Connect with us

ಮಾನವೀಯತೆ ಮೆರೆಯಲು ಹೋಗಿ ಪೇಚಿಗೆ ಸಿಲುಕಿದ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ.!

Published

on

ಮಾನವೀಯತೆ ಮೆರೆಯಲು ಹೋಗಿ ಪೇಚಿಗೆ ಸಿಲುಕಿದ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ.!

ಮಂಗಳೂರು: ಮಾನವೀಯತೆಯ ಮೆರೆಯಲು ಹೋಗಿ ತಾಲೂಕು ಪಂಚಾಯತ್ ಅಧ್ಯಕ್ಷರೊಬ್ಬರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ.

ಹೌದು..ಇಂಥಹದ್ದೊಂದು ಘಟನೆ ಚಿಕ್ಕಮಗಳೂರಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ. ಚಿಕ್ಕಮಗಳೂರಿನಲ್ಲಿ ನೆಲೆಸಿರುವ ದಂಪತಿಗಳ 5 ವರ್ಷದ ಮಗುವೊಂದು ಲಾಕ್ ಡೌನ್ ಗಿಂತ ಮೊದಲು ಅಡ್ಯಾರ್ ನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿತ್ತು.

ಲಾಕ್ ಡೌನ್ ಆಗಿದ್ದರಿಂದ  ಮಗು ಕಳೆದ 21 ದಿನಗಳಿಂದ ತನ್ನ ಹೆತ್ತವರ ನೆನೆದು ಮಾನಸಿಕ ಸ್ಥಿತಿಯಲ್ಲಿತ್ತು.

ಈ ಮದ್ಯೆ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಅವರನ್ನು ಸಂಪರ್ಕಿಸಿದ ಕುಟುಂಬ ತನ್ನ ಮಗುವನ್ನು ಹೇಗಾದರೂ ಚಿಕ್ಕಮಗಳೂರು ಮುಟ್ಟಿಸಬೇಕೆಂದು ಗೋಗರೆಯುತ್ತಾ ಇದ್ದರು.

ಆದರೆ ತಾಲೂಕು ಪಂಚಾಯತ್ ಅಧ್ಯಕ್ಷರು ಎಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿಯುತ್ತದೆ ಅಲ್ಲಿಯವರೆಗೆ ದಯವಿಟ್ಟು ಕಾಯಿರಿ ಎಂದು ಮನವೊಲಿಸಿದ್ದರು.

ಆದರೆ ಎಪ್ರಿಲ್ 14ರ ನಂತರವೂ ಲಾಕ್ ಡೌನ್ ಮುಂದುವರಿದ ಹಿನ್ನಲೆಯಲ್ಲಿ ಪುನಃ ಅಧ್ಯಕ್ಷರನ್ನು ಸಂಪರ್ಕಿಸಿದ ಕುಟುಂಬ ದಯವಿಟ್ಟು ತಮ್ಮ ಮಗುವನ್ನು ಮುಟ್ಟಿಸುವಂತೆ ದಂಬಾಲು ಬಿದ್ದಿತ್ತು.

ಹಾಗಾಗಿ ಹೆತ್ತವರ ರೋದನ ಮಗುವಿನ ಸ್ಥಿತಿಯನ್ನು ಕಂಡು ಕರಗಿದ ಅಧ್ಯಕ್ಷರು, ತನ್ನ ಸರಕಾರಿ ವಾಹನದಲ್ಲಿ ಮಗುವನ್ನು ಕರೆದುಕೊಂಡು, ತಮ್ಮಿಬ್ಬರ ಹಿತೈಷಿಗಳು ಹಾಗೂ ಡ್ರೈವರ್ ಜತೆಗೂಡಿ ಗಡಿ ತನಕ ಬಿಡಲು ಹೊರಟಿದ್ದರು.

ಆ ಕಡೆಯಿಂದ ಬೇರೆ ವಾಹನ ಬಂದು ಮಗುವನ್ನು ಕರೆದುಕೊಂಡು ಹೋಗುವ ಬಗ್ಗೆ ಮಾತುಕತೆ ನಡೆದಿತ್ತು. ನಂತರ ಕಾರಣಾಂತರಗಳಿಂದ ಆ ಕಡೆಯಿಂದ ವಾಹನ ಬಾರದ ಹಿನ್ನೆಲೆಯಲ್ಲಿ ಇವರೇ ಮಗುವಿನೊಂದಿಗೆ ಬಣಕಲ್ ತನಕ ಹೋಗಿದ್ದಾರೆ.

ಕೊಟ್ಟಿಗೆಹಾರ ಬಣಕಲ್ ಸಮೀಪದಲ್ಲಿ ವಾಹನವನ್ನು ತಡೆದ ಪೋಲೀಸರು ಚಿಕ್ಕಮಗಳೂರು ಪ್ರವೇಶಿಸದಂತೆ ತಡೆದು ಹಿಂದೆ ಕಳುಹಿಸಿದ್ದರು.

ಈ ಮದ್ಯೆ ಬಣಕಲ್ ನಲ್ಲಿ ತಮ್ಮ ವಾಹನದಲ್ಲಿದ್ದ ಹಿತೈಷಿಯೊಬ್ಬರ ಮನೆಗೆ ತೆರಳಿ ರೇಷನ್ ಕಿಟ್ ಹಾಗೂ ಸ್ವಲ್ಪ ಹಣವನ್ನು ನೀಡಿ ಬಂದಿದ್ದರು.

ಈ ಸಂದರ್ಭದಲ್ಲಿ ಯಾರೋ ಫೋಟೋ ತೆಗೆದು ಪೋಲೀಸರಿಗೆ ತಪ್ಪು ಮಾಹಿತಿ ನೀಡಿ ವಾಹನದಲ್ಲಿ 15 ಜನ ತುಂಬಿಕೊಂಡು ಹೋಗಿದ್ದಾರೆಂದು ನಂಬಿಸಿ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ಬಣಕಲ್ ಮನೆಗೆ ಜನರನ್ನು ಬಿಟ್ಟಿದ್ದಾರೆನ್ನಲಾದ ಮನೆಗೆ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಾಣಾಧಿಕಾರಿ,

ಬಣಕಲ್ ಠಾಣಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿ ಪರಿಶೀಲನೆ ನಡೆಸಿದಾಗ ಹೊರಗಿನಿಂದ ಬಂದ ಯಾವುದೇ ಜನ ಅಲ್ಲಿ ಕಂಡು ಬಂದಿರಲಿಲ್ಲ.

ಈ ರಂಪಾಟದಿಂದ ಇದೀಗ ಅಧ್ಯಕ್ಷರ ವಾಹನ ಸೀಝಾಗಿದ್ದಲ್ಲದೇ, ಅಧ್ಯಕ್ಷ ಮೋನು ಹಾಗೂ ಚಾಲಕನ ಮೇಲೆ ಕೇಸು ದಾಖಲಾಗಿದ್ದು, ಮಾನವೀಯತೆಗೆ ಕರಗಿದ ಮನಸ್ಸಿಗೆ ಸಂಕಷ್ಟ ಎದುರಾಗಿದೆ.

ವಿಡಿಯೋ.

Advertisement
Click to comment

Leave a Reply

Your email address will not be published. Required fields are marked *

bangalore

6 ತಿಂಗಳಿನಿಂದ ಒಂದೇ ಮನೆಗೆ ಸ್ಕೆಚ್, 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಯುವಕ ಅರೆಸ್ಟ್

Published

on

ಬೆಂಗಳೂರು: ಮನೆಯವರು ಅಮೇರಿಕಾದಲ್ಲಿ ಇರುವುದನ್ನು ಖಚಿತಪಡಿಸಿಕೊಂಡ  ಕಳ್ಳನೋರ್ವ ಸುಮಾರು 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಿನಿಮೀಯ ಶೈಲಿಯಲ್ಲಿಕಳ್ಳತನಗೈದ ರಾಜಸ್ಥಾನ ಮೂಲದ ವೇಲಾರಾಮ್ (19) ಬಂಧಿತ ಆರೋಪಿ. ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಕಟ್ ಮಾಡುತ್ತಿದ್ದ ವೇಲಾರಾಮ್ ಪಕ್ಕದ ಮನೆಯಲ್ಲಿ ಯಾರೂ ಇಲ್ಲದನ್ನ ಗಮನಿಸಿದ್ದ. ದಂಪತಿ ಅಮೇರಿಕಾದಲ್ಲಿ ಸೆಟಲ್ ಆಗಿರೋದನ್ನು ಖಚಿತಪಡಿಸಿಕೊಂಡು  ಬರೋಬ್ಬರಿ ಆರು ತಿಂಗಳು ಸ್ಕೆಚ್ ಹಾಕಿ ಒಮ್ಮೆಗೆ 3 ಕೋಟಿ ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಿದ್ದ.

ಲಾಕರ್ ಓಪನ್ ಮಾಡಿ 1.8 ಕೆಜಿಯ ಚಿನ್ನಾಭರಣ, ಡೈಮಂಡ್ ಹಾಗೂ ನಗದು ಎಲ್ಲವನ್ನು ದೋಚಿಕೊಂಡು ಹೋಗಿದ್ದ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕ ಖುಷಿಗೆ ಯಾರಿಗೂ ಹೇಳದೆ ಕೇಳದೆ ನೇರವಾಗಿ ರಾಜಸ್ಥಾನಕ್ಕೆ ಚಿನ್ನಾಭರಣ ಕೊಂಡೊಯ್ದು, ಮನೆಯಲ್ಲಿ ಬಚ್ಚಿಟ್ಟಿದ್ದ.

ಮನೆಯ ಸಿಸಿಟಿವಿಯನ್ನ ಅಮೆರಿಕದಲ್ಲಿದ್ದ ದಂಪತಿ ಮೊಬೈಲ್ ನಲ್ಲಿ ಪರಿಶೀಲಿಸಿದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಸಿಸಿಟಿವಿ ಆಧರಿಸಿ ಆರೋಪಿ ವೇಲಾರಾಮ್‌ ನನ್ನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

Continue Reading

LATEST NEWS

ಸೆಕೆ ತಾಳಲಾರದೆ ತಂಪಾಗಲು ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

Published

on

ಹುಬ್ಬಳ್ಳಿ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಈಜಲು ಹೋಗಿ ನೀರಿನ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ.


ಮೃತಪಟ್ಟ ವಿದ್ಯಾರ್ಥಿಗಳನ್ನು ಸಮರ್ಥ್ ಮತ್ತು ಹರೀಶ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಗೋಪನಕೊಪ್ಪದ ಸರ್ಕಾರಿ ಪದವಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದಿರುವ ಕಾರಣ ಮನೆಯಲ್ಲಿದ್ದರು ಎನ್ನಲಾಗಿದೆ.

ಬೇಸಿಗೆಯ ಸೆಕೆ ತಾಳಲಾರದೆ ತಂಪಾಗಲು ಇಬ್ಬರು ಸ್ನೇಹಿತರು ಮನೆ ಸಮೀಪ ಇರುವ ನಿರ್ಮಾಣ ಹಂತದ RNS ಗಾಲ್ಫ್​​ ಮೈದಾನದಲ್ಲಿರೋ ಹೊಂಡಕ್ಕೆ ಈಜಲು ತೆರಳಿದ್ದರು. ಮಧ್ಯಾಹ್ನ ಮನೆಯಿಂದ ಹೋದವರು, ಸಂಜೆಯಾದರೂ ಮನೆಗೆ ಮರುಳಲಿಲ್ಲ. ಆ ವೇಳೆ ಇಬ್ಬರು ಹೊಂಡದಲ್ಲಿ ಬಿದ್ದಿರೋದನ್ನು ಗಮನಿಸಿದ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಹಾಲ್​​ನಲ್ಲಿ ಬುರ್ಖಾಧಾರಿ ಕಳ್ಳಿಯ ಕರಾಮತ್ತು..! ವಿಚಾರಣೆ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ..!?

ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎನ್ನಲಾಗಿದೆ. ಘಟನನಾ ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆಯಲಾಗಿದೆ.

Continue Reading

LATEST NEWS

ಮದುವೆ ಹಾಲ್​​ನಲ್ಲಿ ಬುರ್ಖಾಧಾರಿ ಕಳ್ಳಿಯ ಕರಾಮತ್ತು..! ವಿಚಾರಣೆ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ..!?

Published

on

ಶಿವಮೊಗ್ಗ: ಮದುವೆ ಸಮಾರಂಭಗಳಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.


ಬುರ್ಖಾ ಧರಿಸಿ, ವ್ಯಾನಿಟಿ ಬ್ಯಾಗ್ ಹಿಡಿದು ಗಪ್‌ಚುಪ್ ಆಗಿ ಚಿನ್ನಾಭರಣ ಎಗರಿಸುತ್ತಿದ್ದ ರುಕ್ಸಾರ್ ಫಿರ್ದೋಸ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಪ್ರಸಿದ್ಧ ‘ಶಾದಿ ಮಹಲ್’ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಕಳ್ಳತನ ವರದಿಯಾಗುತ್ತಿದ್ದು, ಮದುವೆಗೆ ಬಂದವರು ತಮ್ಮ ಆಭರಣಗಳನ್ನು ಬ್ಯಾಗ್‌ನಲ್ಲಿ ಇಡುವುದನ್ನೇ ಸಂಚು ಹೂಡಿ ಕಾಯುತ್ತಿದ್ದ ಈ ಮಹಿಳೆ, ಕ್ಷಣಾರ್ಧದಲ್ಲಿ ಅವುಗಳನ್ನು ಎಗರಿಸಿ ಪರಾರಿಯಾಗುತ್ತಿದ್ದಳು.

ಕಳೆದ ಒಂದು ತಿಂಗಳ ಹಿಂದೆ ನಡೆದ ಮದುವೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಹಗಲಿರುಳು ಪರಿಶೀಲಿಸಿದಾಗ, ಆಕೆಯ ಕೈಯಲ್ಲಿದ್ದ ವಿಶಿಷ್ಟವಾದ ವ್ಯಾನಿಟಿ ಬ್ಯಾಗ್ ಕಳ್ಳಿಯನ್ನು ಪತ್ತೆಹಚ್ಚಲು ಪ್ರಮುಖ ಸುಳಿವು ನೀಡಿತು.

ಇದನ್ನೂ ಓದಿ: ಗ್ಯಾಸ್ ಟ್ರಬಲ್: ಚನ್ನಪಟ್ಟಣದ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಕಳವು!

ಇನ್ನು ಬಂಧಿತವಾಗಿರುವ ಕಳ್ಳಿ ರುಕ್ಸಾರ್ 18 ಲಕ್ಷ ರೂ ಮೌಲ್ಯದ ಒಟ್ಟು 120 ಗ್ರಾಂ ಚಿನ್ನಾಭರಣ ಕದ್ದಿದ್ದಾಳೆ. ಈಕೆಯ ಬಂಧನದಿಂದ 4 ಪ್ರಮುಖ ಕಳ್ಳತನ ಪ್ರಕರಣ ಪತ್ತೆಯಾಗಿವೆ. ವಿಚಾರಣೆ ವೇಳೆ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ.

ಈ ಹಿಂದೆ ಕೆಲವು ಮದುವೆ ಮನೆಗಳಲ್ಲಿ ಕಳ್ಳತನ ಮಾಡುವಾಗ ಈಕೆ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದಳು. ಆದರೆ, ಮಹಿಳೆಯೆಂದು ಅನುಕಂಪ ತೋರಿಸಿದ ಜನರು ವಾರ್ನಿಂಗ್ ಮಾಡಿ ಬಿಟ್ಟು ಕಳಿಸಿದ್ದರು. ಇದನ್ನೇ ಲಾಭವನ್ನಾಗಿ ಮಾಡಿಕೊಂಡ ಈ ಕಿಲಾಡಿ ಕಳ್ಳಿ, ತನ್ನ ಕಳ್ಳತನದ ಕಾಯಕವನ್ನು ಮುಂದುವರಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಳು.

Continue Reading
Advertisement

Trending

Copyright © 2025 Namma Kudla News

You cannot copy content of this page