Connect with us

DAKSHINA KANNADA

ಮಂಗಳೂರು ನಗರ ಪಾಲಿಕೆ ಮನೆ ತ್ಯಾಜ್ಯ ಸಂಗ್ರಹಕ್ಕೆ ಬಂತು 74 ವಾಹನಗಳು..!

Published

on

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡುಗಳಲ್ಲಿ ಮನೆ ಮನೆ ತ್ಯಾಜ್ಯ ಸಂಗ್ರಹಿಸುವ ವಾಹನಗಳಿಗೆ ಚಾಲನೆಯನ್ನು ಮೇಯರ್‌ ಜಯಾನಂದ ಅಂಚನ್‌ ತೆಂಗಿನ ಕಾಯಿ ಒಡೆಯುವ ಮೂಲಕ ಹಸ್ತಾಂತರ ಮಾಡಿದರು.

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡುಗಳಲ್ಲಿ ಮನೆ ಮನೆ ತ್ಯಾಜ್ಯ ಸಂಗ್ರಹಿಸುವ ವಾಹನಗಳಿಗೆ ಚಾಲನೆಯನ್ನು ಮೇಯರ್‌ ಜಯಾನಂದ ಅಂಚನ್‌ ತೆಂಗಿನ ಕಾಯಿ ಒಡೆಯುವ ಮೂಲಕ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ವಾಹನಗಳ ಕೀಲಿ ಕೈಯನ್ನು ಹಸ್ತಾಂತರ ಮಾಡಲಾಯಿತು.

ಪಾಲಿಕೆ ಆಯುಕ್ತ ಆನಂದ್‌ ಮಾತನಾಡಿ 160 ಟಿಪರ್ ಗಾಡಿ ಬರಬೇಕಾಗಿದ್ದು, ಮೊದಲ ಹಂತದಲ್ಲಿ 74 ವಾಹನಗಳು ಬಂದಿವೆ.

ನಾಲ್ಕು ವಲಯಗಳಲ್ಲಿ ಹಂಚಿಕೆ ಮಾಡಲಾಗುವುದು.

ಇನ್ನೂ ಹಲವು ವಾಹನಗಳು ಸೆಪ್ಟೆಂಬರ್ 17ರೊಳಗೆ ಬರಲಿವೆ.

ಬಳಿಕ ಸಂಪೂರ್ಣ ಕಸ ವಿಲೇವಾರಿ ಪಾಲಿಕೆ ವ್ಯಾಪ್ತಿಯಲ್ಲೇ ನಡೆಯಲಿದೆ ಎಂದರು.

ಟೆಂಡರ್‌ನಲ್ಲಿ ವಹಿಸಿದ ಗುತ್ತಿಗೆದಾರರು 1 ವರ್ಷಗಳ ಕಾಲ ನಿರ್ವಹಣೆ ಮಾಡಲಿದ್ದಾರೆ.

ಸ್ವಚ್ಛ ಭಾರತ್‌ ಮಿಷನ್ ಯೋಜನೆಯಡಿಯಲ್ಲಿ ಈ ವಾಹನಗಳನ್ನು ಖರೀದಿಸಲಾಗಿದೆ.

ಮುಂದಿನ ದಿನಗಳಲ್ಲಿ ಬಾಕಿ ಉಳಿದ ವಾಹನಗಳು ಬರಲಿವೆ ಎಂದು ಮೇಯರ್ ಜಯಾನಂದ ಅಂಚನ್‌ ನುಡಿದರು.

ಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಆಂಟನಿ ವೇಸ್ಟ್‌ ಸಸ್ಥೆಯ ಅವಧಿ ಮುಗಿದಿದ್ದು, ಸರಕಾರ ಮಾರ್ಗಸೂಚಿಯಂತೆ ಸ್ವಚ್ಛತೆಯನ್ನು ಹೊರಗುತ್ತಿಗೆಯಿಂದ ಹೊರ ಬಂದು ನಾವೇ ಪೌರಕಾರ್ಮಿಕರ ನೇಮಕಾತಿ ಮಾಡಿ ನಗರ ಪಾಲಿಕೆಯಿಂದಲೇ ತ್ಯಾಜ್ಯ ಇನ್ಮುಂದೆ ನಿರ್ವಹಣೆ ಆಗಲಿದೆ.

ಮುಂದಿನ ದಿನಗಳಲ್ಲಿ ಹೊಸ ಗುತ್ತಿಗೆ ವ್ಯವಸ್ಥೆಯಲ್ಲಿ ನಿರ್ವಹಣೆ ಆಗಲಿದೆ.

ಕೇಂದ್ರ ಸರಕಾರದ ಸ್ವಚ್ಛ್ ಭಾರತ್ ಮಿಷನ್‌ ಅಡಿಯಲ್ಲಿ ವಾಹನ ಖರೀದಿಗೆ ಶೇಕಡಾ 70 ಹಾಗೂ ಉಳಿದ ಹಣ ಸ್ಥಳೀಯಾಡಳಿತ ನೀಡಲಿದೆ.

ಒಟ್ಟಿನಲ್ಲಿ ತ್ಯಾಜ್ಯ ನಿರ್ವಹಣೆ ಪರಿಣಾಮಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರಾದ ಭಾಸ್ಕರ್ ಮೊಯ್ಲಿ, ಶಶಿಧರ ಹೆಗ್ಡೆ, ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ ಪಾಂಡೇಶ್ವರ, ಕಿರಣ್ ಕೋಡಿಕಲ್, ಎ ಸಿ ವಿನಯರಾಜ್‌ ಮೊದಲಾದವರಿದ್ದರು.

ಕಣ್ಣೂರು ಕಾರ್ಪೋರೇಟರ್‌ ಚಂದ್ರಾವತಿ ವಿಶ್ವನಾಥ್ ವಾಹನ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದರು.

DAKSHINA KANNADA

ಉಡುಪಿ : ಪತ್ರಕರ್ತ ರಾಮ್ ಅಜೆಕಾರ್ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ

Published

on

ಉಡುಪಿ : ಕನ್ನಡ ರಿಪೋರ್ಟರ್ ರಾಮ್ ಅಜೆಕಾರ್‌ ಕಾಸರಗೋಡು ಜಿಲ್ಲೆಯ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಗೆ ಆಯಕೆಯಾಗಿದ್ದಾರೆ.

ಹಿರಿಯ ಉದ್ಯಮಿ ಅಶ್ರಫ್ ಷಾ ಮಂತೂರು ಅವರ ದತ್ತಿನಿಧಿಯಿಂದ ನೀಡಲಾಗುವ ಪ್ರಶಸ್ತಿಗೆ ಪತ್ರಕರ್ತ ರಾಮ್ ಅಜೆಕಾರ್ ವರ ‘ಭಗೀರಥ ಅಪ್ಪಿಯಣ್ಣನ ಹೋರಾಟಕ್ಕೆ ಜಯ ಸಿಕ್ಕೀತೇ?’ ಶೀರ್ಷಿಕೆಯಡಿಯ ಸುದ್ಧಿ ಆಯ್ಕೆಯಾಗಿದೆ. ಕನ್ನಡಪ್ರಭ ಪತ್ರಿಕೆಯಲ್ಲಿ ಈ ಸುದ್ಧಿ ಬಿಡುಗಡೆಯಾಗಿತ್ತು.

ದತ್ತಿನಿಧಿಯಿಂದ ನೀಡಲಾಗುವ ಈ ಪ್ರಶಸ್ತಿಯು ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ ೩ರಂದು ಸೀತಾಂಗೋಳಿಯ ಎಲೈನ್ಸ್ ಸಭಾಂಗಣದಲ್ಲಿ ನಡೆಯಲಿದೆ.

Continue Reading

DAKSHINA KANNADA

ಮಂಗಳೂರು : ವಕ್ಫ್ ಕಾಯ್ದೆ ವಿರುದ್ಧ ನಡೆಯಬೇಕಿದ್ದ ಪ್ರತಿಭಟನೆ ಮುಂದೂಡಿಕೆ

Published

on

ಮಂಗಳೂರು :ಈಗಾಗಲೇ ವಕ್ಫ್ ತಿದ್ದುಪಡಿಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದ್ದು, ಈ ಮಸೂದೆಯ ವಿರುದ್ಧ ಮುಸ್ಲಿಮ್ ಸೆಂಟ್ರಲ್ ಕಮಿಟಿಯು ಎ.29ರಂದು ಕೂಳೂರು ಡೆಲ್ಟಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿತ್ತು. ಆದರೆ ಈಗ ಅಚಾನಕ್‌ ಆಗಿ ಆ ಪ್ರತಿಭಟನೆಯನ್ನು ಮುಂದೂಡಲಾಗಿದೆ.

ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್‌ರ ನಿವಾಸದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮೇ 16ರ ಶುಕ್ರವಾರ ಪ್ರತಿಭಟನೆ ನಡೆಸಲು ನಿರ್ಧರಿಸಲಾಸಲಾಗಿದೆ ಎಂದು ಉಪಾಧ್ಯಕ್ಷ ಕೆ.ಅಶ್ರಫ್ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಲಹೆಗಾರರು ಪಾಲ್ಗೊಂಡಿದ್ದರು.

Continue Reading

DAKSHINA KANNADA

ಕ್ರಿಶ್ಚಿಯನ್‌ ಧರ್ಮಗುರು ಪೋಪ್ ಫ್ರಾನ್ಸಿಸ್ ವಿಧಿವಶ; ಖಾದರ್ ಸಂತಾಪ

Published

on

ಮಂಗಳೂರು : ಪೋಪ್‌ ಫ್ರಾನ್ಸಿಸ್​​ ಅಂದರೆ ಜನರಿಗೆ ನೆರಳು ಕೊಡುವ ಮರ. ನಿಸ್ವಾರ್ಥ ಮನಸ್ಸಿನ ದೊರೆ. ತಂಪಾಗಿ ಮಳೆ ಸುರಿಯುವ ಸೋನೆ, ಹಿಂದುಳಿದ ಬಡಜನರ ಪಾಲಿಗೆ ಆತನೇ ದೈವ. ಬದುಕಿನಲ್ಲಿನ ಸುಖ ಶಾಂತಿ, ನೆಮ್ಮದಿಗಳಿರುವ ಆಟಕ್ಕೆ ಫ್ರಾನ್ಸಿಸ್​​ ಚಾಂಪಿಯನ್.ಈಗಲೂ ವ್ಯಾಟಿಕನ್ ಸಿಟಿಯ ಮಂದಿಗೆ ಪೋಪ್​ ಫ್ರಾನ್ಸಿಸ್​​ ಚಾಂಪಿಯನ್ನೇ. ಅಂತಹ ಮಹಾನ್ ವ್ಯಕ್ತಿ, 88 ವರ್ಷದ ಪೋಪ್ ಫ್ರಾನ್ಸಿಸ್ ಡಬಲ್​​ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರು.

ವ್ಯಾಟಿಕನ್‌ನ ಸೇಂಟ್ ಪೀಟರ್ಸ್ ಅಂಗಳದಲ್ಲಿ ಸಾವಿರಾರು ಭಕ್ತರು ಸೇರಿ “ಹ್ಯಾಪಿ ಈಸ್ಟರ್” ಆಚರಣೆ ನಡೆಸುವಾಗ, ಅವರನ್ನ ಹಾರೈಸಲು ಫ್ರಾನ್ಸಿಸ್ ವೀಲ್‌ಚೇರ್‌ನಲ್ಲಿ ಹೊರಬಂದಿದ್ದ ​​. ಅದೇ ಅವರ ಕೊನೆ ದರ್ಶನ ಎಂದು ಯಾರಿಗೂ ತಿಳಿದಿರಲಿಲ್ಲ. ಯಾಕೆಂದರೆ ಡಬಲ್ ನ್ಯುಮೋನಿಯಾ ಚಿಕಿತ್ಸೆ ಪಡೆದು ಮನೆಗೆ ಬಂದು ವಾರಗಳು ಕಳೆದಿದಷ್ಟೇ. ನಿನ್ನೆ (ಏ.21) ಪೋಪ್​ ಫ್ರಾನ್ಸಿಸ್ ಇಹಲೋಕ ತ್ಯಜಿಸಿದ್ದಾರೆ. ಫ್ರಾನ್ಸಿಸ್ ನಿಧನಕ್ಕೆ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ :  ಕ್ಯಾಥೊಲಿಕ್‌ ಕ್ರೈಸ್ತರ ಜಗದ್ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

“ಆಧ್ಯಾತ್ಮಿಕ ಗುರುಗಳಾಗಿದ್ದ ಫ್ರಾನ್ಸಿಸ್ ಸಹಾನುಭೂತಿ, ಸರಳತೆ, ನ್ಯಾಯ ಮತ್ತು ಶಾಂತಿ ಬಯಸುವ ನೈತಿಕ ಧ್ವನಿಯಾಗಿದ್ದರು. ಪೋಪ್ ಆಗಿ ಅವರ ಸರಳ ಜೀವನ ಮತ್ತು ಬಡವರ ಬಗ್ಗೆ ಪ್ರೀತಿ, ವಿಶೇಷ ಕಾಳಜಿ, ಪ್ರತಿಯೊಬ್ಬ ಮನುಷ್ಯನ ಘನತೆಯ ಬಗ್ಗೆ ಆಳವಾದ ಕಾಳಜಿಯನ್ನು ಹೊಂದಿದ್ದರು. ಫ್ರಾನ್ಸಿಸ್ ಅವರ ಸೌಮ್ಯ ಸ್ವಭಾವ ಮತ್ತು ವಿವೇಕಪೂರ್ಣ ಮಾತುಗಳಿಗೆ ಬಹಳ ಆಕರ್ಷಿತನಾಗಿದ್ದೆ. ಈ ಉದಾತ್ತ ಗುಣಗಳು ನನ್ನಲ್ಲಿ ಮಾತ್ರವಲ್ಲ ಜಗತ್ತಿನ ಕೋಟ್ಯಂತರ ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿಯಲಿವೆ” ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರನ್ನು 2024ರ ಡಿಸೆಂಬರ್‌ನಲ್ಲಿ ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದ ಕ್ಷಣಗಳನ್ನು ನೆನಪಿಸಿಕೊಂಡಿರುವ ಸ್ಪೀಕರ್ ಯು.ಟಿ.ಖಾದರ್ “ಪೋಪ್ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಸ್ವೀಕರಿಸಿರುವುದು ಬದುಕಿನ ಅಮೂಲ್ಯ ಕ್ಷಣವಾಗಿ ಸದಾ ನೆನಪಿನಲ್ಲಿ ಉಳಿಯಲಿದೆ. ಅವರು ನೀಡಿರುವ ಸಲಹೆಯು ತನ್ನ ಮೇಲೆ ಪ್ರಭಾವ ಬೀರಿದೆ. ಕರ್ನಾಟಕ ವಿಧಾನಸಭೆಯ ಸದಸ್ಯರು ಮತ್ತು ನಮ್ಮ ರಾಜ್ಯದ ಜನರ ಪರವಾಗಿ, ಸಂತಾಪ ವ್ಯಕ್ತಪಡಿಸುವೆನು. ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ . ಅವರ ದಯೆ ಮತ್ತು ಏಕತೆಯ ಪರಂಪರೆ ಮಾನವತೆಗಾಗಿ ಬೆಳಕು ನೀಡುವ ದಾರಿಯಾಗಿ ಮುಂದುವರಿಯಲಿ ಎಂದು ನಾವು ಆಶಿಸುತ್ತೇವೆ” ಎಂದು ಖಾದರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page