Connect with us

DAKSHINA KANNADA

ಮಂಗಳೂರು: ಪೊಲೀಸ್‌ ಅಧಿಕಾರಿ ಹೆಸರಲ್ಲಿ ಕರೆ; 50 ಲ.ರೂ. ವಂಚನೆ

Published

on

ಮಂಗಳೂರು: ಪೊಲೀಸ್‌ ಅಧಿಕಾರಿ ಎಂದು ಹೇಳಿ ಕರೆ ಮಾಡಿ ನಂಬಿಸಿ, ವmಚಿಸಿ ವ್ಯಕ್ತಿಯೋರ್ವನಿಂದ 50 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಮಂಗಳುರಿನಲ್ಲಿ ನಡೆದಿದೆ.

ಅ.11ರಂದು ಅಪರಾಹ್ನ ಮಂಗಳುರು ಮೂಲದ ದೂರುದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ಅತನನ್ನು ಮಂಗಳುರು ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ವಿನಯ ಕುಮಾರ ಎಂದು ಪರಿಚಯಿಸಿಕೊಂಡಿದ್ದ. ‘ಕಿರುಕುಳದ ಬಗ್ಗೆ ನಿಮ್ಮ ಮೇಲೆ ದೂರು ದಾಖಲಾಗಿದ್ದು ಠಾಣೆಗೆ ಬರಬೇಕು’ ಎಂದು ತಿಳಿಸಿದಾಗ, ‘ತಾನು ಸಿಬಿಐನಿಂದ ಕರೆ ಮಾಡುತ್ತಿರುವ ಆಕಾಶ ಕಲ್ಲುಹಾರಿ’ ಎಂದು ಆರೋಪಿ ಪರಿಚಯಿಸಿಕೊಂಡ.

‘ನರೇಶ್‌ ಗೋಯೆಲ್‌ ಎಂಬವರ ಮನೆಯನ್ನು ಜಪ್ತಿ ಮಾಡುವಾಗ ನಿಮ್ಮ ಎಟಿಎಂ ಕಾರ್ಡ್‌ ಸಿಕ್ಕಿದೆ. ಅದರಲ್ಲಿ 20 ಜನರು ಒಟ್ಟು 2 ಕೋ.ರೂ.ಗಳನ್ನು ನಿಮ್ಮ ಮುಂಬಯಿಯ ಖಾತೆಯಲ್ಲಿ ಹೂಡಿಕೆ ಮಾಡಿದ್ದಾರೆ. ಆ ಬಗ್ಗೆ ಮನಿ ಲ್ಯಾಂಡರಿಂಗ್‌ ಪ್ರಕರಣ ಕೂಡ ನಿಮ್ಮ ಮೇಲೆ ದಾಖಲಾಗಿದೆ. ಹಾಗಾಗಿ ಸಿಬಿಐನವರು ಬಂಧಿಸುತ್ತಾರೆ. ನಿಮ್ಮ ದಾಖಲಾತಿಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಬೇಕು. ನಿಮಗೆ ಬರಲು ಅಸಾಧ್ಯವಾದರೆ ನಾನೇ ಆನ್‌ಲೈನ್‌ ಮೂಲಕ ತನಿಖೆ ಮಾಡುತ್ತೇನೆ’ ಎಂದು ದೂರುದಾರರಿಗೆ ಹೇಳಿದ.

ಮರುದಿನ ಮತ್ತೆ ಕರೆ ಮಾಡಿದ ಆಕಾಶ ಕುಲ್ಲಹಾರಿ ಬ್ಯಾಂಕ್‌ ಖಾತೆ ವಿವರಗಳನ್ನು ಕೇಳಿದ. ದೂರುದಾರರು ಎಲ್ಲ ವಿವರ ಒಪ್ಪಿಸಿದ್ದು, ‘ಖಾತೆಯಲ್ಲಿರುವ ಎಲ್ಲ ಹಣವನ್ನು ಆರ್‌ಬಿಐಗೆ ವರ್ಗಾಯಿಸಬೇಕಾಗಿದೆ. ಆದರೆ ಆ ರೀತಿ ವರ್ಗಾಯಿಸಿದರೆ ನಿಮ್ಮ ಮೇಲೆ ಸಂದೇಹ ಬರುತ್ತದೆ. ಹಾಗಾಗಿ ಶಿವಾನಿ ಎಂಟರ್‌ಪ್ರೈಸಸ್‌ನ ಖಾತೆಗೆ ವರ್ಗಾವಣೆ ಮಾಡಿ’ ಎಂದು ಬ್ಯಾಂಕ್‌ ಖಾತೆ ಸಂಖ್ಯೆ ನೀಡಿದ.

ದೂರುದಾರರು ಅ. 19ರಂದು ಅವರ ಖಾತೆಯಿಂದ 50 ಲಕ್ಷ ರೂ. ಹಣವನ್ನು ಆಕಾಶ ಕುಲ್ಲಹಾರಿ ನೀಡಿದ ಖಾತೆಗೆ ವಾಟ್ಸ್‌ಆ್ಯಪ್‌ಮೂಲಕವರ್ಗಾವಣೆ ಮಾಡಿದ್ದರು. ಮೂರು ದಿನಗಳ ಅನಂತರ ಮರುಪಾವತಿ ಮಾಡುತ್ತೇನೆಂದು ತಿಳಿಸಿದ.

ಅ. 23ರಂದು ದೂರುದಾರರು ಆಕಾಶ ಕುಲ್ಲಹಾರಿಗೆ ಕರೆ ಮಾಡಿ ಹಣದ ಬಗ್ಗೆ ವಿಚಾರಿಸಿದಾಗ ‘ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತೇನೆ. ಆದರೆ ನೀವು ಬೇರೊಂದು ಬ್ಯಾಂಕ್‌ ಖಾತೆಗೆ ಕೆಲವು ಮೊತ್ತವನ್ನು ವರ್ಗಾವಣೆ ಮಾಡಬೇಕು’ ಎಂದಿದ್ದಾನೆ. ಆ ಸಂದರ್ಭದಲ್ಲಿ ದೂರುದಾರರಿಗೆ ಸಂದೇಹ ಉಂಟಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

DAKSHINA KANNADA

ಡಿ.7ರಂದು ಶಾರದಾ ವಿದ್ಯಾಲಯದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ, ಸಾಂಸ್ಕೃತಿಕ ವೈಭವ

Published

on

ಮಂಗಳೂರು: ಮಕ್ಕಳಲ್ಲಿ ಶಿಸ್ತು, ಧೈರ್ಯ ಹಾಗೂ ಸಾಹಸ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಸ ಕ್ರೀಡೆ, ನೃತ್ಯ, ಸಂಗೀತ ಇವೆಲ್ಲವುಗಳನ್ನೊಳಗೊಂಡ ಹೊನಲು ಬೆಳಕಿನ ಕ್ರೀಡೋತ್ಸವ ಡಿ7ರ ಭಾನುವಾರದದಂದು ಶಾರದಾ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದಲ್ಲಿ ನಡೆಯಲಿದೆ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್ ಹೇಳಿದರು.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಈ ಬಾರಿಯ ಕ್ರೀಡೋತ್ಸವ ಸಮಾರಂಭವನ್ನು ಮೈಸೂರಿನ ಸಂಸದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಆಗಮಿಸಲಿದ್ದಾರೆ. ಸಾಹಸ ಕ್ರೀಡೆ, ಸಾಂಸ್ಕೃತಿಕ ಪ್ರದರ್ಶನದಲ್ಲಿ ಸುಮಾರು 2000 ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಸಿಇಒ ಸಮೀರ್ ಪುರಾಣಿಕ್ ಮಾತನಾಡಿ 4ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ಈ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಲ್ಲಕಂಬ, ಫೈರ್ ಜಂಪ್, ಯೋಗಾಸನ ಸೇರಿದಂತೆ ಪಿರಮಿಡ್ ರಚನೆಯ ಕ್ರೀಡಾ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: WATCH : ಉಡುಪಿ: ಶಾಲೆಯ ರೋಡ್ ಸರಿ ಇಲ್ಲ…ನಗರಸಭೆ ಆಯುಕ್ತರಿಗೆ ದೂರು ಕೊಟ್ಟ ಪುಟ್ಟ ವಿದ್ಯಾರ್ಥಿ

ಸಂಸ್ಥೆಯ ಪ್ರಾಂಶುಪಾಲ ದಯಾನಂದ ಕಟೀಲ್ ಶೋಭಾಯಾತ್ರೆಯಲ್ಲಿ ಒಡೆಯರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಈ ಕ್ರೀಡೋತ್ಸವಕ್ಕೆ ಮಕ್ಕಳನ್ನು ತಯಾರು ಮಾಡಲು ಯಾವುದೇ ತರಬೇತುದಾರರಿಲ್ಲ. ಶಾರದಾ ಕುಟುಂಬ ಜೊತೆಯಾಗಿ ಸೇರಿಕೊಂಡೇ ಮಕ್ಕಳನ್ನು ಸಿದ್ಧಪಡಿಸಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಸುಧಾಕರ್ ಪೇಜಾವರ, ಶಾರದಾ ಪಿಯು ಕಾಲೇಜು ಪ್ರಾಂಶುಪಾಲ ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು.

Continue Reading

DAKSHINA KANNADA

ಕುದ್ರೋಳಿ ಭಗವತಿ ಕ್ಷೇತ್ರಕ್ಕೆ ವರ್ಕಳ ಶಿವಗಿರಿ ಮಠದ ಶ್ರೀಗಳ ಭೇಟಿ

Published

on

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧೀಜಿಯವರ ನಡುವಿನ ಐತಿಹಾಸಿಕ ವರ್ಕಳ ಶಿವಗಿರಿ ಸಂವಾದವು ಮಂಗಳೂರು ವಿವಿಯಲ್ಲಿ ನಡೆದಿದ್ದು, ಕಾರ್ಯಕ್ರಮಕ್ಕೆ ಆಶೀರ್ವಚನವನ್ನು ನೀಡಲು ಆಗಮಿಸಿದ್ದ ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿ ಇಂದು ಕುದ್ರೋಳಿ ಶ್ರೀ ಭಗವತೀ ಕ್ಷೇತ್ರಕ್ಕೆ ಭೇಟಿ ನೀಡಿದರು.

ಈ ಸಂದರ್ಭ ಕುದ್ರೋಳಿ ಕ್ಷೇತ್ರಾಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದು, ಯತಿವರೇಣ್ಯರನ್ನು ಸ್ವಾಗತಿಸಿದರು. ಮಹಿಳಾ ಸಮಿತಿ ಸದಸ್ಯರು ಅವರ ಆಗಮನದುದ್ದಕ್ಕೂ ಪೂರ್ಣಕುಂಭ ಸ್ವಾಗತಿಸಿದರು.

ಇದೇ ವೇಳೆ ಶ್ರೀಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಆರತಿ ಬೆಳಗಿದರು. ಅಲ್ಲದೆ ಮಂತ್ರಪಠಣ ಮಾಡಿದರು. ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಬಳಿಕ ಭಗವತಿ ಕ್ಷೇತ್ರದಲ್ಲಿ ಶ್ರೀಗಳಿಗೆ ವಿಶೇಷ ಗೌರವಾರ್ಪಾಣೆ ಕ್ಷೇತ್ರದ ವತಿಯಿಂದ ನೀಡಲಾಯಿತು. ಪ್ರಾರ್ಥನೆ ನೆರವೇರಿಸಿದ ಪ್ರಸಾದ ವಿತರಿಸಲಾಯಿತು.

ಇದೇ ವೇಳೆ ಶ್ರೀ ಭಗವತಿ ಕ್ಷೇತ್ರಕ್ಕೆ ವರ್ಕಳ ಶಿವಗಿರಿ ಮಠದ ಶ್ರೀ ಜ್ಞಾನಾನಂದ ತೀರ್ಥ ಸ್ವಾಮೀಜಿ ಅವರೂ ಭೇಟಿ ನೀಡಿದ್ದು, ಅವರನ್ನೂ ಕ್ಷೇತ್ರಾಡಳಿತ ಮಂಡಳಿ ಸಮಿತಿ ಪದಾಧಿಕಾರಿಗಳು ಸ್ವಾಗತಿಸಿ, ಗೌರವಿಸಿದರು.

ಮೊಕ್ತೇಸರರಾದ ರವೀಂದ್ರ, ರಾಜ್ ಗೋಪಾಲ್, ವೈಬಿ ಸುಂದರ್, ಉಷಾ ಪ್ರಭಾಕರ್, ಕಾರ್ಯದರ್ಶಿ ಸುಧೀರ್ ಬಿ, ಆಶಾ ಚಂದ್ರಮೋಹನ್, ದಿನೇಶ್ ಕುಂಪಲ, ರಾಕೇಶ್, ಶಿವ ಪ್ರಸಾದ್, ಆಚಾರಪಟ್ಟವರು, ಗುರಿಕಾರರು, ಮಹಿಳಾ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Continue Reading

DAKSHINA KANNADA

ಪುತ್ತೂರು: ಮಾದಕ ವಸ್ತು ಎಂಡಿಎಂಎ ಮಾರಾಟ ಯತ್ನ; ಆರೋಪಿ ಬಂಧನ

Published

on

ಪುತ್ತೂರು: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸಿ ದ್ವಿಚಕ್ರ ವಾಹನ ಮತ್ತು 10 ಗ್ರಾಂ ಎಂಡಿಎಂಎ ವಶ ಪಡಿಸಿಕೊಂಡಿದ್ದಾರೆ.

 

ಪುತ್ತೂರು ತಾಲೂಕಿನ ಕಬಕ ಉಮ್ಮರ್ ಫಾರೂಕ್ ( 41) ಬಂಧಿತ ಆರೋಪಿಯಾಗಿದ್ದಾನೆ. ಕಬಕ ಗ್ರಾಮದ ಮುರದ ರೈಲ್ವೇ ಸೇತುವೆ ಬಳಿ ಮಾದಕ ವಸ್ತು ಮಾರಾಟ ನಡೆಯುತ್ತಿದೆ ಎಂಬ ಮಾಹಿತಿಯಂತೆ ಪುತ್ತೂರು ನಗರ ಪೊಲೀಸ್‌ ಉಪನಿರೀಕ್ಷಕ ಆಂಜನೇಯ ರೆಡ್ಡಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ದಾಳಿ ನಡೆಸಿತ್ತು.

ಇದನ್ನೂ ಓದಿ: ಮನೆಯವರ ವಿರೋಧ ಕಟ್ಟಿಕೊಂಡು ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಮೂರೇ ತಿಂಗಳಿಗೆ ಆತ್ಮಹ*ತ್ಯೆ!

ಈ ವೇಳೆ ಉಮ್ಮರ್ ಫಾರೂಕ್ ಎಂಬಾತ ಕಂಡು ಬಂದಿದ್ದು, ಆತನ ದ್ವಿಚಕ್ರ ವಾಹನ ಮತ್ತು ಕೈಯಲ್ಲಿದ್ದ ವಸ್ತುಗಳನ್ನು ತಪಾಸಣೆ ನಡೆಸಿದ ವೇಳೆ, ಮಾರಾಟಕ್ಕೆ ಇಟ್ಟಿದ್ದ 10 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page