Connect with us

ಮೊದಲ ಮಳೆಗೆ ಬಿರುಕು ಬಿಟ್ಟ ಪಂಪ್‌ವೆಲ್ ಮೇಲ್ಸೇತುವೆ.!!?

Published

on

ಮೊದಲ ಮಳೆಗೆ ಬಿರುಕು ಬಿಟ್ಟ ಪಂಪ್‌ವೆಲ್‌ ಮೇಲ್ಸೇತುವೆ.!!?

ಮಂಗಳೂರು: ಕರಾವಳಿಯಲ್ಲಿ ಸುರಿದ ಮೊದಲ ಮಳೆಗೆ ಜಗದ್ವಿಖ್ಯಾತ ಪಂಪ್‌ವೆಲ್‌ ಮೇಲ್ಸೇತುವೆ ಒಂದು ಬದಿ ಬಿರುಕು ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ 66 ಕಾಸರಗೋಡುಉಡುಪಿ ರಸ್ತೆಯ ಪಂಪ್ವೆಲ್ ಮೇಲ್ಸೇತುವೆ ಮೂರು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿತ್ತು.

ಮಂಗಳೂರಿನಲ್ಲಿ ಸುರಿದ ಮೊದಲ ಮಳೆಗೆ ಪಂಪ್‌ವೆಲ್ ಸೇತುವೆಯ ಒಂದು ಪಾಶ್ವದಲ್ಲಿ ಈ ಬಿರುಕು ಬಿಟ್ಟಿದ್ದು ಇದು ಅಪಾಯದ ಕರೆ ಗಂಟೆ ಬಾರಿಸಿದಂತಾಗಿದೆ.

ಈಗಾಗಲೇ ಲಾಕ್‌ ಡೌನ್‌ ಕಾರಣ ಸೇತುವೆಯಲ್ಲಿ ಸಂಚಾರ ಬೆರಳಿಕೆಯಲ್ಲಿರುವಾಗಲೇ ಈ  ಬಿರುಕು ಕಂಡಿದೆ. ಒಂದು ವೇಳೆ ವಾಹನಗಳ ಓಡಾಟ ಜಾಸ್ತಿಯಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಹಲವರ ಒತ್ತಡ. ಟೀಕೆ-ಟ್ರೋಲ್ ಗಳ ನಡುವೆ ಹರಿಬಿರಿಯಲ್ಲಿ ಪಂಪ್ ವೆಲ್ ಮೇಲ್ಸೇತುವೆ ತಲೆ ಎತ್ತಿ ನಿಂತಿತ್ತು. ಆದ್ರೆ ಇದೀಗ ಮೊದಲ ಮಳೆಗೆ ಈ ಮಟ್ಟದ ಬಿರುಕು ಕಂಡಾಗ ಅಪಾಯದ ಮುನ್ಸೂಚನೆ ಕಾಣುತ್ತಿದೆ.

ಸುಮಾರು 600 ಮೀ. ಉದ್ದ ಹಾಗೂ 20 ಮೀ. ಅಗಲವಿರುವ ಈ ಫ್ಲೈಓವರ್‌ ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿಯಿಂದ ಇಂಡಿಯಾನ ಆಸ್ಪತ್ರೆ ಮುಂಭಾಗದವರೆಗೆ ನಿರ್ಮಾಣವಾಗಿದೆ.

ಇಷ್ಟು ಉದ್ದದ ಮೇಲ್ಸೇತುವೆ 10 ವರ್ಷಗಳಿಂದ ಕುಂಟುತ್ತಾ ಸಾಗಿ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇವಲ ಮೂರು ತಿಂಗಳಲ್ಲೇ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗಿತ್ತು.

ಎರಡು ಕಡೆಗಳಿಂದಲೂ ಕಾಂಕ್ರೀಟ್‌ ಪ್ಯಾನೆಲ್‌ಗಳನ್ನು ಒಂದರ ಮೇಲೆ ಒಂದರಂತೆ ಸುಮಾರು 4.5 ಮೀ. ಎತ್ತರಕ್ಕೆ ಜೋಡಿಸಿ, ಪ್ಯಾನೆಲ್‌ಗಳ ಹಿಂದಿರುವ ಹುಕ್‌ಗಳಿಗೆ 7 ಮೀ. ಪ್ಲಾಸ್ಟಿಕ್‌ ರೋಪ್‌ ಮಾದರಿಯ ಶೀಟ್‌ಗಳನ್ನು ಹಾಸಿ ಅದರ ಮೇಲೆ ಮಣ್ಣು ಹಾಕಲಾಗಿದೆ.

ಇನ್ನು ಇತ್ತ ಇಂದು ಮುಂಜಾನೆ ಸುರಿದ ಮಳೆಯಿಂದಾಗಿ ಪಂಪ್ ವೆಲ್ ಮೇಲ್ಸೇತುವೆ ಪಕ್ಕದಲ್ಲಿರುವ ಸರ್ವೀಸ್ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ.

ಪ್ರಮುಖ ಹೆದ್ದಾರಿಯ ನೀರು ಹರಿದು ಹೋಗಲು ಮಾಡಿದ ಜಾಗದಿಂದ ರಭಸವಾಗಿ ಹರಿದ ನೀರು ಪಕ್ಕದಲ್ಲಿ ತುಂಬಿಸಿದ್ದ ಕೆಂಪು ಮಣ್ಣಿಗೆ ತುಂಬಿದ್ದು, ಕೆಸರು ಮಿಶ್ರಿತ ನೀರು ಇನ್ನೂ ಕೆಳಭಾಗದ ರಸ್ತೆಗೆ ಹರಿದಿದೆ. ಕೂಡಲೇ ಕೆಸರನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.

ಇನ್ನೂ ಒಂದೆರಡು ದಿನಗಳ ಕಾಲ ಭಾರೀ ಮಳೆ ಬಂದಲ್ಲಿ ಈ ರಸ್ತೆಯಲ್ಲಿ ಸಂಚಾರ ಕಷ್ಟ ಸಾಧ್ಯವಾಗಬಹುದು.

ಅಲ್ಲದೆ ಈ ರಸ್ತೆಯಲ್ಲಿ ಅತ್ಯಂತ ವೇಗವಾಗಿ ಹೋಗುವುದು ಕೂಡಾ ಬಹಳ ಅಪಾಯಕಾರಿಯಾಗಿದೆ. ನೀರು ನಿಂತ ಜಾಗ, ಚಾಲಕರ ಗಮನಕ್ಕೆ ಬಾರದೇ ಅಪಾಯವಾಗುವ ಸಾಧ್ಯತೆ ಇದೆ.

ಸದ್ಯ ಈ ಸಮಸ್ಯೆಯನ್ನು ಸಂಬಂಧಪಟ್ಟ ಜನಪ್ರತಿನಿಧಿಗಳು ಗಮನಹರಿಸಿ, ಮಳೆಗಾಲ ಆರಂಭವಾಗುವ ಮುನ್ನ ಎಚ್ಚೆತ್ತುಕೊಂಡು ಈಗಲೇ ಪರಿಹರಿಸಿದಲ್ಲಿ ಹೆಚ್ಚು ಸೂಕ್ತ.

Advertisement
Click to comment

Leave a Reply

Your email address will not be published. Required fields are marked *

STATE

ಬೆಳಗಾವಿ ಅಧಿವೇಶನದಲ್ಲಿ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿಗೆ 50 ಲಕ್ಷ ರೂ. ನೀಡಲು ಶಾಸಕರ ಮನವಿ

Published

on

ಬೆಳಗಾವಿ: ಢಾಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಗೆದ್ದ ಕಾರ್ಕಳ್ ಮಿಯ್ಯಾರಿನ ಧನಲಕ್ಷ್ಮಿ ಪೂಜಾರಿ ಅವರು ಇಂದು ತನ್ನ ಕೋಚ್‌ ತೇಜಸ್ವಿನಿ ಪೈ ಅವರ ಜತೆಗೆ ಬೆಳವಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದಅಧಿವೇಶನದ ಕಲಾಪ ವೀಕ್ಷಿಸಿದರು.

 

ಈ ಸಂದರ್ಭದಲ್ಲಿ ಧನ ಲಕ್ಷ್ಮಿ ಅವರನ್ನು ಸರಕಾರದ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಧನಲಕ್ಷ್ಮಿ ಅದರ ಸಾಧನೆಯನ್ನು ಗುರುತಿಸಿ ಸರಕಾರದ ವತಿಯಿಂದ ಈಗಾಗಲೇ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು ತಿಳಿಸಿದರು.

ಧನಲಕ್ಷ್ಮಿ ಮತ್ತು ಆಕೆಯ ತರಬೇತುದಾರರಾದ ತೇಜಸ್ವಿನಿ ಪೈ ಅವರನ್ನು ಅಭಿನಂದಿಸುತ್ತೇನೆ ಎಂದರು. ಧನಲಕ್ಞ್ಮಿ ಅವರಿಗೆ  ಕನಿಷ್ಟ 50 ಲಕ್ಷ ರೂಪಾಯಿ ಬಹುಮಾನ ನೀಡ ಬೇಕೆಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದರು.ಆಕೆಗೆ ಸರಕಾರಿ ಉದ್ಯೋಗ ಕೊಡಿಸಬೇಕೆಂದು ವಿ ಸುನಿಲ್ ಕುಮಾರ್ ಮನವಿ ಮಾಡಿದರು.

Continue Reading

DAKSHINA KANNADA

ಡಿ. 13, 14 ರಂದು ಮಂಗಳೂರಿನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ

Published

on

ಮಂಗಳೂರು: ಮಂಗಳೂರಿನ ಮದರ್ ತೆರೆಸಾ ವಿಚಾರ ವೇದಿಕೆ ಮತ್ತು ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್‌ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 13 ಮತ್ತು 14 ರಂದು ಕದ್ರಿ ಪಾರ್ಕ್‌ ನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವವನ್ನು ಆಯೋಜಿಸಲಾಗಿದೆ.

ಎರಡು ದಿನಗಳ ಈ ಉತ್ಸವದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ಮಧ್ಯಾಹ್ನ 2.30 ರಿಂದ ರಾತ್ರಿ 9.30 ರ ತನಕ ನಡೆಯಲಿವೆ ಎಂದು ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ರಿಸ್ಮಸ್‌ ಖೇಲ್‌ ಸ್ಪರ್ಧೆಗಳು, ಕ್ರಿಸ್ಮಸ್ ಕ್ಯಾರಲ್‌ಗಳ ಗಾಯನ ಸ್ಪರ್ಧೆ, ಕೇಕ್ ಸ್ಪರ್ಧೆ, ಸ್ಟಾರ್ ಸ್ಪರ್ಧೆ, ವೈನ್‌ ಮೇಳ, ಆಹಾರ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇದನ್ನೂ ಓದಿ: ‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಕ್ಯಾಥೊಲಿಕದ ಸಭಾ ಅಧ್ಯಕ್ಷ ಸಂತೋಷ್ ಡಿ’ಸೋಜಾ, ಕಾರ್ಯಕ್ರಮದ ಸಂಚಾಲಕ ಸ್ಟ್ಯಾನಿ ಲೋಬೊ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Continue Reading

DAKSHINA KANNADA

‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

Published

on

ಮಂಗಳೂರು: ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್‌ ಪ್ರಯುಕ್ತ “ನಶೆ ಮುಕ್ತ ಮಂಗಳೂರು’  ಅಭಿಯಾನವನ್ನು 102 ಕಾರ್ಯಕ್ರಮಗಳ ಸಹಿತ ಬ್ರಹತ್ ಮಟ್ಟದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಪೌಂಡೇಶನ್‌ನ ಸುಹೈಲ್ ಕಂದಕ್ ತಿಳಿಸಿದ್ದಾರೆ.

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅಭಿಯಾನದ ಉದ್ಘಾಟನೆಯನ್ನು ಸ್ಪೀಕರ್ ಯು ಟಿ ಖಾದರ್ ನೆರವೇರಿಸುವರು. ಸಂಸದ ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಚ್ ವಿ ದರ್ಶನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿರುತ್ತಾರೆ ಎಂದರು.

ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅಭಿಯಾನವನ್ನು ಆಯೋಜಿಸುತ್ತಿದ್ದು ಇದರ ಅಂಗವಾಗಿ ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಹಲವು ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ಎಸಿಪಿ ರವೀಶ್ ನಾಯಕ್, ಕಾಂಗ್ರೆಸ್ ನಾಯಕ ವಿಕಾಸ್ ಶೆಟ್ಟಿ, ಬಾರ್ನ್ ಅಗೇನ್ ರಿಕವರಿ ಸೆಂಟರ್, ಬೀನಾ ಸಲ್ದಾನ ಮೊದಲಾದವರಿದ್ದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page