Connect with us

DAKSHINA KANNADA

ಮಂಗಳೂರು ದಸರಾ ವೈಭವಕ್ಕೆ ಅದ್ದೂರಿಯ ತೆರೆ: ಶೋಭಾಯಾತ್ರೆಯಲ್ಲಿ ಪಾಲ್ಗೊಂಡ 60ಕ್ಕೂ ಹೆಚ್ಚು ಸ್ಥಬ್ದ ಚಿತ್ರಗಳು

Published

on

ಮಂಗಳೂರು: ಮಂಗಳೂರು ದಸರಾ ಮೆರವಣಿಗೆ ನಿನ್ನೆ ಅದ್ದೂರಿಯಾಗಿ ಆರಂಭಗೊಂಡು ಇಂದು ಮುಂಜಾನೆ ಸಮಾಪನಗೊಂಡು ಶಾರದೆಮಾತೆ, ಗಣಪತಿ, ಆದಿಶಕ್ತಿ, ಹಾಗೂ ನವದುರ್ಗೆಯರ ಮೂರ್ತಿಗಳನ್ನು ಕುದ್ರೋಳಿ ಕ್ಷೇತ್ರ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.

ವಿಘ್ನವಿನಾಶಕ ಗಣೇಶ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ಬೃಹತ್ ಶೋಭಾಯಾತ್ರೆ ಕೇಂದ್ರದ ಮಾಜಿ ಸಚಿವ ದಸರಾ ಮಹೋತ್ಸವದ ರೂವಾರಿ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆಯಿತು.

ಒಂದು ಸಾವಿರ ಆಕರ್ಷಕ ಕೇರಳಾ ಕೊಡೆಗಳು,ನೂರಕ್ಕೂ ಅಧಿಕ ಬ್ಯಾಂಡ್ ಸೆಟ್‌ಗಳು,ಸುಮಾರು 40 ಜಾನಪದ ಕುಣಿತಗಳ ತಂಡ, ಕೇರಳಾ ಚೆಂಡೆವಾದನ, ಕೊಂಬು ಕಹಳೆ,ದೇಶದ ಇತಿಹಾಸವನ್ನು ಬಿಂಬಿಸುವ ಸುಮಾರು 60ಕ್ಕೂ ಹೆಚ್ಚು ಸ್ಥಬ್ದ ಚಿತ್ರಗಳು ಈ ದಸರಾ ಮೆರವಣಿಗೆಗೆ ಮೆರಗು ನೀಡಿತು.

ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ದೇಶ ವಿದೇಶಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದರು.

ನವದುರ್ಗೆಯರ ವೈಭವದ ಶೋಭಾಯಾತ್ರೆಯಲ್ಲಿ ಸರ್ವ ಧರ್ಮೀಯರು ಭಾಗವಹಿಸಿದ್ದು ಮಾತ್ರವಲ್ಲದೆ ಶಾಂತಿ ಸಹಬಾಳ್ವೆಯ ಸ್ಥಬ್ದ ಚಿತ್ರ ಕೂಡಾ ಮೂಡಿ ಬಂದಿತ್ತು.  ವಿಶೇಷವಾಗಿ ಕ್ರೈಸ್ತ ಸಮುದಾಯದವರಿಂದ ಸಹ ಬಾಳ್ವೆಯಿಂದ ಜಗತ್ತನ್ನೇ ಎತ್ತಿಹಿಡಿಯೋಣ ಎನ್ನುವ ಸಂದೇಶ ಸಾರುವ ಸ್ಥಬ್ದ ಚಿತ್ರ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆಯಿತು. 

ಈ ಮೂಲಕ ನಾರಾಯಣ ಗುರುಗಳು ನೀಡಿರುವ ಸಂದೇಶವನ್ನು ಎಲ್ಲರೂ ಪಾಲಿಸಿ ಸಮಾಜದ ಒಳಿತಿಗೆ ಶ್ರಮಿಸೋಣ ಎಂಬ ಸಂದೇಶ ನೀಡಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ನಾರಾಯಣ ಗುರುಗಳ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದ್ದು, ಇಂತಹ ಅವಕಾಶ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಸಿಕ್ಕಿದೆ. ಕುದ್ರೋಳಿ ಕ್ಷೇತ್ರದಿಂದ ಈ ಬಾರಿ ಸರ್ವ ಧರ್ಮೀಯರ ಟ್ಯಾಬ್ಲೋಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.

ಈ ಹಿನ್ನಲೆಯಲ್ಲಿ ಈ ಸ್ತಬ್ದ ಚಿತ್ರವನ್ನು ನಾರಾಯಣ ಗುರುಗಳ ಸಂದೇಶ ಸಾರುವ ಆಶಯದಂತೆ ಸಿದ್ಧಗೊಳಿಸಲಾಗಿತ್ತು.

DAKSHINA KANNADA

ವರುಣನ ಆರ್ಭಟಕ್ಕೆ ಮಂಗಳೂರು ಫುಲ್ ಕೂಲ್.. ಕೂಲ್.. !

Published

on

ಮಂಗಳೂರು : ಬೆಂದಿದ್ದ ಧರೆಯ ತಂಪಾಗಿಸಲು ಭುವಿಗಿಳಿದ ವರುಣ… ರಾತ್ರಿ ಮಲಗುವ ವೇಳೆ “ಎಂಥಾ ಸೆಕೆ ಮಾರ್ರೆ ?” ಎನ್ನುತ್ತಿದ್ದವರೂ ಸಹ ಫ್ಯಾನ್ ಆಫ್ ಮಾಡಿ ಮಲಗಿದ್ದಾರೆ. ಹೌದು .. ನಿನ್ನೆ(ಏ.27) ಕರ್ನಾಟಕದ ವಿವಿಧೆಡೆ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆ ಈ ಕುರಿತು ಮೊದಲೇ ಮುನ್ಸೂಚನೆ ನೀಡಿದೆ. ಅದರಲ್ಲೂ ದಕ್ಷಿಣ ಕನ್ನಡದ ಹಲವೆಡೆ ನಿನ್ನೆ ಹಾಗೂ ಮೊನ್ನೆ (ಏ.26) ಗುಡುಗು ಮಿಂಚು ಸಹಿತ ವರುಣನ ಆರ್ಭಟ ಜೊರಾಗಿಯೇ ಇತ್ತು,

ನಿನ್ನೆ ಹಗಲು ಬಿಸಿಲು ಇತ್ತು. ಆದರೆ ಸಂಜೆ ಹೊತ್ತಿಗೆ ಯಾರೂ ಊಹಿಸದ ರೀತಿ ಮಳೆ ಸುರಿದಿದೆ. ಧಾರಕಾರ ಮಳೆಯಿಂದ ಬಿಸಿ ಬಿಸಿಯಾಗಿದ್ದ ನಗರ ಫುಲ್ ಕೂಲ್ ಆಗಿದೆ. ಬಿಸಿ ವಾತಾವರಣ ಪೂರ್ತಿ ನಿವಾರಣೆಯಾಗಿದೆ.

ಎರಡು ಮೂರು ದಿನಗಳಿಂದ ದಕ್ಷಿಣ ಕನ್ನಡ ಹಲವು ಕಡೆಗಳಲ್ಲಿ ಆಗಾಗ ಮಳೆ ಕಾಣಿಸಿಕೊಳ್ಳುತ್ತಿದೆ. ಇಂದು (ಏ.28) ಮಂಗಳೂರು ನಗರದಲ್ಲಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂಬುವುದಾಗಿ ಹವಮಾನ ಇಲಾಖೆ ಸೂಚಿಸಿದ್ದು, ಸಂಜೆ ತನಕ ಕಾದು ನೋಡಬೇಕಷ್ಟೇ.

Continue Reading

DAKSHINA KANNADA

2024-25ರ ಆರ್ಥಿಕ ವರ್ಷದಲ್ಲಿ ಎಂಆರ್‌ಪಿಎಲ್‌ಗೆ 371 ಕೋಟಿ ರೂ. ಲಾಭ

Published

on

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್‌) ಕಂಪನಿಯು 2024-25ನೇ ಹಣಕಾಸು ವರ್ಷದ ತ್ರೈಮಾಸಿಕ ಲಾಭದ ಪ್ರಮಾಣ ಶೇ.20ರಷ್ಟು ಏರಿಕೆ ಕಂಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಸಂಸ್ಥೆ 371 ಕೋಟಿ ರೂ. ಲಾಭ ಗಳಿಸಿದೆ.

ಶನಿವಾರ ನಡೆದ ಕಂಪನಿಯ ಆಡಳಿತ ಮಂಡಳಿಯ ಸಭೆಯಲ್ಲಿ ನಾಲ್ಕನೇ ತ್ರೈಮಾಸಿಕದ ವರದಿಗೆ ಅನುಮೋದನೆ ನೀಡಲಾಯಿತು.

ಸಂಸ್ಕರಣಾಗಾರದ ಕಾರ್ಯಾಚರಣೆಯಿಂದ ನಿವ್ವಳ ಆದಾಯವು ಶೇ.12.5ರಷ್ಟು ಏರಿಕೆಯಾಗಿ 24,596ಕ್ಕೆ ತಲುಪಿದೆ. 2025ನೇ ಹಣಕಾಸು ವರ್ಷದಲ್ಲಿ ಪ್ರತಿ ಬ್ಯಾರೆಲ್‌ಗೆ 4.45 ಡಾಲರ್ ಒಟ್ಟು ಸಂಸ್ಕರಣಾ ಲಾಭಾಂಶ ಗಳಿಸಿದೆ. ಕಳೆದ ವರ್ಷ ಇದು ಪ್ರತಿ ಬ್ಯಾರೆಲ್ ಕಚ್ಛಾ ತೈಲಕ್ಕೆ 10.36 ಡಾಲರ್ ಕಡಿಮೆಯಾಗಿತ್ತು.

ಇದನ್ನೂ ಓದಿ: ಎಂಆರ್‌ಪಿಎಲ್‌ 2ನೇ ತ್ತೈಮಾಸಿಕ ಅವಧಿ ಫಲಿತಾಂಶ; ನಷ್ಟ ಎಷ್ಟು ಗೊತ್ತಾ ?

ಅಲ್ಲದೆ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಅಂಗಸಂಸ್ಥೆಯಾಗಿರುವ ಈ ಸಂಸ್ಥೆಯು, ನಾಲ್ಕನೇ ತ್ರೈಮಾಸಿಕದಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲವನ್ನು ಇಂಧನವಾಗಿ ಪರಿವರ್ತಿಸುವ ಮೂಲಕ 6.23 ಡಾಲರ್ ಗಳಿಸಿದೆ. ಕಳೆದ ವರ್ಷ ಪ್ರತಿ ಬ್ಯಾರಲ್‌ಗೆ 11.35 ಡಾಲರ್ ಆಗಿತ್ತು.

ಪ್ರಸಕ್ತ ವರ್ಷದಲ್ಲಿ ಹೊಸದಾಗಿ 66 ಪೆಟ್ರೋಲ್ ಪಂಪ್‌ಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ಈ ಸಂಸ್ಥೆಯ ಪೆಟ್ರೋಲ್ ಪಂಪ್‌ಗಳ ಸಂಖ್ಯೆ 167ಕ್ಕೆ ತಲುಪಿದೆ.

Continue Reading

DAKSHINA KANNADA

ಮನೆಗೆ ನುಗ್ಗಿ ತಲ್ವಾರ್ ಹಿಡಿದು ಬೆ*ದರಿಕೆ ಆರೋಪ; ಹಸಂತಡ್ಕ ವಿರುದ್ಧ FIR

Published

on

ಮಂಗಳೂರು : ವಿಶ್ವ ಹಿಂದೂ ಪರಿಷತ್ ರಾಜ್ಯ ನಾಯಕ ಮುರಳಿ ಕೃಷ್ಣ ಹಸಂತಡ್ಕ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಎಫ್‌ ಐ ಆರ್ ದಾಖಲಾಗಿದೆ. ಹಿಂದೂ ಮಹಿಳೆಯೊಬ್ಬರು ಒಂಟಿಯಾಗಿದ್ದ ಸಂದರ್ಭದಲ್ಲಿ ತ*ಲ್ವಾರು ಹಿಡಿದು ಮನೆಗೆ ನುಗ್ಗಿ ಬೆ*ದರಿಕೆ ಹಾಕಿದ ವಿಚಾರವಾಗಿ ಈ ಎಫ್ ಐ ಆರ್ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಹರೀಶ್ ಎಂಬವರು ನೀಡಿದ ದೂರಿನಂತೆ ನ್ಯಾಯಾಲಯದ ಆದೇಶ ಪ್ರಕಾರವಾಗಿ ವಿಟ್ಲ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಏಪ್ರಿಲ್ 16 ರಂದು ಮನೆಯಲ್ಲಿ ತನ್ನ ಪತ್ನಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಗೆ ಪ್ರವೇಶ ಮಾಡಿ ಬೆದರಿಕೆ ಹಾಕಿದ್ದೂ ಅಲ್ಲದೆ ಏಪ್ರಿಲ್ 19 ರಂದು ಕೂಡ ದಂಪತಿಗೆ ತಲ್ವಾರ್ ಹಿಡಿದು ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಹೆಬ್ರಿ : ಕಾಲು ಜಾರಿ ನದಿಗೆ ಬಿದ್ದು ಯುವಕ ಸಾ*ವು

ವ್ಯವಹಾರದ ವಿಚಾರವಾಗಿ ಈ ಪ್ರಕರಣ ನಡೆದಿದ್ದು, ಸಾರಡ್ಕ ಪೆಟ್ರೋಲ್ ಪಂಪ್ ಬಿಟ್ಟು ಕೊಡುವ ವಿಚಾರವಾಗಿ ಹಸಂತಡ್ಕ ಈ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹರೀಶ್ ಪತ್ನಿ ಶ್ರೀದೇವಿ ಹಾಗೂ ಮುರಳೀಕೃಷ್ಣ ಹಸಂತಡ್ಕ ಸಾರಡ್ಕದ ಪೆಟ್ರೋಲ್ ಪಂಪ್‌ ನಲ್ಲಿ ಪಾಲುದಾರಿಕೆ ಹೊಂದಿದ್ದು, ಪಾಲುದಾರಿಕೆ ಬಿಟ್ಟುಕೊಡುವ ವಿಚಾರವಾಗಿ ಈ ಪ್ರಕರಣ ನಡೆದಿದೆ ಎನ್ನಲಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page