Connect with us

DAKSHINA KANNADA

ಮಂಗಳೂರು: ಹತ್ಯೆಯಾದ ಜಲೀಲ್ ಕುಟುಂಬಕ್ಕೆ ನಾಗರಿಕ ಸಂಘಟನೆಗಳ ಪ್ರತಿನಿಧಿಗಳಿಂದ ಸಾಂತ್ವನ

Published

on

ಮಂಗಳೂರು: ಮೊನ್ನೆ ತಾನೇ ಸುರತ್ಕಲ್‌ನಲ್ಲಿ ಹತ್ಯೆಯಾದ ಕಾಟಿಪಳ್ಳದ ಜಲೀಲ್ ನಿವಾಸಕ್ಕೆ ಮಂಗಳೂರಿನ ನಾಗರಿಕ ಸಂಘಟನೆಗಳು, ಜಾತ್ಯಾತೀತ ಪಕ್ಷಗಳ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿತು. ಕೊಲೆಗಡುಕರಿಗೆ ಶಿಕ್ಷೆ ನೀಡಲು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ನಡೆಸುವ ಪ್ರಯತ್ನದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿತು.


ಈ ಬಗ್ಗೆ ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಪ್ರತಿನಿಧಿಗಳ ನಿಯೋಗ ‘ಮತಾಂಧ ಕ್ರಿಮಿನಲ್‌ಗಳಿಂದ ಕೊಲೆಗೀಡಾದ ಜಲೀಲ್ ಯಾರ ತಂಟೆತಕರಾರಿಗೂ ಹೋಗದ, ತನ್ನ ಪಾಡಿಗೆ ಬದುಕು ನಡೆಸುತ್ತಿದ್ದಾತ. ಇದೀಗ ಮತಾಂಧ ಶಕ್ತಿಗಳಿಂದ ಕುರುಡು ಕೋಮುದ್ವೇಷದಿಂದ ನಡೆದಿರುವುದು ಅಲ್ಪಸಂಖ್ಯಾತ ಸಮುದಾಯದಲ್ಲಿ ಆತಂಕ, ಅಭದ್ರತೆ ಮೂಡಿಸಿದೆ.


ಸಮಾಜದಲ್ಲಿ ಭೀತಿಯ ವಾತಾವರಣ ‌ನಿರ್ಮಾಣಗೊಂಡಿದೆ, ಜಲೀಲ್ ಮಡದಿ ಹಾಗೂ ಹತ್ತು ತಿಂಗಳ ಮಗು ಅನಾಥವಾಗಿದೆ. ಈ ಸಂದರ್ಭದಲ್ಲಿ ಕೊಲೆಯನ್ನು ಬಲವಾಗಿ ಖಂಡಿಸುವುದು, ಸಂತ್ರಸ್ತ ಕುಟುಂಬದ ಜೊತೆ ನಿಲ್ಲುವುದು, ಆತಂಕಕ್ಕೊಳಗಾಗಿರುವ ಸಮುದಾಯದ ನ್ಯಾಯದ ಬೇಡಿಕೆಗೆ ಧ್ವನಿಗೂಡಿಸುವುದು ನಾಗರಿಕ ಸಮಾಜದ ಜವಾಬ್ದಾರಿ‌.

ಆ ಉದ್ದೇಶದ ಭಾಗವಾಗಿ ವಿವಿಧ ಸಮುದಾಯಗಳಿಗೆ ಸೇರಿದ ಮಂಗಳೂರಿನ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಕೊಲೆಗೀಡಾದ ಜಲೀಲ್ ಮನೆಗೆ ಭೇಟಿ ನೀಡಿದ್ದೇವೆ ಎಂದು ಪ್ರತಿನಿಧಿಗಳ ನಿಯೋಗ ಹೇಳಿಕೆಯಲ್ಲಿ ತಿಳಿಸಿದೆ‌.


ನಿಷ್ಪಕ್ಷಪಾತ ತನಿಖೆ ನಡೆಯಬೇಕು, ಕೊಲೆಗೆ ಪ್ರಚೋದನೆ ನೀಡಿದವರನ್ನು ಬಯಲಿಗೆ ತರಬೇಕು, ಕುಟುಂಬಕ್ಕೆ ಸರಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ನಿಯೋಗ ಆಗ್ರಹಿಸಿತು.

ವಿನಾಕಾರಣ ಕೊಲೆಗೀಡಾದ ಜಲೀಲ್ ರ ಸಂತ್ರಸ್ತ ಕುಟುಂಬವನ್ನು ಶಾಸಕ ಭರತ್ ಶೆಟ್ಟಿ ಸೌಜನ್ಯಕ್ಕೂ ಭೇಟಿಯಾಗದಿರುವುದನ್ನು ನಾಗರಿಕರ ನಿಯೋಗ ಬಲವಾಗಿ ಖಂಡಿಸಿತು, ಹಾಗೂ ಶಾಸಕರು ತಕ್ಷಣ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ ಧೈರ್ಯ ತುಂಬಬೇಕು, ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು.


ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಹಿರಿಯ ದಲಿತ ನಾಯಕರಾದ ಎಂ ದೇವದಾಸ್, ರಘು ಎಕ್ಕಾರು, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐ ಮುಂದಾಳು ವಿ ಕುಕ್ಯಾನ್, ಮಾಜಿ ಮೇಯರ್, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ ಅಶ್ರಫ್,

ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್, ಮಾಜಿ ಉಪಮೇಯರ್ ಗಳಾದ ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್‌ ಕುಂಜತ್ತಬೈಲ್,

ಜಯ ಕರ್ನಾಟಕ ಸುರತ್ಕಲ್ ಅಧ್ಯಕ್ಷರಾದ ವೈ ರಾಘವೇಂದ್ರ ರಾವ್, ಕಾರ್ಮಿಕ ನಾಯಕರುಗಳಾದ ಸದಾಶಿವ ಶೆಟ್ಟಿ ಸುರತ್ಕಲ್, ಕರುಣಾಕರ ಮಾರಿಪಳ್ಳ, ಮಾಜಿ ಕಾರ್ಪೊರೇಟರ್ ಗಳಾದ ದಯಾನಂದ ಶೆಟ್ಟಿ, ಅಯಾಝ್ ಕೃಷ್ಣಾಪುರ, ಅಬೂಬಕ್ಕರ್ ಕುದ್ರೋಳಿ, ಡಿವೈಎಫ್ಐ ಪದಾಧಿಕಾರಿಗಳಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್, ರಫೀಕ್ ಹರೇಕಳ, ಮುಸ್ಲಿಂ ಐಕ್ಯತಾ ವೇದಿಕೆಯ ಯಾಸೀನ್ ಕುದ್ರೋಳಿ,

ಅಶ್ರಫ್ ಕಾನ, ಸಾಮಾಜಿಕ ಕಾರ್ಯಕರ್ತರಾದ ಪ್ರಮೀಳಾ ದೇವಾಡಿಗ, ಅಸುಂತಾ ಡಿ ಸೋಜ, ಪ್ರಮೀಳಾ ಕಾವೂರು, ಸಿಲ್ವಿಯಾ ಜೋಕಟ್ಟೆ, ಆಶಾ ಬೋಳೂರು, ಶ್ರೀಕಾಂತ್ ಸಾಲ್ಯಾನ್, ಮೂಸಬ್ಬ ಪಕ್ಷಿಕೆರೆ, ಶಾಹುಲ್ ಹಮೀದ್ ಬಜ್ಪೆ, ಸಾಲಿ ಮರವೂರು, ಸಿರಾಜ್ ಬಜ್ಪೆ, ಬಶೀರ್ ಕೃಷ್ಣಾಪುರ, ನಾಸಿರ್ ಕೃಷ್ಣಾಪುರ, ಸ್ಥಳೀಯ ಮುಸ್ಲಿಂ ಜಮಾತ್ ಅಧ್ಯಕ್ಷ ಅಬ್ದುಲ್ ರಕೀಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

DAKSHINA KANNADA

ಪುತ್ತೂರು: ರೈಲಿನಿಂದ ಜಾರಿ 25 ಅಡಿ ಆಳಕ್ಕೆ ಬಿದ್ದ ಯುವಕ

Published

on

ಪುತ್ತೂರು: ರೈಲಿನಿಂದ ಜಾರಿ ಯುವಕನೊಬ್ಬ 25 ಅಡಿ ಆಳಕ್ಕೆ ಬಿದ್ದು ಬಳಿಕ ಪವಾಡ ಸದೃಶವಾಗಿ ಬದುಕುಳಿದ ಘಟನೆ ಕಡಬದ ಸವಣೂರು ಎಂಬಲ್ಲಿ ನಡೆದಿದೆ.

ಉದಯ್ ಕುಮಾರ್ ರೈಲಿನಿಂದ ಬಿದ್ದ ಯುವಕ. ಈತ ಮಂಗಳೂರಿನಿಂದ ಬೆಂಗಳೂರು ಕಡೆಗೆ ರೈಲಿನಲ್ಲಿ ಹೊರಟಿದ್ದನು. ಆದರೆ ಬಾಗಿಲ ಬಳಿ ನಿಂತಿದ್ದರಿಂದ ಆಕಸ್ಮತ್‌ ಆಗಿ ರೈಲಿನಿಂದ 25 ಅಡಿ ಆಳಕ್ಕೆ ಜಾರಿ ಮೋರಿ ಬಳಿ ಬಿದ್ದಿದ್ದ. ರಾತ್ರಿ ವೇಳೆ ಈತ ಬಿದ್ದಿದ್ದರಿಂದ ಸಹ ಪ್ರಯಾಣಿಕರಿಗೆ ಮಾತ್ರ ತಿಳಿದಿತ್ತು.

ನಂತರ ರೈಲು ಮುಂದಿನ ನಿಲ್ದಾಣ ತಲುಪಿದಾಗ ರೈಲ್ವೇ ಮಾಸ್ಟರ್ಗೆ ವಿಷಯವನ್ನು ತಿಳಿಸಿದರು. ಆದರೆ ಯುವಕ ಎಲ್ಲಿ ಬಿದ್ದ ಎಂಬುದಾಗಿ ಯಾರಿಗೂ ತಿಳಿದಿರಲಿಲ್ಲ. ರಾತ್ರಿಯಾದ್ದರಿಂದ ಹುಡುಕಲು ಸಹ ಸಾಧ್ಯವಾಗಲಿಲ್ಲ.

ಆದರೆ ಮರುದಿನ ಬೆಳಗ್ಗೆ ಯುವಕ ಮೋರಿಯ ಬಳಿ ನರಳಾಡುವುದನ್ನು ಸ್ಥಳೀಯರು ಗಮನಿಸಿ ಕೂಡಲೇ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಮುಖ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಹೀಗೆ 15 ಗಂಟೆಯ ಬಳಿಕ ಈತ ಪತ್ತೆಯಾಗಿರುವುದು ವಿಶೇಷವೇ ಸರಿ.

Continue Reading

DAKSHINA KANNADA

ಮಾವಿನ ಮಿಡಿ ಕೊಯ್ಯಲು ಹೋಗಿ ದುರಂ*ತ; ಮರದಿಂದ ಬಿ*ದ್ದು ವ್ಯಕ್ತಿ ಸಾ*ವು

Published

on

ಸುಳ್ಯ : ಮಾವಿನ ಮರ ಏರಿ ಮಾವಿನ ಮಿಡಿಗಳನ್ನು ಕೊಯ್ಯುತ್ತಿದ್ದ ವೇಳೆ ಮರದ ಕೊಂಬೆ ತುಂಡಾಗಿ ಬಿದ್ದು ವ್ಯಕ್ತಿಯೊಬ್ಬರು ಮೃ*ತ ಪಟ್ಟಿದ್ದಾರೆ. ಸುಳ್ಯ ತಾಲೂಕಿನ ಉಬರಡ್ಕ ಎಂಬಲ್ಲಿ ಈ ಘಟನೆ ನಡೆದಿದ್ದು, ಜನಾರ್ದನ ಪೂಜಾರಿ ಮೃ*ತ ದುರ್ದೈವಿ.

ಉಬರಡ್ಕದ ನೆಯ್ಯೋಣಿ ನಿವಾಸಿಯಾಗಿದ್ದ ಇವರು ಮಾರ್ಚ್ 22 ರಂದು ಮಾವಿನ ಮರದಿಂದ ಮಾವಿನ ಮಿಡಿ ಕೊಯ್ಯುತ್ತಿದ್ದರು. ಈ ವೇಳೆ ಕೊಂಬೆ ತುಂಡಾಗಿದೆ. ಪರಿಣಾಮ ಕೊಂಬೆಯ ಸಹಿತ ಮರದಿಂದ ಕೆಳಗೆ ಬಿ*ದ್ದ ಅವರಿಗೆ ಗಂಭೀ*ರ ಸ್ವರೂಪದ ಗಾ*ಯಗಳಾಗಿತ್ತು.

ಇದನ್ನೂ ಓದಿ : ಬೆಳ್ತಂಗಡಿ : ಟಿಸಿ ಬಳಿಯಲ್ಲಿ ಮೆಸ್ಕಾಂ ಸಿಬ್ಬಂದಿಯ ಮೃ*ತದೇಹ ಪತ್ತೆ

ಸೊಂಟ ಹಾಗೂ ತಲೆಗೆ ಏಟಾಗಿದ್ದ ಅವರನ್ನು ತಕ್ಷಣ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಜನಾರ್ದನ ಪೂಜಾರಿ ಮೃ*ತಪಟ್ಟಿದ್ದಾರೆ.

Continue Reading

DAKSHINA KANNADA

ಬೆಳ್ತಂಗಡಿ : ಟಿಸಿ ಬಳಿಯಲ್ಲಿ ಮೆಸ್ಕಾಂ ಸಿಬ್ಬಂದಿಯ ಮೃ*ತದೇಹ ಪತ್ತೆ

Published

on

ಬೆಳ್ತಂಗಡಿ : ಮೆಸ್ಕಾಂ ಇಲಾಖೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಲೈನ್ ಮ್ಯಾನ್ ಆಗಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರ ಮೃ*ತದೇಹ ಟ್ರಾನ್ಸ್ ಫಾರ್ಮರ್ ಒಂದರ ಬಳಿ ಪತ್ತೆಯಾಗಿದೆ.  ಬುಧವಾರ(ಮಾ.26) ಸಂಜೆ ವೇಳೆಯಲ್ಲಿ ಮೃ*ತದೇಹ ಪತ್ತೆಯಾಗಿದ್ದು, ಸಾ*ವು ಆಕಸ್ಮಿಕವೋ ಅಥವಾ ದು*ರ್ಘಟನೆಯೋ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಬೆಳ್ತಂಗಡಿ ತಾಲೂಕಿನ ನಾರವಿಯ ಅಡಿಂಜೆ ಎಂಬಲ್ಲಿ ಈ ಘಟನೆ ನಡೆದಿದ್ದು, ಮೃ*ತ ವ್ಯಕ್ತಿ ಕಿಟ್ಟಿ ಎಂದೇ ಫೇಮಸ್ ಆಗಿದ್ದ  ಸುಧಾಕರ್(50) ಎಂಬವರದ್ದಾಗಿದೆ. ನಾರಾವಿಯ ತುಂಬೆ ಗುಡ್ಡೆ ಎಂಬಲ್ಲಿಯ ನಿವಾಸಿಯಾಗಿದ್ದ ಸುಧಾಕರ್ ಕಳೆದ 27 ವರ್ಷಗಳಿಂದ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬುಧವಾರ ಸಂಜೆ ಟ್ರಾನ್ಸ್ ಫಾರ್ಮರ್ ಬಳಿ ಹೋಗಿದ್ದ ಇವರು ಅಲ್ಲೇ ಮೃ*ತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ : ಕೋಟ : ಅಜ್ಜಿಯ ಚಿನ್ನದ ಸರ ಕದ್ದಿದ್ದ ಆರೋಪಿ ಅರೆಸ್ಟ್

ಕೈನಲ್ಲಿ ಸಣ್ಣದೊಂದು ಗಾ*ಯ ಹೊರತು ಪಡಿಸಿದರೆ ಬೇರೆ ಯಾವುದೇ ಅನುಮಾನಾಸ್ಪದವಾದ ಕುರುಹು ಇಲ್ಲವಾಗಿದೆ. ಹಾಗಂತ ನಿನ್ನೆ ಸಂಜೆಯ ವೇಳೆ ಪರಿಸರದಲ್ಲಿ ಗುಡುಗು ಹಾಗು ಸಿಡಿಲು ಕೂಡ ಇತ್ತು. ಹಾಗಾಗಿ ಟ್ರಾನ್ಸ್ ಫಾರ್ಮರ್ ಬಳಿ ಹೋಗಿದ್ದಾಗ ಸಿಡಿಲು ಬಡಿಯಿತಾ ಅಥವಾ ವಿದ್ಯುತ್ ಪ್ರವಹಿಸಿತಾ ಅನ್ನೋ ಅನುಮಾನವೂ ಇದೆ.

ಸದ್ಯ ಮೃ*ತದೇಹವನ್ನು ಮ*ರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾ*ವಿಗೆ ನಿಖರ ಕಾರಣ ಗೊತ್ತಾಗಲಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page