Connect with us

LATEST NEWS

ಮಡಂತ್ಯಾರು : ಹಾಡಹಗಲೇ ಮನೆಯ ಬೀಗ ಮುರಿದು ನಗ, ನಗದು ದೋಚಿದ ಕಳ್ಳರು

Published

on

ಮಡಂತ್ಯಾರು: ಹಾಡಹಗಲೇ ಮನೆಯ ಬೀಗ ಮುರಿದು ನಗದು ಹಾಗೂ 13 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳ ಕದ್ದು ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪೆದಬೈಲು ಎಂಬಲ್ಲಿ ನಡೆದಿದೆ.

ಎಪ್ರಿಲ್ 20 ರಂದು ಮಧ್ಯಾಹ್ನ ಮನೆಯ ಯಜಮಾನಿ ವಸಂತಿ ಹೆಗ್ಡೆ, ಅವರ ಮಗ ಹಾಗೂ ಸೊಸೆ ಮನೆಗೆ ಬೀಗ ಹಾಕಿ ಬೆಳ್ತಂಗಡಿ ಕಡೆಗೆ ತೆರಳಿದ್ದಾರೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿ ಕಳ್ಳರು ಮನೆಯ ಮುಂದಿನ ಬಾಗಿಲಿಗೆ ಹಾಕಿರುವ ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿ ನಗದು ಸೇರಿ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

ವಸಂತಿ ಹೆಗ್ಡೆ ಅವರ ಕೋಣೆಯ ಕಪಾಟಿನಲ್ಲಿದ್ದ 160.5 ಗ್ರಾಂ ಅಂದರೆ ಸುಮಾರು 13 ಲಕ್ಷ 72 ಸಾವಿರ ಬೆಲೆಬಾಳುವ ಚಿನ್ನಾಭರಣ ಹಾಗೂ 30,000 ನಗದು ಕದ್ದೊಯ್ದಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS

ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿ ಬಿದ್ದ ಕ್ರೇನ್

Published

on

ಮೂಡಬಿದಿರೆ: ಬೃಹತ್‌ ಕ್ರೇನ್‌ವೊಂದು ಕಾರಿಗೆ ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಪರಿಣಾಮ ಮನೆ ಹಾನಿಗೋಳಗಾದ ಘಟನೆ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೊರಂತಬೆಟ್ಟು ಬಳಿ ಶುಕ್ರವಾರ(ಡಿ.5) ನಡೆದಿದೆ.


ಮುಲ್ಕಿ-ಮೂಡಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಕಲ್ಲಮುಂಡ್ಕೂರಿನ ಮೊರಂತಬೆಟ್ಟುವಿನ ತಿರುವಿನಲ್ಲಿ ಅತೀವೇಗವಾಗಿ ಸಂಚರಿಸುತ್ತಿದ್ದ ಕ್ರೇನ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮನೆ ಮೇಲೆ ಉರುಳಿ ಬಿದ್ದಿದ್ದೆ. ಇದರಿಂದ ಮನೆ ಜಖಂಗೊಂಡಿದೆ.


ಇದನ್ನೂ ಓದಿ: ಅನೆಕಲ್‌: ಎಲೆಕ್ಟ್ರಾನಿಕ್‌ ಸಿಟಿ ಫ್ಲೈ ಓವರ್‌ ಮೇಲೆ ಸರಣಿ ಅಪಘಾತ; ಬೈಕ್‌ ಸವಾರನಿಗೆ ಗಂಭೀರ ಗಾಯ

ಘಟನೆ ವೇಳೆ ಮನೆಮಂದಿ ಮನೆಯ ಇನ್ನೊಂದು ಪಾರ್ಶ್ವದಲ್ಲಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಮೂಡಬಿದಿರೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Continue Reading

LATEST NEWS

ವಧು-ವರ ಇಲ್ಲದೇ ನಡೆಯಿತು ಆರತಕ್ಷತೆ; ಕಾರಣ ವಿಮಾನ!?

Published

on

ಹುಬ್ಬಳ್ಳಿ: ಮದುವೆ ಆರತಕ್ಷತೆ ಕಾರ್ಯಕ್ರಮ ಸಾಮಾನ್ಯವಾಗಿ ಬಹಳ ಅದ್ದೂರಿಯಿಂದ ನಡೆಯುತ್ತದೆ. ಮದುವೆ ಮಂಟಪ ಅಲಂಕಾರ, ವಧು-ವರನ ಶೃಂಗಾರ ಹೀಗೆ ಎಲ್ಲ ವಿಷಯದಲ್ಲೂ ಗಮನ ಸೆಳೆಯುತ್ತದೆ. ಆದರೆ ಹುಬ್ಬಳಿಯಲ್ಲಿ ವಧು-ವರ ಇಲ್ಲದೇ ಆರತಕ್ಷತೆ ನಡೆದಿದೆ.


ಹೌದು, ಹುಬ್ಬಳ್ಳಿಯಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮ ಈಗ ಎಲ್ಲರ ಗಮನ ಸೆಳೆದಿದೆ. ಇಂಡಿಗೋ ವಿಮಾನ ರದ್ದಾಗಿರುವ ಕಾರಣ ವಧು-ವರರು ಇಲ್ಲದೇ ಆರತಕ್ಷತೆ ಕಾರ್ಯಕ್ರಮ ಆನ್‌ಲೈನ್ ಮೂಲಕ ಹುಬ್ಬಳ್ಳಿಯ ಗುಜರಾತ್‌ ಭವನದಲ್ಲಿ ನಡೆದಿದೆ.

ಭುವನೇಶ್ವರದಲ್ಲಿ ವಧು ಮೇಧಾ ಕ್ಷೀರಸಾಗರ ಹಾಗೂ ವರ ಸಂಗಮ ದಾಸ್ ಅವರು ನವೆಂಬರ್ 23ರಂದು ಮದುವೆಯಾಗಿದ್ದರು. ಹುಬ್ಬಳ್ಳಿಯ ಗುಜರಾತ್‌ ಭವನದಲ್ಲಿ ಬುಧವಾರ(ಡಿ.3) ನವ ಜೋಡಿಯ ಆರತಕ್ಷತೆ ಆಯೋಜಿಸಿದ್ದರು. ಮದುವೆ ಬಳಿಕ ಬೆಂಗಳೂರಿಗೆ ತೆರಳಿದ್ದ ಇವರು ಅಲ್ಲಿಂದ ಹುಬ್ಬಳ್ಳಿಗೆ ಬರಲು ಡಿ.2ಕ್ಕೆ ಭುವನೇಶ್ವರ-ಮುಂಬೈ-ಹುಬ್ಬಳ್ಳಿ ಮಾರ್ಗದಲ್ಲಿ ವಿಮಾನ ಟಿಕೆಟ್‌ ಬುಕ್‌ ಮಾಡಿದ್ದರು.

ಆದರೆ ಏಕಾಏಕಿಯಾಗಿ ಡಿಸೆಂಬರ್‌ 3ರಂದು ಇಂಡಿಗೋ ಏರ್‌ಲೈನ್‌ ರದ್ದುಗೊಂಡಿರುವ ಪರಿಣಾಮ ನೂತನ ವಧು-ವರ ಆರತಕ್ಷತೆ ಕಾರ್ಯಕ್ರಮಕ್ಕೆ ಬರಲು ಆಗದೆ ತೊಂದರೆ ಅನುಭವಿಸಿದ್ದಾರೆ. ಹುಬ್ಬಳ್ಳಿಯಲ್ಲಿ ವಧುವಿನ ತಂದೆ-ತಾಯಿಯೇ ವಧು-ವರರ ಕುರ್ಚಿಯಲ್ಲಿ ಕುಳಿತು, ಶಾಸ್ತ್ರಗಳನ್ನು ನಡೆಸಿದರು. ಅತ್ತ ವಧು-ವರ ಭುವನೇಶ್ವರದಲ್ಲೇ ಸಿದ್ಧರಾಗಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆರತಕ್ಷತೆ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇಂಡಿಗೋದಲ್ಲಿ ಉಂಟಾಗಿರುವ ಭಾರೀ ಅಡಚಣೆ; ಮಂಗಳೂರು ವಿಮಾನ ನಿಲ್ದಾಣದಲ್ಲೂ 17 ವಿಮಾನ ವಿಳಂಬ

ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬದಿಂದ ಅನೇಕರು ಪರದಾಡುತ್ತಿದ್ದರೆ, ಹುಬ್ಬಳ್ಳಿಯಲ್ಲಿ ನಡೆದ ಈ ಘಟನೆ ಎಲ್ಲರ ಗಮನ ಸೆಳೆದಿದೆ.

Continue Reading

DAKSHINA KANNADA

ಡಿ.28 : ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಮಹಾಸಭೆ, ಸಾಧಕರಿಗೆ ಸನ್ಮಾನ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಇದರ 87ನೇ ವಾರ್ಷಿಕ ಮಹಾಸಭೆ ಬಂಗ್ರ ಕೂಳೂರಿನ ಮಡಿವಾಳ ಸಭಾಭವನದ ಅಮೃತ ಸಭಾಂಗಣದಲ್ಲಿ ಡಿಸೆಂಬರ್ 28ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.


ಮೂಡುಬಿದಿರೆ ಶ್ರೀ ಕ್ಷೇತ್ರ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಿ ಎನ್ ಪ್ರಕಾಶ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ, ಮಂಗಳೂರು ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಮ್ ಎನ್ ಶಿವಲಿಂಗಪ್ಪ, ಹುಬ್ಬಳ್ಳಿ ಗೋಕುಲ್ ಹೊಟೇಲ್‌ ಮಾಲಕಿ ಡಾ ಸರಳ ರಮೇಶ್ ಕುಂದರ್‌, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಮಡಂತ್ಯಾರಿನ ಬ್ರಾಂಚ್‌ ಮ್ಯಾನೇಜರ್‌ ಓಂ ಪ್ರಸಾದ್ ಕೆ. ಆಗಮಿಸಲಿದ್ದಾರೆ. ಮಂಗಳೂರು ರಜತ ಯೂತ್‌ನ ಅಧ್ಯಕ್ಷ ಸಂಪತ್‌ ಕೊಂಡಾಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾಂಜಲಿ ನಾರಾಯಣ ಬಿಜೈ ಉಪಸ್ಥಿತರಿರುವರು.

ಇದೇ ವೇಳೆ ಹಿರಿಯ ದೈವಾರಾಧಕರಾದ ಹರೀಶ್ ಸೊರಕೆ, ಹಿರಿಯ ಕುಲಕಸಬುದಾರರಾದ ಸೋಮನಾಥ ಮಡಿವಾಳ ಗುರುಪುರ, ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಕೀರ್ತನ್‌ ಕಟೀಲು ಇವರಿಗೆ ಸನ್ಮಾನ ನಡೆಯಲಿದೆ. ಅಪರಾಹ್ನ 3 ಗಂಟೆ ಬಳಿಕ ಸಂಘದ ಸದಸ್ಯರು ಹಾಗೂ ಮಹಿಳಾ ಘಟಕದ ಸದಸ್ಯೆಯರಿಂದ ಸಾಂಸ್ಕೃತಿಕ ನೃತ್ಯ ವೈಭವ ನಡೆಯಲಿದೆ.

ಇದನ್ನೂ ಓದಿ: ವೀರಭಾರತಿ ವ್ಯಾಯಾಮ ಶಾಲೆ ಬೆಂಗ್ರೆ ಮಂಗಳೂರು; ನೂತನ ಗರ್ಭಗುಡಿಯ ಹಾಗೂ ಕಟ್ಟಡದ ಶಿಲಾನ್ಯಾಸ ಸಮಾರಂಭ

ಡಿ.14ರಂದು ಕ್ರೀಡಾಕೂಟ: 87ನೇ ವಾರ್ಷಿಕ ಮಹಾಸಭೆಯ ಅಂಗವಾಗಿ ಮಡಿವಾಳ ಸ್ವಜಾತಿ ಬಾಂಧವರಿಗಾಗಿ ಆಟೋಟ, ಕ್ರಿಕೆಟ್‌ ಹಾಗೂ ಇನ್ನಿತರೆ ಸ್ಪರ್ಧೆಗಳನ್ನು ಡಿಸೆಂಬರ್ 14ರಂದು ಬೆಳಿಗ್ಗೆ 9ಕ್ಕೆ ನಂತೂರಿನ ಪಾದುವಾ ಹೈಸ್ಕೂಲ್‌ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಪ್ರಕಟಣೆ ತಿಳಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page