾಲಕರ ಅತಿವೇಗ, ನಿರ್ಲಕ್ಷ್ಯತನದ ಚಾಲನೆಯೇ ಇದಕ್ಕೆ ಕಾರಣವಾಗಿದ್ದು, ಕೂಡಲೇ ಪೊಲೀಸರು ಇಂತಹ ನಿಯಮಗಳನ್ನು ಉಲ್ಲಂಘಿಸುವ ಬಸ್ಸು ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಡಪದವಿನಲ್ಲಿ ಸ್ಥಳೀಯರ ನಾಗರಿಕರು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮೂಡುಬಿದಿರೆ ಪೊಲೀಸ್‌ ಠಾಣಾಧಿಕಾರಿಗಳಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಬೆಳಿಗ್ಗೆ ಎಡಪದವಿನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಸ್ಥಳೀಯರು ಜಮಾಯಿಸಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.

ಬಸ್ಸು ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಬಳಿಕ ಘಟನಾ ಸ್ಥಳಕ್ಕೆ ಬಂದ ಠಾಣಾಧಿಕಾರಿ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ಭರತ್‌ ಶೆಟ್ಟಿ ಅವರು ಪ್ರತಿಭಟನಾನಿರತರಲ್ಲಿಗೆ ಆಗಮಿಸಿ ಅಹವಾಲು ಸಲ್ಲಿಕೆ ಮಾಡಿದರು.

ಅವರಿಗೂ ಸ್ಥಳೀಯರು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಭರತ್‌ ಶೆಟ್ಟಿ, ಇಲ್ಲಿ ಯಾವುದೇ ಅನಾಹುತ ನಡೆಯದಂತೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ.

ಇದಕ್ಕೆ ಸರಿಯಾದ ಉತ್ತರವನ್ನು ಜಿಲ್ಲಾಡಳಿತ ಹಾಗೂ ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕೆ ಒತ್ತಡ ಹಾಕಲಾಗುವುದು ಎಂದರು.

BELTHANGADY

ಪುರುಷ ಕಟ್ಟುವ ನೆಪದಲ್ಲಿ ಮುಸ್ಲಿಂ ವೇಷ ಧರಿಸಿ ಇಸ್ಲಾಂ ಧರ್ಮಕ್ಕೆ ಅವಮಾನ; ಪ್ರಕರಣ ದಾಖಲು

Published

on

ಬೆಳ್ತಂಗಡಿ : ‘ಪುರುಷ ಕಟ್ಟುವ’ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಂ ವೇಷ ಧರಿಸಿ ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್‌ (ಸ.ಅ) ಮತ್ತು ಪವಿತ್ರವಾದ ಅಝಾನ್‌ ಅನ್ನು ಅವಹೇಳನ ಮಾಡಿದ ಘಟನೆ ಬೆಳ್ತಂಗಡಿಯ ಪೆರಾಡಿ ಗ್ರಾಮದಲ್ಲಿ ನಡೆದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 17 ಮಂದಿ ಆರೋಪಿಗಳ ವಿರುದ್ಧ ಹಾಗೂ ಇದಕ್ಕೆ ಸಹಕರಿಸಿದ ಇತರ 20 ರಿಂದ 30 ಮಂದಿಯ ವಿರುದ್ಧ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇಣೂರು ಪೊಲೀಸ್ ಠಾಣೆಯಲ್ಲಿ ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ಮನೆ ನಿವಾಸಿ ಮಹಮ್ಮದ್ ರಫೀಕ್ ನೀಡಿರುವ ದೂರಿನಂತೆ ಆರೋಪಿಗಳಾದ ಸಾವ್ಯ ನಿವಾಸಿಗಳಾದ ವಸಂತ, ರಾಜೇಶ್, ಹರೀಶ್, ಪೆರಾಡಿ ನಿವಾಸಿಗಳಾದ ದಯಾನಂದ, ರಂಗನಾಥ ಮೋಹನ್, ಶಮಿತ್, ರವಿ, ರಮೇಶ್ ಕುಲಾಲ್, ಸುರೇಶ್, ಅಶೋಕ ಕುಲಾಲ್, ಧನುಷ್ ಹರದೊಟ್ಟು, ಹರೀಶ್ ಬಂತೊಟ್ಟು, ರಮೇಶ್ ಆರ್.ಕೆ, ಸುರೇಶ್ ಬರೊಟ್ಟು, ಪ್ರಮೋದ್, ಪ್ರಕಾಶ್ ಪೆರಾಡಿ ಮತ್ತು ಇತರ 20 ರಿಂದ 30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇಸ್ಲಾಂ ಧರ್ಮವನ್ನು ಅವಮಾನಿಸುವ ವೀಡಿಯೋ ಹರಿಬಿಟ್ಟ ಬಗ್ಗೆ, ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ಇದೀಗ ವೇಣೂರು ಪೊಲೋಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎ.14 ರಂದು ರಾತ್ರಿಯ ವೇಳೆ ಪುರುಷ ಕಟ್ಟುನ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಂ ವೇಷ ಧರಿಸಿಕೊಂಡು ಇಸ್ಲಾಂ ಧರ್ಮ, ಪ್ರವಾದಿ ಮಹಮ್ಮದ್ (ಸ.ಅ) ಮತ್ತು ಪವಿತ್ರವಾದ ಆಝಾನ್ ಅನ್ನು ಅವಹೇಳನ ಮಾಡಿ ಹಿಂದೂ ಮುಸ್ಲಿಂ ಧರ್ಮಗಳ ನಡುವೆ ವೈಷಮ್ಯದ ಭಾವನೆಗಳನ್ನು ಉಂಟುಮಾಡುವ ಉದ್ದೇಶದಿಂದ ವಿಡಿಯೋವನ್ನು ಸಾಮಾಜಿಕ ಜಾಕತಾಣಗಳಲ್ಲಿ ವೈರಲ್ ಮಾಡಿದ್ದ ಬಗ್ಗೆ ಕಲಂ 353(2) ಜೊತೆಗೆ 3(5) ಬಿ.ಎನ್.ಎಸ್ 2023 ರಂತೆ ಪ್ರಕರಣ ದಾಖಲಿಸಲಾಗಿದೆ.

Continue Reading

BELTHANGADY

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಷು ಜಾತ್ರಾಮಹೋತ್ಸವ

Published

on

ಬೆಳ್ತಂಗಡಿ: ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗಗಳಲ್ಲಿ ವಿಷು ಹಬ್ಬವನ್ನು ಹೊಸ ವರ್ಷದ ಆಚರಣೆಯಾಗಿ ಆಚರಿಸಲಾಗುತ್ತದೆ. ವಿಷುವತ್ ಸಂಕ್ರಾಂತಿಯನ್ನು ಸೂಚಿಸುವ ಈ ಹಬ್ಬದಲ್ಲಿ ವಿಷುಕಣಿ ಪ್ರಮುಖ ಆಚರಣೆಯಾಗಿದೆ. ಶ್ರೀಕೃಷ್ಣನ ವಿಜಯೋತ್ಸವವನ್ನೂ ಇದು ಸೂಚಿಸುತ್ತದೆ.

ಅಂತೆಯೇ ಹೊಸ ವರ್ಷ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎ.13 ರಂದು ಮೇಷ ಸಂಕ್ರಮಣದಂದು ವಿಷು ಜಾತ್ರಾಮಹೋತ್ಸವದ ಧ್ವಜಾರೋಹಣ ನೆರವೇರಿದ್ದು, ಎ.14 ರಂದು ಭಕ್ತರಿಗೆ ಅಕ್ಕಿ ಧವಸ ಧಾನ್ಯ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನೆರವೇರಿತು.

ಸಾಲು ಸಾಲು ರಜೆ ಇದ್ದ ಕಾರಣ ಕ್ಷೇತ್ರಕ್ಕೆ ನಾಡಿನಾದ್ಯಂತ ಭಕ್ತರು ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಎ.14 ರಂದು ಸುಮಾರು 8000 ಕ್ಕೂ ಅಧಿಕ ಮಂದಿ ಭಕ್ತರಿಗೆ ಕ್ಷೇತ್ರದ ಉಗ್ರಾಣದಿಂದ ಅಕ್ಕಿ, ಧವಸ ಧಾನ್ಯ, ಎಣ್ಣೆ ಸಹಿತ ಪಡಿತರಗಳನ್ನು ವಿತರಣೆ ಮಾಡಲಾಯಿತು. ಸಂಜೆ ಧರ್ಮ ದೈವಳಿಗೆ ನೇಮ ನೆರವೇರಿತು.

ದೇವರ ದರ್ಶನಕ್ಕೆ ಸಮಸ್ಯೆಯಾಗದಂತೆ ಈಗಾಗಲೆ ಕ್ಯೂ ಕಾಂಪ್ಲೆಕ್ಸ್ ವ್ಯವಸ್ಥೆಯನ್ನು ಮಾಡಿರುವುದರಿಂದ ಭಕ್ತರಿಗೆ ಅನುಕೂಲ ಕಲ್ಪಿಸಲಾಗಿದೆ. ಭಕ್ತರಿಂದ ದೇವಸ್ಥಾನ, ಅನ್ನಪ್ಪಬೆಟ್ಟ, ಬಾಹುಬಲಿ ವಸ್ತುಸಂಗ್ರಹಾಲಯ ಎಲ್ಲೆಡೆವೂ ಜನ ಕಂಡುಬಂದಿತ್ತು. ಸೋಮವಾರ ಹೆಗ್ಗಡೆಯವರ ಭೇಟಿ ಸಮಯವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಶೀರ್ವಾದ ಪಡೆದರು.

ಇನ್ನು ವಿಷು ಜಾತ್ರಾ ಮಹೋತ್ಸವದ ಪ್ರಯುಕ್ತ 15 ರಂದು ಅಣ್ಣಪ್ಪ ದೈವಗಳ ನೇಮ, 16 ರಂದು ಉತ್ಸವ, 17 ರಂದು ಬೈಗಿನ ಬಲಿ ಹೊರಡುವುದು, ಹೊಸಕಟ್ಟೆ ಉತ್ಸವ,18 ರಂದು ಕಂಚಿಮಾರುಕಟ್ಟೆ ಉತ್ಸವ, 19 ರಂದು ಲಲಿತೋದ್ಯಾನವನ ಕಟ್ಟೆ ಉತ್ಸವ, 20 ರಂದು ಕೆರೆಕಟ್ಟೆ ಉತ್ಸವ, 21 ರಂದು ಗೌರಿಮಾರುಕಟ್ಟೆ ಉತ್ಸವ, ಚಂದ್ರಮಂಡಲ ಉತ್ಸವ, 22 ರಂದು ಶ್ರೀ ಮಂಜುನಾಥ ಸ್ವಾಮಿಯ ಶ್ರೀ ಮನ್ಮಹಾರಥೋತ್ಸವ, 23 ರಂದು ನೇತ್ರಾವತಿಯಲ್ಲಿ ಅವಭೃತ ಸ್ನಾನ ಹಾಗೂ ಧ್ವಜಾವರೋಹಣದೊಂದಿಗೆ ವಿಷು ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

Continue Reading

BELTHANGADY

ಡಿವೈಡರ್‌ಗೆ ಡಿಕ್ಕಿ ಹೊಡೆದ ಬಸ್; 13 ಮಂದಿಗೆ ಗಾಯ

Published

on

ಧರ್ಮಸ್ಥಳ: ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಇದರಿಂದಾಗಿ ಹಲವು ಪ್ರಯಾಣಿಕರಿಗೆ ಗಾಯಗಳಾದ ಘಟನೆ ನಡೆದಿದೆ.

ಬಸ್ ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ಅಡ್ಡಹೊಳೆ ಶಿರಾಡಿ ಪೆಟ್ರೋಲ್ ಬಂಕ್ ಬಳಿ ಟೈರ್ ಸ್ಫೋಟಗೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

ಬಸ್‌ನಲ್ಲಿದ್ದ 13 ಮಂದಿಗೆ ಗಾಯಗಳಾಗಿದ್ದು, ಮೂವರನ್ನು ಉಜಿರೆಯ ಆಸ್ಪತ್ರೆಗೆ ಹಾಗೂ ಉಳಿದವರನ್ನು ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page