Connect with us

DAKSHINA KANNADA

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಕೃಷಿ ಪತ್ತಿನ ಸಹಕಾರಿ ಮುಖಂಡರ ಸಭೆ

Published

on

ಮಂಗಳೂರು: ಬೆಳೆ ವಿಮೆ ಪರಿಹಾರದಲ್ಲಿ ನ್ಯೂನತೆಯಾಗಿದ್ದು, ಪರಿಷ್ಕರಣೆಯಾಗಬೇಕು ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಎಸ್ ಸಿ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಆಗ್ರಹಿಸಿದರು.

ಸಭೆಯಲ್ಲಿ ಬೆಳೆ ವಿಮೆಯ ಪರಿಹಾರವನ್ನು ಸಹಕಾರಿ ಬ್ಯಾಂಕುಗಳ ಮೂಲಕ ರೈತರಿಗೆ ಪಾವತಿಸಿದರೆ ಉತ್ತಮ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ತೋಟಗಾರಿಕಾಧಿಕಾರಿ ದರ್ಶನ್ ಈ ಬಗ್ಗೆ ಮಾಹಿತಿ ನೀಡುತ್ತಾ, ಕಳೆದ ವರ್ಷ 215 ಕೋಟಿ ರೂ. ಪ್ರಿಮಿಯಂ ಸಂಗ್ರಹವಾಗಿದೆ. 270 ಕೋಟಿ ರೂ. ಪಾವತಿಯಾಗಿದೆ. ಈ ವರ್ಷ 277 ಕೋಟಿ ಬೆಳೆ ವಿಮಾ ಕಂತು ಸಂಗ್ರಹಿಸಲಾಗಿದೆ. ಇದುವರೆಗೆ 169 ರೂ. ಕೋಟಿ ಪಾವತಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಮಳೆ ಮಾಪನ ಸರಿಯಾಗಿ ಆಗುತ್ತಿಲ್ಲ. ಇದರಿಂದ ವಿಮಾ ಪರಿಹಾರ ಮೊತ್ತ ಸರಿಯಾಗಿ ಪಾಪಾವತಿಯಾಗಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮಹೇಶ್ ಕರಿಕ್ಕಳ ಆರೋಪಿಸಿದರು. ಬೆಳೆ ವಿಮೆಮಾಡುವ ಸಂದರ್ಭದಲ್ಲಿ ಪಾಲಿಸಿದಾರರಿಗೆ ವೈಯಕ್ತಿಕವಾಗಿ ಪಾಲಿಸಿ ಬಾಂಡ್ ನೀಡಬೇಕು. ಪ್ರಸ್ತುತ ವಿಮಾ ಪಾಲಿಸಿ ದಾಖಲೆ ನೀಡುತ್ತಿಲ್ಲ ಎಂದು ಪ್ರಕಾಶ್ ಚಂದ್ರ ಕಂಬದ ಕೋಣೆ ಆರೋಪಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸಹಕಾರ ಸಂಘಗಳ ಅಧ್ಯಕ್ಷರು ಬೆಳೆ ವಿಮೆಯ ನ್ಯೂನತೆಯ ಕಾರಣದಿಂದ ರೈತರಿಂದ ಬೈಗುಳವನ್ನು ತಿನ್ನಬೇಕಾಗಿದೆ. ಈ ನ್ಯೂನತೆ ಸರಿಪಡಿಸಬೇಕಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.


ಸಭೆಯಲ್ಲಿ ಕ್ಯಾಂಪ್ಕೋ ಸಂಸ್ಥೆಗೆ ಎರಡನೇ ಬಾರಿಗೆ ಅಧ್ಯಕ್ಷರಾದ ಎಸ್.ಆರ್.ಸತೀಶ್ಚಂದ್ರ ಅವರನ್ನು ಸನ್ಮಾನಿಸಲಾಯಿತು. ಎಸ್ ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕರುಗಳಾದ ಟಿ.ಜಿ.ರಾಜಾರಾಮ ಭಟ್, ಎಂ.ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೋಟ್ಟು ಮೊದಲಾದವರಿದ್ದರು.

DAKSHINA KANNADA

ಡಾ. ಬಿ. ವಿ. ಮಂಜುನಾಥ್ ಅವರಿಗೆ FRCP (ಗ್ಲಾಸ್ಗೋ–ಯುಕೆ) ಪ್ರಶಸ್ತಿ

Published

on

ಮಂಗಳೂರು : ಯುನೈಟೆಡ್ ಕಿಂಗ್ಡಮ್‌ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್ ಆಫ್ ಗ್ಲಾಸ್ಗೋ ಸಂಸ್ಥೆಯು ಹೃದಯರೋಗ ಕ್ಷೇತ್ರದಲ್ಲಿ ವಿಶಿಷ್ಟ ವೈದ್ಯಕೀಯ ಮತ್ತು ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ, ಕಾರ್ಡಿಯಾಲಜಿ ವಿಭಾಗದ ಪ್ರಾಧ್ಯಾಪಕ,  ಮುಖ್ಯಸ್ಥರ ಹಾಗೂ ಮುಖ್ಯ ಇಂಟರ್ವೆನ್ಶನಲ್ ಕಾರ್ಡಿಯಾಲಜಿಸ್ಟ್ ಆಗಿರುವ ಡಾ. ಬಿ. ವಿ. ಮಂಜುನಾಥ್ ಅವರಿಗೆ ಅತ್ಯಂತ ಗೌರವಾನ್ವಿತ “ಆನರರಿ FRCP” (ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್) ಪ್ರಶಸ್ತಿಯನ್ನು ಪ್ರದಾನಿಸಿದೆ.

ಡಾ. ಮಂಜುನಾಥ್ ಅವರಿಗೆ 36 ವರ್ಷಗಳಿಗಿಂತ ಹೆಚ್ಚು ಹೃದಯರೋಗ ಚಿಕಿತ್ಸಾ ಅನುಭವವಿದ್ದು, ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಶೋಧನಾ ಲೇಖನಗಳು ಮತ್ತು ಪ್ರಸ್ತುತಿಗಳು, ಪಿಎಚ್‌ಡಿ ಮಾರ್ಗದರ್ಶಕರಾಗಿ ಹಾಗೂ ವಿಶ್ವವಿದ್ಯಾಲಯದ ಪರೀಕ್ಷಕರಾಗಿ ಸೇವೆ, ಮತ್ತು ಅನೇಕ ಪದವಿ, ಸ್ನಾತಕೋತ್ತರ ಹಾಗೂ ಡಿಎಂ ಕಾರ್ಡಿಯಾಲಜಿ ಫೆಲೋಶಿಪ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಶ್ರೇಷ್ಠ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ, ಅವರು ಹೃದಯ ಕ್ಯಾಥ್ ಲ್ಯಾಬ್‌ನಲ್ಲಿ ಅನೇಕ ಸಂಕೀರ್ಣ ಇಂಟರ್ವೆನ್ಶನಲ್ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಆನರರಿ FRCP ಪದವಿ ಪರೀಕ್ಷಾಧಾರಿತ ಪದವಿಯಿಂದ ಭಿನ್ನವಾಗಿದ್ದು, ಇದು ಅನುಭವಿ ವೈದ್ಯರಿಗೆ ನೀಡಲಾಗುವ ಅತ್ಯಂತ ಅಪರೂಪದ ಹಾಗೂ ಗೌರವಾನ್ವಿತ ಅಂತಾರಾಷ್ಟ್ರೀಯ ಫೆಲೋಶಿಪ್ ಆಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯಕೀಯ, ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದವರಿಗೆ ಈ ಗೌರವ ಲಭಿಸುತ್ತದೆ ಮತ್ತು ಇದು ಅಂತಾರಾಷ್ಟ್ರೀಯ ಮಟ್ಟದ ಸಹೋದ್ಯೋಗಿ ಮಾನ್ಯತೆಯನ್ನು ನೀಡುತ್ತದೆ.

ಇದನ್ನೂ ಓದಿ : ಅಂತ್ಯ ಅಲ್ಲ….ಇದು ಹೊಸ ಆರಂಭ..ಧ್ರುವಂತ್ ಗೆಟಪ್ ಚೇಂಜ್

ಈ ಗೌರವವನ್ನು ವಿಶ್ವದಾದ್ಯಂತ ಆಯ್ಕೆಯಾದ ಕೆಲವೇ ವೈದ್ಯರಿಗೆ (ವಾರ್ಷಿಕವಾಗಿ ಗರಿಷ್ಠ 15 ಜನರಿಗೆ ಮಾತ್ರ) ರಾಯಲ್ ಕಾಲೇಜ್ ಸದಸ್ಯರ ಮತದಾನದ ಮೂಲಕ ಪ್ರದಾನಿಸಲಾಗುತ್ತದೆ.

 

Continue Reading

DAKSHINA KANNADA

ಸಜೀಪ ಮೂಡ ವಲಯ  ಕಾಂಗ್ರೆಸ್ ಸಮಿತಿ :  ನೂತನ ಅಧ್ಯಕ್ಷರಾಗಿ ಶೈಲೇಶ್ ಪೂಜಾರಿ

Published

on

ಬಂಟ್ವಾಳ : ಪಾಣೆಮಂಗಳೂರು  ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಜೀಪಮೂಡ ವಲಯ  ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆಯವರನ್ನು ನೇಮಕ ಮಾಡಲಾಗಿದೆ.

ಮಾಜಿ ಸಚಿವ ಬಿ.ರಮಾನಾಥ ರೈ ಶಿಫಾರಸ್ಸಿನ ಮೇರೆಗೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಚಂದ್ರಶೇಖರ ಭಂಡಾರಿ ನೇಮಕಾತಿ ಆದೇಶ ಪತ್ರವನ್ನು ನೀಡಿದರು.

ಇದನ್ನೂ ಓದಿ : ಅಂತ್ಯ ಅಲ್ಲ….ಇದು ಹೊಸ ಆರಂಭ..ಧ್ರುವಂತ್ ಗೆಟಪ್ ಚೇಂಜ್

ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ  ಕಾರ್ಮಿಕ ಘಟಕದ ಅಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಹಾಗೂ ಸಜೀಪ ಮೂಡ ವಲಯ ಕಾಂಗ್ರೆಸ್‌ನ ಅಧ್ಯಕ್ಷ ಎನ್.ಕರೀಂ  ಉಪಸ್ಥಿತರಿದ್ದರು.

Continue Reading

DAKSHINA KANNADA

ಮಂಗಳೂರಿಗೆ ಮೊದಲ ‘ಅಮೃತ್ ಭಾರತ್ ಎಕ್ಸ್ ಪ್ರೆಸ್’ ರೈಲು; ಎಲ್ಲಿಂದ ಎಲ್ಲಿಗೆ?

Published

on

ಮಂಗಳೂರು: ತಮಿಳುನಾಡಿನ ನಾಗರಕೋಯಿಲ್ ನಿಂದ ಮಂಗಳೂರಿಗೆ ‘ಅಮೃತ್ ಭಾರತ್ ಎಕ್ಸ್ ಪ್ರೆಸ್’ ಆರಂಭಿಸಲು ರೈಲ್ವೇ ಇಲಾಖೆ ಚಿಂತನೆ ನಡೆಸಿದೆ.

ಈ ರೈಲು ಆರಂಭಗೊಂಡರೆ ಮಂಗಳೂರಿಗೆ ಮೊದಲ ಅಮೃತ ಭಾರತ್ ಎಕ್ಸ್ ಪ್ರೆಸ್ ಲಭ್ಯವಾಗಲಿದೆ ಮತ್ತು ಇದು ತಮಿಳುನಾಡು, ಕೇರಳ ಮತ್ತು ಕರ್ನಾಟಕ ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಬಲಗೊಳಿಸಲಿದೆ.

ಈ ಪ್ರಸ್ತಾವಿತ ರೈಲಿನ ಸೇವೆಯನ್ನು ಮಂಗಳೂರು ತನಕ ಮಾತ್ರ ಸೀಮಿತಗೊಳಿಸಿದೆ, ಸುಬ್ರಹ್ಮಣ್ಯ ರೋಡ್ ಅಥವಾ ಕಬಕ ಪುತ್ತೂರು ತನಕ ವಿಸ್ತರಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಈ ರೈಲು ಸುಬ್ರಹ್ಮಣ್ಯ ತನಕ ಓಡಿಸಿದರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುವ ಭಕ್ತರಿಗೆ ಪ್ರಯೋಜನವಾಗಲಿದೆ.

ಪ್ರಸ್ತುತ ಸುಬ್ರಹ್ಮಣ್ಯದಿಂದ ತಿರುವನಂತಪುರ ಮತ್ತು ದಕ್ಷಿಣ ಕೇರಳದ ಕಡೆಗೆ ಯಾವುದೇ ನೇರ ರೈಲು ಸಂಪರ್ಕವಿಲ್ಲ. ಕೇರಳ ಭಾಗಕ್ಕೆ ಬೆಂಗಳೂರು- ಕಣ್ಣೂರು ರೈಲು ಮಾತ್ರವೇ ಸುಬ್ರಹ್ಮಣ್ಯ ರೋಡ್ ಮೂಲಕ ಸಂಚರಿಸುತ್ತಿದೆ.

ಇದನ್ನೂ ಓದಿ: ಬಿಗ್‌ ಬಾಸ್‌ ಫಿನಾಲೆ ವೀಕ್‌ನಲ್ಲಿ ಸ್ಪರ್ಧಿಯಿಂದ ಇದೆಂತಾ ನಿರ್ಧಾರ; ಸಹಸ್ಪರ್ಧಿಗಳಿಗೆ ಬಿಗ್‌ ಶಾಕ್..!

ಹಾಗಾಗಿ ನಾಗರಕೋಯಿಲ್- ಮಂಗಳೂರು ಅಮೃತ್ ಭಾರತ್‌ಎಕ್ಸ್‌ಪ್ರೆಸ್ ರೈಲನ್ನು ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಿಸ ಬೇಕು. ಈ ಬಗ್ಗೆ ಕೇಂದ್ರ ರೈಲ್ವೇ ಸಚಿವರು, ಸಂಸದರ ಗಮನ ಸೆಳೆಯಲಾಗಿದೆ ಎಂದು ರೈಲ್ವೆ ಬಳಕೆದಾರರ ಸಂಘದವರು ಮಾಹಿತಿ ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page