Connect with us

DAKSHINA KANNADA

12 ವರ್ಷದ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ : ಆರೋಪಿ ಮಹಮ್ಮದ್ ಶಾಫಿ ಅರೆಸ್ಟ್..!

Published

on

ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಉಳ್ಳಾಲ ಪೇಟೆಉ ನಿವಾಸಿ ಮಹಮ್ಮದ್ ಶಾಫಿ @ ಶಾಫಿ ಬಂಧಿತ ಆರೋಪಿಯಾಗಿದ್ದಾನೆ.

ಮಂಗಳೂರು : ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಉಳ್ಳಾಲ ಪೇಟೆಉ ನಿವಾಸಿ ಮಹಮ್ಮದ್ ಶಾಫಿ @ ಶಾಫಿ ಬಂಧಿತ ಆರೋಪಿಯಾಗಿದ್ದಾನೆ.

12 ವರ್ಷ 10 ತಿಂಗಳು ಪ್ರಾಯದ ಅಪ್ರಾಪ್ತ ಬಾಲಕಿ ತನ್ನ ತಾಯಿಯೊಂದಿಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಬಂದು ನೀಡಿದ ಲಿಖಿತ ದೂರು ನೀಡಿದ್ದಾಳೆ.

ಬಾಲಕಿ 8 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಉಳ್ಳಾಲ ಪೇಟೆಯ ಮಹಮ್ಮದ್ ಶಾಫಿ @ ಶಾಫಿ ಎಂಬವನ ಪರಿಚಯವಿದ್ದು, ದಾರಿಯಲ್ಲಿ ಕಾಣಸಿಕ್ಕಿದಾಗ ಮಾತನಾಡುತ್ತಿದ್ದ.

ಇದೇ ವರ್ಷದ ಜನವರಿ ತಿಂಗಳಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ ಸಮಯ ಶಾಫಿ ಬಾಯಿಗೆ ಕೈ ಹಿಡಿದು, ಪಕ್ಕದ ರೂಮಿಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ.

ಅಲ್ಲದೇ ಇತರೇ ದಿನಗಳಲ್ಲಿ ಅವಳು ಒಬ್ಬಳೇ ಇದ್ದಾಗ ಮನೆಗೆ ಹೋಗಿ ಸರಣಿ ಅತ್ಯಾಚಾರ ಮಾಡಿದ್ದ.

ಇದರಿಂದ ಬಾಲಕಿ 6 ತಿಂಗಳ ಗರ್ಭಿಣಿಯಾಗಿದ್ದು, ಸದ್ರಿ ಅಪ್ರಾಪ್ತ ಬಾಲಕಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ. 58/2023 ಕಲಂ 376, 448, 506 ಐಪಿಸಿ ಮತ್ತು 6 ಪೋಕ್ಸೋ ಕಾಯ್ದೆಯಂತೆ ಕೇಸು ದಾಖಲಿಸಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಮತ್ತು ಉಳ್ಳಾಲ ಪೊಲೀಸ್ ಠಾಣಾ ಪೊಲೀಸರ  ನೆರವಿನೊಂದಿಗೆ  ಆರೋಪಿ ಶಾಫಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ..

DAKSHINA KANNADA

ಪುತ್ತೂರು: ಕರ್ನಾಟಕದ ಮೂರನೇ ಅತಿ ಎತ್ತರದ ರಾಷ್ಟ್ರಧ್ವಜಸ್ತಂಭಕ್ಕೆ ಶಿಲಾನ್ಯಾಸ

Published

on

ಪುತ್ತೂರು: ಕರ್ನಾಟಕದ ಮೂರನೇ ಅತೀ ಎತ್ತರದ ರಾಷ್ಟ್ರ ಧ್ವಜಸ್ತಂಭವು ಪುತ್ತೂರು ನಗರದ ನೆಲ್ಲಿಕಟ್ಟೆಯಲ್ಲಿ ನಿರ್ಮಾಣಗೊಳ್ಳಲಿದ್ದು, ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಶಾಸಕರ ಅನುದಾನ ರೂ. 25 ಲಕ್ಷ, ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ 35 ಲಕ್ಷ ಹಾಗೂ ನಗರಸಭೆಯ ರೂ.40 ಲಕ್ಷ ಸೇರಿ ಒಟ್ಟು 1 ಕೋಟಿ ಅನುದಾನದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯ ತುದಿಯಲ್ಲಿ ನೆಲ್ಲಿಕಟ್ಟೆಯ ಪಾರ್ಕ್‍ನಲ್ಲಿ ಈ ರಾಷ್ಟ್ರ ಧ್ವಜ ನಿರ್ಮಾಣವಾಗಲಿದೆ.

ತೆಂಗಿನ ಕಾಯಿ ಒಡೆದ ಬಳಿಕ ಗುದ್ದಲಿ ಪೂಜೆಯನ್ನು ಶಾಸಕ ಆಶೋಕ್ ರೈ ನೆರವೇರಿಸಿದರು. ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮೊದಲಾದವರಿದ್ದರು.

ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್‌

ಧ್ವಜಸ್ತಂಭ 80 ಮೀಟರ್ ಎತ್ತರವಿರಲಿದ್ದು, 60 ಫೀಟ್ ಮತ್ತು 40 ಫೀಟ್‍ನ ರಾಷ್ಟ್ರಧ್ವಜ ಅಳವಡಿಕೆಯಾಗಲಿದೆ. 1270 ಎಂ.ಎಂ. ತಳಪಾಯವಿರಲಿದೆ. ಜೊತೆಗೆ ವಿದ್ಯುತ್ ಚಾಲಿತ ಮೋಟಾರ್ ವ್ಯವಸ್ಥೆ ಸಿಗ್ನಲ್ ಲೈಟ್, ಫೋಕಸ್ ಲೈಟ್ ಅಳವಡಿಕೆಯನ್ನೂ ಮಾಡಲಾಗುತ್ತದೆ.

Continue Reading

DAKSHINA KANNADA

ಮಂಗಳೂರು: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರ ಬಂಧನ

Published

on

ಮಂಗಳೂರು: ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ 50 ಲಕ್ಷ ರೂಪಾಯಿ ಮೌಲ್ಯದ 517.76 ಗ್ರಾಂ ಎಂ.ಡಿ.ಎಂ.ಎ. ಮಾದಕ ದ್ರವ್ಯವನ್ನು ಮಂಗಳೂರು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ನಗರದ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಮನೋಜ್ ಕುಮಾರ್ ನಾಯ್ಕ್ ನೇತೃತ್ವದ ತಂಡವು ಖಚಿತ ಮಾಹಿತಿ ಮೇರೆಗೆ ಶನಿವಾರ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರಾಮ್ ಶೆಟ್ಟಿ ಕನ್ವೆನ್ಷನ್ ಹಾಲ್ ಸಮೀಪ ಒಂದು ಕಾರಿನಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವೇಳೆ ದಾಳಿ ನಡೆಸಿತು.

ಈ ಸಂದರ್ಭದಲ್ಲಿ ಆರೋಪಿಗಳಾದ ಬೈಂದೂರು ತಾಲೂಕು ನಾವುಂದ ಗ್ರಾಮದ ಮೊಹಮ್ಮದ್ ಶಿಯಾಬ್ ಯಾನೆ ಶಿಯಾಬ್, ಉಳ್ಳಾಲ ತಾಲೂಕು ನರಿಂಗಾನ ಗ್ರಾಮದ ಮೊಹಮ್ಮದ್ ನೌಷದ್ ಯಾನೆ ನೌಷದ್, ಮಂಗಳೂರಿನ ಕಸಬಾ ಬೆಂಗ್ರೆಯ ಇಮ್ರಾನ್ ಯಾನೆ ಇಂಬ, ಬಂಟ್ವಾಳ ತಾಲೂಕು ಬ್ರಹ್ಮರಕೊಟ್ಲು ನಿವಾಸಿ ನಿಸಾರ್ ಅಹಮ್ಮದ್ ಯಾನೆ ನಿಸಾರ್ ಎಂಬ ನಾಲ್ಕು ಜನರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಸುಮಾರು 517.76 ಗ್ರಾಂ ಎಂ.ಡಿ.ಎಂ.ಎ. ಮಾದಕ ವಸ್ತುವನ್ನು ಹಾಗೂ ಕೃತ್ಯಕ್ಕೆ ಬಳಸಿದ 10 ಲಕ್ಷ ರೂ. ಮೌಲ್ಯದ ಮಾರುತಿ ಕಾರು ಹಾಗೂ 5 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ದಿನ ಭವಿಷ್ಯ 07-12-2025: ಇಂದು ಈ ರಾಶಿಯವರಿಗೆ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ!

ಆರೋಪಿಗಳು ಮಾದಕ ವಸ್ತುವನ್ನು ಬೆಂಗಳೂರಿನಿಂದ ಓರ್ವ ನೈಜೀರಿಯಾ ದೇಶದ ವ್ಯಕ್ತಿಯಿಂದ ಪಡೆದುಕೊಂಡು ಬಂದು ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪೂರೈಕೆ ಮಾಡಲು ತಂದಿದ್ದರು ಎಂಬುದಾಗಿ ತಿಳಿದು ಬಂದಿರುತ್ತದೆ. ಆರೋಪಿಗಳ ವಿರುದ್ದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Continue Reading

DAKSHINA KANNADA

28ನೇ ವರ್ಷದ ಬಳ್ಳಮಂಜ “ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾಂಶ

Published

on

ಬೆಳ್ತಂಗಡಿ: ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜ ಬೆಳ್ತಂಗಡಿ ಇದರ ವತಿಯಿಂದ ಆಯೋಜನೆಗೊಂಡಿದ್ದ ಸುಪ್ರಸಿದ್ಧ 28ನೇ ವರ್ಷದ ‘ಶೇಷ-ನಾಗ’ ಜೋಡುಕರೆ ಬಳ್ಳಮಂಜ ಕಂಬಳ ಕೂಟದ ಫಲಿತಾಂಶ ಪ್ರಕಟಗೊಂಡಿದೆ.

ಅಡ್ಡ ಹಲಗೆ:

ಪ್ರಥಮ: ಪೆರಿಂಜೆ ಶ್ರೀ ಜನನಿ ಚಂಪಾ ಪೂಜಾರಿ
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು

ದ್ವಿತೀಯ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು: ರಾಂಪ ಹಿತ್ಲು ರಾಘವೇಂದ್ರ

ಹಗ್ಗ ಹಿರಿಯ:

ಪ್ರಥಮ: ಬೋಳದಗುತ್ತು ಸತೀಶ್ ಜಗದೀಶ್ ಶೆಟ್ಟಿ
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ದ್ವಿತೀಯ: ಕನಡ್ತ್ಯಾರು ಕೃಷ್ಣ ಶೆಟ್ಟಿ
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ಹಗ್ಗ ಕಿರಿಯ:

ಪ್ರಥಮ: ಬೆಳ್ತಂಗಡಿ ಅಚ್ಚಿನಡ್ಕ ಪಕ್ಕು ಶೈಮ ಶಯನ್
ಓಡಿಸಿದವರು: ಕಕ್ಕೆಪದವು ಮಹಮ್ಮಾಯಿ ಗೌತಮ್ ಗೌಡ

ದ್ವಿತೀಯ: ಕಾರ್ಕಳ ಬೈಪಾಸ್ ಎ.ಎಸ್.ಸಾಹೇಬ
ಓಡಿಸಿದವರು: ಸರಪಾಡಿ ಧನಂಜಯ ಗೌಡ

ಇದನ್ನೂ ಓದಿ: 28ನೇ ವರ್ಷದ ‘ಶೇಷ-ನಾಗ’ ಜೋಡುಕರೆ ಕಂಬಳಕ್ಕೆ ಚಾಲನೆ

ನೇಗಿಲು ಹಿರಿಯ:

ಪ್ರಥಮ: ಮುಗ್ಗದೈಪಿಲ ಪ್ರಶಾಂತ್ ವೆಂಕಪ್ಪ ಪೂಜಾರಿ
ಓಡಿಸಿದವರು: ಪೆರಿಂಜೆ ಪುತ್ತಿಲ ಹೊಸಮನೆ ಚರಣ್ ಪೂಜಾರಿ

ದ್ವಿತೀಯ: ಕಕ್ಕೆಪದವು ಕಲೆತ್ಯಾರ್ ರೋಹಿನಾತ್ ದೇಜಣ್ಣ ಶೆಟ್ಟಿ
ಓಡಿಸಿದವರು: ಸರಪಾಡಿ ಧನಂಜಯ ಗೌಡ

ನೇಗಿಲು ಕಿರಿಯ:

ಪ್ರಥಮ: ವೈ. ಸಿ. ಮಾಣಿಂಜೆ ಚಿದಾನಂದ “ಎ”
ಓಡಿಸಿದವರು: ಮುಳಿಕಾರ್ ವಿವೇಕ್ ದೇವಾಡಿಗ

ದ್ವಿತೀಯ: ನಚ್ಚೆ ಕೋಡಂಗೆ ನರಿಂಗಾಣ ಜಗದೀಶ್ ಮಧುಸೂಧನ ಶೆಟ್ಟಿ
ಓಡಿಸಿದವರು: ಪಜೀರು ಸಂಪತ್ ಗಟ್ಟಿಯಾಳ್

Continue Reading
Advertisement

Trending

Copyright © 2025 Namma Kudla News

You cannot copy content of this page