Connect with us

DAKSHINA KANNADA

ಅಡ್ಯಾರ್ ನಲ್ಲಿ ನಿಂತಿದ್ದ ಟ್ಯಾಂಕರ್ ಗೆ ಓಮ್ನಿ ಢಿಕ್ಕಿ : ಇಬ್ಬರು ದಾರುಣ ಸಾವು..!

Published

on

ಮಂಗಳೂರು: ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ಓಮ್ನಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದ ಘಟನೆ ಮಂಗಳೂರು ನಗರದ ಹೊರವಲಯದ ಅಡ್ಯಾರ್ ನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ಘಟನೆಯಲ್ಲಿ  ಓರ್ವ ಗಂಭೀರ ಗಾಯಗೊಂಡಿದ್ದಾನೆ.

ಮೃತರನ್ನು ಗ್ರಾಮದ ಅಮ್ಮೇಮಾರ್ ನಿವಾಸಿ ದಾವೂದ್(22) ಹಾಗೂ ಕುಂಜತ್ಕಲ ನಿವಾಸಿ ಉನೈಸ್(27) ಎಂದು ಗುರುತ್ತಿಸಲಾಗಿದೆ.  ತೀವ್ರವಾಗಿ ಗಾಯಗೊಂಡಿರುವವರನ್ನು ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಿನಿಂದ ಫರಂಗಿಪೇಟೆ ಕಡೆಗೆ ಬರುತ್ತಿದ್ದ ಓಮ್ನಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಢಿಕ್ಕಿ ಹೊಡದಿದೆ.  ಅಪಘಾತದ ತೀವ್ರತೆಗೆ ಓಮ್ನಿ ಸಂಫೂರ್ಣ ನಜ್ಜುಗುಜ್ಜಾಗಿದೆ. ನಾಗೂರಿ ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

DAKSHINA KANNADA

ಮಂಗಳೂರಿನಲ್ಲಿ ಹೆಚ್ಚುತ್ತಿರುವ ನಾಪತ್ತೆ ಪ್ರಕರಣ; ಮತ್ತೋರ್ವ ವಿದ್ಯಾರ್ಥಿ ಕಾಣೆ

Published

on

ಮಂಗಳೂರು : ಕೆಲ ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳಾದ ಫರಂಗಿಪೇಟೆ ನಿವಾಸಿ ದಿಗಂತ್ ಹಾಗೂ ಮೂಡುಪೆರಾರ ನಿವಾಸಿ ನಿತೇಶ್ ಕಾಣೆಯಾಗಿದ್ದು, ಹಲವು ಹೋರಟ ಹಾಗೂ ತೀವ್ರ ತನಿಖೆಯ ಬಳಿಕ ಪತ್ತೆಯಾಗಿದ್ದರು. ಈ ಮೂಲಕ ಎರಡೂ ಪ್ರಕರಣಗಳು ಸುಖಾಂತ್ಯ ಕಂಡಿತ್ತು. ಆದರೆ ಇದೀಗ ಮತ್ತೋರ್ವ ವಿದ್ಯಾರ್ಥಿ ಕಾಣೆಯಾಗಿದ್ದಾನೆ. ಯಾಕಾಗಿ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ ಎನ್ನುವುದೇ ಗೊಂದಲ ಸೃಷ್ಠಿಸುತ್ತಿದೆ.

ಪಣಂಬೂರು ಕೋಸ್ಟ್‌ಗಾರ್ಡ್ ಅಧಿಕಾರಿ ಜೀವನ್ ಕುಮಾರ್ ಎಂಬವರ ಪುತ್ರ ಹಿತೇನ್ ಬದ್ರ (17) ಮಾ.12ರಂದು ಕುಂಜತ್‌ಬೈಲ್‌ನಲ್ಲಿರುವ ಮನೆಯಿಂದ ಕಾಣೆಯಾಗಿದ್ದಾನೆ.

ತಿಳಿ ಹಸಿರು ಬಣ್ಣದ ರೌಂಡ್ ಟಿ ಶರ್ಟ್, ನೀಲಿ ಬಣ್ಣದ ಟ್ರ್ಯಾಕ್ ಸೂಟ್ ಧರಿಸಿದ್ದ ಈತ ಬಿಳಿ ಬಣ್ಣದ ಕನ್ನಡಕ ಧರಿಸಿದ್ದಾನೆ. ಇಂಗ್ಲಿಷ್, ಹಿಂದಿ, ಓಡಿಯಾ ಭಾಷೆ ಬಲ್ಲವನಾಗಿದ್ದಾನೆ. ಈತನನ್ನು ಕಂಡವರು ಕಾವೂರು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Continue Reading

DAKSHINA KANNADA

ಅಪಘಾತದ ನೆಪದಲ್ಲಿ ಕೊಲೆ ಯತ್ನ ಪ್ರಕರಣ; ಆರೋಪಿಗೆ ನ್ಯಾಯಾಂಗ ಬಂಧನ

Published

on

ಮಂಗಳೂರು: ಹಳೆ ದ್ವೇಷಕ್ಕೆ ಸಂಬಂಧಿಸಿ ಮಂಗಳೂರಿನ ಬಿಜೈ ಕಾಪಿಕಾಡ್ ನ ಆರನೇ ಅಡ್ಡರಸ್ತೆಯಲ್ಲಿ ಗುರುವಾರ (ಮಾ.13) ಸಂಭವಿಸಿದ ಭೀಕರ ಅಪಘಾತಕ್ಕೆ ನಿನ್ನೆ (ಮಾ.14) ಟ್ವಿಸ್ಟ್‌ ಸಿಕ್ಕಿದ್ದು, ಅದು ಕೊಲೆ ಯತ್ನ ಪ್ರಕರಣ ಎಂಬುದಾಗಿ ಪೊಲೀಸರು ಪ್ರಕರಣ  ದಾಖಲಾಗಿತ್ತು.

ಮಾ. 13 ರಂದು ಬೆಳಗ್ಗೆ 8.15 ರ ವೇಳೆಗೆ  ಅಗಲ ಕಿರಿದಾದ ರಸ್ತೆಯಲ್ಲಿ ವೇಗವಾಗಿ ಬಂದ ಬೈಕ್ ಹಾಗೂ ಕಾರು ಎರಡೂ ಏಕಕಾಲದಲ್ಲಿ ಪಾದಚಾರಿ ಮಹಿಳೆಗೆ ಢಿಕ್ಕಿ ಹೊಡೆದಿದ್ದು, ಬೈಕ್‌ ಗುದ್ದಿದ ಸಂದರ್ಭ ಬೈಕ್ ಮೇಲೆ ಬಿದ್ದ ಮಹಿಳೆ ಬಳಿಕ ಹಿಂಬದಿಯಿಂದ ಬರುತ್ತಿದ್ದ ಕಾರಿನ ಬಾನೆಟ್ ಮೇಲೆ ಬಿದ್ದು ಗಾಳಿಯಲ್ಲಿ ಎತ್ತರಕ್ಕೆ ಎಸೆಯಲ್ಪಟ್ಟು ಪಕ್ಕದ ಮನೆಯ ಆವರಣಗೋಡೆಯ ಭದ್ರತಾ ಕಂಬಿಗಳಲ್ಲಿ ಸಿಲುಕಿಕೊಂಡಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿ ಸತೀಶ್ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಪಾದಚಾರಿ ಮಹಿಳೆ ಯಲ್ಲವ್ವ ಉಪ್ನಾಳ ಮತ್ತು ಬೈಕ್ ಸವಾರ ಮುರಳಿ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯು ಗುರುವಾರ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

Continue Reading

BELTHANGADY

ಭಾರೀ ಮಳೆಗೆ ಬೆಳ್ತಂಗಡಿಯಲ್ಲಿ ಧರೆಗುರುಳಿದ 131 ವಿದ್ಯುತ್ ಕಂಬಗಳು

Published

on

ಬೆಳ್ತಂಗಡಿ: ಕಳೆದ ಒಂದು ವಾರದಿಂದ ವಾತಾವರಣದ ಉಷ್ಣತೆಯು ವಿಪರೀತ ಏರಿಕೆಯಾಗಿತ್ತು. ಆದರೆ ಬಿಸಿಯ ಗಾಳಿಗೆ ತತ್ತರಿಸಿ ಹೋಗಿದ್ದ ಜನರಿಗೆ ಇದೀಗ ವರುಣದೇವ ತಂಪೆರೆದಿದ್ದಾನೆ. ರಾಜ್ಯದ ಹಲವು ಭಾಗಗಳಲ್ಲಿ ಈಗ ಮಳೆಯ ಆರ್ಭಟ ಜೋರಾಗಿದೆ.

ಕರಾವಳಿಯಲ್ಲೂ ಮಳೆಯ ಸಿಂಚನವಾಗಿದ್ದು, ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಕೆಲ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯ ರಭಸಕ್ಕೆ 131 ವಿದ್ಯುತ್ ಕಂಬಗಳು ಧರೆಗುರುಳಿದೆ.

ರಭಸದ ಗಾಳಿಯೊಂದಿಗೆ ಆರ್ಭಟಿಸಿದ ವರ್ಷದ ಮೊದಲ ಮಳೆಗೆ ಬೆಳ್ತಂಗಡಿಯಲ್ಲಿ ಒಟ್ಟು 131 ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಹೀಗಾಗಿ ತಾಲೂಕಿನೆಲ್ಲೆಡೆ ಕರೆಂಟ್ ಇಲ್ಲದೇ ಜನರು ಪರದಾಡುವಂತೆ ಆಗಿದೆ. ಅಪಾರ ಸಂಖ್ಯೆಯಲ್ಲಿ ಅಡಿಕೆ, ತೆಂಗು, ಬಾಳೆ ಗಿಡಗಳು ತುಂಡಾಗಿ ಅಪಾರ ಪ್ರಮಾಣದ ಕೃಷಿನಷ್ಟ ಉಂಟಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page