Connect with us

LATEST NEWS

ಉಡುಪಿ : ಕಾರು – ಟಿಪ್ಪರ್ ಮುಖಾಮುಖಿ ಡಿಕ್ಕಿ : ಗಂಭೀರ ಗಾಯಗೊಂಡ ವೈದ್ಯರು.!

Published

on

ಉಡುಪಿ : ಕಾರು – ಟಿಪ್ಪರ್ ಮುಖಾಮುಖಿ ಡಿಕ್ಕಿ : ಗಂಭೀರ ಗಾಯಗೊಂಡ ವೈದ್ಯರು.!

ಉಡುಪಿ : ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಕಾರು ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದು ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ವಿಜಯಕುಮಾರ್‌ ಗಾಯಗೊಂಡಿದ್ದಾರೆ.

ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿರಿಯಡ್ಕ ಸಮೀಪದ ಗಂಪಾ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.

ಇದೀಗ ಗಾಯಾಳು ವಿಜಯಕುಮಾರ್ ಅವರನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

DAKSHINA KANNADA

ಮಂಗಳೂರಿನಿಂದ ಬೆಂಗಳೂರಿಗೆ 2 ಹೆಚ್ಚುವರಿ ವಿಮಾನಗಳ ಸಂಚಾರ

Published

on

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾ.30ರಿಂದ ಆರಂಭವಾಗಲಿರುವ ವಿಮಾನಯಾನ ಸಂಸ್ಥೆಗಳ ಬೇಸಿಗೆ ವೇಳಾಪಟ್ಟಿಯಲ್ಲಿ ರಾಜಧಾನಿ ಬೆಂಗಳೂರಿಗೆ ಹೆಚ್ಚುವರಿ ವಿಮಾನ ಯಾನ ಸಂಪರ್ಕ ಕಲ್ಪಿಸಲಿದೆ.

ಪ್ರಸ್ತುತ ಇಂಡಿಗೋ 6 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ 2 ಸಹಿತ 8 ದೈನಂದಿನ ವಿಮಾನಗಳು ಸಂಚರಿಸುತ್ತಿದ್ದು, ಇಂಡಿಗೋದಿಂದ ಒಂದು ಹೆಚ್ಚುವರಿಯಾಗಿ ಒಟ್ಟು 9 ವಿಮಾನಗಳು ಸಂಚರಿಸಲಿವೆ. ಮಂಗಳೂರು-ಮುಂಬೈ ನಡುವೆ ಪ್ರತಿದಿನ ಮೂರು ಇಂಡಿಗೋ ಮತ್ತು ಎರಡು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಸಂಚರಿಸಲಿವೆ.

ಇಂಡಿಗೋ ಮತ್ತು ಏರ್’ ಇಂಡಿಯಾ ಎಕ್ಸ್‌ಪ್ರೆಸ್ ರಾಜಧಾನಿ ನವದೆಹಲಿಗೆ ತಲಾ ಒಂದು ದೈನಂದಿನ ವಿಮಾನ ಸಂಚರಿಸುತ್ತಿದೆ. ಹೈದರಾಬಾದ್‌ಗೆ ವಾರದಲ್ಲಿ ಮೂರು ದಿನ ಎರಡು ದೈನಂದಿನ ಮತ್ತು ಒಂದು ಹೆಚ್ಚುವರಿ ವಿಮಾನ ಸಂಚರಿಸುತ್ತಿದೆ. ಅಂತಾರಾಷ್ಟ್ರೀಯ ವಲಯದಲ್ಲಿ ಏರ್ ಇಂಡಿಯಾ ಎಕ್ಸ್‌ ಪ್ರೆಸ್ ತನ್ನ ಸಾಪ್ತಾಹಿಕ ಎರಡು ವಿಮಾನಗಳನ್ನು ಕಣ್ಣೂರು ಮೂಲಕ ಬದಲು ಮಂಗಳೂರಿನಿಂದ ನೇರವಾಗಿ ಬಹ್ರೈನ್‌ಗೆ ಹಾರಾಟ ನಡೆಸಲಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ದುಬೈಗೆ ಪ್ರತಿದಿನ ಎರಡು, ಅಬುಧಾಬಿಗೆ ದೈನಂದಿನ ವಿಮಾನ, ವಾರಕ್ಕೆ ನಾಲ್ಕು ವಿಮಾನಗಳು, ದಮ್ಮಾಮ್ ಮತ್ತು ಮಸ್ಕತ್ ಗೆ ತಲಾ ನಾಲ್ಕು ವಿಮಾನಗಳು, ದೋಹಾಗೆ ಪ್ರತಿ ವಾರ ಎರಡು ವಿಮಾನಗಳು ಮತ್ತು ಜಿಡ್ಡಾ ಮತ್ತು ಕುವೈತ್‌ ಗೆ ಕ್ರಮವಾಗಿ ವಾರಕ್ಕೆ ಒಂದು ವಿಮಾನವನ್ನು ನಿರ್ವಹಿಸಲಿದೆ. ಇಂಡಿಗೋ 232 ಆಸನಗಳ ಎರ್‌ಬಸ್ ಎ -321 ನಿಯೋ ವಿಮಾನವನ್ನು ಈ ಪ್ರಮುಖ ವಲಯದಲ್ಲಿ ನಿಯೋಜಿಸುವುದರಿಂದ ಅಬುಧಾಬಿಗೆ ತನ್ನ ದೈನಂದಿನ ಹಾರಾಟದೊಂದಿಗೆ ಆಸನಗಳ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಅಂತೆಯೇ, ಇಂಡಿಗೋ ದುಬೈಗೆ ವಾರಕ್ಕೆ ನಾಲ್ಕು ಹಾರಾಟವನ್ನು ಮುಂದುವರಿಸಲಿದೆ. ಬೇಸಿಗೆ ವೇಳಾಪಟ್ಟಿ 2025 ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ಮತ್ತು ಮಂಗಳೂರು ಮತ್ತು ಪ್ರಮುಖ ಸ್ಥಳಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

Continue Reading

LATEST NEWS

ಉದಯೋನ್ಮುಖ ನಟಿ, ಒಡಿಶಾದ ಲೇಡಿ ಡಾನ್ ಸಂಗೀತಾ ಸಾಹು ಬಂಧನ

Published

on

ಮಂಗಳೂರು/ಹೈದರಾಬಾದ್: ಗಾಂಜಾ ಕಳ್ಳಸಾಗಣಿಕೆಯಲ್ಲಿ ಭಾಗಿಯಾಗಿದ್ದ ಒಡಿಶಾ ಮೂಲದ ನಟಿ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ ಯುವತಿ ಸಂಗೀತಾ ಸಾಹು ಅಲಿಯಾಸ್ ಗೀತಾ (29) ಎಂಬ ಮಹಿಳೆಯನ್ನು ತೆಲಂಗಾಣದ ವಿಶೇಷ ಅಬಕಾರಿ ಕಾರ್ಯಪಡೆ ಪೊಲೀಸರು (STF) ಬಂಧಿಸಿದ್ದಾರೆ.


ಮೂಲತಃ ಒಡಿಶಾದ ಕುರ್ತಾ ಜಿಲ್ಲೆಯ ಕಾಲಿಕೋಟ್‌ನ ಸಂಗೀತಾ ಸಾಹು ನಾಲ್ಕು ವರ್ಷಗಳಿಂದ ಗಾಂಜಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾಳೆ. ಅಲ್ಲದೆ, ಸಿಕಂದರಾಬಾದ್‌ನಲ್ಲಿ ಗಾಂಜಾ ಸಾಗಿಸಿದ ಒಂದು ಪ್ರಕರಣ ಮತ್ತು ಧುಲೆಪೇಟೆಯಲ್ಲಿ ಮಹಿಳಾ ವ್ಯಾಪಾರಿಗಳಿಗೆ ಗಾಂಜಾ ಪೂರೈಸಿದ ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾಳೆ.

2022ರಲ್ಲಿ ಗಾಂಜಾ ಸಾಗಿಸುತ್ತಿರುವಾಗ ಸಿಕಂದರಾಬಾದ್‌ನ ರೈಲ್ವೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಪರಿಣಾಮ ಹೈದರಾಬಾದ್‌ನ ಚಂಚಲಗುಡ ಜೈಲು ಹಕ್ಕಿಯಾಗಿದ್ದಳು. ಜೈಲಿನಲ್ಲಿದಾಗಲೂ ತನ್ನ ಸಹಚರರ ಮೂಲಕ ಗಾಂಜಾ ವ್ಯವಹಾರ ನಡೆಸುತ್ತಿದ್ದಳು. ಜೊತೆಗೆ ಜೈಲಿನಲ್ಲಿರುವ ಇತರೇ ಖೈದಿಗಳೊಡನೆ ಸಂಪರ್ಕ ಜಾಸ್ತಿಯಾಗಿತ್ತು. ಜೈಲಿನಿಂದ ಹೊರಬಂದ ನಂತರ ಈಕೆಯ ಗಾಂಜಾ ವ್ಯವಹಾರ ಮತ್ತಷ್ಟು ವೇಗ ಪಡೆದುಕೊಂಡಿತು.

ಇದನ್ನೂ ಓದಿ: ರನ್ಯಾ ರಾವ್ ಪ್ರಕರಣದಲ್ಲಿ ಮತ್ತೊಬ್ಬ ಅರೆಸ್ಟ್; ಚಿನ್ನ ಸಾಗಣೆಯಲ್ಲಿ ಈತನ ಪಾತ್ರವೇನು?

ಮಹಾನಗರಗಳಲ್ಲಿ ಗಾಂಜಾ ನಂಟು
ಸಾಹು ಒಡಿಶಾದಲ್ಲಿ ಗಾಂಜಾ ಬೆಳೆಗಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾಳೆ ಎಂಬ ಅನುಮಾನ ವ್ಯಕ್ತವಾಗಿತ್ತು. ಈಕೆಯ ಗಾಂಜಾ ವ್ಯವಹಾರದ ಜಾಲ ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ಮತ್ತು ಇತರ ಮಹಾನಗರಗಳಲ್ಲಿ ವ್ಯಾಪಿಸಿತ್ತು. ಹೈದರಾಬಾದ್ ಸಾಹುವಿನ ಪ್ರಮುಖ ಮಾರುಕಟ್ಟೆ ಎಂದು ಹೇಳಲಾಗಿದೆ. ಗಾಂಜಾ ಸಾಗಾಟಕ್ಕೆ ರೈಲ್ವೇ ಮಾರ್ಗವನ್ನೇ ಹೆಚ್ಚಾಗಿ ಆಯ್ಕೆಮಾಡಿಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ.

ಸದ್ಯ ಆರೋಪಿ ಮಹಿಳೆ ಸಂಗೀತಾ ಸಾಹು ಅಲಿಯಾಸ್ ಗೀತಾಳನ್ನು ಬಂಧಿಸಿದ ತೆಲಂಗಾಣದ ವಿಶೇಷ ಅಬಕಾರಿ ಕಾರ್ಯಪಡೆ ಪೊಲೀಸರು (STF) ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.

 

Continue Reading

BELTHANGADY

ಬೆಳ್ತಂಗಡಿ: ಕಾರು ಓವರ್ ಟೇಕ್ ಮಾಡುವ ವೇಳೆ ಅಪಘಾತ, ಬೈಕ್ ಸವಾರ ಸಾವು

Published

on

ಬೆಳ್ತಂಗಡಿ: ಕಾರು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿಯ ಕಲ್ಲಗುಡ್ಡೆ ನಿವಾಸಿ 42 ವರ್ಷ ಪ್ರಾಯದ ಸಯ್ಯದ್ ಪಾಶ ಮೃತ ದುರ್ಧೈವಿಯಾಗಿದ್ದಾರೆ. ಬೆಳ್ತಂಗಡಿಯ ಚರ್ಚ್ ರಸ್ತೆಯ ಕಲ್ಕುಣಿ ಎಂಬಲ್ಲಿ ಈ ಅಪಘಾತ ಸಂಭವಿಸಿದ್ದು, ಸಯ್ಯದ್ ಪಾಶ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆದಿತ್ತಾದ್ರೂ ಅವರು ಇಹಲೋಕ ತ್ಯಜಿಸಿದ್ದಾರೆ. ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದ ಕಾರಣ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page