Connect with us

BELTHANGADY

ಚಾರ್ಮಾಡಿಯಲ್ಲಿ ಸರ್ಕಾರಿ ಬಸ್ – ಕಾರು ಅಪಘಾತ : ಮೂವರು ಗಂಭೀರ ಗಾಯ..!

Published

on

ಬೆಳ್ತಂಗಡಿ : ದಕ್ಷಿಣ ಕನ್ನಡದ ಬೆಳ್ತಂಗಡಿ ಚಾರ್ಮಾಡಿ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಕಾರಿಗೆ ಸರಕಾರಿ ಬಸ್ ಡಿಕ್ಕಿ ಹೊಡೆದಿದೆ.

ಪರಿಣಾಮ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿದ್ದವರು ಹುಬ್ಬಳಿಯ ಮೂಲದವರು ಎನ್ನಲಾಗಿದೆ ರಜೆ ಇದ್ದ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಇತರ ದೇವಸ್ಥಾನಗಳಿಗೆ ಹೋಗಿ ದರ್ಶನ ಮಾಡಿ ವಾಪಸ್ ಹುಬ್ಬಳಿ ಕಡೆ ಹೋಗುತ್ತಿದ್ದಾಗ ಚಾರ್ಮಾಡಿ ಗ್ರಾಮದ ಗೋಳಿಕಟ್ಟೆಯಲ್ಲಿ ಮೂಡಿಗೆರೆಯಿಂದ ಧರ್ಮಸ್ಥಳ ಕಡೆ ಬರುತ್ತಿದ್ದ ಸರಕಾರಿ ಬಸ್ ಡಿಕ್ಕಿ ಹೊಡೆದಿದೆ.

ಈ ವೇಳೆ ಕಾರು ಸಂಪೂರ್ಣ ಜಖಂಗೊಂಡಿದ್ದು ,ಬಸ್ ಚರಂಡಿಗೆ ಹೋಗಿದೆ,

ಕಾರಿನಲ್ಲಿದ್ದ ಮೂವರಾದ ಚಾಲಕ ಪ್ರತೀಕ್(30) , ಪತಿ ರಾಜೇಶ್ ಬೆಳ್ಳಿವರಿ (44) ,ಪತ್ನಿ ಸ್ವಂತಿಕಾ ಬೆಳ್ಳಿವರಿ(35) ಗಾಯವಾಗಿದ್ದು ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.

BELTHANGADY

ಪ್ರಜ್ವಲ್ ರೇವಣ್ಣನನ್ನು ಮೀರಿಸಿದ ವಾಲಿಬಾಲ್ ಪ್ಲೇಯರ್ ..! ಏನಿದು ಘಟನೆ ..?

Published

on

ಮಂಗಳೂರು : ಆತ ಸಾಮಾನ್ಯನಲ್ಲ, ರಸಿಕರ ರಾಜ. ಕೆಲ ತಿಂಗಳುಗಳ ಹಿಂದೆ ಪೋಕ್ಸೋ ಕೇಸ್‌ನಡಿ ಸಿಕ್ಕಿಬಿದ್ದಿದ್ದ ಪ್ರಜ್ವಲ್‌ ರೇವಣ್ಣನಿಗಿಂತಲೂ ಒಂದು ಕೈ ಮೇಲೆ ಇದ್ದಾನೆ. ಇದೀಗ,  ಆತನ ಕಾಮಕಾಂಡ ಬಯಲಾಗಿದೆ. ಯಾರು ಆತ ? ಏನದು ಘಟನೆ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ವಾಲಿಬಾಲ್ ಆಟಗಾರನಾಗಿದ್ದ ಮೂಲತಃ ಕಾರ್ಕಳ ನಿವಾಸಿ ಸೈಯ್ಯದ್ ಎಂಬಾತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ವಿಷಯ ಬಯಲಾಗಿದೆ. ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿ ಮೊಬೈಲ್ ಕಿತ್ತುಕೊಂಡು ನೋಡಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋಗಳು ಪತ್ತೆಯಾಗಿವೆ.

ಇನ್ನು ಈ ಘಟನೆ ವೇಳೆ ಸೈಯದ್​​ ಮೊಬೈಲ್ ಕಿತ್ತುಕೊಂಡು ನೋಡಿದಾಗ ಹಿಂದೂ ಸಂಘಟನೆ ಕಾರ್ಯಕರ್ತರು ಒಂದು ಕ್ಷಣ ಶಾಕ್​ ಆಗಿದ್ದಾರೆ. ಆತನ ಮೊಬೈಲ್​ ತುಂಬಾ ನೂರಾರು ಹುಡುಗಿಯರ ಜೊತೆಗಿನ ಸರಸ-ಸಲ್ಲಾಪದ ವಿಡಿಯೋಗಳೇ ತುಂಬಿದೆ. ಮೂಲತಃ ಕಾರ್ಕಳ ನಿವಾಸಿಯಾಗಿರುವ ಸೈಯದ್ ವಾಲಿಬಾಲ್ ಆಟಗಾರ ಕೂಡ ಹೌದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಏ.26 ರಂದು ಆರೋಪಿಯನ್ನು ಬಂಧಿಸಿರುವ ಪೊಲೀಸರು ಮಂಗಳೂರು ಫೋಕೋ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ರಾತ್ರಿ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಆರೋಪಿ ಸೈಯ್ಯದ್ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಉಜಿರೆಯ ಪ್ರಜ್ವಲ್ ಹಾಗೂ ಇತರರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಉಜಿರೆಯ ಹಿಂದೂ ಸಂಘಟನೆ ಕಾರ್ಯಕರ್ತರು ಸೈಯ್ಯದ್ ನನ್ನು ಹಿಗ್ಗಾಮುಗ್ಗ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ಹಲ್ಲೆಗೆ ಒಳಗಾಗಿರುವ ಸೈಯ್ಯದ್ ನೀಡಿದ ದೂರಿನಂತೆ ಪೊಲೀಸರು ಉಜಿರೆಯ ಪ್ರಜ್ವಲ್ ಹಾಗೂ ಇತರ ಹತ್ತಕ್ಕೂ ಹೆಚ್ಚು ಮಂದಿಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ

Continue Reading

BELTHANGADY

ವರುಣನ ಆರ್ಭಟಕ್ಕೆ ತತ್ತರಿಸಿದ ಬೆಳ್ತಂಗಡಿ ; ಗುಡುಗು ಸಹಿತ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥ

Published

on

ಬೆಳ್ತಂಗಡಿ : ಗುಡುಗು, ಗಾಳಿ ಸಹಿತ ಭಾರಿ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ಥವಾಗಿದೆ. 3 ಗಂಟೆ ನಿರಂತರ ಮಳೆ ಸುರಿದ ಪರಿಣಾಮ ಬೆಳ್ತಂಗಡಿ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕಿಂಜೆಯ ಕತ್ತರಿಗುಡ್ಡ ಎಂಬಲ್ಲಿ ಮನೆಯೊಂದರ ಶೀಟುಗಳು ಹಾರಿ ಹೋಗಿದ್ದು, ಮನೆಗೆ ಹಾನಿ ಉಂಟಾಗಿದೆ. ಅದೃಷ್ಟವಸಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಚಾರ್ಮಾಡಿ ಬೀಟಿಗೆಯಲ್ಲಿ ಭಾರೀ ಗಾಳಿ ಬೀಸಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದುದ್ದು ಅಡಿಕೆ ತೋಟಕ್ಕೂ ವ್ಯಾಪಕ ಹಾನಿ ಸಂಭವಿಸಿದೆ. ಚಾರ್ಮಾಡಿ ಪರಿಸರದಲ್ಲಿ ಹಲವು ಕಡೆ ಅಡಕೆ, ರಬ್ಬರ್ ಗಿಡಗಳು ಧರಾಶಾಯಿಯಾಗಿವೆ.

ಧರ್ಮಸ್ಥಳ ಕನ್ಯಾಡಿಯಲ್ಲಿ ಮನೆಯೊಂದರ ಸಮೀಪವಿದ್ದ ಕೊಟ್ಟಿಗೆಗೆ ಸಿಡಿಲು ಬಡಿದು ಕೊಟ್ಟಿಗೆಯಲ್ಲಿದ್ದ ದನ ಸಾವನ್ನಪ್ಪಿದೆ. ಮುಂಡಾಜೆ ಗ್ರಾಮದ ವಿವಿದೆಡೆ ವಿದ್ಯುತ್‌ ಕಂಬಗಳ ಮೇಲೆ ಮರ ಮುರಿದು ಬಿದ್ದ ಘಟನೆಗಳು ನಡೆದಿದೆ. ಉಜಿರೆ ಕಾಲೇಜು ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಕಂಬ ತುಂಡಾಗಿ ಸಂಚಾರಕ್ಕೆ ಸಮಸ್ಯೆಯಾಯಿತು. ಕಡಿರುದ್ಯಾವರದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ. ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಾತ್ರಿಯೂ ಮಳೆ ಮುಂದುವರಿದಿದೆ.

Continue Reading

BELTHANGADY

ಬೆಳ್ತಂಗಡಿ: ಮನೆಗೆ ನುಗ್ಗಿ ಚಿನ್ನಾಭರಣ ಸಹಿತ ನಗದನ್ನು ದೋಚಿ ಪರಾರಿಯಾದ ಕಳ್ಳ

Published

on

ಬೆಳ್ತಂಗಡಿ: ರಾತ್ರಿಯ ವೇಳೆ ಮನೆಮಂದಿ ಎಲ್ಲಾ ನಿದ್ದೆಗೆ ಜಾರಿದ ಸಂದರ್ಭದಲ್ಲಿ ಮನೆಗೆ ನುಗ್ಗಿ ಕಳ್ಳತನ ನಡೆಸಿ ಚಿನ್ನಾಭರಣ ಸಹಿತ ನಗದುಗಳನ್ನು ದೋಚಿಕೊಂಡು ಹೋಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರುವಿನ ಮನೆಯಲ್ಲಿ ಏ.23ರಂದು ರಾತ್ರಿ ನಡೆದಿದೆ.

ಗುತ್ತು ಮನೆ ನಿವಾಸಿ ಮುಸ್ತಫಾ ರವರ ಮನೆಗೆ ಕಳ್ಳರು ಹಿಂಬದಿ ಬಾಗಿಲಿನಿಂದ ಬೀಗ ಮುರಿದು ಮನೆಯೊಳಗೆ ಬಂದದ್ದು ಮಾತ್ರವಲ್ಲದೇ ಸುಮಾರು 5 ಪವನ್ ನಷ್ಟು ಚಿನ್ನ, ಮೂರು ಸಾವಿರ ರೂಪಾಯಿ ನಗದುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.

ನಿನ್ನೆ ಸುಮಾರು ಮೂರರಿಂದ ನಾಲ್ಕುಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ ಎಂದು ಮನೆಯವರು ತಿಳಿಸಿದ್ದಾರೆ. ಅಲ್ಲದೇ ಮನೆಯ ಬ್ಯಾಗ್‌ಗಳನ್ನು ಕದ್ದುಕೊಂಡು ಹೋಗಿದ್ದು, ಬಳಿಕ ಅದರಲ್ಲಿ ಏನೂ ಇಲ್ಲದ್ದನ್ನು ನೋಡಿ ಪಕ್ಕದ ಅಂಗಳದಲ್ಲಿ ಬಿಸಾಕಿ ಹೋಗಿದ್ದಾರೆ.

ಇದೇ ಸಂದರ್ಭದಲ್ಲಿ ತೆಕ್ಕಾರುವಿನ ಕೋಡಿ ನಿವಾಸಿ ಅನ್ವರ್ ಎಂಬವರ ಮನೆಗೂ ಕಳ್ಳರು ನುಗ್ಗಿದ್ದು ಮನೆಯೊಳಗಡೆ ಕಪಾಟ್ ನ ಒಳಗಡೆಯಿದ್ದ ನಗದನ್ನು ದೋಚಿಕೊಂಡಿದ್ದು ಆದರೆ ಆಕಸ್ಮಾತ್ ಅವರ ಜೇಬಿಗೆ ಹಾಕುವ ಹಣವು ಕೆಳಗಡೆ ಬಿದ್ದಿದ್ದು ಬೆಳಿಗ್ಗೆ ಹೊತ್ತು ಮನೆಯವರು ನೀರು ಕುಡಿಯಲೆಂದು ಎದ್ದಾಗ ಕಳ್ಳತನ ನಡೆದ ಬಗ್ಗೆ ಅರಿವಾಗಿದೆ.

ಮನೆಯ ಹಿಂಬಾಗಿಲು ತೆರೆದ ಸ್ಥಿತಿಯಲ್ಲಿದ್ದು ದೋಚಿದ ಮೂರು ಸಾವಿರ ಹಣ ಅಂಗಳದಲ್ಲಿ ಬಿದ್ದು ಸಿಕ್ಕಿದೆ ಎಂದು ಅನ್ವರ್ ಮನೆಯವರು ತಿಳಿಸಿದ್ದಾರೆ. ಇದೇ ರೀತಿ ತೆಕ್ಕಾರು ವ್ಯಾಪ್ತಿಯ ಹಲವು ಮನೆಗಳಲ್ಲಿ ಕಳ್ಳತನ ನಡೆದಿದ್ದು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page