Connect with us

DAKSHINA KANNADA

ಉಳ್ಳಾಲ ಅಕ್ರಮ ಗೋ ಸಾಗಟ ಪ್ರಕರಣ- ನಾಲ್ವರು ಆರೋಪಿಗಳ ಬಂಧನ..!

Published

on

ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನ ತಡೆದ ಬಜರಂಗದಳ ಕಾರ್ಯಕರ್ತರು, ಅಮಾನವೀಯವಾಗಿ ಸಾಗಾಟ ನಡೆಸುತ್ತಿದ್ದ ಐದು ಜಾನುವಾರುಗಳನ್ನು ರಕ್ಷಿಸಿದ ಘಟನೆ ನಿನ್ನೆ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದರು. ಇದೀಗ ನಾಲ್ವರು ಆರೋಪಿಗಳನ್ನು ಕಲ್ಲಾಪು ಬಳಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನ ತಡೆದ ಬಜರಂಗದಳ ಕಾರ್ಯಕರ್ತರು, ಅಮಾನವೀಯವಾಗಿ ಸಾಗಾಟ ನಡೆಸುತ್ತಿದ್ದ ಐದು ಜಾನುವಾರುಗಳನ್ನು ರಕ್ಷಿಸಿದ ಘಟನೆ ನಿನ್ನೆ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದರು. ಇದೀಗ ನಾಲ್ವರು ಆರೋಪಿಗಳನ್ನು ಕಲ್ಲಾಪು ಬಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಲ್ಲಾಳದ ಅಹಮ್ಮದ್ ಇರ್ಶಾದ್‌, ಮಂಜೇಶ್ವರ ಬಂಗ್ರದ ಖಾಲಿದ್‌ ಬಿ ಎಂ, ಉಳ್ಳಾಲ ಅಲೇಕಳದ ಜಾಫರ್‌ ಸಾಧಿಕ್‌, ಉಳ್ಳಾಲ ಬಸ್ತಿಪಡ್ಪು ನಿವಾಸಿ ಫಯಾಝ್‌ ಎಂದು ಗುರುತಿಸಲಾಗಿದೆ.

ನಾಲ್ವರು ಆರೋಪಿಗಳು ಕೇರಳ ನೋಂದಣಿಯ ಏಸ್ ವಾಹನದಲ್ಲಿ ಮುಡಿಪು, ಕೊಣಾಜೆ, ಮದಕ ಮಾರ್ಗವಾಗಿ 5 ಜಾನುವಾರುಗಳನ್ನು ಅಕ್ರಮವಾಗಿ ತುಂಬಿಸಿ ಸಾಗುತ್ತಿದ್ದ ವೇಳೆ ಭಂಡಾರ ಬೈಲು ರಸ್ತೆಯ ಕಡಿದಾದ ಎತ್ತರದ ತಿರುವು ಏರಲಾರದೆ ನಿಂತು ಬಿಟ್ಟಿತ್ತು.

ಈ ವೇಳೆ ಸ್ಥಳೀಯರು ಪರಿಶೀಲಿಸಿದಾಗ ಇದರಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು. ಅಷ್ಟರಲ್ಲಾಗಲೇ ವಾಹನದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದರು.

ಬಳಿಕ ವಾಹನದಲ್ಲಿದ್ದ ಒಂದು ಕರು ತಪ್ಪಿಸಿದ್ದು, ಮತ್ತೊಂದು ಕರು, ಎರಡು ಹೋರಿ, ಒಂದು ಹಸುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿ ಉಳ್ಳಾಲ ಠಾಣೆಗೆ ಒಪ್ಪಿಸಿದ್ದರು.

ಉಳ್ಳಾಲ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು, ಕೊನೆಗೂ ಬಂಧಿಸಿದ್ದಾರೆ.

BELTHANGADY

ಮಹಾ ಶಿವರಾತ್ರಿಯಂದು ಧರ್ಮಸ್ಥಳಕ್ಕೆ ಪಾದಯಾತ್ರೆ ಬರುವ ಭಕ್ತರಿಗೆ ವಿಶೇಷ ಸೂಚನೆ

Published

on

ಧರ್ಮಸ್ಥಳ: ಹಬ್ಬ ಹರಿದಿನಗಳ ಸಂದರ್ಭದಲ್ಲಿ ಜನರು ದೇವಸ್ಥಾನಕ್ಕೆ ತೆರಳುವುದು ಸರ್ವೆ ಸಾಮಾನ್ಯ. ಹೀಗಾಗಿ ಈ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ವಿಶೇಷ ಸೂಚನೆಗಳನ್ನು ಹೊರಡಿಸಲಾಗುತ್ತದೆ. ಅದೇ ರೀತಿ ಮಹಾ ಶಿವರಾತ್ರಿಯಂದು ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಲಕ್ಷಾಂತರ ಮಂದಿ ಭಕ್ತರು ರಾಜ್ಯದ ಮೂಲೆ-ಮೂಲೆಗಳಿಂದ ಆಗಮಿಸುತ್ತಾರೆ. ಅವರಿಗಾಗಿ ಈ ವರ್ಷವೂ ಸಹ ಕೆಲವು ಸೂಚನೆಗಳನ್ನು ನೀಡಲಾಗಿದೆ.

ಭಕ್ತರಿಗೆ ಮಹತ್ವದ ಸೂಚನೆ:

  • ರಸ್ತೆಯಲ್ಲಿ ವಾಹನ ದಟ್ಟಣೆ ಇರುವ ಹಿನ್ನೆಲೆ ಕಡ್ಡಾಯವಾಗಿ ಉಡುವ ಬಟ್ಟೆಯ ಬೆನ್ನಿನಲ್ಲಿ, ತೋಳಿನಲ್ಲಿ, ತಲೆಯ ದಿರಿಸಿನಲ್ಲಿ ಪ್ರತಿಫಲಕ ಇರಲೇಬೇಕು.
  • ನೀವು ವಾಸ್ತವ್ಯ ಇರುವ ಸ್ಥಳದಲ್ಲಿ ಮತ್ತು ದಾರಿಯಲ್ಲಿ ಬರುವಾಗ ಉಗುಳುವುದು, ಗಲೀಜು ಇತ್ಯಾದಿ ಮಾಡುವುದರಿಂದ ಇತರ ಸದ್ಭಕ್ತರನ್ನು ಹೀಯಾಳಿಸಿದಂತಾಗುತ್ತದೆ.
  • ನೀವು ತಂಗುವ ಸ್ಥಳ, ಅಡುಗೆ ಮಾಡಿದ ಸ್ಥಳವನ್ನು ಸ್ವಯಂಸ್ಪೂರ್ತಿಯಿಂದ ಸ್ವಚ್ಛ ಮಾಡಿರಿ. ನೀವು ಬಳಸುವ ಪ್ಲಾಸ್ಟಿಕ್ ಮತ್ತು ಕಸ-ಕಡ್ಡಿಗಳನ್ನು ಒಂದು ಚೀಲದಲ್ಲಿ ತುಂಬಿ ತ್ಯಾಜ್ಯ ವಿಲೇವಾರಿಗೆ ಇರುವ ನಿಗದಿತ ಸ್ಥಳದಲ್ಲೇ ವಿಲೇವಾರಿ ಮಾಡಿ.
  • ಇನ್ನು ಪಾದಯಾತ್ರೆಗಳ ಅನುಕೂಲಕ್ಕಾಗಿ ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಸುಮಾರು 10 ಕಡೆ ಮಿನಿ ಟ್ಯಾಂಕ್‌ಗಳನ್ನು ಇಡಲಾಗಿದ್ದು, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
  • ಭಕ್ತಾದಿಗಳ ಆರೋಗ್ಯ ದೃಷ್ಟಿಯಿಂದ ತಾಳು ಬೆಟ್ಟದಲ್ಲಿ ತಾತ್ಕಾಲಿಕ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದೆ. ಐವತ್ತಕ್ಕೂ ಹೆಚ್ಚು ಮೊಬೈಲ್ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗಾಗಿ ಬರುವಂತಹ ಭಕ್ತರು ಶುಚಿತ್ವವನ್ನು ಕಾಪಾಡಿಕೊಳ್ಳಿ.

Continue Reading

DAKSHINA KANNADA

ಕಪ್ಪೆ ಚಿಪ್ಪು ಹೆಕ್ಕಲು ಹೋದಾಗ ದುರಂತ; ನದಿಯಲ್ಲಿ ಮುಳುಗಿ ವ್ಯಕ್ತಿ ಸಾ*ವು

Published

on

ಮಂಗಳೂರು : ಕಪ್ಪೆ ಚಿಪ್ಪು ಹೆಕ್ಕಲು ತೆರಳಿದ್ದ ವಿವಾಹಿತ ಬೈತಾರ್ ನಿವಾಸಿ ವಿನೋದ್‌ ಗಟ್ಟಿ(40) ಎಂಬುವವರುವರು ನದಿ ನೀರಿನಲ್ಲಿ ಮುಳುಗಿ ಸಾ*ವನಪ್ಪಿದ ಘಟನೆ ಹರೇಕಳ ಬಳಿಯ ಬೈತಾರ್ ಸಮೀಪ ಸಂಭವಿಸಿದೆ.

ಮನೆಯಿಂದ ಪಂಪ್ವೆಲ್ ಕಡೆಗೆ ಕೆಲಸದ ಮೇಲೆ ತೆರಳಿದ್ದ ವಿನೋದ್  ಮಧ್ಯಾಹ್ನ ವೇಳೆ ವಾಪಾಸ್ಸಾಗಿದ್ದು,  ಬಳಿಕ ನದಿ ನೀರಿಗೆ ಇಳಿದು ಕಪ್ಪೆ ಚಿಪ್ಪು ಹೆಕ್ಕಲು  ತೆರಳಿದ್ದರು.

ಇದನ್ನೂ ಓದಿ: ಸಹೋದರಿಯ ಹಳದಿ ವೇಳೆ ನೃತ್ಯ ಮಾಡುತ್ತಲೇ ಇಹಲೋಕ ತ್ಯಜಿಸಿದ ಯುವತಿ

ಈ ವೇಳೆ ಕೆಸರಿನಲ್ಲಿ  ಕಾಲು ಹೂತುಹೋಗಿದ್ದು,  ಬಳಿಕ ನೀರಿನಿಂದ ಮೇಲೆಳಲು ಸಾಧ್ಯವಾಗದೆ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ. ಮೃತರು ವಿವಾಹಿತರಾಗಿದ್ದು ಪತ್ನಿ ಪುತ್ರನನ್ನು ಅಗಲಿದ್ದಾರೆ.

 

Continue Reading

DAKSHINA KANNADA

ಫುಟ್‌ಬಾತ್ ಮೇಲೆ ಹತ್ತಿದ ಕಾರು; ಸದ್ಯ ಪ್ರಯಾಣಿಕರು ಪಾರು

Published

on

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಫುಟ್‌ಬಾತ್ ಮೇಲೆ ಚಲಿಸಿದ ಘಟನೆ ಸುಳ್ಯ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ ಮುಂಭಾಗದ ನಂದಿನಿ ಸ್ಟಾಲ್ ಬಳಿ ನಿನ್ನೆ ರಾತ್ರಿ (ಫೆ.9) ಸಂಭವಿಸಿದೆ.

ಪುತ್ತೂರು ಕಡೆಯಿಂದ ಮಡಿಕೇರಿ ಕಡೆ ಹೋಗುತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಫುಟ್‌ಬಾತ್ ಮೇಲೆ ಹತ್ತಿದ ಪರಿಣಾಮ ಅಲ್ಲೇ ಪಕ್ಕದಲ್ಲಿ ಇರಿಸಲಾಗಿದ್ದ ಹಾಲಿನ ಪ್ಯಾಕೇಟ್‍ನ ಖಾಲಿ ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿದೆ.

ಇದನ್ನೂ ಓದಿ : ಮಲ್ಪೆ : ಸಮುದ್ರಕ್ಕೆ ಬಿದ್ದು ಮೀನುಗಾರ ದುರಂತ ಅಂತ್ಯ

ಅದೃಷ್ಟವಶಾತ್ ಸ್ಥಳದಲ್ಲಿ ಸಾರ್ವಜನಿಕರು ಯಾರು ಇಲ್ಲದ ಕಾರಣ ದೊಡ್ಡ ಅಪಾಯ ತಪ್ಪಿದೆ. ಕಾರಿನಲ್ಲಿ ಮಕ್ಕಳು, ಮಹಿಳೆಯರು ಇದ್ದು ಯಾರಿಗೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page