Connect with us

LATEST NEWS

ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ 130 ಕೆ.ಜಿ ಡ್ರಗ್‌ ನಾಶ

Published

on

ಮಂಗಳೂರು: ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆ ಇಂದು ಜಿಲ್ಲೆಯಲ್ಲಿ ನಡೆಯುತ್ತಿದ್ದು, ಜಿಲ್ಲೆಯ ಆಯಾ ಪೊಲೀಸ್ ಠಾಣೆಯಲ್ಲಿ ಪತ್ತೆಯಾಗಿರುವ ಮಾದಕ ದ್ರವ್ಯವನ್ನು ನಾಶಪಡಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.

ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಪತ್ತೆಯಾಗಿರುವ 130ಕ್ಕೂ ಕಿಲೋ ಹೆಚ್ಚಿನ ಗಾಂಜಾ, ಎಂಡಿಎಂಎ, ಕೊಕೇನ್‌, ಬ್ರೌನ್‌ ಶುಗರ್‌ಗಳನ್ನು  50 ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಡ್ರಗ್‌ ನಾಶ ಮಾಡುತ್ತಿದ್ದೇವೆ. ಇದಕ್ಕೆ ಇರುವ ಎಲ್ಲಾ ನಿಯಮಗಳ ಅನುಸಾರ ಇದನ್ನು ನಾಶ ಮಾಡಲು ನಾವು ಮುಂದಾಗಿದ್ದೇವೆ. ಮಂಗಳೂರು ನಗರದಲ್ಲಿ ಈಗಾಗಲೇ ಹಲವು ಗಾಂಜಾ ಪ್ರಕರಣಗಳು ಪತ್ತೆಯಾಗಿದ್ದು ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು 214 ಪ್ರಕರಣಗಳನ್ನು ಈಗಾಗಲೇ ದಾಖಲು ಮಾಡಿದ್ದು, 300ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದೇವೆ. ನೈಜೀರಿಯನ್, ಓಮಾನ್‌, ಕಾಸರಗೋಡಿನ ಹಲವು ಗಾಂಜಾ ಆರೋಪಿಗಳನ್ನು ನಾವು ಬಂಧಿಸಿದ್ದೇವೆ.  ಮಂಗಳೂರಿನ ಜನ ಸುಶಿಕ್ಷಿತರಾಗಿದ್ದು, ಎಲ್ಲರೂ ಸರಕಾರದೊಂದಿಗೆ ಕೈಜೋಡಿಸಿಕೊಂಡು , ಪೊಲೀಸ್ ಇಲಾಖೆಗೆ ಕಾಲ ಕಾಲಕ್ಕೆ ಮಾಹಿತಿ ನೀಡಿ ಮಾದಕ ದ್ರವ್ಯವನ್ನು ಮಟ್ಟ ಹಾಕಲು ಸಹಕರಿಸಿ ಎಂದರು.

ದ.ಕ. ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನವಣೆ ಮಾತನಾಡಿ, ಎಸ್ಪಿ ವ್ಯಾಪ್ತಿಯಲ್ಲಿ 224 ಕೆ.ಜಿ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ 214 ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಭಾಸ್ಕರ್ ವಿ.ಬಿ., ಬಂಟ್ವಾಳ ಡಿವೈಎಸ್ಪಿ ವ್ಯಾಲಂಟೈನ್ ಡಿಸೋಜ, ಡಿಸಿಆರ್‌ಬಿ ಡಿವೈಎಸ್ಪಿ ದಿನಕರ ಶೆಟ್ಟಿ, ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ.‌ಕುಮಾರ್, ಬಯೋ ಮೆಡಿಕಲ್ ವೇಸ್ಟ್ ಟ್ರೀಟ್‌ಮೆಂಟ್ ರೂಮ್‌ನ ಇನ್‌ಚಾರ್ಜ್ ಪ್ರಶಾಂತ್  ಮತ್ತಿತರರು ಉಪಸ್ಥಿತರಿದ್ದರು

 

DAKSHINA KANNADA

ಓವರ್ ಟೇಕ್ ಮಾಡುವ ಭರದಲ್ಲಿ ಒಮ್ನಿಗೆ ಗುದ್ದಿದ ಬೈಕ್ ; ಸಹೋದರರಿಬ್ಬರು ಗಂಭೀರ

Published

on

ಉಳ್ಳಾಲ : ಬೈಕ್ ಸವಾರನ ನಿರ್ಲಕ್ಷ್ಯ ಚಾಲನೆ ಉಳ್ಳಾಲ ತಾಲೂಕಿನ ಹರೆಕಳ ಸಮೀಪದ ಬಾವಲಿಗುಳಿ ಎಂಬಲ್ಲಿ ಭೀಕರ ಅಪಘಾತದಲ್ಲಿ ಸಹೋದರರಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಈ ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಎದ್ದು ಕಂಡಿದೆ. ನಿಧಾನವಾಗಿ ಹೋಗುತ್ತಿದ್ದ ಅಂಬ್ಯುಲೆನ್ಸ್ ಒಂದನ್ನು ತಿರುವಿನಲ್ಲಿ ಬೈಕ್ ಸವಾರ ಓವರ್ ಟೇಕ್ ಮಾಡಿದ್ದಾನೆ. ಈ ವೇಳೆ ಎದುರಿನಿಂದ ಮಾರುತಿ ಒಮ್ನಿ ವಾಹನ ಬಂದಿದ್ದು, ಅದನ್ನು ತಪ್ಪಿಸಲು ರಸ್ತೆಯ ಬದಿಗೆ ಬೈಕ್ ಚಲಾಯಿಸಿದ್ದಾರೆ.

ಆದ್ರೆ ಈ ವೇಳೆ ಮಾರುತಿ ಒಮ್ನಿ ವಾಹನ ಚಾಲಕ ಕೂಡಾ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನವನ್ನು ರಸ್ತೆಯ ಬದಿಗೆ ಚಲಾಯಿಸಿದ್ದಾನೆ. ಈ ವೇಳೆ ಬೈಕ್ ಹಾಗೂ ಮಾರುತಿ ಓಮ್ನಿ ವಾಹನ ಮುಖಾ ಮುಖಿ ಡಿಕ್ಕಿಯಾಗಿದೆ. ಬೈಕ್ ಸವಾರ ಹಾಗೂ ಸಹ ಸವಾರನಾಗಿದ್ದ ಆತನ ಸಹೋದರ ಇಬ್ಬರೂ ಹೆಲ್ಮೆಟ್ ಕೂಡಾ ಧರಿಸಿಲ್ಲದ ಕಾರಣ ಇಬ್ಬರಿಗೂ ತೀವೃ ಸ್ವರೂಪದ ಗಾಯಗಳಾಗಿದೆ. ಅಪಘಾತ ನಡೆದ ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Continue Reading

LATEST NEWS

ಮಂಗನಕಾಯಿಲೆಗೆ ರಾಜ್ಯದಲ್ಲಿ ಮೊದಲ ಬಲಿ

Published

on

ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ಮಂಗನಕಾಯಿಲೆಯ ಭೀತಿ ಉಲ್ಬಣಗೊಳ್ಳುತ್ತಿದ್ದು, ಇದೀಗ ಈ ಕಾಯಿಲೆಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 65 ವರ್ಷದ ಮಹಿಳೆಯೊಬ್ಬಳು ಮಂಗನಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾಳೆ.

ಎನ್​.ಆರ್.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದ ನಿವಾಸಿ ಕಮಲಾ (65 ವರ್ಷ) ಮೃತಪಟ್ಟ ಮಹಿಳೆ. ಪ್ರತಿನಿತ್ಯವೂ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇವರು ಮಂಗನಕಾಯಿಲೆಗೆ ತುತ್ತಾಗಿದ್ದರು. ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕಾಫಿತೋಟದಲ್ಲಿ ಕೆಲಸ ಮಾಡುವ ಜನರಿಗೆ ಈ ಕಾಯಿಲೆ ಹೆಚ್ಚಾಗಿ ಬರುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 51 ಜನರಿಗೆ ಮಂಗನಕಾಯಿಲೆ ದೃಢಪಟ್ಟಿದೆ. ಮಂಗನ ಕಾಯಿಲೆಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಕೂಡ​ ತೆರದಿದೆ.

ಕಳೆದ‌ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ 132 ಜನರಲ್ಲಿ ಕಾಯಿಲೆ ಕಾಣಿಸಿಕೊಂಡು ನಾಲ್ವರನ್ನು ಬಲಿ ಪಡೆದಿತ್ತು. ಹೀಗಾಗಿ ಮಂಗನ ಕಾಯಿಲೆ ತನ್ನ ರುದ್ರರೂಪ ತಾಳುವ ಮುನ್ನ ಅರೋಗ್ಯ ಇಲಾಖೆ ಇನ್ನಷ್ಟು ಅಲರ್ಟ್ ಆಗಬೇಕಿದೆ.

Continue Reading

LATEST NEWS

20 ವಿದ್ಯಾರ್ಥಿಗಳಿಗೆ ಮರಣದಂಡನೆ; ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಬಾಂಗ್ಲಾ ಹೈಕೋರ್ಟ್

Published

on

ಮಂಗಳೂರು/ಢಾಕಾ: 2019ರಲ್ಲಿ ರಾಜಕೀಯ ನಂಟು ಹೊಂದಿದ್ದಾನೆ ಎಂದು ಆರೋಪಿಸಿ ಎರಡನೇ ವರ್ಷದ ಪದವಿ ವಿದ್ಯಾರ್ಥಿಯನ್ನು ಕೊಂ*ದಿದ್ದ 20 ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಿರುವ ಕೆಳ ನ್ಯಾಯಾಲಯದ ತೀರ್ಪನ್ನು ಬಾಂಗ್ಲಾದೇಶ ಹೈಕೋರ್ಟ್ ಭಾನುವಾರ ಎತ್ತಿಹಿಡಿದಿದೆ.


ನ್ಯಾಯಮೂರ್ತಿಗಳಾದ ಎಕೆಎಂ ಅಸಾದುಜ್ಜಮಾನ್ ಮತ್ತು ನ್ಯಾಯಮೂರ್ತಿ ಸೈಯದ್ ಎನಾಯೆತ್ ಹೊಸೈನ್ ಅವರ ದ್ವಿ ಸದಸ್ಯ ಪೀಠವು, ಕೆಳ ಹಂತದ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಹಾಗೂ ಮರಣದಂಡನೆ ಉಲ್ಲೇಖ ಕುರಿತು ವಿಚಾರಣೆಯನ್ನು ಒಟ್ಟಿಗೆ ನಡೆಸಿ ತೀರ್ಪು ಪ್ರಕಟಿಸಿದ ಕುರಿತು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಏನಿದೂ ಪ್ರಕರಣ?
ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಎಲ್ಲರೂ, ಬಾಂಗ್ಲಾದೇಶದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (ಬಿಯುಇಟಿ) ವಿದ್ಯಾರ್ಥಿಗಳಾಗಿದ್ದು, ಸದ್ಯ ನಿಷೇಧಗೊಂಡಿರುವ ‘ಬಾಂಗ್ಲಾದೇಶ ಛತ್ರ ಲೀಗ್‌’ಗೆ (ಬಿಸಿಎಲ್) ಸೇರಿದವರಾಗಿದ್ದಾರೆ. ಇದು, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ‘ಅವಾಮಿ ಲೀಗ್‌’ ಪಕ್ಷದ ವಿದ್ಯಾರ್ಥಿ ಘಟಕವಾಗಿದೆ.

‘ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್’ ವಿಷಯದ 2ನೇ ವರ್ಷದ ವಿದ್ಯಾರ್ಥಿಯಾಗಿದ್ದ ಅಬ್ರಾರ್ ಫಹಾದ್ ಹಸೀನಾ ಸರ್ಕಾರದ ವಿರುದ್ದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡ ಎಂಬ ಕಾರಣಕ್ಕೆ ಫಹಾದ್ ಮೇಲೆ ದಾಳಿ ಮಾಡಲಾಗಿತ್ತು.

ಫಹಾದ್ ಅವರ ಶವ ವಿವಿಯ ವಿದ್ಯಾರ್ಥಿನಿಲಯದಲ್ಲಿ 2019ರ ಅಕ್ಟೋಬರ್ 8ರಂದು ಬೆಳಿಗ್ಗೆ ಪತ್ತೆಯಾಗಿತ್ತು. ಆತನ ಮೇಲೆ, ಕ್ರಿಕೆಟ್ ಬ್ಯಾಟ್ ಹಾಗೂ ಇತರ ವಸ್ತುಗಳಿಂದ ಸುಮಾರು 6 ಗಂಟೆಗಳ ಕಾಲ, 25 ವಿದ್ಯಾರ್ಥಿಗಳು ಹ*ಲ್ಲೆ ಮಾಡಿದ್ದರು ಎಂಬುದು ತನಿಖೆಯ ನಂತರ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಆಟವಾಡಲೆಂದು ಕೆರೆಗೆ ಹಾರಿ ಸಾವನ್ನಪ್ಪಿದ 9 ವರ್ಷದ ಬಾಲಕಿ

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಬಾಂಗ್ಲಾದೇಶ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ (ಬಿಯುಇಟಿ) ಕೂಡಲೇ ಹೊರಹಾಕಿದ್ದವು.
ಢಾಕಾ ನ್ಯಾಯಾಲಯ, ಅವಾಮಿ ಲೀಗ್ ಅಧಿಕಾರದಲ್ಲಿದ್ದಾಗಲೇ (2021ರ ಡಿಸೆಂಬರ್ 8ರಂದು) 20 ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. ಹೈಕೋರ್ಟ್ ಈ ಆದೇಶವನ್ನು ಎತ್ತಿಹಿಡಿದಿರುವುದಷ್ಟೇ ಅಲ್ಲದೆ, ‘ಬಿಯುಇಟಿ ವಿದ್ಯಾರ್ಥಿಗಳಾಗಿದ್ದ ಇತರ ಐವರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ’ ಎಂದು ಅಟಾರ್ನಿ ಜನರಲ್ ಎಂ. ಅಸಾದುಜ್ಜಮಾನ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಶಿಕ್ಷೆಗೆ ಗುರಿಯಾದವರ ಪೈಕಿ, ಮುನ್ತಾಸಿರ್ ಅಲ್ ಜಮೀ ಎಂಬಾತ ಕಾಶಿಮುರ್ ಕಳೆದ ವರ್ಷ (2024) ಕೇಂದ್ರ ಕಾರಾಗೃಹದ ಜೈಲಿನಿಂದ ಪರಾರಿಯಾಗಿದ್ದಾನೆ.

ದೇಶದಾದ್ಯಂತ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ 2024ರ ಆಗಸ್ಟ್ 5ರಂದು ದೇಶದಿಂದ ಪಲಾಯನ ಮಾಡಿದ್ದರು. ಮರುದಿನ (ಆಗಸ್ಟ್ 6ರಂದು) ಮುನ್ತಾಸಿರ್ ಸೇರಿದಂತೆ 86 ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ.

ಹೈಕೋರ್ಟ್ ತೀರ್ಪಿನ ಕುರಿತು ಮಾತನಾಡಿದ ಫಹಾದ್ ತಂದೆ, ‘ತೀರ್ಪು ಸಮಾಧಾನ ತಂದಿದೆ. ಇದು ಶೀಘ್ರದಲ್ಲೇ ಜಾರಿಯಾಗಬೇಕು’ ಎಂದಿದ್ದಾರೆ. ಫಹಾದ್ ಸಹೋದರ ಫೈಯಾಜ್, ‘ಇಷ್ಟು ಶೀಘ್ರದಲ್ಲೇ ತೀರ್ಪು ಪ್ರಕಟವಾಗಲಿದೆ ಎಂದು ನಿರೀಕ್ಷಿಸಿರಲಿಲ್ಲ. ಇನ್ನೂ ಅನೇಕ ಕಾನೂನು ಕಾರ್ಯವಿಧಾನಗಳು ಉಳಿದಿದ್ದರೂ, ಈ ತೀರ್ಪು ನಮಗೆ ಸಮಾಧಾನ ತಂದಿದೆ’ ಎಂದು ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page