Connect with us

DAKSHINA KANNADA

ಮಂಗಳೂರು : ಸಾರ್ವಜನಿಕರಿಗೆ ಮಂಗಳಮುಖಿಯರಿಂದ ಕಿರುಕುಳ ಆರೋಪ -13 ಮಂದಿ ಮೇಲೆ ಕಾನೂನು ಕ್ರಮ..!

Published

on

ಮಂಗಳಮುಖಿಯರು ಸಾರ್ವಜನಿಕರಿಗೆ ವ್ಯಾಪಕ ಕಿರುಕುಳ ಮತ್ತು ದಾರಿಹೋಕರಿಂದ ಬಲವಂತವಾಗಿ ಹಣವನ್ನು ವಸೂಲಿ ಮಾಡುವ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಏಕಾಏಕಿಯಾಗಿ ಮಂಗಳೂರು ಪೊಲೀಸರು ಮಂಗಳಮಖಿಯರಿಗೆ ಬಿಸಿ ಮುಟ್ಟಿಸಿದ ಘಟನೆ ನಡೆದಿದೆ.

ಮಂಗಳೂರು : ಮಂಗಳಮುಖಿಯರು ಸಾರ್ವಜನಿಕರಿಗೆ ವ್ಯಾಪಕ ಕಿರುಕುಳ ಮತ್ತು ದಾರಿಹೋಕರಿಂದ ಬಲವಂತವಾಗಿ ಹಣವನ್ನು ವಸೂಲಿ ಮಾಡುವ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಏಕಾಏಕಿಯಾಗಿ ಮಂಗಳೂರು ಪೊಲೀಸರು ಮಂಗಳಮಖಿಯರಿಗೆ ಬಿಸಿ ಮುಟ್ಟಿಸಿದ ಘಟನೆ ನಡೆದಿದೆ.

13 ಮಂದಿ ಮಂಗಳಮುಖಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಸಂಜೆಯಾಗುತ್ತಿದ್ದಂತೆ ಮಂಗಳಮುಖಿಯರು‌ ಮಂಗಳೂರು ನಗರದ ಕುಂಟಿಕಾನದ ಬಳಿ ಇರುವ ಅಂಡರ್ ಪಾಸ್ ಕೆಳಗೆ ನಿಂತು‌ ಗಂಡಸರಿಗೆ ಲೈಂಗಿಕ ‌ಕ್ರಿಯೆಗೆ ಪ್ರಚೋದನೆ ನೀಡುವುದು, ದಾರಿಹೋಕರಿಂದ ಬಲವಂತದ ಹಣ ವಸೂಲಿ ಮಾಡುವುದು ಸರ್ವೇ ಸಾಮಾನ್ಯವಾಗಿತ್ತು.

ಈ ಹಿಂದೆ ಕೂಡಾ ಕುಂಟಿಕಾನ ಕೆಳಸೇತುವೆ ಬಳಿ ಇದೇ ರೀತಿ ಅಸಭ್ಯವಾಗಿ ನಿಂತು ಕಿರುಕುಳ ನೀಡುತ್ತಿದ್ದು ವ್ಯಾಪಕವಾಗಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು.

ಪ್ರತಿಭಟನೆ ಕೂಡಾ ನಡೆದಿತ್ತು. ಹೀಗಾಗಿ ಇಲ್ಲಿ ನಿಂತು ಅಸಭ್ಯವಾಗಿ ವರ್ತಿಸಬಾರದೆಂದು ಉರ್ವ ಪೊಲೀಸರು ಮಂಗಳಮುಖಿಯರಿಗೆ ಎಚ್ಚರಿಕೆ ನೀಡಿದ್ದರು.

ಇದೇ ಜಾಗದಲ್ಲಿ ಶನಿವಾರ ರಾತ್ರಿಯೂ ನಡೆದಿದ್ದು, ಅನ್ಯ ಜಿಲ್ಲೆಗಳಿಂದ ಬಂದ ಕೆಲವು ಮಂಗಳಮುಖಿಯರು ಸಾರ್ವಜನಿಕರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುವುದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಉರ್ವ ಪೊಲೀಸ್‌ ಠಾಣೆ ಸಿಬ್ಬಂದಿಗಳು‌‌ ನಿರ್ಬಂದ ಹೇರಿದ್ದರು. ನಿನ್ನೆ ರಾತ್ರಿಯೂ ಇದೇ ರೀತಿ ಪುನರಾವರ್ತನೆಯಾದಾಗ ಕೆಲವು ಮಂಗಳಮುಖಿಯರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಉರ್ವ ಠಾಣಾ ಇನ್ಸ್‌ಪೆಕ್ಟರ್ ಭಾರತಿ ಹಾಗೂ ಸಬ್‌ ಇನ್ಸ್‌ಪೆಕ್ಟರ್‌, ಹೆಚ್ಚವರಿ ಸಿಬ್ಬಂದಿಯೊಂದಿಗೆ ಆಗಮಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಾರಣ 13 ಮಂದಿ ಮಂಗಳಾಮುಖಿಯರನ್ನು ಬಂಧಿಸಿ ನ್ಯಾಯಾಧೀಶರೆದುರು ಹಾಜರು ಪಡಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ 13 ಮಂದಿ ಮಂಗಳಮುಖಿಯರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ನಗರದಲ್ಲಿನ ಅನೈತಿಕ ಚಟುವಟಿಕೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಡೆಸುವ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

DAKSHINA KANNADA

ಕಲ್ಲರ್ಪೆಯಲ್ಲಿ ಮತ್ತೊಂದು ಅಪಘಾತ; ಕಾರು ಬೈಕ್ ಮುಖಾಮುಖಿ ಡಿಕ್ಕಿ, ಬೈಕ್‌ ಸವಾರ ಗಂಭೀರ

Published

on

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಕಾರು ಬೈಕ್ ಮುಖಾಮುಖಿ ಡಿಕ್ಕಿಯೂ ಆ ಭಾಗದಲ್ಲಿನ ರಸ್ತೆ ಸುರಕ್ಷ ತಾ ಕ್ರಮಗಳ ವೈಫಲ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಈ ದುರ್ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರನ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿಯೂ ಇದೇ ಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಪಲ್ಟಿಯಾಗಿತ್ತು. ಅದೃಷ್ಟವಶಾತ್‌ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಪ್ರಯಾಣಿಸುವವರೇ ಎಚ್ಚರ; ಗದ್ದೆಗೆ ಬಿತ್ತು ಟಿಟಿ

ಇದೀಗ ಮತ್ತೊಂದು ಘಟನೆ ನಡೆದಿದ್ದು, ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಲ್ಲರ್ಪೆ ವಲಯವು ಅಪಘಾತಗಳ ಕೇಂದ್ರಬಿಂದುವಾಗಿ ಪರಿವರ್ತನೆಯಾಗುತ್ತಿರುವುದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ.

Continue Reading

DAKSHINA KANNADA

ಆಕಾಂಕ್ಷ ನಿಗೂಢ ಸಾವು ಪ್ರಕರಣ; ಸಮಗ್ರ ತನಿಖೆ ನಡೆಸುವಂತೆ ಶಾಸಕ ಹರೀಶ್‌ ಪೂಂಜಾ ಒತ್ತಾಯ

Published

on

ಬೆಳ್ತಂಗಡಿ: ಪಂಜಾಬ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಬೆಳ್ತಂಗಡಿಯ ವಿದ್ಯಾಥಿಧನಿ ಆಕಾಂಕ್ಷ ಮೃತದೇಹ ಇಂದು ಬೆಳಗ್ಗೆ ಆಕೆಯ ಬೊಳಿಯಾರ್ ಮನೆಗೆ ತಲುಪಿದೆ. ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.

 

ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜಾ, ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸ ಬೇಕು. ಆಕಾಂಕ್ಷಳ ಸಾವಿಗೆ ನ್ಯಾಯ ಸಿಗ ಬೇಕು. ಕರ್ನಾಟಕದ ಗೃಹ ಸಚಿವರಿಗೆ ಆಗ್ರಹ ಮಾಡ್ತೇನೆ ಎಂದರು. ಪ್ರಕರಣದ ಸಮಗ್ರ ತನಿಖೆ ನಡೆಸಿ ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವುದನ್ನು ಪತ್ತೆ ಮಾಡುವಂತೆ ಕರ್ನಾಟಕ ಸರಕಾರವು ಪಂಜಾಬ್ ಸರಕಾರವನ್ನು ಆಗ್ರಹಿಸ ಬೇಕೆಂದು ಒತ್ತಾಯಿಸಿದರು.

 

Continue Reading

DAKSHINA KANNADA

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ರಿಕ್ಷಾ

Published

on

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಪಲ್ಟಿಯಾದ ಘಟನೆ ಪುತ್ತೂರಿನಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ರಿಕ್ಷಾ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ನಿನ್ನೆ ರಾತ್ರಿ ರಾತ್ರಿ 10.30ರ ವೇಳೆಗೆ ಪರ್ಪುಂಜ ಭಾಗದಿಂದ ಆಗಮಿಸಿದ ರಿಕ್ಷಾ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಪಲ್ಟಿಯಾದ ರಿಕ್ಷಾ, ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಉರುಳಿ ಬಿದ್ದಿದೆ.

ಇದನ್ನೂ ಓದಿ: ಕಂಡೆಕ್ಟರ್ ಜೊತೆಗೂಡಿ ಹೈವೇಯಲ್ಲಿ ನಿಂತ ಸಾರಿಗೆ ಬಸ್ಸನ್ನು ತಳ್ಳಿದ ಮಹಿಳೆಯರು

ವಿದ್ಯುತ್ ತಂತಿಗಳು ಪರಸ್ಪರ ಸ್ಪರ್ಶಿಸಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಂಬ ಸ್ವಲ್ಪವಾಲಿದೆ. ಅದೃಷ್ಟವಶಾತ್‌ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page