Connect with us

DAKSHINA KANNADA

ಮಂಗಳೂರು: ಬಂದಲೆ ಗುಳಿಗ ಸಾನಿಧ್ಯದಲ್ಲಿ ಸಾಮೂಹಿಕ ಅರಿಕೆ- ಅರಗರಿಗೆ ಜ್ಞಾನ ನೀಡುವಂತೆ ಪ್ರಾರ್ಥಿಸಿದ ಕಿಮ್ಮನೆ ಅಭಿಮಾನಿಗಳು..!

Published

on

ಮಂಗಳೂರು :  ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಳುನಾಡಿನ ಗುಳಿಗ ದೈವದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದರಿಂದ ಮನ ನೊಂದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅವರ ಅಭಿಮಾನಿ ಬಳಗದವರು ಇಂದು ತೀರ್ಥಹಳ್ಳಿಯಿಂದ ಮಂಗಳೂರಿನ ಪಚ್ಚನಾಡಿಯ ಬಂದಲೆ ಗುಳಿಗ ಕ್ಷೇತ್ರಕ್ಕೆ ವಾಹನ ಜಾಥಾದಲ್ಲಿ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.   ‘ತೀರ್ಥಹಳ್ಳಿಯ ರಂಗ ಸಂಗಾತಿ ತಂಡದವರು ನಾಟಕಕಾರ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶನದ ‘ಶಿವದೂತ ಗುಳಿಗೆ’ ನಾಟಕವನ್ನು ತೀರ್ಥಹಳ್ಳಿ ಮತ್ತು ಸುತ್ತಮುತ್ತ ನೆಲೆಸಿರುವ ತುಳುನಾಡಿನ ಮೂಲದ ಜನರಿಗಾಗಿ ಏರ್ಪಡಿಸಿದ್ದು, ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅವರು ಇದಕ್ಕೆ ಸಹಕಾರ ನೀಡಿದ್ದರು.

ಸುಮಾರು 16 ಸಾವಿರ ಜನರು ಈ ನಾಟಕ ವೀಕ್ಷಿಸಿ ದಾಖಲೆ ನಿರ್ಮಿಸಿದ್ದರು.

ಇಷ್ಟೊಂದು ಜನ ಸೇರಿರುವುದನ್ನು ಸಹಿಸಲಾಗದೆ ಸಚಿವ ಅರಗ ಜ್ಞಾನೇಂದ್ರ ಅವರು ರೈತರ ಸಮಾವೇಶದಲ್ಲಿ ಗುಳಿಗ ದೈವವನ್ನು ಜಾಪಾಳ್‌ ಮಾತ್ರೆಗೆ ಹೋಲಿಸಿ ಅವಮಾನಿಸಿದ್ದಾರೆ.

ಇದರಿಂದ ನಾಟಕ ಅಯೋಜಿಸಿದ ನಮಗೆ ಯಾವುದೇ ತೊಂದರೆ ಆಗಬಾರದೆಂದು ಹಾಗೂ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸದ್ಬುದ್ಧಿ ನೀಡಲಿ ಎಂದು ಗುಳಿಗ ದೈವದ ಬಳಿ ಪ್ರಾರ್ಥಿಸಿದ್ದೇವೆ’ ಎಂದು ರಂಗ ಸಂಗಾತಿ ತಂಡದ ಗಣಪತಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಯುವ ಮುಖಂಡ ಮಿಥುನ್ ರೈ, ಆರ್‌. ಪದ್ಮರಾಜ್, ಎ.ಸಿ. ವಿನಯರಾಜ್ ಮತ್ತು ಇತರರು ಉಪಸ್ಥಿತರಿದ್ದರು.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ನಾಳೆಯಿಂದ ಎಸ್.ಎಸ್. ಎಲ್‌.ಸಿ. ಪರೀಕ್ಷೆ ಆರಂಭ; ಬಾಲಕರಿಗೂ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣ

Published

on

ಮಂಗಳೂರು : ಈ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆಯು ನಾಳೆ ಮಾರ್ಚ್ 21 ರಂದು ಆರಂಭವಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 92 ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 29760 ಮಂದಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷೆ ಸುಸೂತ್ರವಾಗಿ ನಡೆಸಲು ಒಟ್ಟು 2057 ಸಿಬಂದಿಯನ್ನು ನಿಯೋಜಿಸಲಾಗಿದೆ. ಶಾಲೆಗಳ ಮೂಲಕ 14,735 ಬಾಲಕರು ಮತ್ತು 13,711 ಬಾಲಕಿಯರು ಸೇರಿದಂತೆ ಒಟ್ಟು 28,446 ವಿದ್ಯಾರ್ಥಿಗಳು ನೊಂದಾಯಿಸಿದ್ದಾರೆ.

ಈ ಪೈಕಿ 8892 ಸರಕಾರಿ ಶಾಲೆಗಳ ವಿದ್ಯಾರ್ಥಿಗಳು, 7864 ಅನುದಾನಿತ ಹಾಗೂ 11690 ಮಂದಿ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಾಗಿರುತ್ತಾರೆ. ಖಾಸಗಿಯಾಗಿ ಮೊದಲ ಬಾರಿ ಪರೀಕ್ಷೆ ಬರೆಯಲು 579 ಹುಡುಗರು ಮತ್ತು 252 ಹುಡುಗಿಯರ ಸಹಿತ 831 ವಿದ್ಯಾರ್ಥಿಗಳು ನೊಂದಾಯಿಸಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳು 259 ಮಂದಿ ಇದ್ದು,  211 ಬಾಲಕರು ಮತ್ತು 48 ಬಾಲಕಿಯರು ಇದ್ದಾರೆ. ಖಾಸಗಿಯಾಗಿ ಪುನರಾವರ್ತಿತ ವಿದ್ಯಾರ್ಥಿಗಳು 217 ಮಂದಿ ಇದ್ದು, ಇದರಲ್ಲಿ 179 ಹುಡುಗರು ಮತ್ತು 38 ಹುಡುಗಿಯರು ಆಗಿರುತ್ತಾರೆ.

1332 ಪರೀಕ್ಷಾ ಕೊಠಡಿಗಳು, 1678 ಸಿಸಿ ಕ್ಯಾಮರಾ ಆಳವಡಿಸಲಾಗಿದೆ. 184 ಪೊಲೀಸ್‌ ಸಿಬಂದಿ ನಿಯೋಜನೆ ಮಾಡಲಾಗಿದ್ದು, ಪರೀಕ್ಷಾ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಸಾಗಾಟಕ್ಕಾಗಿ 34 ಗಸ್ತು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗುವ ಬಾಲಕರಿಗೂ ಕೆಎಸ್ಆರ್‌ಟಿಸಿ ಬಸ್‌ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಲ್ ಟಿಕೆಟ್‌ ತೋರಿಸಿ ಪ್ರಯಾಣಿಸ ಬಹುದಾಗಿದೆ.

Continue Reading

DAKSHINA KANNADA

ನಿರೂಪಕ ಸಾಯಿಹೀಲ್ ರೈಗೆ ಪಿತೃ ವಿಯೋಗ

Published

on

ಮಂಗಳೂರು : ನಿರೂಪಕ ಸಾಯಿಹೀಲ್ ರೈ ಅವರ ತಂದೆ, ಉದ್ಯಮಿ, ಸಾಯಿ ಭಕ್ತ ಬೋಳಾರ ಮಂಗಳಾದೇವಿ ನಿವಾಸಿ ಬೆಳ್ಳಿಪ್ಪಾಡಿ ಸತೀಶ್ ರೈ ಅಗರಿ (66) ಅವರು ಇಂದು(ಮಾ.20) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು.

ಮೃತರು ಪತ್ನಿ ಶೋಭಾ ರೈ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ಬಿ. ಸಿ. ರೋಡ್, ಸಜೀಪ – ನಾಲ್ ಕೈ ತ್ತಾಯ ದೈವಸ್ಥಾನದ ಸಮೀಪ ಇರುವ “ಅಗರಿ ಮನೆ”  ಯಲ್ಲಿ ಸಂಜೆ 4.30 ರಿಂದ 7 ನಡೆಯಲಿದೆ.

 

Continue Reading

DAKSHINA KANNADA

ಸುಳ್ಯ : ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ; ಕಾರಣ ನಿಗೂಢ

Published

on

ಸುಳ್ಯ : ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಕಾರಣಗಳು ನಿಖರವಾಗಿರುವುದಿಲ್ಲ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲೂ ಅಂತಹದ್ದೇ ಘಟನೆಯೊಂದು ನಡೆದಿದೆ.

ಸುಳ್ಯದ ನಲ್ಲೂರು ಕಮ್ರಾಜೆಯ ಪೊಲ್ಲಾಜೆ ಎಂಬಲ್ಲಿ, ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತಪಟ್ಟ ಮಹಿಳೆಯನ್ನು ರೇವತಿ (51) ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page