Connect with us

LATEST NEWS

ಮಂಗಳೂರು ದಸರಾ ಮಹೋತ್ಸವಕ್ಕೆ ದೀಪ ಬೆಳಗಿಸಿ ಚಾಲನೆ

Published

on

ಮಂಗಳೂರು: ವರ್ಣರಂಜಿತ ಮಂಗಳೂರು ದಸರಾ ಕಳೆಗಟ್ಟಿದೆ. ಮಹೋತ್ಸವದ ಕೇಂದ್ರ ಬಿಂದುವಾಗಿರುವ ಮಂಗಳೂರಿನ ಕುದ್ರೊಳಿ ಶ್ರೀ ಗೋಕರ್ಣಾಥ ದೇವಸ್ಥಾನದಲ್ಲಿ ಈಗಾಗಲೇ ನವದುರ್ಗೆಯರ ಮತ್ತು ಶಾರದ ಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು ಸಾವಿರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ನಿನ್ನೆ ಶ್ರೀ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.


ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಹಿರಿಯ ರಾಜಕೀಯ ಮುತ್ಸದ್ದಿ ಬಿ. ಜನಾರ್ದನ ಪೂಜಾರಿ ಅವರು ಮಂಗಳೂರು ದಸರಾ ಮಹೋತ್ಸವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು, ಈ ಸಂದರ್ಭ ಶಾಸಕರಾದ ಯು.ಟಿ. ಖಾದರ್, ಉಮನಾಥ್ ಕೋಟ್ಯಾನ್ ಸಹಿತ ಇತರ ಗಣ್ಯರು ಉಪಸ್ಥಿತರಿದ್ದರು.

DAKSHINA KANNADA

ಲಕ್ಷ್ಮಣ ಮರಕಡರಿಗೆ ಯಕ್ಷ ಸವ್ಯಸಾಚಿ ಬಿರುದು ಪ್ರದಾನ

Published

on

ಮಂಗಳೂರು : ಶ್ರೀಕಟೀಲು ಮೇಳದ ಕಲಾವಿದ, ಯಕ್ಷ ಗುರು ಲಕ್ಷ್ಮಣ ಕುಮಾರ್ ಮರಕಡರಿಗೆ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀಭಗವದ್ಗೀತಾಮೃತ ಪುರಸ್ಕಾರದೊಂದಿಗೆ “ಯಕ್ಷ ಸವ್ಯ ಸಾಚಿ” ಬಿರುದು ನೀಡಿ ಗೌರವಿಸಲಾಯಿತು.

ಶ್ರೀ ಮದ್ ಭಗವದ್ಗೀತೆಯ  ಪ್ರಚಾರಕ, ಆಧ್ಯಾತ್ಮಿಕ ಗುರು ಸುಬ್ರಾಯ  ನಂದ್ಯೋಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಲಕ್ಷ್ಮಣ ಅವರು ಗಣೇಶ ಪುರ, ಸುರತ್ಕಲ್ ಸದಾಶಿವ ಮಹಾಗಣಪತಿ, ತಲಕಳ, ಬಪ್ಪನಾಡು, ಉಳ್ಳಾಲ ಚೀರುಂಭ ಭಗವತೀ , ಸಸಿಹಿತ್ಲು ಭಗವತಿ, ಎಡನೀರು ಮೇಳಗಳಲ್ಲಿ ತಿರುಗಾಟ ಮಾಡಿ ಕಟೀಲು  ಮೇಳದಲ್ಲಿ ಈಗ 7ನೇ ವರ್ಷದ  ತಿರುಗಾಟ ಮಾಡುತ್ತಿರುವ ನಿಷ್ಠಾವಂತ ಕಲಾಸಾಧಕ.

ಕಾಸರಗೋಡು ಮತ್ತು ಮಂಗಳೂರು ಪರಿಸರದಲ್ಲಿ ಯಕ್ಷಗಾನ ಶಿಕ್ಷಕನಾಗಿ ತರಗತಿ ನಡೆಸಿ ಸಮೃದ್ಧ ಶಿಷ್ಯ ಗಡಣ ಹೊಂದಿರುವ ಯಕ್ಷ ಗುರು.ಆಮೇರಿಕಾ, ಮಸ್ಕತ್, ಆಸ್ಟ್ರೇಲಿಯಾ, ದುಬೈ ದೇಶಗಳಲ್ಲಿ ಪುಂಡು, ಸ್ತ್ರೀ,ರಾಜವೇಷ,ಹಾಸ್ಯ, ಎದುರು ವೇಷಗಳೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸುತ್ತಿರುವ  ಅಪೂರ್ವ ಯಕ್ಷ ಕಲಾ ಸಾಧಕ ಎಂದು ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು.

ಇದನ್ನೂ ಓದಿ : ಫೆ.21 ರಂದು ಕುದ್ರೋಳಿ ಕ್ಷೇತ್ರ ತೀರ್ಥಾಟನೆ

ಕಾರ್ಯಕ್ರಮದಲ್ಲಿ  ಯಕ್ಷಗಾನ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಳ ಕದ್ರಿ, ಡಾ.ಶಶಾಂಕ್ ಮತ್ತಿತ್ತರರು ಉಪಸ್ಥಿತರಿದ್ದರು. ಮೇಳದ ಎಲ್ಲಾ ಕಲಾವಿದರಿಗೆ ಸೇವಾಕರ್ತರಾದ ಗೀತಾ ಪ್ರಚಾರಕಿ ಸವಿತಾ ಕೊರಗಪ್ಪ ಅವರು ಅರ್ಥ ಸಹಿತ ಭಗವದ್ಗೀತೆಯನ್ನು ವಿತರಿಸಿದರು. ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮೆ ಸೇವೆ ಬಯಲಾಟ ಜರುಗಿತು.

 

Continue Reading

LATEST NEWS

NSUI ನಾಯಕನ ಮೇಲೆ ತಲವಾರು ದಾ*ಳಿ ಪ್ರಕರಣ; ಐವರು ಅರೆಸ್ಟ್

Published

on

ಉಡುಪಿ : ಕ್ಷುಲ್ಲಕ ಕಾರಣಕ್ಕೆ ಎನ್.ಎಸ್.ಯು.ಐ ಜಿಲ್ಲಾ ನಾಯಕ ಶರತ್ ಕುಂದರ್ ಮೇಲೆ ನಡೆದ ಹ*ಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕುಂಜಿಬೆಟ್ಟು ನಿವಾಸಿ ಅಕ್ಷತ್ ಪೈ (27), ಸುಶಾಂತ್ (25), ರಮಾನಂದ ಪೈ (42), ಸಂತೋಷ್ ಕೊರಗ (38), ಅಲೆವೂರು ನಿವಾಸಿ ಶಂಶಾಂಕ್ ನಾಯಕ್ (25) ಬಂಧಿತ ಆರೋಪಿಗಳು.

ಜನವರಿ 30 ರಂದು ರಾತ್ರಿ 9 ಗಂಟೆ ಸುಮಾರಿಗೆ ಚಿಟ್ಟಾಡಿ ಬೈಲೂರು ಬಡಗುಬೆಟ್ಟು ನಿವಾಸಿ ಶರತ್ ಕುಂದರ್ (25) ಅವರು ತಮ್ಮ ಸ್ನೇಹಿತನ ಕಾರಿನಲ್ಲಿ ಮಣಿಪಾಲದ ಹೋಟೆಲೊಂದಕ್ಕೆ ಊಟಕ್ಕೆಂದು ತೆರಳಿದ್ದರು. ಅಲ್ಲಿ ಅಕ್ಷತ್ ಪೈ, ಶಶಾಂಕ್ ಹಾಗೂ ಉಡುಪಿಯ ಜನರಲ್ ಸ್ಟೋರೊಂದರ ಮಾಲಕರ ಮಗನೊಂದಿಗೆ ಸಣ್ಣ ವಿಚಾರಕ್ಕೆ ಸಂಬಂಧಿಸಿ ಬಾಯಿ ಮಾತಿನ ಗಲಾಟೆ ನಡೆದಿದೆ.

ನಂತರ ಶರತ್ ಕುಂದ‌ರ್ ಮನೆಗೆ ವಾಪಸ್ಸಾಗುತ್ತಿದ್ದಾಗ ಕಲ್ಸಂಕ ಬಳಿ ತಲುಪುವ ಸಂದರ್ಭದಲ್ಲಿ ಅಕ್ಷತ್ ಪೈ ಕರೆ ಮಾಡಿ, ಹೋಟೆಲ್‌ನ ಗಲಾಟೆ ವಿಚಾರವಾಗಿ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ನಿಲ್ಲುವಂತೆ ತಿಳಿಸಿದ್ದಾನೆ. ರಾತ್ರಿ ಸುಮಾರು 11.30ರ ವೇಳೆಗೆ ಪಿಪಿಸಿ ಕ್ರಾಸ್ ಸಮೀಪ ಕೋಸ್ಟಲ್ ಚಿಕನ್ ಅಂಗಡಿಯ ಎದುರು ರಸ್ತೆಯ ಬದಿಯಲ್ಲಿ ಶರತ್ ಕುಂದರ್ ತಮ್ಮ ಸ್ನೇಹಿತರಾದ ಧ್ರುವಾ, ಸಿಲಾನ್ ಗಗನ್ ಹಾಗೂ ರೋಹಿತ್ ಜೊತೆ ಮಾತನಾಡುತ್ತ ನಿಂತಿದ್ದ ವೇಳೆ ಟಾಟಾ ಸಫಾರಿ ಮತ್ತು ಮಹೀಂದ್ರ ಥಾರ್ ವಾಹನಗಳು ಏಕಾಏಕಿ ಬಂದು ನಿಂತಿವೆ.

ವಾಹನಗಳಿಂದ ಇಳಿದ ಅಕ್ಷತ್ ಪೈ, ಶಶಾಂಕ್ ಸೇರಿದಂತೆ ಆರೇಳು ಮಂದಿ ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೈನ್ ಹಿಡಿದು ಶರತ್ ಕುಂದ‌ರ್ ಮೇಲೆ ಹಲ್ಲೆ ನಡೆಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆ ಬಳಿಕ  ಆರೋಪಿಗಳು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದರು. ಗಾಯಾಳುವನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ : ಬ್ಯಾಂಕ್‌ನಲ್ಲಿಟ್ಟಿದ್ದ 4 ಕೋಟಿ  ಮೌಲ್ಯದ ಚಿನ್ನಾಭರಣಕ್ಕೆ ಕನ್ನ; ತನಿಖೆ ವೇಳೆ ಬಯಲಾಯ್ತು ಶಾಕಿಂಗ್ ವಿಚಾರ!

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ ಹುಂಡೈ ಅವೆನ್ಯೂ ಕಾರು (ಅಂದಾಜು ಮೌಲ್ಯ 8 ಲಕ್ಷ) ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

FILM

‘ಪ್ರತಿದಿನ ನನ್ನನ್ನೇ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ’; ಅಭಿಮಾನಿಗಳ ಮನಗೆದ್ದ ರಾಧಿಕಾ ಪಂಡಿತ್ ಪೋಸ್ಟ್!

Published

on

ಕನ್ನಡ ಚಿತ್ರರಂಗದ ಮಾದರಿ ದಂಪತಿಗಳಾದ ಯಶ್ ಮತ್ತು ರಾಧಿಕಾ ಪಂಡಿತ್ ಈ ಬಾರಿಯ ವ್ಯಾಲೆಂಟೈನ್ಸ್ ದಿನವನ್ನು ಪ್ರೀತಿಯಿಂದ ಆಚರಿಸಿದ್ದಾರೆ. ರಾಧಿಕಾ ಪಂಡಿತ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪತಿ ಯಶ್ ಅವರೊಂದಿಗೆ ಇರುವ ಸುಂದರವಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ.


ರಾಧಿಕಾ ಪಂಡಿತ್‌ ಮತ್ತು ಯಶ್‌ ಇಬ್ಬರೂ ಧಾರಾವಾಹಿ ಮೂಲಕ ಪರಿಚಯ ಆಗಿದ್ದು, ಅಲ್ಲಿ ಇಬ್ಬರೂ ಒಟ್ಟಿಗೆ ನಟಿಸಿ, ಬಳಿಕ ಒಟ್ಟಾಗಿ ಸಿನಿಮಾ ಮಾಡಿದರು. ತೆರೆಮೇಲೆ ಜೋಡಿಯಾಗಿದ್ದ ಇವರು ತೆರೆಹಿಂದೆಯೂ ಕಪಲ್‌ ಆಗಿದ್ದಾರೆ. ಇದೀಗ ಯಶ್‌ ಅವರ ಕುರಿತು ರಾಧಿಕಾ ಪಂಡಿತ್‌ ಹಂಚಿಕೊಂಡಿರೋ ಪೋಸ್ಟ್‌ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಯಶ್ ಅವರಿಗೆ ಧನ್ಯವಾದ ಅರ್ಪಿಸಿರುವ ರಾಧಿಕಾ, ‘ನನ್ನ ಅಭದ್ರತೆಯನ್ನು ತೆಗೆದು ಹಾಕಿದವನು ನೀನು. ನಿನ್ನ ಕಣ್ಣುಗಳಲ್ಲಿ ದಣಿವು, ಬೇರೆ ಯಾರೂ ಗಮನಿಸದ ತ್ಯಾಗ, ದೂರು ನೀಡದೆ ನೀನು ಹೊತ್ತುಕೊಂಡ ದೀರ್ಘ ಭಾರ ನನಗೆ ಕಾಣುತ್ತಿದೆ. ಅದು ನಮಗಾಗಿ ಎಂದು ನನಗೆ ತಿಳಿದಿದೆ. ನನ್ನನ್ನು ದಿನವೂ ಆಯ್ಕೆ ಮಾಡಿದ್ದಕ್ಕೆ ನಿನಗೆ ಧನ್ಯವಾದ, ಹ್ಯಾಪಿ ವ್ಯಾಲೆಂಟೈನ್ಸ್ ಡೇ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮದುವೆಗೆಂದು ಬಂದಿದ್ದ ಮಹಿಳೆ ನಾಪತ್ತೆ: ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ

ಇಬ್ಬರೂ ಜೊತೆಯಾಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಪ್ರೇಮಿಗಳ ದಿನದ ಶುಭಾಶಯ ಕೋರಿದ್ದಾರೆ. ರಾಧಿಕಾ ಪಂಡಿತ್ ಅವರ ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸಾವಿರಾರು ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page