Connect with us

kerala

ಕಾಸರಗೋಡು: ಕೊನೆಯ ಹಂತದಲ್ಲಿದೆ ಮಧೂರು ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಿದ್ಧತೆ

Published

on

ಕಾಸರಗೋಡು: ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರುಷ ಹಲವಾರು ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವವು ನಡೆಯುತ್ತಿದ್ದು, ಇದೀಗ ಕಾಸರಗೋಡಿನ ಮಧುವಾಹಿನಿ ನದಿಯ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 33 ವರ್ಷಗಳ ಬಳಿಕ ಬ್ರಹ್ಮಕಲಶೋತ್ಸವವು ನಡೆಯಲಿದೆ. ಮಾ.27 ರಿಂದ ಎ.7ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯಲಿದ್ದು, ಇದರ ಪೂರ್ವ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

ಮೂಡು ಗೋಪುರಕ್ಕೆ ಗ್ರಾನೈಟ್ ಹಾಸಲಾಗಿದೆ. ಮುರುಡೇಶ್ವರದ ಶಂಕರ್ ಮತ್ತು ಬಳಗ ಅತ್ಯಾಕರ್ಷಕವಾಗಿ ಕೆತ್ತನೆ ಕೆಲಸ ನಿರ್ವಹಿಸಿದ್ದು, ಕಾಷ್ಠ ಶಿಲ್ಪವನ್ನು ಮೂಡುಬಿದಿರೆ ಸಂಪಿಗೆಯ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಹರೀಶ ಆಚಾರ್ಯ ಮಾಡಿದ್ದಾರೆ. ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ದೇಗುಲದ ನವೀಕರಣ ಕಾಮಗಾರಿ ನಡೆದಿದ್ದು, ರಾಜಾಂಗಣ, ಹೊರಾಂಗಣದ ಕಾಮಗಾರಿಗಳು ಸಂಪೂರ್ಣಗೊಂಡಿವೆ. ಗಣಪತಿ ನಡೆ, ಶಿವನ ನಡೆ, ದುರ್ಗಾ ಗುಡಿ, ಸುತ್ತು ಪೌಳಿಗೆ ಕೆಂಪುಕಲ್ಲು ಹಾಸಲಾಗಿದೆ. ನೂತನವಾಗಿ ಕಗ್ಗಲ್ಲಿನಿಂದ ನಿರ್ಮಾಣಗೊಂಡ ಕೆತ್ತನೆ ಕೆಲಸದ ಕಂಬಗಳು, ಕಾಷ್ಠ ಶಿಲ್ಪಗಳು ಆಕರ್ಷಿಸುತ್ತಿವೆ.

ಅನ್ನಛತ್ರ, ಉಗ್ರಾಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ, ಸಭಾ ಕಾರ್ಯಕ್ರಮಕ್ಕೆ ವೇದಿಕೆ, ಕಾರ್ಯಾಲಯ ಇತ್ಯಾದಿಗಳ ಕಾರ್ಯ ಪ್ರಗತಿಯಲ್ಲಿದೆ. ವಾಹನ ಪಾರ್ಕಿಂಗ್‌ಗೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. 2-3 ತಿಂಗಳುಗಳಿಂದ ಮಕ್ಕಳು, ಮಹಿಳೆಯರು ಸಹಿತ ಎಲ್ಲರೂ ರಾತ್ರಿ ಹಗಲೆನ್ನದೆ ಕರ ಸೇವೆಯಲ್ಲಿ ನಿರತರಾಗಿದ್ದಾರೆ. ದೇವಸ್ಥಾನದ ಪರಿಸರದಲ್ಲಿ ಚಪ್ಪರದ ಕಾರ್ಯ ನಡೆಯುತ್ತಿದೆ. ಈ ಬಾರಿ ಮಧೂರು ದೇವಾಲಯದ ಅಷ್ಟಬಂದ ಬ್ರಹ್ಮಕಲಶೋತ್ಸವವು ಒಂದು ಇತಿಹಾಸ ಸೃಷ್ಠಿಗೆ ಕಾರಣವಾಗಲಿದೆ.

FILM

ಮಾದಕ ವಸ್ತು ಬಳಕೆ ಆರೋಪ; ಮತ್ತೊಬ್ಬ ಪೇಮಸ್ ನಟ ಅರೆಸ್ಟ್

Published

on

ಕೊಚ್ಚಿ : ಮಲಯಾಳಂ ಚಿತ್ರರಂಗಕ್ಕೆ ಒಳ್ಳೆಯ ಹೆಸರು ಇದ್ದು, ಗುಣಮಟ್ಟದ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದೆ. ಕೋವಿಡ್ ಬರುವ ಮೊದಲು ಕೇರಳ ಬಿಟ್ಟು ಹೊರಗೆಲ್ಲೂ ಸದ್ದೇ ಮಾಡದಿದ್ದ ಮಲಯಾಳಂ ಚಿತ್ರರಂಗ ಕೋವಿಡ್ ಬಳಿಕ ತನ್ನ ಗುಣಮಟ್ಟದ ಕತೆ ಹೇಳುವಿಕೆಯಿಂದ ಭಾರತದ ಮಾತ್ರವೇ ಅಲ್ಲದೆ ವಿಶ್ವದ ಗಮನ ಸೆಳೆಯುತ್ತಿದೆ.

ಇತ್ತೀಚೆಗೆ ಕೆಲ ಸಮಯಗಳಿಂದ ಮಲಯಾಳಂ ಚಿತ್ರರಂಗ ಕೆಟ್ಟ ಕಾರಣಗಳಿಗೆ ಸುದ್ದಿಯಾಗುತ್ತಿದೆ. ಅದರಲ್ಲೂ ಡ್ರಗ್ಸ್ ಬಳಕೆ ಆರೋಪಗಳು ಮಲಯಾಳಂನ ಕೆಲ ನಟರ ಮೇಲೆ ಹೆಚ್ಚಾಗಿ ಕೇಳಿ ಬರುತ್ತಿದೆ. ಈಗಾಗಲೇ ಮಂಜುಮೇಲ್ ಬಾಯ್ಸ್’ ನಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಶ್ರೀನಾಥ್ ಭಾಸಿ ಸಿನಿಮಾ ಸೆಟ್​ಗಳಲ್ಲಿ ಮಾದಕ ವಸ್ತು ಬಳಕೆ ಮಾಡುತ್ತಾರೆ ಎಂದು ಅವರೊಡನೆ ಕೆಲಸ ಮಾಡಿರುವ ನಿರ್ಮಾಪಕರೇ ಆರೋಪ ಮಾಡಿದ್ದಾರೆ. ಇದೀಗ ಮಲಯಾಳಂನ ಮತ್ತೊಬ್ಬ ನಟ  ಚಿತ್ರೀಕರಣ ಸಮಯದಲ್ಲಿ ಡ್ರಗ್ಸ್ ಬಳಸಿದ್ದಾನೆ ಎಂದು ಕೇಳಿ ಬಂದಿದೆ.

ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳ ದಾಳಿಯ ವೇಳೆ ಕೊಚ್ಚಿಯ ಹೋಟೆಲ್ ಕೊಠಡಿಯಿಂದ ಪರಾರಿಯಾಗಿದ್ದ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅವರನ್ನು ಕೊಚ್ಚಿ ಪೊಲೀಸರು ನಾಲ್ಕು ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ಬಂಧಿಸಿರುವ ಬಗ್ಗೆ ವರದಿಯಾಗಿದೆ. ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27 ಮತ್ತು 29ರ ಅಡಿಯಲ್ಲಿ ನಟ ಶೈನ್ ಟಾಮ್ ಚಾಕೊ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟ ಶೈನ್ ಟಾಮ್ ಚಾಕೊಗೆ ಬಂಧಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ಮತ್ತು ಈ ಕುರಿತು ಮುಂದಿನ ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

FILM

‘ಮಂಜುಮೇಲ್ ಬಾಯ್ಸ್’ ಸಿನಿಮಾ ನಟನ ಮೇಲೆ ಬಿತ್ತು ಕೇಸ್ ..!

Published

on

ಮಲಯಾಳಂ ಚಿತ್ರರಂಗ ಗುಣಮಟ್ಟದ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದೆ. ಕಳೆದ ವರ್ಷವಂತೂ ‘ಮಂಜ್ಞುಮೆಲ್ ಬಾಯ್ಸ್’, ‘ಆವೇಶಂ’, ‘ಪಾಲಂ ಪಳವುಂ’ ಇನ್ನೂ ಕೆಲವು ಒಳ್ಳೆಯ ಸಿನಿಮಾಗಳನ್ನು ನೀಡಿದೆ. 2023 ರಲ್ಲಿ ‘ಇರಟ್ಟ’, ‘ನೇರು’, ‘2018’, ‘ರೋಮಾಂಚನಂ’ ಇನ್ನೂ ಹಲವು ಹಿಟ್ ಸಿನಿಮಾಗಳನ್ನು ನೀಡಿತ್ತು. ಕೋವಿಡ್​ಗೆ ಮುಂಚೆ ಕೇರಳ ಬಿಟ್ಟು ಹೊರಗೆಲ್ಲೂ ಸದ್ದೇ ಮಾಡದಿದ್ದ ಮಲಯಾಳಂ ಚಿತ್ರರಂಗ ಕೋವಿಡ್ ಬಳಿಕ ತನ್ನ ಗುಣಮಟ್ಟದ ಕತೆ ಹೇಳುವಿಕೆಯಿಂದ ಭಾರತದ ಮಾತ್ರವೇ ಅಲ್ಲದೆ ವಿಶ್ವದ ಗಮನ ಸೆಳೆಯುತ್ತಿದೆ. ಆದರೆ ಕೆಲ ಸಮಯಗಳಿಂದ ಮಲಯಾಳಂ ಚಿತ್ರರಂಗ ಕೆಟ್ಟ ಕಾರಣಗಳಿಗೆ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಡ್ರಗ್ಸ್ ಬಳಕೆ ಆರೋಪಗಳು ಸಹ ಮಲಯಾಳಂನ ಕೆಲ ನಟರ ಮೇಲೆ ಹೆಚ್ಚಾಗಿ ಕೇಳಿ ಬರುತ್ತಿದೆ. ಇದೀಗ ಮಲಯಾಳಂನ ನಟನೊಬ್ಬನ ಮೇಲೆ ಚಿತ್ರೀಕರಣ ಸಮಯದಲ್ಲಿ ಡ್ರಗ್ಸ್ ಬಳಸಿದ ಆರೋಪ ಹೊರಿಸಲಾಗಿದೆ.

‘ಮಂಜುಮೇಲ್ ಬಾಯ್ಸ್’, ‘ಕುಂಬಳಂಗಿ ನೈಟ್ಸ್’, ‘ಉಸ್ತಾದ್ ಹೋಟೆಲ್’, ‘ವೈರಸ್’, ‘ಟ್ರ್ಯಾನ್ಸ್’, ‘ಕಪ್ಪೆಲ’ ಇನ್ನೂ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಶ್ರೀನಾಥ್ ಭಾಸಿ ಸಹ ಸಿನಿಮಾ ಸೆಟ್​ಗಳಲ್ಲಿ ಮಾದಕ ವಸ್ತು ಬಳಕೆ ಮಾಡುತ್ತಾರೆ ಎಂದು ಅವರೊಟ್ಟಿಗೆ ಕೆಲಸ ಮಾಡಿರುವ ನಿರ್ಮಾಪಕರೇ ಆರೋಪ ಮಾಡಿದ್ದಾರೆ. ಶ್ರೀನಾಥ್ ಬಾಸಿ ನಟಿಸಿರುವ ‘ನಮುಕ್ಕು ಕೊಡತಿಯಾಲ್ ಕಾನಂ’ ಸಿನಿಮಾದ ನಿರ್ಮಾಪಕ ಹಸೀನ್ ಮಲಬಾರ್ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದು, “ಶ್ರೀನಾಥ್ ಬಾಸಿ ಸಿನಿಮಾ ಸೆಟ್​ನಲ್ಲಿ ಮಾದಕ ವಸ್ತು ಬಳಕೆ ಮಾಡುತ್ತಾರೆ ಮಾತ್ರವೇ ಅಲ್ಲದೆ, ನಿರ್ಮಾಪಕರ ಬಳಿಯೇ ಮಾದಕ ವಸ್ತು ತಂದು ಕೊಡಲು ಕೇಳುತ್ತಾರೆ” ಎಂದು ಆರೋಪಿಸಿದ್ದಾರೆ.

“ನಟನ ವಿರುದ್ಧ ಪೊಲೀಸ್ ದೂರು ನೀಡಬೇಕು ಎಂದು ಹಲವು ಬಾರಿ ಅನ್ನಿಸಿತ್ತು. ಆದರೆ ಸಿನಿಮಾ ನಿಂತು ಹೋಗುತ್ತದೆ ಎಂಬ ಕಾರಣಕ್ಕೆ ನಾನು ದೂರು ನೀಡಿರಲಿಲ್ಲ” ಎಂದಿದ್ದಾರೆ ಹಸೀನ್ ಮಲಬಾರ್. ” ‘ನಮುಕ್ಕು ಕೊಡತಿಯಾಲ್ ಕಾನಂ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಶ್ರೀನಾಥ್ ಬಾಸಿ ಸಿನಿಮಾ ಸೆಟ್​ಗೆ ಗಾಂಜಾ ತೆಗೆದುಕೊಂಡು ಬರುತ್ತಿದ್ದರು. ಕ್ಯಾರಾವ್ಯಾನ್​ನಲ್ಲಿ ಸದಾ ಗಾಂಜಾ ಸೇದಿಕೊಂಡು ಇರುತ್ತಿದ್ದರು. ಯಾರನ್ನೂ ಕ್ಯಾರಾವ್ಯಾನ್ ಒಳಗೆ ಬಿಡುತ್ತಿರಲಿಲ್ಲ. ಒಂದು ದಿನವಂತೂ ಶ್ರೀನಾಥ್ ಕಡೆಯವರು ರಾತ್ರಿ 3 ಗಂಟೆಗೆ ಕರೆ ಮಾಡಿ, ಡ್ರಗ್ಸ್ ಬೇಕು ಎಂದು ಕೇಳಿದ್ದರು. ಡ್ರಗ್ಸ್ ಕೊಡಲಿಲ್ಲವೆಂದರೆ ಬೆಳಿಗ್ಗೆ ಚಿತ್ರೀಕರಣಕ್ಕೆ ಬರುವುದಿಲ್ಲ” ಎಂದು ಹೇಳಿರುವುದಾಗಿ ಆರೋಪಿಸಲಾಘುತ್ತಿದೆ. ಶ್ರೀನಾಥ್ ಬಾಸಿ ಮೇಲೆ ಡ್ರಗ್ಸ್ ಬಳಕೆ ಆರೋಪ ಬರುತ್ತಿರುವುದು ಇದು ಮೊದಲೇನೂ ಅಲ್ಲ. ಶ್ರೀನಾಥ್‌ನನ್ನು ಇದೇ ಕಾರಣಕ್ಕೆ ಚಿತ್ರರಂಗದಿಂದ ನಿಷೇಧ ಮಾಡಲಾಗಿತ್ತು. ಆದರೆ ಆ ಬಳಿಕ ಮನವಿ ಮಾಡಿಕೊಂಡು ನಿಷೇಧ ತೆರವು ಮಾಡಿಸಿಕೊಂಡಿದ್ದರು.

Continue Reading

FILM

‘ನನ್ನ ಮನಸ್ಸು ಸರಿ ಇಲ್ಲ …’ ; ಅಭಿಮಾನಿಗಳಿಗೆ ನಟಿ ನಜ್ರಿಯಾ ಬರೆದ ಆ ಪತ್ರದಲ್ಲಿ ಏನಿತ್ತು ?

Published

on

ಕೇರಳ : ಮಲಯಾಳಂನ ಖ್ಯಾತ ನಟಿ.. ಕ್ಯೂಟಿ ಪೈ.. ಎಕ್ಸ್‌ಪ್ರೆಶನ್ ಕ್ವೀನ್.. ನಜ್ರಿಯಾ ನಜೀಮ್ ಸದ್ಯ ಸಿನಿ ಜರ್ನಿಯಿಂದ, ಅಭಿಮಾನಿಗಳಿಂದ ದೂರವಿದ್ದಾರೆ. ಆದರೆ ಯಾಕೆ ? ಏನು ? ಎಂಬುವುದು ಯಾರಿಗೂ ತಿಳಿದಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಸ್ಪಷ್ಟತೆ ನೀಡುವ ನಿಟ್ಟಿನಲ್ಲಿ ನಜ್ರಿಯಾ ನಜೀಮ್ ಪತ್ರವೊಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಾನು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಆ ಪತ್ರದಲ್ಲಿ ವಿವರಣೆ ನೀಡಿದ್ದಾರೆ. ಬ್ಲಾಕ್ ಬಸ್ಟರ್ ಸಿನೆಮಾ ನೀಡಿದ್ದರೂ , ಜನರಿಂದ ದೂರ ಇದ್ದಿದ್ದಕ್ಕೆ ಕಾರಣ ತಿಳಿಸಿದ್ದಾರೆ.

ನಜ್ರಿಯಾ ಬರೆದ ಪತ್ರದಲ್ಲಿ ಏನಿತ್ತು ಗೊತ್ತಾ ?

‘ಎಲ್ಲರೂ ಚೆನ್ನಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ಸ್ವಲ್ಪ ಸಮಯ ನಾನು ಎಲ್ಲರಿಂದ, ಎಲ್ಲದರಿಂದ ದೂರವಿದ್ದೆ. ಸುಧಾರಿಕೆಗಾಗಿ ನನಗೆ ತುಸು ಸಮಯ ಬೇಕಿತ್ತು. ಎಲ್ಲರಿಗೂ ಗೊತ್ತು…ನಾನು ತುಂಬಾ ಆ್ಯಕ್ಟಿವ್ ಹುಡುಗಿ. ಕಳೆದ ಕೆಲವು ತಿಂಗಳುಗಳಿಂದ ನನ್ನ ವೈಯಕ್ತಿಕ ಜೀವನದಲ್ಲಿ ಉಂಟಾಗುವ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದೇನೆ. ನನ್ನ ಮನಸ್ಸು ಸರಿ ಇಲ್ಲ. ಕಳೆದ ಕೆಲ ತಿಂಗಳುಗಳಿಂದ ಅದೆಷ್ಟೋ ಮುಖ್ಯ ಘಟನೆಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ನನ್ನ 30 ನೇ ಹುಟ್ಟುಹಬ್ಬ, ಹೊಸ ವರ್ಷದ ಆಚರಣೆ, ನನ್ನ ಸೂಕ್ಷ್ಮದರ್ಶಿನಿ ಚಿತ್ರದ ಯಶಸ್ಸು ಮತ್ತು ಇತರ ಹಲವು ಪ್ರಮುಖ ಕ್ಷಣಗಳು ಮಿಸ್ ಆದವು, ಕ್ಷಮಿಸಿ’ ಎಂದಿದ್ದಾರೆ ನಜ್ರಿಯಾ.

‘ಯಾಕೆ ನಾನು ಮೌನವಾಗಿದ್ದೆನೆಂದು ಹೇಳದೆ ಇದ್ದ ಕಾರಣಕ್ಕೆ, ಫೋನ್ ಕರೆಗಳನ್ನು ಸ್ವೀಕರಿಸದಿದ್ದಕ್ಕಾಗಿ ಅಥವಾ ಸಂದೇಶಗಳಿಗೆ ಉತ್ತರಿಸದಿದ್ದಕ್ಕಾಗಿ ನನ್ನ ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ. ನನ್ನಿಂದ ಉಂಟಾದ ಬೇಸರಕ್ಕೆ ಕ್ಷಮೆಯಾಚಿಸುತ್ತೇನೆ. ಕೆಲಸಕ್ಕಾಗಿ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ನನ್ನ ಎಲ್ಲಾ ಸಹನಟರು, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ನಾನು ಕ್ಷಮೆಯಾಚಿಸುತ್ತಿದ್ದೇನೆ. ಕೆಲ ತಿಂಗಳ ಜರ್ನಿ ನನ್ನ ಜೀವನದಲ್ಲಿ ಕಠಿಣ ಪ್ರಯಾಣವಾಗಿತ್ತು. ಆದರೆ ನಾನು ಪ್ರತಿದಿನ ಚೇತರಿಸಿಕೊಳ್ಳಲು ಮತ್ತು ಸುಧಾರಿಸಲು ಶ್ರಮಿಸುತ್ತಿದ್ದೇನೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನನಗೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು, ಆದರೆ ನಾನು ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾನು ಇದ್ದಕ್ಕಿದ್ದಂತೆ ಏಕೆ ಕಣ್ಮರೆಯಾದೆ ಎಂಬುದನ್ನು ನನ್ನ ಎಲ್ಲಾ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ವಿವರಿಸಬೇಕೆಂದು ಅನಿಸಿದ್ದರಿಂದ ಇಂದು ಇದನ್ನು ಬರೆದಿದ್ದೇನೆ’ ಎಂದು ನಜ್ರಿಯಾ ನಜೀಮ್ ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page