ಮಂಗಳೂರು/ಬೆಂಗಳೂರು: ಟೀಂ ಇಂಡಿಯಾ 2024ರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ದೊಡ್ಡ ಇತಿಹಾಸ ನಿರ್ಮಿಸಿತ್ತು. ಆದರೆ ಭಾರತ ತಂಡದ ಅಭಿಮಾನಿಗಳಿಗೆ ಬೇಸರ ಮೂಡಿಸಿದ ಸಂಗತಿ ಎಂದರೆ ಟೀಂ ಇಂಡಿಯಾದ ತ್ರಿವಳಿಗಳು ಟಿ20ಗೆ ನಿವೃತ್ತಿ ಘೋಷಣೆ ಮಾಡಿದ್ದು. ಅದರಲ್ಲೂ ಕಿಂಗ್ ಕೊಹ್ಲಿಯ ವಿದಾಯ ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು. ಆದರೆ ಇದೀಗ ರನ್ ಮೆಷಿನ್ 2028ರಲ್ಲಿ ನಡೆಯುವ ಆ ಒಂದು ಪಂದ್ಯಕ್ಕಾಗಿ ತಮ್ಮ ನಿವೃತ್ತಿಯನ್ನು ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ.

ಹೌದು, ನಿನ್ನೆ (ಮಾ.15) ರಾಹುಲ್ ದ್ರಾವಿಡ್-ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ಇನೋವೆಟಿವ್ ಲ್ಯಾಬ್ ಆಯೋಜಿಸಿದ್ದ ಇಂಡಿಯನ್ ಸ್ಪೋರ್ಟ್ಸ್ ಸಮಿಟ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ನಾನು ಮತ್ತೊಂದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಾಣಿಸಿಕೊಳ್ಳದೇ ಇರಬಹುದು. ಈ ಹಿಂದಿನ ಫಲಿತಾಂಶ ಏನೇ ಆಗಿದ್ದರೂ ಅದರಲ್ಲಿ ನನಗೆ ತೃಪ್ತಿ ಇದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಾಣಿಸಿಕೊಳ್ಳದೇ ಇರಬಹುದು. ಈ ಹಿಂದಿನ ಫಲಿತಾಂಶ ಏನೇ ಆಗಿದ್ದರೂ ಅದರಲ್ಲಿ ನನಗೆ ತೃಪ್ತಿ ಇದೆ. ಹೀಗಾಗಿ ನಾನು ಮತ್ತೆ ಬಾರ್ಡರ್-ಗವಾಸ್ಕರ್ ಸರಣಿ ಆಡುವ ಬಗ್ಗೆ ಖಚಿತತೆ ಇಲ್ಲ ಎಂದಿದ್ದಾರೆ.

ಸದ್ಯಕ್ಕಂತೂ ಕ್ರಿಕೆಟ್‌ನಿಂದ ನಿವೃತ್ತಿ ಇಲ್ಲ
ನಾನು ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತಿದ್ದೇನೆ. ಅದನ್ನು ಆಡುವುದರ ಜೊತೆಗೆ ಆನಂದಿಸುತ್ತಿದ್ದೇನೆ. ಕ್ರಿಕೆಟ್‌ನಿಂದ ನಿವೃತ್ತಿ ಎನ್ನುವುದು ಸದ್ಯಕ್ಕಂತೂ ಇಲ್ಲವೇ ಇಲ್ಲ. ಇನ್ನು ಕೆಲವು ವರ್ಷಗಳ ಕಾಲ ಕ್ರಿಕೆಟ್ ಆಡುತ್ತ ಆನಂದಿಸುತ್ತೇನೆ ಎಂದು ರಿಟೈರ್‌ಮೆಂಟ್ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಟಿ20ಗೆ ಕೊಹ್ಲಿ ಕಂಬ್ಯಾಕ್ ?
ಇನ್ನೂ 2028ರಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕೂಡ ಸೇರ್ಪಡೆಯಾಗಲಿದೆ. ಇದರಲ್ಲಿ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟರೆ, ಅಂತಿಮ ಪಂದ್ಯಕ್ಕಾಗಿ ನಿವೃತ್ತಿಯನ್ನು ಹಿಂಪಡೆಯುವುದಾಗಿ ಕೊಹ್ಲಿ ತಿಳಿಸಿದ್ದಾರೆ. ಅಂದರೆ ಭಾರತ ತಂಡವು ಒಲಿಂಪಿಕ್ಸ್ ಟಿ20 ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದರೆ ವಿರಾಟ್ ಕೊಹ್ಲಿ ಕೊನೆಯ ಪಂದ್ಯದಲ್ಲಿ ಮಾತ್ರ ಕಣಕ್ಕಿಳಿಯಬಹುದು.
ಇದನ್ನೂ ಓದಿ: 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ; ಸಿಕ್ಕ ಬಹುಮಾನ ಮೊತ್ತ ಎಷ್ಟು?
ಹಣಕ್ಕಾಗಿ ನನ್ನಲ್ಲಿನ ಮೌಲ್ಯ ಬಿಟ್ಟುಕೊಡಲ್ಲ
ಇನ್ನು ಕೊಹ್ಲಿ ನಿವೃತ್ತಿ ನಂತರ ಏನು ಮಾಡುತ್ತಾರೆ ಎಂದು ಅಭಿಮಾನಿಗಳನ್ನು ಕಾಡುತ್ತಿತ್ತು. ಈ ಬಗ್ಗೆ ಮಾತನಾಡಿದ ಕೊಹ್ಲಿ, ಕ್ರಿಕೆಟ್‌ನಿಂದ ನಿವೃತ್ತಿ ಆದ ಮೇಲೆ ಏನು ಮಾಡಬೇಕು ಎಂದು ಯಾವುದೇ ಯೋಜನೆ ರೆಡಿ ಮಾಡಿಕೊಂಡಿಲ್ಲ. ಆ ಸಮಯದಲ್ಲೇ ಅದನ್ನು ನಿರ್ಧಾರ ಮಾಡಲಾಗುತ್ತದೆ. ನಿವೃತ್ತಿ ನಂತರ ಏನು ಮಾಡಬೇಕು ಅಂತನೂ ನನಗೆ ಗೊತ್ತಿಲ್ಲ. ನನಗೆ ಎಷ್ಟು ಬೇಕು ಅಷ್ಟೇ ಹಣ ಸಂಪಾದನೆ ಮಾಡೋದು. ಹೆಚ್ಚಿಗೆ ಬೇಕಿಲ್ಲ, ಆಸೆನೂ ಇಲ್ಲ. ಹಣಕ್ಕಾಗಿ ನನ್ನಲ್ಲಿನ ಮೌಲ್ಯ ಬಿಟ್ಟುಕೊಡಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಮುಂದಿನ ಎರಡು ಐಸಿಸಿ ಟೂರ್ನಿಗಳಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಈ ಎರಡು ಟೂರ್ನಿಗಳು ನಡೆಯುವುದು 2027ರಲ್ಲಿ. ಅಂದರೆ ಈ ಎರಡು ಟೂರ್ನಿಗಳ ಬಳಿಕ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ಸಾಧ್ಯತೆಯಿದೆ. ಅಲ್ಲದೆ 2028ರಲ್ಲಿ ನಡೆಯುವ ಒಲಿಂಪಿಕ್ಸ್ ಟಿ20 ಟೂರ್ನಿಯ ಫೈನಲ್ ಪಂದ್ಯಕ್ಕಾಗಿ ಮತ್ತೆ ಕಂಬ್ಯಾಕ್ ಮಾಡುವ ಸಣ್ಣ ಸುಳಿವು ಕೂಡ ನೀಡಿದ್ದಾರೆ.