Connect with us

LATEST NEWS

ಬೆಂಗಳೂರಿನಲ್ಲಿ ಲವ್ ಜಿಹಾದ್ ಯತ್ನ: ಮುಸ್ಲಿಂ ಯುವಕನಿಂದ ರಕ್ಷಣೆ ನೀಡಲು ಪೊಲೀಸ್ ಮೊರೆ ಹೋದ ಹಿಂದೂ ಯುವತಿ..!

Published

on

ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಲವ್ ಜಿಹಾದ್​ಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಮುಸ್ಲಿಂ ಯುವಕನಿಂದ ರಕ್ಷಣೆ ಕೋರಿ ಹಿಂದೂ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಬೆಂಗಳೂರು: ಇತ್ತೀಚೆಗಷ್ಟೇ ಕುಂದಾಪುರದಲ್ಲಿ ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಪ್ರಕರಣದ ಬೆನ್ನಲ್ಲೇ ಇದೀಗ ಬೆಂಗಳೂರು ನಗರದಲ್ಲಿ ಲವ್ ಜಿಹಾದ್​ಗೆ  ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಯುವಕನ ಮೋಸದ ಬಗ್ಗೆ ತಿಳಿದು ದೂರವಾದ ಯುವತಿ ಮತ್ತು ಕುಟುಂಬವನ್ನು ಮುಗಿಸುವ ಬೆದರಿಕೆ ಹಾಕಿದ ಮತಾಂಧನೊಂದಿಗೆ ಆಕೆಯನ್ನು ಕೆಲಸದಿಂದ ತೆಗೆದು ಆಕೆ ಕೆಲಸ ಮಾಡುತ್ತಿದ್ದ ಕಂಪನಿಯೇ ಕೈಜೋಡಿಸಿದೆ.

ಸದ್ಯ ಕಿರಾತಕನಿಂದ ರಕ್ಷಣೆ ಕೋರಿ ಹಿಂದೂ ಯುವತಿ ಠಾಣೆಗೆ ಮೆಟ್ಟಿಲೇರಿದ್ದಾಳೆ. ಅಷ್ಟಕ್ಕೂ ಯುವಕನ ಲವ್ ಜಿಹಾದ್ ಯತ್ನ ಹೇಗಿತ್ತು? ಕಂಪನಿ ಮಾಡಿದ್ದೇನು? ಇಲ್ಲಿದೆ ನೋಡಿ..

ಲವ್ ಜಿಹಾದ್​ಗೆ ಯತ್ನಿಸಿದ ಅಸ್ಸಾಂ ಮೂಲದ ಅಲ್ ಮೆಹಪ್ಯೂಸ್ ಬರಪೂಯಾ ಗಾರ್ಮೆಂಟ್ಸ್ ರಿಟೇಲ್​ನಲ್ಲಿ ಕೆಲಸ ಮಾಡಿಕೊಂಡಿದ್ದು, ವಂಚನೆಗೊಳಗಾದ ಮಹಾರಾಷ್ಟ್ರ ಮೂಲದ ಯುವತಿ ಬ್ಲಾಕ್ ಬೆರಿಸ್​ನಲ್ಲಿ ಕೆಲಸ ಮಾಡುತ್ತಿದ್ದಾಳೆ.

ಕೆಲಸದ ಪ್ರಯುಕ್ತ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಯುವತಿ ಹಾಗೂ ಕೊರಮಂಗಲದಲ್ಲಿ ಯುವಕ ವಾಸವಾಗಿದ್ದರು.

ಪ್ರಾರಂಭದಲ್ಲಿ ಹಿಂದೂ ಯುವತಿಗೆ ತನ್ನ ಹೆಸರು ಮೆಲ್ಬಿನ್, ತಾನೊಬ್ಬ ಕ್ರಿಶ್ಚಿಯನ್ ಎಂದು ಅಲ್ ಮೆಹಪ್ಯೂಸ್ ಪರಿಚಯ ಮಾಡಿಕೊಂಡಿದ್ದನು.

ನಂತರ ಇವರ ನಡುವೆ ನಡೆದ ಒಡನಾಟ ಪ್ರೀತಿಗೆ ತಿರುಗಿ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಆದರೆ ಆಕಸ್ಮಿಕವಾಗಿ ಅಲ್ ಮೆಹಪ್ಯೂಸ್​ನ ಆಧಾರ್ ಕಾರ್ಡ್​ ಯುವತಿಯ ಕಣ್ಣಿಗೆ ಬಿದ್ದಿದೆ. ಈ ವೇಳೆ ಆತ ಕ್ರಿಶ್ಚಿಯನ್ ಅಲ್ಲ, ಮುಸ್ಲಿಂ ಎಂದು ತಿಳಿದುಬಂದಿದೆ.

ಕೂಡಲೇ ಎಚ್ಚೆತ್ತ ಯುವತಿ, ಬ್ರೇಕಪ್ ಮಾಡಿಕೊಂಡಿದ್ದಾಳೆ. ಮನೆಯವರಿಗೆ ವಿಚಾರ ಪ್ರಸ್ತಾಪಿಸಿದಾಗಲೂ ಪೋಕಷರು ತಿರಸ್ಕಾರ ಮಾಡಿ ಬುದ್ಧಿವಾದ ಹೇಳಿದ್ದಾರೆ.

ಇತ್ತ ಅಲ್ ಮೆಹಪ್ಯೂಸ್ ಯುವತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ರಾತ್ರಿ ವೇಳೆ ಮನೆ ಬಳಿ ಬಂದು ಗಲಾಟೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಯುವತಿ ಮತ್ತು ಕುಟುಂಬವನ್ನು ಮುಗಿಸುವ ಬೆದರಿಕೆ ಹಾಕಿದ್ದಾನೆ.

ಅಷ್ಟು ಮಾತ್ರವಲ್ಲದೆ, ಯುವತಿ ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕರಿಗೆ ಇಲ್ಲಸಲ್ಲದ ಆರೋಪ ಮಾಡಿದ್ದಾನೆ. ನಯವಂಚಕ ಅಲ್ ಮೆಹಪ್ಯೂಸ್ ಬರಪೂಯಾ ಜೊತೆ ಯುವತಿ ಸಹೋದ್ಯೋಗಿಗಳು ಕೂಡ ಸೇರಿರುವುದು ವಿಪರ್ಯಾಸವೇ ಸರಿ. ಕೊರಮಂಗಲ ಬ್ಲಾಕ್ ಬೇರಿಸ್ ಸ್ಟೋರ್ ಟೀಮ್ ಮಹಮದ್ ಸಕ್ಕೈನ್, ಸೈಯ್ಯದ್, ಮುಜಿಬ್ ಸೈಫ್ ಶೇಖ್, ಅಸ್ಲಂ ತಬ್ರೆಜ್ ಇವರೆಲ್ಲರು ಸೇರಿ ಯುವತಿ ವೃತ್ತಿ ಜೀವನವನ್ನು ಹಾಳು ಮಾಡಿದ್ದಾರೆ.
ಕಂಪನಿ ಜಿಎಂ ಸಾಯಾಕ್ ಅರೋರಾ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ, ನಾಲ್ಕು ಲಕ್ಷ ನೀಡಿ ಕಾಂಪ್ರೊಮೈಸ್ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದಾನೆ.

ಮೊದಲೇ ಟೈಪ್ ಮಾಡಿದ್ದ ಪ್ರತಿಯನ್ನು ಮುಂದಿಟ್ಟು ಸಹಿ ಹಾಕುವಂತೆ ಹಾಗೂ ಹಣ ನೀಡದಿದ್ದರೆ ಕೆಲಸದಿಂದ ತೆಗೆಯುವುದಾಗಿ ಹೆಚ್​ಆರ್ ಅಂಕುಷ್ ಠಾಕೂರ್, ಎಂಐಎಸ್ ಅವಿನಾಶ್ ವರ್ಮ, ಜಿಎಂ ಸಯಾಕ್ ಆರೋರಾ, ಪ್ರಾಂಚೈಸಿ ಹರೀಶ್ ಎಂಬವರು ಬ್ಲಾಕ್ ಮೇಲ್ ಮಾಡಿದ್ದಾರೆ.
ಕಿರುಕುಳ ಹಾಗೂ ಬ್ಲಾಕ್ ಮೇಲ್​ನಿಂದ ಮನನೊಂದಿರುವ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಮತಾಂಧನ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಂಪನಿ ಆಡಳಿತ ಮಂಡಳಿ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಸ್ಲಿಂ ಯುವಕನಿಂದ ರಕ್ಷಣೆ ಹಾಗೂ ನ್ಯಾಯ ನೀಡುವಂತೆ ದೂರಿನಲ್ಲಿ ಯುವತಿ ಮನವಿ ಮಾಡಿದ್ದಾಳೆ.

LATEST NEWS

PUC, SSLC ನಕಲಿ ಅಂಕಪಟ್ಟಿ ನೀಡುತ್ತಿದ್ದ ಆರೋಪಿಗಳು ಅರೆಸ್ಟ್

Published

on

ಬೆಂಗಳೂರು: PUC, SSLC ನಕಲಿ ಅಂಕಪಟ್ಟಿ ನೀಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬೆಂಗಳೂರು, ಬೆಳಗಾವಿ, ಧಾರವಾಡದಲ್ಲಿಂದ್ದುಕೊಂಡು ಈ ಅಕ್ರಮ ದಂಧೆ ನಡೆಸುತ್ತಿದ್ದರು. ಅಲ್ಲದೇ ಧಾರವಾಡದಲ್ಲಿ ಮತ್ತು ಬೆಂಗಳೂರಿನಲ್ಲಿ ಅಂಕಪಟ್ಟಿ ಪ್ರಿಂಟ್ ಮಾಡಿರುವುದು ಪತ್ತೆಯಾಗಿದೆ.

ಸುಮಾರು 350 ಜನರಿಗೆ ನಕಲಿ ಅಂಕಪಟ್ಟಿ ನೀಡಿರುವುದು ತಿಳಿದುಬಂದಿದೆ. ಇವರಿಂದ ನಕಲಿ ಅಂಕಪಟ್ಟಿ ಪಡೆದ ಜನರು ಸಾರಿಗೆ ಇಲಾಖೆ, ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳು 5 ರಿಂದ 10 ಸಾವಿರ ಹಣ ಪಡೆದು ನಕಲಿ ಅಂಕಪಟ್ಟಿ ನೀಡುತ್ತಿದ್ದರು. ಅಲ್ಲದೇ ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂದು ಸಂಸ್ಥೆಯನ್ನು ಹುಟ್ಟುಹಾಕಿದ್ದರು.

Continue Reading

LATEST NEWS

ಅಪ*ಘಾತದಲ್ಲಿ ಮಗನ ದುರ್ಮ*ರಣ; ಕೋಮಾಕ್ಕೆ ಜಾರಿದ್ದ ತಾಯಿಯೂ ಸಾ*ವು

Published

on

ಮಂಗಳೂರು/ಶಿರ್ವ: ಪುತ್ರ ಶೋಕಂ ನಿರಂತರಂ ಎನ್ನುವ ಹಾಗೆ, ಅಪ*ಘಾತದಲ್ಲಿ ಮೃ*ತಪಟ್ಟ ಮಗನ ಸಾವಿನ ಸುದ್ದಿ ತಿಳಿದು ಆಘಾತಗೊಂಡು ಕೋಮಾಕ್ಕೆ ತೆರಳಿದ್ದ ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟ ಘಟನೆ ಶಿರ್ವ ಕೊಲ್ಲಬೆಟ್ಟು ಬಳಿ ನಡೆದಿದೆ.


ಮೃ*ತ ಬೈಕ್‌ ಸವಾರನನ್ನು ಶಿರ್ವ ಕೊಲ್ಲಬೆಟ್ಟು ಬಳಿಯ ನಿವಾಸಿ ರಮೇಶ್ ಮೂಲ್ಯ (51). ಪುತ್ರನ ಸಾವಿನ ಶೋಕದಿಂದ ಸಾವನ್ನಪ್ಪಿದ ಇಂದಿರಾ ಮೂಲ್ಯ (74) ಮೃತ ತಾಯಿ. ಮೃತ ರಮೇಶ್ ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅಷ್ಟಕ್ಕೂ ಮಾ.23 ರಂದು ಬಂಟಕಲ್ಲಿನಿಂದ ಬಿ ಸಿ ರೋಡ್-ಪಾಂಬೂರು ಮಾರ್ಗವಾಗಿ ತೆರಳುತ್ತಿದ್ದ ಬೈಕ್‌ಗೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಪಾಂಬೂರು ಬಳಿ ಡಿ*ಕ್ಕಿ ಹೊಡೆದು ಬೈಕ್ ಸವಾರ ರಮೇಶ್ ಮೂಲ್ಯ ತೀವ್ರ ಗಾಯಗೊಂಡು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಾ. 24ರಂದು ರಾತ್ರಿ ಅವರು ಮೃ*ತಪಟ್ಟಿದ್ದರು.

ಇದನ್ನೂ ಓದಿ: ಆಟವಾಡುತ್ತಿದ್ದಾಗ ಟ್ರ್ಯಾಕ್ಟರ್‌ ಹರಿದು 5 ವರ್ಷದ ಮಗು ಸಾವು

ಪುತ್ರನ ಸಾವಿನ ಸುದ್ದಿ ಕೇಳಿ ಆಘಾತಗೊಂಡ ತಾಯಿ
ಬೈಕ್ ಅಪ*ಘಾತದಲ್ಲಿ ಮೃ*ತಪಟ್ಟ ರಮೇಶ್ ಅವರ ಮೃತ ದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಮಂಗಳವಾರ ಶಿರ್ವ ಕೊಲ್ಲಬೆಟ್ಟುವಿನ ಮನೆಗೆ ತರಲಾಗಿತ್ತು. ಪುತ್ರನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಗೊಂಡ ತಾಯಿ ಇಂದಿರಾ ಮೂಲ್ಯ (74) ತೀವ್ರ ಅಸ್ವಸ್ಥರಾಗಿ ಕೋಮಾಕ್ಕೆ ತೆರಳಿದ್ದು, ಮಂಗಳವಾರ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಇಂದಿರಾ ಮೂಲ್ಯ ಅವರು ಮೃ*ತಪಟ್ಟಿದ್ದಾರೆ. ದಿನದ ಅಂತರದಲ್ಲಿ ತಾಯಿ-ಮಗ ಇಬ್ಬರೂ ಮೃ*ತಪಟ್ಟಿದ್ದು, ಮೃ*ತರ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

Continue Reading

LATEST NEWS

ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಹೊಸ ಟೋಲ್ ರೇಟ್ ..! ಎಷ್ಟು ಹೆಚ್ಚಾಗಲಿದೆ ಗೊತ್ತಾ ?

Published

on

ಮಂಗಳೂರು/ನವದೆಹಲಿ : ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ  ಸರ್ಕಾರ ಮತ್ತೊಂದು ಶಾ*ಕ್ ಕೊಟ್ಟಿದೆ. ಟೋಲ್ ದರದಲ್ಲಿ ಏರಿಕೆ ಮಾಡುವ ಬಗ್ಗೆ ಪರಿಷ್ಕರಣೆ ನಡೆಸಲಾಗಿದೆ. ಏಪ್ರಿಲ್ 1 ರಿಂದ ಈ ಹೊಸ ದರ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.

ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆ ಇದಾಗಿದ್ದು, ಕನಿಷ್ಠ ಶೇ.3 ರಿಂದ ಗರಿಷ್ಠ 5 ರಷ್ಟು ಏರಿಕೆಯಾಗಲಿವೆ.

ಎಲ್ಲೆಲ್ಲಿ ಹೆಚ್ಚಳ ?

ಕರ್ನಾಟಕದಲ್ಲಿ ಒಟ್ಟು 66 ಟೋಲ್ ಪ್ಲಾಜಾಗಳಿವೆ. ಬೆಂಗಳೂರು – ಮೈಸೂರು ಮಾರ್ಗದ ಕನಮಿಣಿಕೆ ಮತ್ತು ಶೇಷಗಿರಿಹಳ್ಳಿ, ಬೆಂಗಳೂರು – ತಿರುಪತಿ ಮಾರ್ಗದ ನಂಗ್ಲಿ, ಬೆಂಗಳೂರು-ಹೈದರಾಬಾದ್ ಮಾರ್ಗದ ಬಾಗೇಪಲ್ಲಿ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ, ಮತ್ತು ಹುಲಿಕುಂಟೆ ಹಾಗೂ ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರೋಡ್) ಟೋಲ್ ಪ್ಲಾಜಾಗಳಲ್ಲಿ ದರಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ : ಅಮೆರಿಕದ ಮಿಲಿಟರಿಯಲ್ಲೇ ಭಾರಿ ದೊಡ್ಡ ಭದ್ರತಾ ಲೋಪ!

ದೇಶದಾದ್ಯಂತ ಒಟ್ಟು 323 ರಾಜ್ಯ ಹೆದ್ದಾರಿ ಟೋಲ್ ಫ್ಲಾಜಾ ಸೇರಿದಂತೆ, ದೇಶದಲ್ಲಿ ಒಟ್ಟು 1,181 ಟೋಲ್ ಗಳಿವೆ. 2023-24 ರಲ್ಲಿ 42,196 ಕೋಟಿ ರೂ, 2024-25 ರಲ್ಲಿ 64,809 ಕೋಟಿ ರೂ. ಟೋಲ್‌ ಸಂಗ್ರಹವಾಗಿದೆ. 2019-20 ರಲ್ಲಿ ಟೋಲ್ ಶುಲ್ಕ ಸಂಗ್ರಹವು 27,503 ಕೋಟಿ ರೂ.ಗಳಷ್ಟಿತ್ತು. ಈ ವರ್ಷ 1 ಲಕ್ಷ ಕೋಟಿಗೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ.  ಕರ್ನಾಟಕದಲ್ಲಿ 66 ಟೋಲ್ ಫ್ಲಾಜಾಗಳಿದ್ದು, ಕಳೆದ 5 ವರ್ಷಗಳಲ್ಲಿ ಈ ಟೋಲ್‌ಗಳಿಂದ 13,702 ಕೋಟಿ ಸಂಗ್ರಹವಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page