Connect with us

UDUPI

ಕ್ರೀಡೆಗಳಲ್ಲಿನ ಕಾನೂನು ಮತ್ತು ನೈತಿಕತೆ : ಮಾಹೆ ಸ್ಪೋರ್ಟ್ಸ್ ಕೌನ್ಸಿಲ್ ವೆಬಿನಾರ್ ಸರಣಿ

Published

on

ಮಣಿಪಾಲ:  ಮಾಹೆ ಸ್ಪೋರ್ಟ್ಸ್ ಕೌನ್ಸಿಲ್ ಜುಲೈ 28 ರಿಂದ ಮಾಹೆ ಸ್ಪೋರ್ಟ್ಸ್ ವೆಬಿನಾರ್ ಸರಣಿ ಯನ್ನು ಆಯೋಜಿಸುತ್ತಿದೆ. ಜುಲೈ 28 ಮತ್ತು 29 ರಂದು “ಕ್ರೀಡೆಗಳಲ್ಲಿ ಕಾನೂನು ಮತ್ತು ನೈತಿಕ ಸಮಸ್ಯೆಗಳು” ಎಂಬ ವಿಷಯದ ಕುರಿತು ಮೊದಲ ವೆಬಿನಾರ್ ನಡೆಯಿತು.

ವೆಬಿನಾರ್ ಉದ್ಘಾಟಿಸಿ ಮಾತನಾಡಿದ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಹೆಚ್. ಎಸ್. ಬಲ್ಲಾಳ್ ಈ ವೆಬಿನಾರ್ ಸರಣಿಗಳು ಮತ್ತು ಸ್ಪೋರ್ಟ್ಸ್ ವೆಬಿನಾರ್ ಸರಣಿ ಕಾರ್ಯಕ್ರಮಗಳು ಪ್ರತಿ ತಿಂಗಳು ಮುಂದುವರಿಯುತ್ತವೆ ಎಂದರು.

ಜುಲೈ 28 ರಂದು ನಡೆದ ಮೊದಲ ವೆಬಿನಾರ್ ಸರಣಿಯಲ್ಲಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ನಿರ್ಮಲಾ ಕುಮಾರಿ ಅವರು ಕ್ರೀಡೆಗೆ ಸಂಬಂಧಿಸಿದ ಕಾನೂನು ಸಮಸ್ಯೆಗಳ ಕುರಿತು ಮಾತನಾಡಿದರೆ, 29 ರಂದು ವೆಬಿನಾರ್ ಸರಣಿಯನ್ನು ಧಾರವಾಡ ಶ್ರೀ ಕೆ ಜಿ ನಾಡಗೀರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಡಾ. ಆನಂದ್ ನಾಡಗಿರ್ ಅವರು ನಡೆಸಿ ಕೊಟ್ಟರು.

ಮಣಿಪಾಲದ ಮಾಹೆ ಕ್ರೀಡಾ ಮಂಡಳಿಯ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ಸಿ ನಾಯಕ್ ಮತ್ತು  ಜಂಟಿ ಕಾರ್ಯದರ್ಶಿ ಡಾ.ಶೋಭಾ ME ಅವರು ವೆಬಿನಾರ್ ಮಾಡರೇಟರಾಗಿ ಕಾರ್ಯ ನಿರ್ವಹಿಸಿದರು.

ಮಣಿಪಾಲ್ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಉಪೇಂದ್ರ ನಾಯಕ್ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರೆ, ಮಣಿಪಾಲ್ ಕೆಎಂಸಿಯ ದೈಹಿಕ ಶಿಕ್ಷಣ ಉಪನಿರ್ದೇಶಕರಾದ ಡಾ. ದೀಪಕ್ ರಾಮ್ ಬೈರಿ ಅವರು ವಂದನಾರ್ಪಣೆ ಗೈದರು.

LATEST NEWS

ಶಿರ್ವ: ಬೀದಿ ದೀಪದ ಕೆಳಗೆ ಜುಗಾರಿ ಆಡುತ್ತಿದ್ದ ಮೂವರು ಆರೋಪಿಗಳ ಬಂಧನ

Published

on

ಕಾಪು: ತಾಲೂಕಿನ ಶಿರ್ವ ಗ್ರಾಮದ ಇರ್ಮಿಂಜ ಚರ್ಚ್‌ ಸಮೀಪ ಸಾರ್ವಜನಿಕ ರಸ್ತೆಯ ಬಳಿ ಬೀದಿ ದೀಪದ ಕೆಳಗೆ ಮೂವರು ಹಣವನ್ನು ಪಣವಾಗಿ ಇಡುತ್ತಾ ಇಸ್ಪೀಟ್‌ ಆಟ ಆಡುತ್ತಿದ್ದಾಗ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಶಿರ್ವ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಮಂಜುನಾಥ ಮರಬದ ಸಿಬ್ಬಂದಿಗಳೊಂದಿಗೆ ಆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.


ನಿಂಗಪ್ಪ ಗಡ್ಡದವರ(37), ನಿಂಗಪ್ಪ ಅಂಬಿಗೇರ(23), ರಾಘವೇಂದ್ರ ಸಣ್ಣತಂಗೇರ(28) ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕಾರ್ಕಳ  : ಮನೆಯಲ್ಲಿತ್ತು ಕೆಜಿಗಟ್ಟಲೆ ದನದ ಮಾಂ*ಸ; ಪೊಲೀಸ್ ದಾ*ಳಿ ವೇಳೆ ಮೂವರು ಪರಾರಿ!

ಆರೋಪಿಗಳಿಂದ ಇಸ್ಪೀಟ್‌ ಜುಗಾರಿ ಆಟಕ್ಕೆ ಉಪಯೋಗಿಸಿದ ಇಸ್ಪೀಟ್‌ ಎಲೆಗಳು, ನಗದು ರೂ. 1,900, ಒಂದು ಹಳೆಯ ದಿನ ಪತ್ರಿಕೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಕಾರ್ಕಳ  : ಮನೆಯಲ್ಲಿತ್ತು ಕೆಜಿಗಟ್ಟಲೆ ದನದ ಮಾಂ*ಸ; ಪೊಲೀಸ್ ದಾ*ಳಿ ವೇಳೆ ಮೂವರು ಪರಾರಿ!

Published

on

ಕಾರ್ಕಳ  :  ದನ ಕ*ಡಿದು ಅಕ್ರಮವಾಗಿ ಮಾಂ*ಸ ಸಾಗಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಪೊಲೀಸರು ದಾ*ಳಿ ನಡೆಸಿರುವ ಘಟನೆ ನಲ್ಲೂರು ಗ್ರಾಮದ ಕರ್ಮರಕಟ್ಟೆ ಪಡೀಲುಬೆಟ್ಟುವಿನಲ್ಲಿ ನಡೆದಿದೆ. ಈ ವೇಳೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಇಂದು( ನ. 11) ಬೆಳ್ಳಂಬೆಳಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಪಡೀಲುಬೆಟ್ಟುವಿಗೆ ತೆರಳಿ, ಅಶ್ರಫ್ ಎಂಬಾತನಿಗೆ ಸೇರಿದ ತೋಟದಲ್ಲಿ ದನ ಕ*ಡಿದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಗ್ರಾಮಾಂತರ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್. ಹಾಗೂ ಅವರ ತಂಡ ಸ್ಥಳಕ್ಕೆ ಧಾವಿಸಿದ್ದು ಈ ವೇಳೆ ಮಾಂ*ಸ ತುಂಬಿದ್ದ ಸ್ವಿಫ್ಟ್ ಡಿಸೈರ್ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಎಂಟು ಮಂದಿ ಶಂಕಿತ ಉ*ಗ್ರರ ಬಂಧನ; ಸ್ಫೋ*ಟಕ, ಶಸ್ತ್ರಾಸ್ತ್ರಗಳು ವಶಕ್ಕೆ

ಈ ಸಂದರ್ಭ ಆರೋಪಿಗಳಾದ ಅಶ್ರಫ್‌, ನವಾಜ್, ಅಪ್ತಾಬ್ (ಅಪ್ಪು) ಪರಾರಿಯಾಗಿದ್ದಾರೆ.  ಮನೆ ಪರಿಶೀಲನೆ ಮಾಡುವ ಸಂದರ್ಭ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 60 ಕೆ.ಜಿಯಷ್ಟು ದನದ ಮಾಂ*ಸ ಪತ್ತೆಯಾಗಿದೆ.  ವ*ಧೆಗೆಂದು ತಂದಿದ್ದ ಮತ್ತೊಂದು ದನ ತೋಟದಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Continue Reading

LATEST NEWS

ಹಿರಿಯಡ್ಕ: ಈಜಲು ಹೋದ ಬಾಲಕ ಶವವಾಗಿ ಪತ್ತೆ

Published

on

ಹಿರಿಯಡ್ಕ: ಮಡಿಸಾಲು ಹೊಳೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಪೆರ್ಡೂರು ಆಲಂಗಾರು ಸಮೀಪ ನಡೆದಿದೆ. ಪೆರ್ಡೂರು ಆಲಂಗಾರು ನಿವಾಸಿ ಶ್ರೀಶಾಂತ್ ಶೆಟ್ಟಿ(15) ಮೃತ ದುರ್ದೈವಿ.

ರವಿವಾರ ಮಧ್ಯಾಹ್ನ ವೇಳೆ ಶ್ರೀಶಾಂತ್ ಶೆಟ್ಟಿ ತನ್ನ ನೆರೆಮನೆಯ ನವೀನ್ ಎಂಬಾತನ ಜೊತೆ ಹೊಳೆಯಲ್ಲಿ ಈಜುತ್ತಿದ್ದ ಸಂದರ್ಭ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.

ಈತನೊಂದಿಗೆ ಈಜಲು ಹೋಗಿದ್ದ ನವೀನ್, ಈ ವಿಚಾರವನ್ನು ಮನೆಯಲ್ಲಿ ಹೇಳದೆ ಮುಚ್ಚಿಟ್ಟಿದ್ದನು. ಮನೆಯವರು ಹುಡುಕಾಡಿದಾಗ ಸೋಮವಾರ ಸಂಜೆ 5ಗಂಟೆ ಸುಮಾರಿಗೆ ಮಡಿಸಾಲು ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಶ್ರೀಶಾಂತ್ ಶೆಟ್ಟಿ ಹಿರಿಯಡ್ಕ ಖಾಸಗಿ ಶಾಲೆಯಲ್ಲಿ  10ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page