Connect with us

DAKSHINA KANNADA

Mangaluru: ಕುದ್ರೋಳಿ ಕ್ಷೇತ್ರಕ್ಕೆ ದ.ಕ ಜಿಲ್ಲಾಧಿಕಾರಿ ಭೇಟಿ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಕುಟುಂಬ ಸಮೇತ ನಿನ್ನೆ ರಾತ್ರಿ ನವರಾತ್ರಿ ಮಹೋತ್ಸವ ನಡೆಯುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಮಂಗಳೂರು ದಸರಾ ವೈಭವವನ್ನು ಕಣ್ತುಂಬಿಕೊಂಡರು.

ಕ್ಷೇತ್ರದಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಬಳಿಕ ಅನ್ನ ಪೂರ್ಣ ದೇವಿಯ ಪ್ರತಿಮೆ ಬಳಿಗೆ ತೆರಳಿ ಪ್ರಸಾದ ಸ್ವೀಕರಿಸಿದರು. ಜಿಲ್ಲಾಧಿಕಾರಿಗಳು ಕ್ಷೇತ್ರದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಮ್‌, ಟ್ರಸ್ಟಿ ರವಿಶಂಕರ್‌ ಮಿಜಾರ್‌ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

DAKSHINA KANNADA

ದಕ್ಷಿಣ ಕನ್ನಡ : ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಬಶೀರ್ ಕಣ್ಣೂರು ಆಯ್ಕೆ

Published

on

ಮಂಗಳೂರು : ಅನ್‌ಲೈನ್‌ನಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಗೆ ಚುನಾವಣೆ ನಡೆದಿತ್ತು. ಅದರಲ್ಲಿ 9035 ಮತ ಪಡೆಯುವ ಮೂಲಕ ಮುಹಮ್ಮದ್ ಬಶೀರ್ ಕಣ್ಣೂರು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬಶೀರ್ ಕಣ್ಣೂರು ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಬೀಯಿಂಗ್ ಹ್ಯೂಮನ್ ಫೌಂಡೇಶನ್‌ನ ಮಂಗಳೂರು ನಗರ ಅಧ್ಯಕ್ಷರಾಗಿ, ಮಂಗಳೂರು ಬ್ಯಾರಿ ಸೆಂಟ್ರಲ್ ಕಮಿಟಿಯ ಸದಸ್ಯರಾಗಿ, ಮೇಕ್ ಎ ಚೇಂಜ್‌ನ ಸಹ ಸ್ಥಾಪಕರಾಗಿರುವ ಬಶೀರ್ ಪ್ರಸ್ತುತ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದಾರೆ.

 

Continue Reading

DAKSHINA KANNADA

ಮಂಗಳೂರು : ಮಾದಕ ವಸ್ತು ಮಾರಾಟಕ್ಕೆ ಯತ್ನ; 6 ಜನರ ಬಂಧನ

Published

on

ಮಂಗಳೂರು: ಎಂಡಿಎಂಎ ಎಂಬ ನಿಷೇಧಿತ ಮಾದಕ ವಸ್ತುವಿನ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ 6 ಮಂದಿಯನ್ನು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಸಹಿತ ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಪಾಂಡೇಶ್ವರ ಗ್ರೀನ್‌ಲ್ಯಾಂಡ್ ಲೇಔಟ್ ನಿವಾಸಿ ಧನಿಶ್ ಡಿ. ಕಾಂಚನ್ (19), ಪಾಂಡೇಶ್ವರ ನಿವಾಸಿ ಪೃಥ್ವಿಕ್ (18), ಬಾವುಟಗುಡ್ಡ ನಿವಾಸಿ ಫೈಜ್ ಅಂಬರ್ (23), ಜಲ್ಲಿಗುಡ್ಡೆ ನಿವಾಸಿ ತುಷಾನ್ ಡಿ. ಸುವರ್ಣ (19), ಫಳ್ನೀರ್ ನಿವಾಸಿ ರಾಜಿನ್ (21), ಫಳ್ನೀರ್ ಸ್ಟರಕ್ ರೋಡ್ ನಿವಾಸಿ ಅಫ್ಘಾನ್ (20) ಎಂದು ಗುರುತಿಸಲಾಗಿದೆ.

 

ಇದನ್ನೂ ಓದಿ : ಮಕ್ಕಳ ಕಿಡ್ನ್ಯಾಪಿಗೆ ಯತ್ನ; ದೂರು ದಾಖಲು

 

ಮಂಗಳೂರಿನ ಫಳ್ನೀರ್ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಫೆ.8 ರಂದು ಸಂಜೆ 5:30ಕ್ಕೆ ಕಾರು ಮತ್ತು ದ್ವಿಚಕ್ರ ವಾಹನದಲ್ಲಿ 6 ಮಂದಿ ಯುವಕರು ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಪೊಲೀಸರಿಗೆ ದೊರಕಿತ್ತು. ಈ ಆಧಾರದ ಮೇಲೆ ಬಂದರು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಪಲೀಸರು ಆರೋಪಿಗಳ ವಾಹನವನ್ನು ಅಡ್ಡಗಟ್ಟಿ ಬಂಧಿಸಿ 20.52ಗ್ರಾಂ ಎಂಡಿಎಂಎ ಸಹಿತ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಲ್ಲದೆ ಕೃತ್ಯಕ್ಕೆ ಬಳಸಿದ್ದ ಕಾರು, ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ.

 

Continue Reading

DAKSHINA KANNADA

ಕಾಪು ಶ್ರೀ ಹೊಸ ಮಾರಿಗುಡಿ ಕ್ಷೇತ್ರ; ಸಂಭ್ರಮದಿಂದ ನಡೆದ ಮೆರವಣಿಗೆ

Published

on

ಉಡುಪಿ : ಪುನಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡಿರುವ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಚಿನ್ನದ ಹೊಸ ಗದ್ದುಗೆ ಸಮರ್ಪಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಪ್ರಯುಕ್ತ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ನೂತನ ಸ್ವರ್ಣ ಗದ್ದುಗೆ, ಬೆಳ್ಳಿ ರಥೋತ್ಸವ, ಬಂಗಾರದ ಮೊಗ,  ಉಚ್ಚoಗಿ ದೇವಿಯ ಬಂಗಾರದ ಪಾದ ಪೀಠ, ಬಂಗಾರದ ಮುಖ, ಬೃಹತ್ ಗಾತ್ರದ ಗಂಟೆ, ಮತ್ತು ರಾಜಗೋಪುರ ಮಹಾದ್ವಾರದ ಬಾಗಿಲು ಸಹಿತ ಸಂಭ್ರಮದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಮಹಿಳೆಯರ ಸಂಖ್ಯೆ ಎಷ್ಟು ಗೊತ್ತಾ!?

ಕೃಷ್ಣಾಪುರ ಮಠತ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಶೋಭಾಯಾತ್ರೆ ಉದ್ಘಾಟಿಸಿದರು. ಕಾಪು ಶ್ರೀ ಪೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದಿಗೆ ಸಮರ್ಪಣೆ ಸಮಿತಿ ಮುಂದಾಳತ್ವದಲ್ಲಿ ಭಕ್ತರು ಒಟ್ಟುಗೂಡಿಸಿದ ಬಂಗಾರ ಸಹಿತ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಮಾರಿಯಮ್ಮ ದೇವಿ ಬಂಗಾರದ ಗದ್ದುಗೆ ಸಹಿತ ಬೆಳ್ಳಿ ರಥ, ಬೃಹತ್ ಗಂಟೆ ಇತ್ಯಾದಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು.

ಮೆರವಣಿಗೆಯಲ್ಲಿ 30ಕ್ಕೂ ಅಧಿಕ ಟ್ಯಾಬ್ಲೋ,  ಕಲಶ ಹಿಡಿದ ಮಹಿಳೆಯರು ಸಹಿತ 10,000ಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಪ್ರಮುಖರಾದ ಸುನೀಲ್ ಕುಮಾರ್, ವಿನಯಕುಮಾರ ಸೊರಕೆ , ಲಾಲಾಜಿ ಆರ್ ಮೆಂಡನ್ ಮೊದಲಾದವರು ಭಾಗವಹಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page