Connect with us

DAKSHINA KANNADA

ಉಳ್ಳಾಲ : ಕೊಲ್ಯ ಕಾರು ಅಪಘಾತದಲ್ಲಿ ಓರ್ವ ಮೃತ್ಯು, ಓರ್ವ ಗಂಭೀರ, ಇಬ್ಬರು ಯುವತಿಯರಿಗೆ ಗಾಯ..!

Published

on

ಉಳ್ಳಾಲ : ಮಂಗಳೂರು ಹೊರವಲಯದ ಉಳ್ಳಾಲದ ರಾ.ಹೆ. 66 ರಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿದ್ದು, ಇಬ್ಬರು ಯುವತಿಯರು ಸಣ್ಣ ಗಾಯಗಳೊಂದಿಗೆ ಪಾರಾಗಿರುವ ಘಟನೆ ಕೊಲ್ಯ- ಅಡ್ಕ ಬಳಿ ಸಂಭವಿಸಿದೆ. 

ಉಪ್ಪಳ ಹಿದಾಯತ್ ನಗರ ನಿವಾಸಿ ಬಷಾರ ಅಹಮ್ಮದ್ (22) ಮೃತರಾಗಿದ್ದಾರೆ. ಇನ್ನೋರ್ವ ಗಾಯಾಳು ಗುರುತು ಪತ್ತೆಯಾಗಿಲ್ಲ.

ಕೇರಳ ಕಣ್ಣೂರು ನಿವಾಸಿ ಫಾತಿಮ ಹಾಗೂ ರೇವತಿ ಎಂಬವರಿಗೆ ಗಾಯಗಳಾಗಿವೆ. ನಾಲ್ವರಿದ್ದ ಕಾರು ಕೊಲ್ಯ- ಅಡ್ಕ ಬಳಿ ರಸ್ತೆ ವಿಭಜಕವನ್ನು ಏರಿ, ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಈ ಸಂದರ್ಭ ಕಾರು ಚಲಾಯಿಸುತ್ತಿದ್ದ ಬಷಾರ ಅಹಮ್ಮದ್ ಅದರೊಳಕ್ಕೆ ಸಿಲುಕಿ, ತಲೆ ಸೇರಿದಂತೆ ದೇಹಕ್ಕೆ ಸಂಪೂರ್ಣ ಗಾಯಗೊಂಡು ಒಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ‌ .

ಇನ್ನುಳಿದ ಮೂವರನ್ನು ಸ್ಥಳೀಯರು ಸೇರಿ ಕಾರಿನಿಂದ ಹಲವು ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.

ಈ ಪೈಕಿ ಓರ್ವ ಯುವತಿಯನ್ನು ಕಾರಿನಲ್ಲಿ ಪ್ರಶಾಂತ್ ಗಟ್ಟಿ ಎಂಬವರು ಎ.ಜೆ ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದರೆ, ಇನ್ನೋರ್ವಳನ್ನು ಟಿ.ಟಿ ಮೂಲಕ ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಭೀರ ಗಾಯಾಳುವನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಗಾಯಾಳು ಪೈಕಿ ಫಾತಿಮ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿ ನಿಯಾಗಿದ್ದಾರೆ. ನಾಲ್ವರು ಗೆಳೆಯರಾಗಿದ್ದರೆಂದು ತಿಳಿದುಬಂದಿದೆ.

ಸ್ಥಳೀಯರಿಂದ ಪೊಲೀಸರ ತರಾಟೆ :
ಅಪಘಾತ ನಡೆದ ಸ್ಥಳಕ್ಕೆ ಸಂಚಾರಿ ಹಾಗೂ ಉಳ್ಳಾಲ ಠಾಣಾ ಪೊಲೀಸರು ತಡವಾಗಿ ಆಗಮಿಸಿದ್ದರು ಎಂದು ಆರೋಪಿಸಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

ಅಲ್ಲದೆ ಬ್ಯಾರಿಕೇಡ್ ಅಳವಡಿಸುವ ಕುರಿತು ಹಲವು ಸಮಯದಿಂದ ಹೇಳುತ್ತಾ ಬಂದಿದ್ದರೂ, ಸ್ಲಂ ಧನೆ ಸಿಕ್ಕಿಲ್ಲ ಎಂದು ಆರೋಪಿಸಿದರು.

ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

DAKSHINA KANNADA

ಸಮಗ್ರ ನೆಫ್ರಾಲಜಿ ಸೌಲಭ್ಯದ ಮೂಲಕ ನಿರಂತರ ಸೇವೆ ನೀಡಲಾಗುತ್ತಿದೆ : ಕೆಎಂಸಿ ಆಸ್ಪತ್ರೆ

Published

on

ಮಂಗಳೂರು : ವಿಶ್ವ ಕಿಡ್ನಿ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಮಂಗಳೂರು , ಶೀಘ್ರ ರೋಗ ಪತ್ತೆ, ಚಿಕಿತ್ಸೆ ಮತ್ತು ಕಿಡ್ನಿ ಸಮಸ್ಯೆಯ ದೀರ್ಘ ಕಾಲದ ನಿರ್ವಹಣೆಯನ್ನು ಗುರಿಯಾಗಿಸಿ ತನ್ನ ಸಮಗ್ರ ಮೂತ್ರಪಿಂಡ (ಕಿಡ್ನಿ) ಆರೈಕೆಯ  ಸೇವೆಯನ್ನು ಒತ್ತಿ ಹೇಳಿದೆ. ಮೂತ್ರಪಿಂಡದ ಆರೋಗ್ಯ ಮತ್ತು ರೋಗ ತಡೆಗಟ್ಟುವ ಆರೈಕೆಯ ಕುರಿತು ಜಾಗೃತಿ ಹೆಚ್ಚಿಸುವ ಈ ನೇತೃತ್ವವನ್ನು ಆಸ್ಪತ್ರೆಯ ನೆಫ್ರಾಲಜಿ ವಿಭಾಗವು ಕೈಗೊಂಡಿದೆ.

ಈ ವಿಭಾಗವು ಅತ್ಯಾಧುನಿಕ ಕಿಡ್ನಿ ಕಸಿ ಸೇವೆಯನ್ನು ಹಾಗೂ ದಕ್ಷಿಣಕನ್ನಡದ ಅತಿದೊಡ್ಡದಾದ ಡಯಾಲಿಸಿಸ್‌ ಘಟಕವನ್ನು ಹೊಂದಿದ್ದು, 24 ಗಂಟೆ ನಿರಂತರ ಸೇವೆಗೆ ಮುಡಿಪಾಗಿರುವ ಮತ್ತು ಹೆಚ್ಚು ಅನುಭವಿ ನೆಫ್ರಾಲಜಿಸ್ಟ್‌ಗಳನ್ನು ಹೊಂದಿರುವ ಏಕೈಕ ಘಟಕವಾಗಿದ್ದು, ಸದಾ ರೋಗಿಯ ಆರೈಕೆಗೆ ಮುಡಿಪಾಗಿರುವ ಗುರಿಯನ್ನು ಹೊಂದಿದೆ.

ಈ ಬಗ್ಗೆ ಮಾತನಾಡಿದ ಹಿರಿಯ ನೆಫ್ರಾಲಜಿ ತಜ್ಞ, ಡಾ ಅಶೋಕ್‌ ಭಟ್‌, ವಿಶ್ವ ಕಿಡ್ನಿ ದಿನ  ಮೂತ್ರಪಿಂಡದ ಆರೋಗ್ಯವನ್ನು ಆದ್ಯತೆಯನ್ನಾಗಿ ಪರಿಗಣಿಸುವಂತೆ ನೆನಪಿಸುವ ದಿನ. ರೋಗ ಲಕ್ಷಣಗಳು ಸಮಸ್ಯೆ ಮುಂದುವರಿದ ಹಂತ ತಲುಪಿದಾಗ ಗೋಚರವಾಗುವ ಕಾರಣದಿಂದ  ಸಾಕಷ್ಟು ರೋಗಿಗಳು ಆರಂಭಿಕ ಹಂತದಲ್ಲಿ ಸಮಸ್ಯೆಯ ಕುರಿತು ಅರಿವು ಹೊಂದಿರುವುದಿಲ್ಲ. ಆರೋಗ್ಯಕರ ಜೀವನಶೈಲಿ ಹೊಂದುವುದು, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣ, ಹೈಡ್ರೇಟ್‌ ಆಗಿರುವುದು, ನಿಯಮಿತ ರಕ್ತ, ಮೂತ್ರ ಹಾಗೂ ಆರೋಗ್ಯ ಪರೀಕ್ಷೆಯಿಂದ ಕಿಡ್ನಿ ರೋಗದ ಅಪಾಯವನ್ನು ತಗ್ಗಿಸಬಹುದು. ರೋಗ ತಡೆಗಟ್ಟುವುದೇ ದೀರ್ಘ ಕಾಲದ ಕಿಡ್ನಿ ಆರೋಗ್ಯಕ್ಕೆ ದಾರಿ. ಪ್ರತಿಯೊಬ್ಬರು ನೆಫ್ರೊಲಾಜಿ ತಜ್ಞರನ್ನು ಭೇಟಿ ಮಾಡಿ ಸಮಸ್ಯೆಗೆ ಸಲಹೆಯನ್ನು ಪಡೆಯಬೇಕು ಎಂದರು.

ಹಿರಿಯ ನೆಫ್ರಾಲಜಿ ತಜ್ಞ ಡಾ.ಸುಶಾಂತ್‌ ಕುಮಾರ್ ಮಾತನಾಡಿ, ಎಲ್ಲಾ ಕಿಡ್ನಿ ಸಮಸ್ಯೆಗೆ ಡಯಾಲಿಸಿಸ್‌ ಒಂದೇ ಪರಿಹಾರವಲ್ಲ. ಡಯಾಲಿಸಿಸ್‌ ಸಿಕೆಡಿಯಲ್ಲಿ 5ನೇ ಹಂತದಲ್ಲಿ ಅಥವಾ ತೀವ್ರ ಪ್ರಮಾಣದ ಸಮಸ್ಯೆಗಳು ಕಂಡು ಬಂದಾಗ ಆರಂಭಿಸಬೇಕಾಗುತ್ತದೆ. ಡಯಾಲಿಸಿಸ್‌ಗೆ ಹೋಲಿಸಿದಾಗ ಸಿಕೆಡಿ ಅಥವಾ ಕಿಡ್ನಿ ಫೆಲ್ಯೂರ್ ಸಮಸ್ಯೆಗೆ ಮೂತ್ರಪಿಂಡದ ಕಸಿ ಉತ್ತಮ ವಿಧಾನ. ಕಿಡ್ನಿ ಕಸಿ ಯಶಸ್ಸಿನ ಪ್ರಮಾಣವು ಹೆಚ್ಚಾಗಿದೆ. ಆದರೆ ಇದು ಸೂಕ್ತವಾದ ದಾನಿಗಳು ಸಿಕ್ಕಾಗ ಮಾತ್ರ ಸಾಧ್ಯ. ಮರಣ ಹೊಂದಿರುವವರಿಂದ ಅಂಗಾಂಗ ದಾನ ಪಡೆಯಲು ನಮ್ಮಲ್ಲಿ ಸರ್ಕಾರದ ಯೋಜನೆಯಾದ ಜೀವ ಸಾರ್ಥಕತೆ ಕಾರ್ಯಕ್ರಮವಿದೆ. ಅದೇ ರೀತಿ ಜೀವಂತ ದಾನಿಗಳಿಂದ ದಾನ ಪಡೆಯಲು ನಮ್ಮ ಆಸ್ಪತ್ರೆಯಲ್ಲಿ ಸಮಿತಿಯಿದ್ದು ಅಂಗಾಂಗ ದಾನ ಆ್ಯಕ್ಟ್‌ಗೆ ಅನುಗುಣವಾಗಿ ಎಲ್ಲಾ ರೀತಿಯ ಅನುಮತಿ, ಕಾನೂನು ಅಗತ್ಯತೆಗಳನ್ನು ಪೂರೈಸಲಾಗುತ್ತದೆ ಎಂದರು.

ಸೌಲಭ್ಯಗಳ ಕುರಿತು ಮಾತನಾಡಿದ ನೆಫ್ರಾಲಜಿ ವಿಭಾಗದ ಎಚ್‌ಒಡಿ ಡಾ.ಮಯೂರ್ ಪ್ರಭು, ಕೆಎಂಸಿ ಆಸ್ಪತ್ರೆ ಮಂಗಳೂರಿನಲ್ಲಿ ನಮ್ಮ ದಕ್ಷಿಣ ಕನ್ನಡದಲ್ಲೇ  ಅತಿದೊಡ್ಡ ಡಯಾಲಿಸಿಸ್‌  ಕೇಂದ್ರಗಳಲ್ಲಿ ಒಂದಾದ ಅಡ್ವಾನ್ಸ್ಡ್ ಡಯಾಲಿಸಿಸ್‌ ಸೇವೆ, ತಜ್ಞ ಮೂತ್ರಪಿಂಡ ಕಸಿ ತಂಡ ಮತ್ತು ಅಡ್ವಾನ್ಸ್ಡ್ ಡಯಾಗ್ನೋಸ್ಟಿಕ್‌ ಸೇವೆ ಬೆಂಬಲದ ಬಹು ವಿಭಾಗೀಯ ಚಿಕಿತ್ಸಾ ಸೇವೆಯನ್ನು ಒಳಗೊಂಡ ಸಮಗ್ರ ನೆಫ್ರಾಲಜಿ ಸೌಲಭ್ಯವನ್ನು ರೂಪಿಸಿದ್ದೇವೆ. ನಮ್ಮ ತಂಡವು ಅತಿದೊಡ್ಡ ತಜ್ಞರ ತಂಡವಾಗಿದ್ದು ವರ್ಷದ 365 ದಿನವೂ 24 ಗಂಟೆಗಳ ಆರೋಗ್ಯ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಭಾರತಕ್ಕೆ ಹೊರಟಿದ್ದ ಸರಕು ಹಡಗಿನ ಮೇಲೆ ಇರಾನ್‌ ದಾ*ಳಿ

ನಾವು ರೋಗಿ ಕೇಂದ್ರಿತ ಸೇವೆಗಳಾದ ಬೆಡ್‌ಸೈಡ್‌ ಟ್ರೀಟ್‌ಮೆಂಟ್‌, ಐಸಿಯುನಲ್ಲಿ ಡಯಾಲಿಸಿಸ್‌ ಸೌಲಭ್ಯ, ಶೂನ್ಯ ಹರಡುವಿಕೆಯ ವಿಧಾನದೊಂದಿಗೆ ಎಚ್‌ಐವಿ ಮತ್ತು ಎಚ್‌ಬಿಎಸ್‌ಎಜಿ ಸೋಂಕಿತರಿಗೆ ವಿಶೇಷ ಡಯಾಲಿಸಿಸ್‌ ಸೌಲಭ್ಯ, ಸುಸಜ್ಜಿತ ಎಚ್‌ಡಿಎಫ್‌ ಡಯಾಲಿಸಿಸ್ ಘಟಕ ಮತ್ತು ನಿಯಮಿತ ಡಯಾಲಿಸಿಸ್ ಅಗತ್ಯವಿರುವ ಹಾಸಿಗೆ ಹಿಡಿದ ರೋಗಿಗಳಿಗೆ ಮೀಸಲಾದ ಸಾರಿಗೆ ಬೆಂಬಲವನ್ನು ಒದಗಿಸಲಾಗುತ್ತದೆ. ಈ ಪ್ರದೇಶದಲ್ಲಿ ರೋಗಿ-ಕೇಂದ್ರಿತ ನೆಫ್ರಾಲಜಿ ಸೇವೆಗಳನ್ನು ವಿಸ್ತರಿಸುವುದನ್ನು ಮುಂದುವರಿಸುವುದರೊಂದಿಗೆ ಮೂತ್ರಪಿಂಡದ ಕಾಯಿಲೆಗಳ ಜಾಗೃತಿ, ಆರಂಭಿಕ ಪತ್ತೆ ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಆಸ್ಪತ್ರೆ ಪುನರುಚ್ಚರಿಸುತ್ತದೆ ಎಂದರು.

Continue Reading

DAKSHINA KANNADA

ಬಂಟ್ವಾಳ: ಮನೆಯಲ್ಲಿ ಅಕ್ರಮ ಎಂಡಿಎಂಎ ದಾಸ್ತಾನು; ನಾಲ್ವರು ಅರೆಸ್ಟ್

Published

on

ಬಂಟ್ವಾಳ: ಅಕ್ರಮವಾಗಿ ಮನೆಯಲ್ಲಿ ಎಂಡಿಎಂಎ ದಾಸ್ತಾನು ಮಾಡಿದ್ದ ನಾಲ್ವರು ಆರೋಪಿಗಳ ಸಹಿತ ಲಕ್ಷಾಂತರ ದೂ ಮೌಲ್ಯದ ಮಾದಕ ವಸ್ತುಗಳನ್ನು ವಿಟ್ಲ ಪೋಲೀಸರ ತಂಡ ವಶಕ್ಕೆ ಪಡೆದುಕೊಂಡ ಘಟನೆ ಬಂಟ್ವಾಳ ತಾಲ್ಲೂಕಿನ ನೇರಳಕಟ್ಟೆ ಎಂಬಲ್ಲಿ ನಡೆದಿದೆ.

ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ನಿವಾಸಿ ಅಶ್ರಫ್ ಜಿ , ಹಫೀಝ್ ಯಾನೆ ಅಪ್ಪಿ, ಅಫ್ವಾನ್ ಮತ್ತು ಅಶ್ರಫ್ ಎನ್ ಎ ಬಂಧಿತ ಆರೋಪಿಗಳು.

ವಿಟ್ಲ ಠಾಣಾ ವ್ಯಾಪ್ತಿಯ ಬಂಟ್ವಾಳ ನೇರಳಕಟ್ಟೆ ಇಂದಿರಾ ನಗರ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಅಶ್ರಫ್ ಜಿ ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತುವಾದ ಎಮ್.ಡಿ.ಎಮ್.ಎ ಯನ್ನು ಸ್ವಾಧೀನದಲ್ಲಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಮಾಹಿತಿ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರ ತಂಡ ದಾಳಿ ನಡೆಸಿದೆ.

ಈ ವೇಳೆ  ಅಶ್ರಫ್ ಜಿ ಎಂಬಾತನ ಜೊತೆ ಹಫೀಝ್ ಯಾನೆ ಅಪ್ಪಿ, ಅಫ್ವಾನ್ ಮತ್ತು ಅಶ್ರಫ್ ಎನ್ ಎ ಅವರೊಂದಿಗೆ ಈ ಮನೆಯಲ್ಲಿದ್ದ.

ಇದನ್ನೂ ಓದಿ: 30 ವರ್ಷಗಳಿಂದ ಕೊರಗ ಸಮುದಾಯದ ವ್ಯಕ್ತಿಯನ್ನು ಜೀತದಾಳಾಗಿಸಿ ದೌರ್ಜನ್ಯ ಆರೋಪ; ಮಹಿಳೆ ಬಂಧನ

ದಾಳಿಯ ವೇಳೆ ಮನೆಯೊಳಗೆ ದಾಸ್ತಾನು ಇರಿಸಲಾಗಿದ್ದ ಮಾದಕ ವಸ್ತುಗಳ ಸಹಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಂಧಿತರಿಂದ ಒಂದು ಲಕ್ಷದ 79 ಸಾವಿರದ ಏಳುನೂರು ರೂ. ಮೌಲ್ಯದ 17.97 ಗ್ರಾಂ ಎಂಡಿಎಂಎಯನ್ನು ವಶಕ್ಕೆ ಪಡೆಯಲಾಗಿದೆ.

Continue Reading

DAKSHINA KANNADA

ರಾಜ್ಯದಲ್ಲಿ ಎಲ್ ಪಿಜಿ ಪೂರೈಕೆಯಲ್ಲಿ ವ್ಯತ್ಯಯ; ಕುಕ್ಕೆ ಕ್ಷೇತ್ರಕ್ಕೂ ತಟ್ಟಿದ ಬಿಸಿ.. ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ

Published

on

ಸುಬ್ರಹ್ಮಣ್ಯ: ಇರಾನ್-ಇಸ್ರೇಲ್ ಸಂಘರ್ಷದ ಕಾರಣದಿಂದಾಗಿ ರಾಜ್ಯದಲ್ಲಿ ಎಲ್‌ಪಿಜಿ (LPG) ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಇದೀಗ ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೂ ಇದರ ಬಿಸಿ ತಟ್ಟಿದೆ.


ಸುಬ್ರಹ್ಮಣ್ಯ ದೇಗುಲದಲ್ಲಿ ಪ್ರತಿದಿನ ಬೆಳಿಗ್ಗೆ ವಿವಿಧ ಬಗೆಯ ಉಪಹಾರ ನೀಡಲಾಗುತ್ತಿತ್ತು. ಇದೀಗ ಗ್ಯಾಸ್ ಪೊರೈಕೆ ವ್ಯತ್ಯಯದಿಂದ ಇಂದಿನಿಂದ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಬೇಯಿಸುವ ತಿನಿಸು ಬದಲಾಗಿ ಅವಲಕ್ಕಿ, ಮೊಸರು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಗ್ಯಾಸ್ ಪೊರೈಕೆ ಸಂಸ್ಥೆಯವರಿಗೆ ದಿನಕ್ಕೆ 20 ಸಿಲಿಂಡರ್ ಗ್ಯಾಸ್ ಪೊರೈಕೆ ಮಾಡಲು ದೇವಸ್ಥಾನದ ವತಿಯಿಂದ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್-ಇಸ್ರೇಲ್ ಸಂಘರ್ಷ: ಮಾ.12ರಂದು ಮಂಗಳೂರು- ಮಧ್ಯ ಪ್ರಾಚ್ಯ ಮಾರ್ಗದ 14 ವಿಮಾನಗಳು ರದ್ದು

ಇದರ ನಡುವೆ ಪೊರೈಕೆ ಆಗದೇ ಇದ್ದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಯಲ್ಲೂ ಕೆಲ ಬದಲಾವಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಬದಲಾವಣೆ ಮಾಡುವುದಿದ್ದಲ್ಲಿ ಈ ಬಗ್ಗೆ ದೇವಸ್ಥಾನದ ವತಿಯಿಂದ ಅಧಿಕೃತ ಮಾಹಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page