Connect with us

LATEST NEWS

ಚಿತ್ರ ದುರ್ಗದಲ್ಲಿ ಸರಣಿ ಅಪಘಾತ : ಇಬ್ಬರು ಸಾವು- ನಾಲ್ವರು ಗಂಭೀರ..!

Published

on

ಚಿತ್ರ ದುರ್ಗದಲ್ಲಿ ಸರಣಿ ಅಪಘಾತ : ಇಬ್ಬರು ಸಾವು- ನಾಲ್ವರು ಗಂಭೀರ..!

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಟ್ರೇಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಹಾವೇರಿ ಮೂಲದ ಲತಾ (28) ಮತ್ತು ಬೆಂಗಳೂರಿನ ಅತ್ತಿಬೆಲೆ ನಿವಾಸಿ ಟಾಟಾ ಏಸ್ ಚಾಲಕ ಶಶಿಕುಮಾರ್ (26)ಮೃತರಾಗಿದ್ದಾರೆ.

ಖಾಸಗಿ ಬಸ್ಸು, ಇಂಡಿಕಾ ಕಾರು, ಮಾರುತಿ ಆಮ್ನಿ, ಕ್ಯಾಂಟರ್ ಹಾಗೂ ಟಾಟಾ ಏಸ್ ನಡುವೆ ಸರಣಿ ಅಪಘಾತ ಹೆದ್ದಾರಿಯ ಗ್ರೀನ್ ಲ್ಯಾಂಡ್ ಹೋಟೆಲ್ ಸಮೀಪ ಸರಣಿ ಅಪಘಾತ ಸಂಭವಿಸಿದೆ.

ಈ ದುರ್ಘಟನೆಯಲ್ಲಿ ಓಮಿನಿ ಕಾರು ಹಾಗೂ ಟಾಟಾ ಏಸ್ ವಾಹನದಲ್ಲಿದ್ದವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಶ್ರುತಿ (3), ಜ್ಯೋತಿ (25), ಜಾಗೃತಿ (4), ದ್ಯಾಮಣ್ಣ (24) ವರ್ಷ ಎಂಬುವವರು ಗಂಭೀರ ಗಾಯಗೊಂಡಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

LATEST NEWS

ಕುದ್ರೋಳಿ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ನೇಮಕ: ಪೂಜಾರಿಯವರ ಮಾರ್ಗದರ್ಶನದಲ್ಲಿ ಸಮಿತಿ ಪುನರ್ ರಚನೆ.!

Published

on

ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಸಮಿತಿಯಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಬರೋಬ್ಬರಿ 35 ವರ್ಷಗಳ ಬಳಿಕ ಈ ಬದಲಾವಣೆ ಮಾಡಲಾಗಿದ್ದು, ಕುದ್ರೋಳೀ ಶ್ರೀ ಗೋಕರ್ಣನಾಥ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಸಾಹುಕಾರ್ ಕೊರಗಪ್ಪರವರ ಮೊಮ್ಮಗ ಎಚ್.ಎಸ್ ಸಾಯಿರಾಂ ಅವರ ಸಹೋದರ ಜಯರಾಜ್ ಎಚ್. ಸೋಮಸುಂದರಂ (ಎಚ್ ಎಸ್ ಜಯರಾಜ್) ಅವರನ್ನು ಆಯ್ಕೆ ಮಾಡಲಾಗಿದೆ.

ಈ ಬಗ್ಗೆ ಕುದ್ರೋಳಿ ಕ್ಷೇತ್ರದ ಅಭಿವೃದ್ದಿ ರೂವಾರಿ, ಕೇಂದ್ರದ ಮಾಜಿ ಸಚಿವರಾದ ಬಿ ಜನಾರ್ದನ ಪೂಜಾರಿಯವರು ಈ ಬಗ್ಗೆ ಮಾಹಿತಿ ನೀಡಿದ್ದು, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್ ಸಾಯಿರಾಂ 35 ವರ್ಷಗಳಿಂದ ಉತ್ತಮ ಕಾರ್ಯನಿರ್ವಹಿಸಿದ್ದು, ಇದೀಗ ನೂತನ ಅಧ್ಯಕ್ಷರಾಗಿ ಎಚ್ ಎಸ್ ಜಯರಾಜ್ ನೇಮಕ ಮಾಡಲಾಗಿದೆ ಎಂದರು ಇನ್ನುಳಿದಂತೆ ಉಪಾಧ್ಯಕ್ಷರಾಗಿ ಉರ್ಮಿಳಾ ರಮೇಶ್, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿಯಾಗಿ ಪದ್ಮರಾಜ್

ಸಮಿತಿ ಸದಸ್ಯರಾಗಿ ಎಚ್.ಎಸ್ ಸಾಯಿರಾಂ, ಸಂತೋಷ್ ಜೆ ಪೂಜಾರಿ, ಜಗದೀಪ್ ಸುವರ್ಣ. ಕೃತಿನ್ ಅಮೀನ್, ಕಿಶೋರ್ ದಂಡಕೇರಿ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ ಕ್ಷೇತ್ರದ ಅಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ದೇವೇಂದ್ರ ಪೂಜಾರಿ, ವೇದಕುಮಾರ್, ಡಾ.ಬಿ  ಬಿ ಸುವರ್ಣ, ಸೂರ್ಯಾಕಾಂತ್ ಜೆ ಸುವರ್ಣ, ಹರಿಕೃಷ್ಣ ಬಂಟ್ವಾಳ್, ಶೈಲೇಂದ್ರ ಸುವರ್ಣ, ಚಿತ್ತರಂಜನ್ ಗರಡಿ, ಲೀಲಾಕ್ಷ ಬಿ ಕರ್ಕೇರ, ಜಯಂತ್ ನಡುಬೈಲ್, ಸೇರಿದಂತೆ ಉದಯ್ ಪೂಜಾರಿ, ಸುನಿಲ್, ದಿನೇಶ್ ಸುವರ್ಣ ರಾಯಿ, ವಿಷ್ಣುದಾಸ್, ರೋಹಿದಾಸ್ ಸೇರಿ

51 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಸಮಾಜದ ಸಂಘಟನೆ ಹಾಗು ಬ್ರಹ್ಮಶ್ರೀ ನಾರಾಯಣಗುರುಗಳ ಕ್ರಾಂತಿಗೆ ಪೂರಕವಾಗಿ ಕಾರ್ಯಕ್ರಮ ಆಯೋಜಿಸುವಂತೆ ಬಿ.ಜನಾರ್ದನ ಪೂಜಾರಿಯವರು ನಿರ್ದೇಶನ ನೀಡಿದರು.

Continue Reading

LATEST NEWS

ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಗೆ ಹಾಡಿನ ಮೂಲಕ ಜನ್ಮದಿನದ ಶುಭಾಶಯ ಕೋರಿದ ಅಂಧ ಮಕ್ಕಳು

Published

on

ಮಂಗಳೂರು/ಡೆಹಾರಡೂನ್: 67ನೇ ಜನ್ಮದಿನದ ಸಂಭ್ರಮದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಂಧ ಮಕ್ಕಳು ಹಾಡಿನ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಈ ವೇಳೆ ರಾಷ್ಟ್ರಪತಿ ಮುರ್ಮು ಭಾವುಕರಾಗಿದ್ದಾರೆ.


ಉತ್ತರಾಖಂಡಕ್ಕೆ ಮೂರು ದಿನಗಳ ಭೇಟಿ ನೀಡಿರುವ ರಾಷ್ಟ್ರಪತಿ ದೌಪದಿ ಮುರ್ಮು ಅವರ 67ನೇ ಜನ್ಮದಿನ ಅತ್ಯಂತ ಸ್ಮರಣೀಯವಾಗಿತ್ತು.

ಅಂಧ ವ್ಯಕ್ತಿಗಳ ಸಬಲೀಕರಣದ ರಾಷ್ಟ್ರೀಯ ಸಂಸ್ಥೆಗೆ ರಾಷ್ಟ್ರಪತಿ ಮುರ್ಮು ಅವರು ಶುಕ್ರವಾರ ಭೇಟಿ ನೀಡಿದರು. ವೇದಿಕೆ ಕಾರ್ಯಕ್ರಮದಲ್ಲಿ ಅಲ್ಲಿನ ವಿದ್ಯಾರ್ಥಿಗಳು ‘ಹ್ಯಾಪಿ ಬರ್ತ್ ಡೇ ಟು ಯೂ’ ಎಂಬ ಹಾಡನ್ನು ಹಾಡಿದರು. ಮಕ್ಕಳ ಹಾಡು ಕೇಳಿ ಭಾವುಕರಾದ ಅವರು, ಗಳಗಳನೆ ಅತ್ತರು.

‘ಮಕ್ಕಳು ಎಷ್ಟು ಸುಂದರವಾಗಿ ಹಾಡಿದರೆಂದರೆ ನನಗೆ ಕಣ್ಣೀರು ತಡೆಯಲೇ ಆಗಲಿಲ್ಲ. ಹೃದಯಾಳದ ಆ ಹಾಡು ಕೇಳಿ ಭಾವುಕಳಾದೆ’ ಎಂದು ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್‌ ಪಂದ್ಯಕ್ಕೆ ಪ್ಲೇಯಿಂಗ್ 11 ಪ್ರಕಟ

‘ಅಂಗವೈಕಲ್ಯತೆಯೊಂದಿಗೆ ಹುಟ್ಟಿದ ಮಕ್ಕಳಿಗೆ ವಿಶೇಷವಾದ ಶಕ್ತಿಯೊಂದು ಇದ್ದೇ ಇರುತ್ತದೆ. ಹೀಗಾಗಿ ಆತ್ಮವಿಶ್ವಾಸದಿಂದ ಮುನ್ನುಡಿ ಇಟ್ಟಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ. ಈ ನಿಟ್ಟಿನಲ್ಲಿ ಅಂಗವಿಕಲರಿಗೂ ಸಮಾನ ಅವಕಾಶ ಸಿಗಬೇಕು ಎಂಬ ಕಾರಣದಿಂದ ಸರ್ಕಾರವು ಹಲವು ನೀತಿಗಳನ್ನು ರೂಪಿಸಿದೆ’ ಎಂದರು.

Watch video

Continue Reading

FILM

ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರ ನಡೆದ ನಟಿ ಶ್ವೇತಾ; ಕಾರಣವೇನು?

Published

on

ಬೆಂಗಳೂರು/ಮಂಗಳೂರು : ಕೌಟುಂಬಿಕ ಕಥಾಹಂದರ ಹೊಂದಿರುವ ಧಾರಾವಾಹಿ ‘ಲಕ್ಷ್ಮೀ ನಿವಾಸ’. ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಈ ಧಾರಾವಾಹಿಯಿಂದ ಇತ್ತೀಚೆಗಷ್ಟೇ ತನು ಪಾತ್ರಧಾರಿ ಯುಕ್ತಾ ಹೊರ ನಡೆದಿದ್ದರು. ಇದೀಗ ಹಿರಿಯ ನಟಿ ಶ್ವೇತಾ ಧಾರಾವಾಹಿ ತೊರೆದಿದ್ದಾರೆ ಎಂದು ತಿಳಿದುಬಂದಿದೆ.

ಶ್ವೇತಾ ಈ ಧಾರಾವಾಹಿಯಲ್ಲಿ ಲಕ್ಷ್ಮೀಯಾಗಿ ಕಾಣಿಸಿಕೊಂಡಿದ್ದರು. ಗಂಡನಿಗೆ ಸದಾ ಜೊತೆಯಾಗಿ ನಿಲ್ಲುವ ಪತ್ನಿಯಾಗಿ, ಮಕ್ಕಳ ಹಿತ ಬಯಸುವ ತಾಯಿಯಾಗಿ ಮನೋಜ್ಞ ಅಭಿನಯ ನೀಡುತ್ತಿದ್ದರು. ಆದರೆ, ಇದೀಗ ದಿಢೀರಾಗಿ ಧಾರಾವಾಹಿಯಿಂದ ಹೊರ ಬಂದಿರುವುದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.

ಕಾರಣವೇನು ?

ಧಾರಾವಾಹಿಯಿಂದ ಹೊರಬಂದಿರುವ ವಿಚಾರದ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವೈಯಕ್ತಿಕ ಕಾರಣ ಹಾಗೂ ತಾಯಿಯ ಅನಾರೋಗ್ಯದಿಂದ ಲಕ್ಷ್ಮೀ ನಿವಾಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ.  ಬಹಳ ದಯೆಯಿಂದ ವರ್ತಿಸಿ ಮತ್ತು ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಕ್ಕಾಗಿ ಕರ್ನಾಟಕಕ್ಕೆ ಧನ್ಯವಾದಗಳು.  ಸೆಟ್‌ನ ಕೆಲವರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನನ್ನು ಮತ್ತೆ ಕನ್ನಡ ಪ್ರೇಕ್ಷಕರಿಗೆ ಪರಿಚಯಿಸಿದಕ್ಕಾಗಿ ಝೀ ಕನ್ನಡ ವಾಹಿನಿಗೆ ಧನ್ಯವಾದಗಳು. ನೀವೆಲ್ಲ  ಅದ್ಭುತ ಮಂದಿ. ಶೀಘ್ರದಲ್ಲೇ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಒಂದೇ ಧಾರಾವಾಹಿಯಲ್ಲಿ ತಾಯಿ, ಮಗ, ಮಗಳು; ಲಕ್ಷ್ಮೀ ನಿವಾಸಕ್ಕೆ ಬಂದ ಹೊಸ ನಟಿ ಯಾರು ಗೊತ್ತಾ?

ಲಕ್ಷ್ಮೀಯಾಗಿ ಮಾಧುರಿ ಎಂಟ್ರಿ :

ಶ್ವೇತಾ ಜಾಗಕ್ಕೆ ಮತ್ತೊಬ್ಬ ಹಿರಿಯ ನಟಿಯ ಪ್ರವೇಶವಾಗಿದೆ. ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿ ಜನಮನಸೂರೆಗೊಳಿಸಿದ್ದ ಮಾಧುರಿ, ಲಕ್ಷ್ಮೀಯಾಗಿ ಎಂಟ್ರಿ ಕೊಟ್ಟಿದ್ದಾರೆ . ಜಗ್ಗೇಶ್, ಪ್ರಭಾಕರ್, ದೇವರಾಜ್ ಮೊದಲಾದವರ ಜೊತೆ ನಟಿಸಿರುವ ಮಾಧುರಿ ಕನ್ನಡ ಮಾತ್ರವಲ್ಲದೇ ಹಿಂದಿ ಧಾರಾವಾಹಿಗಳಿಗೂ ಬಣ್ಣ ಹಚ್ಚಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page