Connect with us

LATEST NEWS

ಸ್ಪರ್ಧೆಯಿಂದ ಹಿಂದೆ ಸರಿದ ಸುಮಲತಾ…ಬಿಜೆಪಿಗೆ ಬೆಂಬಲ!

Published

on

ನಾನು ಸ್ವಾರ್ಥ ರಾಜಕಾರಣ ಮಾಡಲ್ಲ. ಮಂಡ್ಯ ಬಿಟ್ಟು ಹೋಗಲ್ಲ ಎಂದು ಸಂಸದೆ ಸುಮಲತಾ ಹೇಳಿದ್ದಾರೆ. 2019 ರಲ್ಲಿ ಸವಾಲು ಇತ್ತು. ಆಗ ಮೋದಿ ಅವರು ನನಗೆ ಬೆಂಬಲ ನೀಡಿದ್ದರು. ನಾನು ಅವರ ಪರವಾಗಿ ಪ್ರಚಾರ ಮಾಡಿದ್ದೆ. ಆದರೆ, ಇದೀಗ ಅದಕ್ಕಿಂತ ಹೆಚ್ಚಿನ ಸವಾಲು ಇದೆ. ಬಿಜೆಪಿ-ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಮಂಡ್ಯವನ್ನು ಬಿಜೆಪಿ ಬಳಿಯೇ ಉಳಿಸಿಕೊಳ್ಳಲಿ ಎಂಬ ಪ್ರಯತ್ನ ಮಾಡುತ್ತಾ ಬಂದೆ. ಬೆಂಗಳೂರು ಉತ್ತರ, ದಕ್ಷಿಣ, ಚಿಕ್ಕಬಳ್ಳಾಪುರ ಆಫರ್ ಬಂದಿತ್ತು.  ಅಧಿಕಾರಕ್ಕಾಗಿ ನಾನು ಮಂಡ್ಯ ಬಿಟ್ಟು ಹೋಗಲ್ಲ ಎಂದು ಅವರು ಹೇಳಿದ್ದಾರೆ.

ನನಗೆ ಗೌರವ ಇಲ್ಲದ ಕಡೆ ಹೋಗೋದು ನನಗಿಷ್ಟ ಇಲ್ಲ. ನಾನು ಸ್ವತಂತ್ರವಾಗಿ ಪಕ್ಷೇತರರಾಗಿ ಸ್ಪರ್ಧೆ ಮಾಡಲ್ಲ. ಕಾಂಗ್ರೆಸ್ ನವರೇ ನನ್ನನ್ನು ಬೇಡ ಎಂದಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ನಾಯಕತ್ವ ನಮ್ಮ ಪಕ್ಷಕ್ಕೆ ಬೇಕು ಎಂದಿದ್ದಾರೆ ಎಂದ ಸುಮಲತಾ ಅವರು, ಜಿಜೆಪಿಗೆ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದು ಘೋಷಿಸಿದ್ದಾರೆ.

ಅಭಿವೃದ್ಧಿ ಕಾರ್ಯ ಬಿಚ್ಚಿಟ್ಟ ಸುಮಲತಾ

ಮಂಡ್ಯ ಅಂದರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ… 5 ವರ್ಷದ ಹಿಂದೆ ಐತಿಹಾಸಿಕ ಗೆಲುವನ್ನು ನೀಡಿದ್ದೀರಿ. ನನ್ನ ರಾಜಕೀಯ ಪರೀಕ್ಷೆ ಆಕಸ್ಮಿಕವಾಗಿತ್ತು. ಎಲ್ಲ ನೋವು, ಸವಾಲು ಎದುರಿಸಿ ಕೆಲಸ ಮಾಡಿದ್ದೇನೆ. ಮಂಡ್ಯ ಜನರ ಪರವಾಗಿ ನಿಲ್ಲುವುದು ನನ್ನ ಗುರಿ ಆಗಿತ್ತು. ನನ್ನ ಜಿಲ್ಲೆಯ ರೈತರು, ಜನಸಾಮಾನ್ಯರು, ಯುವಕರು. ಅಭಿವೃದ್ಧಿಯೊಂದೆ ನನ್ನ ಗುರಿ ಆಗಿತ್ತು. ನನ್ನ ಕೈಲಾದ ಕೆಲಸ ಮಾಡಿದ್ದೇನೆ. ನಿಮ್ಮ ಅಭಿವೃದ್ಧಿ ಕೆಲಸಕ್ಕೆ ಪ್ರಚಾರ ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿತ್ತು. ಹಾಗಾಗಿ ಹೇಳಲೇ ಬೇಕಾಗಿದೆ ಎಂದರು.
2 ಸಂಸದರ ಅನುದಾನ ಸಿಕ್ಕಿರಲಿಲ್ಲ. 3 ವರ್ಷದಲ್ಲಿ ಇಷ್ಟೆಲ್ಲ ಅಭಿವೃದ್ಧಿ ಮಾಡಿದ್ದೇನೆ. ಅಕ್ರಮ ಗಣಿಗಾರಿಕೆ ವಿರುದ್ಧ ದೊಡ್ಡ ಹೋರಾಟ ಮಾಡಿದ್ದೇನೆ. ಮೈಸೂರು – ಬೆಂಗಳೂರು ರಸ್ತೆ ಲೋಪದೋಷ ಸರಿಪಡಿಸಿದ್ದೇನೆ. ಕೆಆರ್ ಎಸ್ ಡ್ಯಾಂಗಾಗಿ ಹೋರಾಡಿದ್ದೇನೆ. ಮೈಶುಗರ್ ಕಾರ್ಖಾನೆ ಪರ ಹೋರಾಡಿದ್ದೇನೆ. 2 ವರ್ಷದಲ್ಲಿ ಮರುಚಾಲನೆ ನೀಡಿದ್ದೇನೆ. ನರೇಗಾದಲ್ಲಿ ಮಂಡ್ಯ ಎರಡನೇ ಸ್ಥಾನದಲ್ಲಿದೆ ಎಂದರು.

ಭಾವುಕರಾದ ಸಂಸದೆ:
ಸ್ವತಂತ್ರ ಅಭ್ಯರ್ಥಿಯಾಗಿ, ಒಬ್ಬಂಟಿ ಮಹಿಳೆಯಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಸುಮಲತಾ ಏನು ಮಾಡಿದ್ದಾರೆ, ಎಲ್ಲಿದ್ದಾರೆ ಎಂದು ಟೀಕಿಸುವವರಿದ್ದಾರೆ. ಮಂಡ್ಯದ ಘನತೆಯನ್ನು ಎತ್ತಿ ಹಿಡಿದಿದ್ದೇನೆ. ಇದು ನನ್ನ ಘನತೆಯಲ್ಲ. ಮಂಡ್ಯದ ಘನತೆ.
ಒಂದು ನಂಬಿಕೆ ಇದೆ. ಅಂಬರೀಶ್ ಎಲ್ಲಿದ್ದಾರೋ ಅಲ್ಲಿಂದಲೇ ನನ್ನ ಮೆಚ್ಚುತ್ತಾರೆ ಎಂಬ ನಂಬಿಕೆ ಇದೆ. ಮಳವಳ್ಳಿ ಸೊಸೆ ಮಳವಳ್ಳಿ ಋಣ ತೀರಿಸಿದ್ದಾಳೆ ಎಂದು ಭಾವುಕರಾದರು.

ಅವರಿಗೆ ಅಭಿಷೇಕ್ ಅಂಬರೀಷ್, ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಾಥ್ ನೀಡಿದರು.

DAKSHINA KANNADA

ಬಸ್ಸಿನಲ್ಲಿ ಕುಳಿತ ಸೀಟಿನಲ್ಲೇ ಸಾವನ್ನಪ್ಪಿದ ಪ್ರಯಾಣಿಕ

Published

on

ಶಿರ್ವ : ಕೆಎಸ್‌ಆರ್‌ಟಿಸಿ ಐರಾವತ ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಬಸ್ಸಿನ ಸೀಟಿನಲ್ಲಿ ಕುಳಿತಲ್ಲಿಯೇ ಮೃತಪಟ್ಟ ಘಟನೆ ಶಿರ್ವ – ಮುಂಬೈನಿಂದ ಉಡುಪಿ-ಶಿರ್ವ-ಮೂಡುಬಿದಿರೆಯಾಗಿ ಮಂಗಳೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ  ಎ. 21 ರಂದು ಮುಂಜಾನೆ ನಡೆದಿದೆ.

ಮೃತರನ್ನು ಕುಮಟಾ ಮೂಲದ ಪ್ರಯಾಣಿಕ ಸುಮಾರು 45 ವರ್ಷ ಪ್ರಾಯದ ಸತ್ಯ ಭಂಡಾರಿ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಅಂಬುಲೆನ್ಸ್‌ನಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಸತ್ಯ ಭಂಡಾರಿ ಪ್ರಯಾಣದ ಸಂಧರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.

Continue Reading

BELTHANGADY

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; ಮೂವರು ಗಂಭೀರ

Published

on

ಬೆಳ್ತಂಗಡಿ : ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ಸಮಿಪದ ಗುರುವಾಯನಕೆರೆ-ಕಾರ್ಕಳ ರಸ್ತೆಯ ಅಳದಂಗಡಿಯ ಕೆದ್ದುವಿನಲ್ಲಿ ನಿನ್ನೆ (ಏ.21) ಸಂಜೆ ನಡೆದಿದೆ.

ಅಳದಂಗಡಿಯಿಂದ ಗುರುವಾಯನಕೆರೆ ಕಡೆ ಹೋಗುತ್ತಿದ್ದ ಕಾರು ಹಾಗೂ ಗುರುವಾಯನಕೆರೆಯಿಂದ ಕಾರ್ಕಳದತ್ತ ಪ್ರಯಾಣ ಮಾಡುತ್ತಿದ್ದ ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಗೇರುಕಟ್ಟೆಯ ಕುಸುಮಾವತಿ (75), ಭಾಗ್ಯವತಿ (50), ವೈಭವ್‌ (23) ಎಂಬುವವರು ಗಂಭೀರ ಗಾಯಗೊಂಡಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading

LATEST NEWS

ಕಾಣಿಕೆ ಡಬ್ಬಿ ಒಡೆದು ಕಳ್ಳತನ; ಕಿಡಿಗೇಡಿಗಳು ಪರಾರಿ

Published

on

ಮಲ್ಪೆ : ಕರಾವಳಿ ದೈವ, ದೇವರ ಆರಾಧನೆಗೆ ಹೆಸರಾದ ನಾಡು. ಆದರೆ ಇಂತಹ ಪುಣ್ಯ ಭೂಮಿಯಲ್ಲೂ ದುಷ್ಕೃತ್ಯಗಳು ಹೆಚ್ಚಾಗುತ್ತಿದೆ. ಇದೀಗ ದೈಸ್ಥಾನದ ಡಬ್ಬಿಯನ್ನೇ ಹೊಡೆದು , ಕಳ್ಳತ ಮಾಡಿ, ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

ಮಲ್ಪೆಯ ಕೊಡವೂರು ಪಾಳೆಕಟ್ಟೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ದೇವರಬೆಟ್ಟು ಆವರಣ ಗೋಡೆಯ ಹೊರಭಾಗದಲ್ಲಿ ಇಟ್ಟಿದಂತಹ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿರುವ ಹಣವನ್ನು ಕಳವು ಮಾಡಿ ಖದೀಮರು ಪರಾರಿಯಾಗಿದ್ದಾರೆ.

ಎ.19 ರಂದು ಸಂಜೆ 6 ರಿಂದ 8.45 ರ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಕಾಣಿಕೆ ಡಬ್ಬಿಯಲ್ಲಿದ್ದ 15ಸಾವಿರ ಹಣ ಕಳವು ಮಾಡಲಾಗಿರುವ ಕುರಿತು ಮಲ್ಪೆ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page