Connect with us

bangalore

‘ಪಕ್ಕದ್ಮನೆ ಕೋಳಿಗಳು ಕೂಗೋದ್ರಿಂದ ನಿದ್ದೆ ಮಾಡೋಕೆ ಆಗ್ತಿಲ್ಲ’-ಕೋಳಿಗಳ ವಿರುದ್ಧ ದಾಖಲಾಯ್ತು ಕೇಸ್…!

Published

on

ಬೆಂಗಳೂರು: ಪಕ್ಕದ ಮನೆಯವರ ಕೋಳಿ ಕೂಗುವುದರಿಂದ ರಾತ್ರಿ ಹೊತ್ತು ನಾವು ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ತುಂಬಾ ತೊಂದರೆಯಾಗುತ್ತಿದೆ ಎಂದು ಬೆಂಗಳೂರು ಪೊಲೀಸರಿಗೆ ವ್ಯಕ್ತಿಯೊಬ್ಬ ದೂರು ನಿಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ದೂರು ನೀಡಿ ಟ್ವೀಟ್‌ ಮಾಡಿರುವ ಆ ವ್ಯಕ್ತಿ, ಟ್ವಿಟ್ಟರ್‌ನಲ್ಲಿ ಪೊಲೀಸ್‌ ಕಮಿಷನರ್‌, ಡಿಸಿಪಿಗೆ ಟ್ಯಾಗ್‌ ಮಾಡಿ ‘ಜೆಪಿ ನಗರ 8ನೇ ಹಂತದಲ್ಲಿನ ಮನೆಯೊಂದರಲ್ಲಿ ಕೋಳಿ ಮತ್ತು ಬಾತುಕೋಳಿ ಸಾಕಾಣೆ ಮಾಡ್ತಾರೆ.

ಬೆಳಗ್ಗೆ ಮೂರು ಗಂಟೆಗೆ ಕೋಳಿಗಳು ಒಟ್ಟಾಗಿ ಕೂಗುತ್ತವೆ. ಇದರಿಂದ ನಮ್ಮ ಎರಡು ವರ್ಷದ ಮಗ ನಿದ್ರೆಯಿಂದ ಎದ್ದುಬಿಡ್ತಾನೆ. ಕೋಳಿ ಕೂಗೋದರಿಂದ ನಮಗೂ ನಿದ್ದೆ ಬರ್ತಿಲ್ಲ, ಅಕ್ಕಪಕ್ಕದವರಿಗೂ ನಿದ್ರೆ ಸಮಸ್ಯೆ ಎದುರಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಹೀಗೆ ನೆರೆಮನೆಯವರನ್ನು ದೂರಿ ನೆಮೊ ಹೆಸರಿನ ವ್ಯಕ್ತಿ ಟ್ವಿಟ್ಟರ್‌ ಖಾತೆ ಪೋಸ್ಟ್‌ ಹಾಕಿದ್ದಾನೆ. ಪೋಸ್ಟ್‌ನಲ್ಲಿ ಮನೆಯ ವೀಡಿಯೋ ಜೊತೆಗೆ ತಮಗಾಗುತ್ತಿರುವ ಸಮಸ್ಯೆ ಕುರಿತು ಹೇಳಿಕೊಂಡಿದ್ದಾನೆ.

bangalore

ಕುಡಿದ ಮತ್ತಿನಲ್ಲಿ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು: ಅಂತ್ಯಕ್ರಿಯೆ ವೇಳೆ ಬಯಲಾಯ್ತು ಕೊಲೆ ರಹಸ್ಯ!

Published

on

ಬೆಂಗಳೂರು: ನಶೆಯಲ್ಲಿ ಮೊದಲ ಮಹಡಿಯಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಪ್ರಕರಣವೊಂದು ಈಗ ಕೊಲೆ ರಹಸ್ಯವಾಗಿ ಬದಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನಾಯತ್ ಮೃತಪಟ್ಟ ವ್ಯಕ್ತಿ. ಮಸೂರ್ ಅಹ್ಮದ್ ಎಂಬಾತ ಆರೋಪಿ ಎಂದು ಗುರುತಿಸಲಾಗಿದೆ. ಮೃತ ಇನಾಯತ್ ಮೆಕಾನಿಕ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.


ಮೃತ ಇನಾಯತ್‌ ಬೆಂಗಳೂರಿನ ವಿವೇಕ ನಗರದ ಆಸ್ಟೀನ್‌ ಟೌನ್‌ನಲ್ಲಿ ತನ್ನ ಮಾವ ಮಸೂರ್‌ ಅಹ್ಮದ್‌ನ ಮನೆಯಲ್ಲಿ ಕಳೆದ 11 ವರ್ಷಗಳಿಂದ ವಾಸವಾಗಿದ್ದ. ಇತ್ತೀಚೆಗೆ ಕೌಟುಂಬಿಕ ಕಲಹದಿಂದಾಗಿ ಇನಾಯತ್‌ಗೆ ಡಿವೋರ್ಸ್‌ ಆಗಿದ್ದು, ಬಳಿಕ ಒಂಟಿಯಾಗಿ ವಾಸವಿದ್ದ ಇನಾಯತ್‌ಗೆ ಮನೆ ಖಾಲಿ ಮಾಡುವಂತೆ ಮಾವ ಮಸೂರ್ ಅಹ್ಮದ್ ಕಿರುಕುಳ ನೀಡಲು ಶುರು ಮಾಡಿದ್ದ.

ಕಳೆದ ಭಾನುವಾರ ಮನೆಗೆ ಬಂದ ಇನಾಯತ್‌ ಮಾವ ಇದೇ ವಿಚಾರಕ್ಕೆ ಜಗಳ ಆಡಿದ್ದಲ್ಲದೇ, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ಇನಾಯತ್‌ಗೆ ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದ. ಬಳಿಕ ಮದ್ಯದ ಅಮಲಿನಲ್ಲಿ ಮೊದಲ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಇನಾಯತ್‌ ಮೃತಪಟ್ಟಿದ್ದಾನೆ ಎಂದು ಮಾವನೇ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದ.

ಇದನ್ನೂ ಓದಿ: ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಬಳಿಕ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ತೀರ್ಮಾನ ಮಾಡಿದರು. ಮಸೀದಿಯಲ್ಲಿ ಪ್ರಾರ್ಥನೆ ಮಾಡಿ, ಇನ್ನೇನು ಮೃತದೇಹವನ್ನು ತೆಗೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಪೊಲೀಸರ ಭೇಟಿಯಿಂದ ರಹಸ್ಯ ಬಯಲಾಗಿದೆ. ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ಮೃತದೇಹದ ಹಲವು ಕಡೆಗಳಲ್ಲಿ ಗಾಯವಾಗಿದೆ ಎಂದು ತಿಳಿದುಬಂದಿದ್ದು, ಆರೋಪಿ ಮಸೂರ್ ಅಹ್ಮದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Continue Reading

bangalore

ಬಾಣಂತನಕ್ಕೆ ಪತ್ನಿ ಹೋಗಿದ್ದ ವೇಳೆ ದುರಂತ: ಹೋಟೆಲ್‌ನಲ್ಲಿ ಕಾಲು ತುಳಿದಿದ್ದಕ್ಕೆ ಯುವಕನ ಭೀಕರ ಕೊಲೆ!

Published

on

ಬೆಂಗಳೂರು: ಹೋಟೆಲ್‌ನಲ್ಲಿ ದೋಸೆ ತಿನ್ನುವ ವೇಳೆ ಆಕಸ್ಮಿಕವಾಗಿ ಕಾಲ್ತುಳಿದ ಕಾರಣಕ್ಕೆ ಉಂಟಾದ ಕ್ಷುಲ್ಲಕ ಜಗಳವೊಂದು 31 ವರ್ಷದ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ಸೋಮವಾರ(ಮಾ.2) ತಡರಾತ್ರಿ ನಡೆದಿದೆ.


ಕೊಲೆಯಾದ ಯುವಕನನ್ನು ಶಶಿಕುಮಾರ್(31) ಎಂದು ಗುರುತಿಸಲಾಗಿದೆ. ಇವರು ಲೋನ್ ರಿಕವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಶಶಿಕುಮಾರ್ ಅವರ ಪತ್ನಿ ಬಾಣಂತನಕ್ಕಾಗಿ ತವರು ಮನೆಗೆ ಹೋಗಿದ್ದರು. ಈ ಕಾರಣದಿಂದ ಅವರು ಒಬ್ಬರೇ ಊಟ ಮಾಡಲು ಹೋಟೆಲ್‌ಗೆ ಬಂದಿದ್ದರು. ತಿಮ್ಮಯ್ಯ ರಸ್ತೆಯಲ್ಲಿರುವ ‘ಶ್ರೀ ರಾಘವೇಂದ್ರ ವೆಜ್ ದೋಸೆ ಕಾರ್ನರ್’ ಹೋಟೆಲ್‌ನಲ್ಲಿ ದೋಸೆ ತಿನ್ನುತ್ತಿದ್ದಾಗ, ಶಶಿಕುಮಾರ್ ಅಲ್ಲಿಗೆ ಬಂದಿದ್ದ ಮಂಜುನಾಥ್ ಎಂಬಾತನ ಕಾಲನ್ನು ಆಕಸ್ಮಿಕವಾಗಿ ತುಳಿದಿದ್ದರು.

ಈ ವಿಷಯವಾಗಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ, ಮಂಜುನಾಥ್ ತನ್ನ ಸಹೋದರ ಭಾಗ್ಯರಾಜ್‌ನಿಗೆ ವಿಷಯ ತಿಳಿಸಿ ಬರಮಾಡಿಕೊಂಡಿದ್ದ. ಮಾರಕಾಸ್ತ್ರದ ಜತೆಗೆ ಬಂದ ಭಾಗ್ಯರಾಜ್‌, ಏಕಾಏಕಿ ಶಶಿ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಶಶಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಗೋವಿನ ಕಳೇಬರ ಪತ್ತೆ; ಪ್ರತಿಭಟನಾಕಾರರ ವಿರುದ್ಧವೇ ಎಫ್‌ಐಆರ್ ದಾಖಲು

ಬಸವೇಶ್ವರನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ. ಮೃತ ಶಶಿಕುಮಾರ್ ಅವರು ಪೋಷಕರು, ಪತ್ನಿ ಮತ್ತು ಪುಟ್ಟ ಮಗುವನ್ನು ಅಗಲಿದ್ದಾರೆ.

Continue Reading

bangalore

ಅಡುಗೆ ವಿಚಾರಕ್ಕೆ ಅತ್ತೆ-ಸೊಸೆ ಜಗಳ; ಮಾಜಿ ಐಟಿ ಉದ್ಯೋಗಿ ಸುಷ್ಮಾ ದುರಂತ ಅಂತ್ಯ

Published

on

ಬೆಂಗಳೂರು: ಅಡುಗೆ ಮಾಡುವ ವಿಚಾರಕ್ಕೆ ಅತ್ತೆ ಮತ್ತು ಸೊಸೆಯ ನಡುವೆ ನಡೆದ ಜಗಳವು ತಾರಕಕ್ಕೇರಿ, ಮಾಜಿ ಐಟಿ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.


ಮೃತ ಮಹಿಳೆಯನ್ನು 35 ವರ್ಷದ ಸುಷ್ಮಾ ಎಂದು ಗುರುತಿಸಲಾಗಿದೆ. ಇವರು ಈ ಹಿಂದೆ ಡೆಲ್ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸುಷ್ಮಾ ಅವರು ಪುನೀತ್ ಕುಮಾರ್ ಎಂಬುವವರನ್ನು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು ಮತ್ತು ಈ ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ.

ಅಡುಗೆ ಮನೆಯಲ್ಲಿ ಅಡುಗೆ ಮಾಡುವಂತಹ ಸಾಮಾನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸುಷ್ಮಾ ಮತ್ತು ಅವರ ಅತ್ತೆ ಕಲ್ಪನಾ ಅವರ ನಡುವೆ ತೀವ್ರವಾದ ಜಗಳ ನಡೆದಿತ್ತು. ಇದರಿಂದ ತೀವ್ರವಾಗಿ ಮನನೊಂದ ಸುಷ್ಮಾ, ಮನೆಯಲ್ಲಿ ನೇಣು ಬಿಗಿದುಕೊಂಡು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಅತ್ತೆ ಕಲ್ಪನಾ ಅವರು ಸುಷ್ಮಾ ಅವರಿಗೆ ಅಡುಗೆ ಮನೆ ಬಳಸಲು ಬಿಡುತ್ತಿರಲಿಲ್ಲ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮೃತ ಸುಷ್ಮಾ ಅವರ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ; 32 ಪ್ರಯಾಣಿಕರು ಪಾರು

ಸುಷ್ಮಾ ಅವರ ಪೋಷಕರು ನೀಡಿದ ವರದಕ್ಷಿಣೆ ಕಿರುಕುಳದ ದೂರಿನ ಮೇರೆಗೆ, ಬೆಂಗಳೂರು ಪೊಲೀಸರು ಪತಿ ಪುನೀತ್ ಅವರನ್ನು ಬಂಧಿಸಿದ್ದಾರೆ. ಘಟನೆಯ ನಂತರ ಅತ್ತೆ ಕಲ್ಪನಾ ಅವರು ನಾಪತ್ತೆಯಾಗಿದ್ದು, ಪೊಲೀಸರು ಅವರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page